ದಿ ರೈಸ್ ಆಫ್ ಅಶೋಕ ಚಿತ್ರ ರಿಲೀಸ್ ಆಗ್ತಿದ್ದಂತೆ ಸೈಲೆಂಟ್ ಆಗಿ ಮತ್ತೊಂದು ಮೆಗಾ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ ಕಾಂತಾರದ ಸಿಂಗಾರಿ ಸಿರಿ ಸಪ್ತಮಿ ಗೌಡ. ಉಗ್ರಾಯುಧಂ ಅಡ್ಡಾಗೆ ಕಾಲಿಟ್ಟಿರೋ ಸಪ್ತಮಿ, ರೋರಿಂಗ್ ಸ್ಟಾರ್ ಶ್ರೀಮುರಳಿ ಜೊತೆ ಮಿಂಚೋಕೆ ಸಜ್ಜಾಗಿದ್ದಾರೆ.
ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಡಾಲಿ ಧನಂಜಯ ಜೊತೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪೊಲೀಸ್ ಆಫೀಸರ್ ಮಗಳು ಸಪ್ತಮಿ ಗೌಡ. ಅಪ್ಪಟ ಕನ್ನಡತಿ, ಸ್ಪಷ್ಟ ಕನ್ನಡ ಮಾತಾಡೋ ಈಕೆ ಬರೀ ಕನ್ನಡ ಸಿನಿಮಾಗಳಿಗಷ್ಟೇ ಸೀಮಿತ ಆಗದೆ, ಹಿಂದಿ, ತೆಲುಗು ಚಿತ್ರರಂಗಗಳಿಗೂ ಚಿರಪರಿಚಿತರು. ಅದ್ರಲ್ಲೂ ಕಾಂತಾರ ಚಿತ್ರದ ನಟನೆಯಿಂದಾಗಿ ಎಲ್ಲರ ದಿಲ್ ದೋಚಿದ್ರು ಸಪ್ತಮಿ ಗೌಡ.
ರೋರಿಂಗ್ ಸ್ಟಾರ್ ‘ಉಗ್ರಾಯುಧಂ’ ಅಡ್ಡಾಗೆ ಸಪ್ತಮಿ ಎಂಟ್ರಿ
ಪುನೀತ್ ರುದ್ರನಾಗ ಡೈರೆಕ್ಷನ್‌ನಲ್ಲಿ ಕಾಂತಾರ ಚೆಲುವೆ ನಟನೆ
ಇತ್ತೀಚೆಗೆ ನೀನಾಸಂ ಸತೀಶ್‌ರ ದಿ ರೈಸ್ ಆಫ್ ಅಶೋಕ ಚಿತ್ರದಲ್ಲಿ ಲೀಡ್‌ನಲ್ಲಿ ನಟಿಸಿದ್ರು. ಸದಾ ಪ್ರಯೋಗಾತ್ಮಕ ಪಾತ್ರಗಳಿಗೆ ತನ್ನನ್ನ ತಾವು ಒಡ್ಡಿಕೊಳ್ಳುವ ಸಪ್ತಮಿ, ಆ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಕೂದಲಿಲ್ಲದೆ ಬೋಳು ತಲೆಯಲ್ಲಿ ನಟಿಸಿದ್ರು. ಇದೀಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದು, ಚಿತ್ರಪ್ರೇಮಿಗಳಿಗೆ ಸಡನ್ ಸರ್‌ಪ್ರೈಸ್ ನೀಡಿದ್ದಾರೆ.
ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಉಗ್ರಾಯುಧಂ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿ. ಪ್ರಶಾಂತ್ ನೀಲ್ ಜೊತೆ ಪಳಗಿರೋ ನಟ ಕಮ್ ಬರಹಗಾರ ಪುನೀತ್ ರುದ್ರನಾಗ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದು, ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದೆ. ಮೊದಲ ಶೆಡ್ಯೂಲ್ ಬಳಿಕ ಮೇಕಿಂಗ್ ರಿವೀಲ್ ಮಾಡಿದ್ದ ಚಿತ್ರತಂಡ, ಸಿನಿಮಾಗಾಗಿ ಎಷ್ಟು ಎಫರ್ಟ್ ಹಾಕ್ತಿದೆ ಅನ್ನೋದನ್ನ ತೋರಿಸಿಕೊಟ್ಟಿತ್ತು.
ಹಿಂದಿ, ತೆಲುಗಿನಲ್ಲೂ ಡಿಮ್ಯಾಂಡ್ ಹೆಚ್ಚಿಸಿಕೊಂಡ ಸಪ್ತಮಿ
ಎಕ್ಸ್‌ಪೆರಿಮೆಂಟ್ ರೋಲ್‌ಗಳಲ್ಲಿ ಪ್ರತಿಭಾವಂತ ಕನ್ನಡತಿ..!
ಸಪ್ತಮಿ ಗೌಡ ಎಂತಹ ಪಾತ್ರ ನಿರ್ವಹಿಸಲಿದ್ದಾರೆ ಅನ್ನೋದು ಸಸ್ಪೆನ್ಸ್ ಆಗಿದೆ. ಆದ್ರೆ ಕತ್ತಿ ವರಸೆಯಿಂದ ಹಿಡಿದು, ಕುದುರೆ ಸವಾರಿ ತನಕ ಎಲ್ಲವನ್ನೂ ಕಲಿತಿರೋ ಈಕೆ ಆ್ಯಕ್ಷನ್‌ಗೂ ಸೈ, ಗ್ಲಾಮರ್‌ಗೂ ಜೈ ಅನ್ನೋದು ಮಾತ್ರ ಪಕ್ಕಾ. ಯುವ ಚಿತ್ರದ ಬಳಿಕ ಪಕ್ಕದ ಟಾಲಿವುಡ್‌ನ ನಿತಿನ್ ಜೊತೆ ತಮ್ಮುಡು ಸಿನಿಮಾದಲ್ಲಿ ನಟಿಸಿ ಬಂದಿದ್ರು.
ಶೋಧ ಅನ್ನೋ ವೆಬ್ ಸೀರೀಸ್‌ನಲ್ಲೂ ಬಣ್ಣ ಹಚ್ಚಿದ್ದ ಸಪ್ತಮಿ, ಕಿರುತೆರೆಯಲ್ಲೂ ಮಿಂಚಿದ್ರು. ಇದೀಗ ಶ್ರೀಮುರಳಿ ಅಂತಹ ಮಾಸ್ ಹೀರೋ ಜೊತೆ ನಾಯಕನಟಿಯಾಗಿ ಭಿನಯಿಸ್ತಿರೋದು ಆಕೆಯ ಕರಿಯರ್ ಗ್ರಾಫ್‌ಗೆ ಪ್ಲಸ್ ಆಗಲಿದೆ.
