ದೇವರುಗಳಾದ ಸ್ಟಾರ್‌‌ಗಳು..AI ಆದ್ರೂ ಫ್ಯಾನ್ಸ್‌ ಖುಷ್..!

ಬ್ರಹ್ಮ-ವಿಷ್ಣು-ಮಹೇಶ್ವರನಾಗಿ ಯಶ್, ಉಪೇಂದ್ರ & ಶಿವಣ್ಣ

Untitled design 2025 12 10T182538.181

ನಮ್ಮ ಸ್ಯಾಂಡಲ್‌ವುಡ್ ಸ್ಟಾರ್‌‌ಗಳೆಲ್ಲಾ ದೇವರುಗಳಾಗಿ ಕಂಡ್ರೆ ಹೇಗಿರುತ್ತೆ..? ಇದನ್ನ ಯಾಕೆ ಹೇಳ್ತಿದ್ದೀವಿ ಅಂದ್ರೆ ಇದು ಎಐ ಜಮಾನ. ಇಲ್ಲಿ ತಂತ್ರಜ್ಞಾನದ ಸಹಾಯದಿಂದ ಏನು ಬೇಕಾದ್ರೂ ಕ್ರಿಯೇಟ್ ಮಾಡಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ನಮ್ಮ ಕನ್ನಡದ ಸೂಪರ್ ಸ್ಟಾರ್‌‌ಗಳು ದೇವಾನು ದೇವರುಗಳಾಗಿ ಮಿಂಚು ಹರಿಸುತ್ತಿದ್ದಾರೆ. ಅದರ ಕಂಪ್ಲೀಟ್‌‌ ಡಿಟೈಲ್ಸ್‌‌ ಇಲ್ಲಿದೆ…

ಇತ್ತೀಚೆಗೆ ತಮಿಳು, ತೆಲುಗು ಹಾಗೂ ಮಲಯಾಳಂ ಸೂಪರ್ ಸ್ಟಾರ್‌‌ಗಳೆಲ್ಲಾ ಒಟ್ಟಿಗೆ ಸ್ನ್ಯಾಕ್ಸ್ ತಿನ್ನುತ್ತಾ, ಕಾಫಿ, ಟೀ ಸವಿಯುತ್ತಿರೋ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂದ್ರೆ ಎಐ ವಿಡಿಯೋಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದವು. ಆದಾದ ಬಳಿಕ ನಮ್ಮ ಸ್ಯಾಂಡಲ್‌ವುಡ್ ಸ್ಟಾರ್ಸ್‌ ಎಲ್ಲಾ ಹಾಗೆ ಒಟ್ಟಿಗೆ ಇರೋ ವಿಡಿಯೋ ಒಂದು ಕ್ರಿಯೇಟ್ ಆಗಿತ್ತು. ಆದ್ರೀಗ ನಮ್ಮ ಚಂದನವನದ ಕಿಚ್ಚ, ದಚ್ಚು, ಶಿವಣ್ಣ, ಉಪ್ಪಿ, ಅಪ್ಪು, ಧ್ರುವ ಸರ್ಜಾ, ಯಶ್ ಇವರುಗಳೆಲ್ಲಾ ದೇವರುಗಳಾದ್ರೆ ಅವರಿಗೆ ಯಾವ ಪಾತ್ರ ಹೋಲುತ್ತೆ ಅನ್ನೋದನ್ನ ಎಐ ಮುಖೇನ ಸೃಷ್ಠಿಸಲಾಗಿದೆ.

ಬ್ರಹ್ಮ ವಿಷ್ಣು ಮಹೇಶ್ವರರಾಗಿ ಯಶ್, ಉಪೇಂದ್ರ & ಶಿವಣ್ಣ ಮಿಂಚು ಹರಿಸಿದ್ರೆ, ಶ್ರೀಕೃಷ್ಣ ಪರಮಾತ್ಮನಾಗಿ ರಾಜರತ್ನ ಅಪ್ಪು, ಸುಬ್ರಮಣ್ಯ ಸ್ವಾಮಿಯಾಗಿ ಬಾದ್‌ಷಾ ಕಿಚ್ಚ ಸುದೀಪ್, ಹನುಮ ಭಕ್ತ ಧ್ರುವ ಸರ್ಜಾ ಹನುಮಂತನಾಗಿಯೇ ಕಾಣಸಿಗುತ್ತಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಡೆವಿಲ್ ಡಿ ಬಾಸ್ ಸದ್ಯ ಯಮಧರ್ಮರಾಜನಾಗಿ ಹಗ್ಗ ಹಿಡಿದು ಸಿಂಹಾಸನದ ಮೇಲೆ ಕೂತಿರೋ ಫೋಟೋ ವೈಬ್ರೆಂಟ್ ಆಗಿದೆ. ಇವೆಲ್ಲಾ ಜಸ್ಟ್ ಎಐ ಆದ್ರೂ ಸಹ ಕಣ್ಣಿಗೆ ಹಬ್ಬ ಅನಿಸ್ತಿದೆ. ಎಲ್ಲಾ ಸ್ಟಾರ್‌‌ಗಳ ಫ್ಯಾನ್ಸ್ ಇದಕ್ಕೆ ದಿಲ್‌ಖುಷ್ ಆಗಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version