ತಮಿಳು ಸೂಪರ್‌ಸ್ಟಾರ್ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ನಡುವಿನ ವಿಚ್ಛೇದನ ಪ್ರಕರಣ ಇದೀಗ ತಮಿಳು ಸಿನಿಮಾ ವಲಯದಲ್ಲಿ ಹಾಟ್ ಟಾಪಿಕ್ ಆಗಿದೆ. ಸಂಗೀತಾ ಅವರು ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಜೊತೆಗೆ ಜೀವನಾಂಶ ನೀಡಬೇಕು ಎಂದು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯ್ ಅವರ ಆಸ್ತಿ ಮೌಲ್ಯ ಮತ್ತು ಸಂಗೀತಾ ಅವರ ಸ್ವಂತ ಆಸ್ತಿ ಬಗ್ಗೆ ಚರ್ಚೆ ಜೋರಾಗಿದೆ.
ವಿಜಯ್ ಆಸ್ತಿ ಮೌಲ್ಯ ಎಷ್ಟು?
ವಿವಿಧ ಮಾಧ್ಯಮ ವರದಿಗಳ ಪ್ರಕಾರ ನಟ ವಿಜಯ್ ಅವರ ಒಟ್ಟು ಆಸ್ತಿ ಸುಮಾರು 600 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಚಿತ್ರಗಳಿಂದ ಬಂದ ಆದಾಯ, ಬ್ರ್ಯಾಂಡ್ ಎಂಡಾರ್ಸ್‌ಮೆಂಟ್, ರಿಯಲ್ ಎಸ್ಟೇಟ್, ಬ್ಯಾಂಕ್ ಡೆಪಾಸಿಟ್‌ಗಳು ಮತ್ತು ಇತರ ಹೂಡಿಕೆಗಳು ಸೇರಿವೆ. ವಿಜಯ್ ಅವರು ತಮಿಳು ಸಿನಿಮಾದ ಅತ್ಯಂತ ದೊಡ್ಡ ಸ್ಟಾರ್‌ಗಳಲ್ಲಿ ಒಬ್ಬರಾಗಿರುವುದರಿಂದ ಅವರ ಆದಾಯ ಮತ್ತು ಆಸ್ತಿ ಬೆಳವಣಿಗೆ ಸ್ಥಿರವಾಗಿ ಹೆಚ್ಚುತ್ತಿದೆ.
ಸಂಗೀತಾ ಅವರ ಆಸ್ತಿ ಎಷ್ಟು?
ಆಶ್ಚರ್ಯಕರ ಸತ್ಯ ಏನೆಂದರೆ, ಸಂಗೀತಾ ಸೊರ್ನಲಿಂಗಂ ಅವರ ಸ್ವಂತ ಆಸ್ತಿ ಮೌಲ್ಯವು ಸುಮಾರು 400 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಇದು ವಿಜಯ್ ಅವರ ಸಿನಿಮಾ ಆದಾಯದಿಂದ ಬಂದಿದ್ದಲ್ಲ. ಸಂಗೀತಾ ಅವರ ತಂದೆ ಸೊನ್ನಲಿಂಗಂ ಲಂಡನ್‌ನಲ್ಲಿ ದೊಡ್ಡ ಉದ್ಯಮಿಯಾಗಿದ್ದರು. ಆನುವಂಶಿಕ ಆಸ್ತಿ, ಲಂಡನ್‌ನಲ್ಲಿ ಭೂಮಿ-ಮನೆಗಳು, ವ್ಯಾಪಾರ ಹೂಡಿಕೆಗಳು ಮತ್ತು ಇತರ ಆಸ್ತಿಗಳ ಮೂಲಕ ಸಂಗೀತಾ ಅವರು ಆರ್ಥಿಕವಾಗಿ ಬಹಳ ಬಲಿಷ್ಠರಾಗಿದ್ದರು.
ಮದುವೆಗೂ ಮೊದಲೇ ಸಂಗೀತಾ ಶ್ರೀಮಂತ ಕುಟುಂಬದಿಂದ ಬಂದವರಾಗಿದ್ದರು. ಲಂಡನ್‌ನಲ್ಲಿ ಶಿಕ್ಷಣ ಪಡೆದ ಅವರು ಆರ್ಥಿಕವಾಗಿ ವಿಜಯ್ ಅವರಿಗೆ ಸಮಾನ ಅಥವಾ ಅದಕ್ಕಿಂತ ಹೆಚ್ಚಿನ ಸ್ಥಾನದಲ್ಲಿದ್ದರು ಎಂದು ಹೇಳಲಾಗುತ್ತದೆ.
ವಿಜಯ್-ಸಂಗೀತಾ ಮದುವೆ ಹೇಗಾಯಿತು?
1996ರಲ್ಲಿ ವಿಜಯ್ ಅವರ ‘ಪೂವೆ ಉನಕ್ಕ’ ಚಿತ್ರ ನೋಡಿದ ನಂತರ ಸಂಗೀತಾ ಅವರು ವಿಜಯ್ ಅವರ ಫ್ಯಾನ್ ಆಗಿದ್ದರು. ಚೆನ್ನೈಗೆ ಬಂದು ವಿಜಯ್ ಅವರನ್ನು ಭೇಟಿಯಾದರು. ನಂತರ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಮದುವೆ ನಡೆಯಿತು. ಮದುವೆಯ ನಂತರ ಸಂಗೀತಾ ಮನೆಯ ಜವಾಬ್ದಾರಿ ಮತ್ತು ಮಕ್ಕಳಾದ ಜೇಸನ್, ಸಂಜಯ್, ದಿವ್ಯಾ ಸಶಾ ಅವರನ್ನು ಬೆಳೆಸುವತ್ತ ಗಮನ ಹರಿಸಿದರು.
ವಿಚ್ಛೇದನದಲ್ಲಿ ಜೀವನಾಂಶ ಎಷ್ಟು ಸಿಗಬಹುದು?
ವಿಚ್ಛೇದನ ತೀರ್ಪು ಸಂಗೀತಾ ಪರವಾಗಿ ಬಂದರೆ ವಿಜಯ್ ಅವರು ಸಂಗೀತಾ ಮತ್ತು ಮಕ್ಕಳಿಗೆ ಮಾಸಿಕ ಜೀವನಾಂಶ ಅಥವಾ ಒಂದು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ. ಆದರೆ ಸಂಗೀತಾ ಅವರ ಸ್ವಂತ ಆಸ್ತಿ 400 ಕೋಟಿ ಇರುವುದರಿಂದ ಜೀವನಾಂಶದ ಮೊತ್ತ ಕಡಿಮೆಯಾಗಬಹುದು ಎಂಬ ಚರ್ಚೆಯೂ ನಡೆಯುತ್ತಿದೆ.
ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಎರಡೂ ಪಕ್ಷಗಳಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ ಸಂಗೀತಾ ಅವರ ಆಸ್ತಿ ಮೌಲ್ಯ ಕೇಳಿದಾಗ ಎಲ್ಲರಿಗೂ ಶಾಕ್ ಆಗುವುದು ಖಚಿತ.
