ಕರ್ಣ ಸೀರಿಯಲ್‌‌‌‌ಗೆ 3 ಸೀರಿಯಲ್ ಹೀರೋಸ್ ಪೈಪೋಟಿ..!

Befunky collage 2025 03 13t142604.207

ಜೀ ಕನ್ನಡ ವಾಹಿನಿಯಲ್ಲಿ ರಿಲೀಸ್ ಆಗಿರೋ ಒಂದೇ ಒಂದು ಟೀಸರ್ ನಿಂದ ವೈರಲ್ ಆಗ್ತಾ ಇರೋ ಕರ್ಣ ಸೀರಿಯಲ್‌‌‌ನ ಕುರಿತಾಗಿ ದಿನಕ್ಕೊಂದು ಅಪ್‌ಡೇಟ್ ಹೊರಬೀಳ್ತಾನೇ ಇದೆ. ವೈದ್ಯನ ಪಾತ್ರದಲ್ಲಿ ಕಿರಣ್ ರಾಜ್ ನಟಿಸ್ತಾ ಇರೋ ಹೊಸ ಸೀರಿಯಲ್ ಕರ್ಣ.

ಈ ಸೀರಿಯಲ್ ತುಂಬಾ ದಿನಗಳ ಹಿಂದೆಯೇ ಸೆಟ್ ಏರಬೇಕಿತ್ತು.ಸೀರಿಯಲ್ ಅತಿ ದೊಡ್ಡ ಸ್ಟಾರ್ ಕಾಸ್ಟ್ ಹಾಗೂ ಹೈ ಬಜೆಟ್ ನಿಂದಾಗಿ ಈ ಸೀರಿಯಲ್ ಮುಂದಕ್ಕೆ ಹೋಗಿತ್ತು. ಆದ್ರೀಗ ಸೀರಿಯಲ್ ಫೈನಲ್ ಲಾಂಚ್ ಆಗುತ್ತದೆ.

ಕರ್ಣನ ಪಾತ್ರದಲ್ಲಿ ನಟಿಸಬೇಕಿತ್ತು ವಿಜಯ್ ಸೂರ್ಯ

ಕರ್ಣನ ಪಾತ್ರದಲ್ಲಿ ಈಗ ಕಿರಣ್ ರಾಜ್ ನಟಿಸ್ತಾ ಇದ್ದಾರೆ.ಆದ್ರೆ ಈ ಸೀರಿಯಲ್ ಈ ಮೊದಲೇ ಲಾಂಚ್ ಆಗಿದ್ರೆ, ಕರ್ಣನ ಪಾತ್ರದಲ್ಲಿ ಕಿರಣ್ ರಾಜ್ ಬದಲು ಕನ್ನಡದ ಮತ್ತೊಬ್ಬ ಕಿರುತೆರೆ ಕ್ರಶ್ ನಟಿಸಬೇಕಿತ್ತು. ಆ ಕ್ರಶ್ ಮತ್ಯಾರು ಅಲ್ಲ ಅಗ್ನಿಸಾಕ್ಷಿಯ ಸಿದ್ಧಾರ್ಥ ಪಾತ್ರದಲ್ಲಿ ಮನೆ ಮನ ಗೆದ್ದಿದ್ದ ವಿಜಯ್ ಸೂರ್ಯ.

ಹೌದು ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಾ ಇರೋ ದೃಷ್ಟಿ ಬೊಟ್ಟು ಸೀರಿಯಲ್‌‌ನಲ್ಲಿ ದತ್ತಾ ಭಾಯ್ ಆಗಿರೋ ವಿಜಯ್ ಸೂರ್ಯ ಕರ್ಣ ಸೀರಿಯಲ್‌‌ನಲ್ಲಿ ಡಾಕ್ಟರ್ ಕರ್ಣನ ಪಾತ್ರದಲ್ಲಿ ಮಿಂಚಬೇಕಿತ್ತು. ಸೀರಿಯಲ್ ಶುರುವಾಗೋದು ಡಿಲೇ ಆದ ಕಾರಣ, ವಿಜಯ್ ಸೂರ್ಯ ಕಲರ್ಸ್ ಕನ್ನಡದ ದೃಷ್ಟಿ ಬೊಟ್ಟು ಹೀರೋ ಆದ್ರೂ.

ಕರ್ಣನಿಗೆ ಹಣ ಹಾಕಬೇಕಿತ್ತು ಗಟ್ಟಿಮೇಳದ ರಕ್ಷ್

ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಕರ್ಣ ಸೀರಿಯಲ್‌‌‌‌‌‌‌ಗೆ ಮತ್ತೊಬ್ಬ ಕಿರುತೆರೆ ಕ್ರಶ್, ಜೀ ಕನ್ನಡದ ಮತ್ತೊಂದು ಜನಪ್ರಿಯ ಸೀರಿಯಲ್‌‌‌ನ ಹೀರೋ ರಕ್ಷಿತ್ ಅಲಿಯಾಸ್ ಗಟ್ಟಿಮೇಳ ಸೀರಿಯಲ್ ರಕ್ಷ್ ನಿರ್ಮಾಪಕನಾಗಬೇಕಿತ್ತು. ರಕ್ಷ್ ನಿರ್ಮಾಣದಲ್ಲಿ ಕರ್ಣ ಸೀರಿಯಲ್ ಪ್ರಸಾರವಾಗಬೇಕಿತ್ತು.

Exit mobile version