ಕೂಲಿ ಕಲೀಶ @57..‘ಸೂಪರ್ ಸ್ಟಾರ್‌’ ಉಪೇಂದ್ರಗೆ ಗಿಫ್ಟ್‌‌ಗಳ ಸುರಿಮಳೆ

ತಲೈವಾ ಜೊತೆ ಉಪ್ಪಿ ಖದರ್.. ಎಲ್ಲೆಲ್ಲೂ ಉಪೇಂದ್ರ ಗುಣಗಾನ

Untitled design 2025 09 18t183550.972

ಇಂಡಿಯಾದ ಗ್ರೇಟೆಸ್ಟ್ ಡೈರೆಕ್ಟರ್‌‌ಗಳಲ್ಲಿ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಕೂಡ ಒಬ್ಬರು. ಉಪ್ಪಿ ಡೈರೆಕ್ಷನ್ ರುಚಿ ಕಂಡು ವ್ಹಾವ್ ಅಂದಿದ್ದವ್ರೆಲ್ಲಾ ಇದೀಗ ತಲೈವಾ ಜೊತೆ ಕೂಲಿ ಕಲೀಶನ ಖದರ್‌ಗೆ ಫಿದಾ ಆಗಿದ್ದಾರೆ. ನಟನಾಗಿಯೂ ಸಿಕ್ಕಾಪಟ್ಟೆ ಬ್ಯುಸಿ ಇರೋ ಬುದ್ಧಿವಂತನಿಗಿಂದು ಬರ್ತ್ ಡೇ ಸಂಭ್ರಮ. 57ನೇ ವಸಂತಕ್ಕೆ ಕಾಲಿಟ್ಟಿರೋ ಅಭಿಮಾನಿಗಳ ಚಕ್ರವರ್ತಿಗೆ ಫ್ಯಾನ್ಸ್ ಹಾಗೂ ಚಿತ್ರರಂಗದ ನೀಡಿದ ಗಿಫ್ಟ್‌‌ಗಳು ಏನು ಅನ್ನೋದಕ್ಕೆ ಈ ಸ್ಟೋರಿ ಒಮ್ಮೆ ನೋಡಿ.

ಉಪೇಂದ್ರ ಎಂಥಾ ಮಾಸ್ಟರ್‌ಮೈಂಡ್ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ನಿರ್ದೇಶನದ ಮೂಲಕ ಕಾಲಿಟ್ಟ ಅವರು ನಟನಾಗಿಯೂ ಸೂಪರ್ ಅನಿಸಿಕೊಂಡರು. ಅವ್ರ ಡೈರೆಕ್ಷನ್‌‌ಗೆ ತಲೈವಾ ರಜನೀಕಾಂತ್ ಅಂತಹ ಸೂಪರ್ ಸ್ಟಾರ್‌ಗಳೇ ಕ್ಲೀನ್ ಬೋಲ್ಡ್ ಆಗಿದ್ದಾರೆ. ಇನ್ನು ನಟನಾಗಿ ರಜನಿ, ಆಮೀರ್, ನಾಗಾರ್ಜುನ್ ಅಂತಹ ಸ್ಟಾರ್‌‌ಗಳ ಜೊತೆಗೂ ಉಪ್ಪಿ ಕಿಕ್ ಕೊಟ್ಟಿದ್ದಾರೆ.

ಯೆಸ್.. ಸದ್ಯ ಕೂಲಿ ಕಲೀಶನ ಖದರ್‌ಗೆ ಇಡೀ ಇಂಡಿಯಾ ಮನಸೋತಿದೆ. ಉಪ್ಪಿಯಲ್ಲಿರೋ ಆ ನಟರಾಕ್ಷಸನ ಬಗ್ಗೆ ಎಲ್ಲರೂ ಮಾತನಾಡುವಂತಾಗಿದೆ. ಇತ್ತೀಚೆಗೆ ಫೋನ್ ಹ್ಯಾಕ್ ಆಗಿ ಸಿಕ್ಕಾಪಟ್ಟೆ ಹೈರಾಣಾಗಿದ್ದ ಟೆಕ್ನಾಲಜಿ ಮಾಸ್ಟರ್, ಆ ಕಹಿ ಘಟನೆಯ ಹೊರತಾಗಿಯೂ ಇಂದು ತಮ್ಮ ಕತ್ರಿಗುಪ್ಪೆ ನಿವಾಸದಲ್ಲಿ ಫ್ಯಾನ್ಸ್ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡರು.

ನಾಗಣ್ಣ ನಿರ್ದೇಶನದ ಭಾರ್ಗವ ಚಿತ್ರದ ಟೀಸರ್, 45 ಸಿನಿಮಾದ ಫಸ್ಟ್‌ಲುಕ್ ಹಾಗೂ ನೆಕ್ಸ್ಟ್ ಲೆವೆಲ್.. ಹೀಗೆ ಮೂರೂ ಚಿತ್ರತಂಡಗಳಿಂದ ಉಪ್ಪಿಗೆ ಗಿಫ್ಟ್‌‌ಗಳ ಸುರಿಮಳೆ ಆಗಿದೆ. ಅಲ್ಲದೆ, ರಾಜ್ಯದ ಮೂಲೆ ಮೂಲೆಗಳಿಂದ ಬಂದಂತಹ ಫ್ಯಾನ್ಸ್, ಅಭಿಮಾನದ ಚಕ್ರವರ್ತಿಗೆ ಅಭಿಮಾನೋತ್ಸವ ಆಚರಿಸಿದ ಪರಿ ಇಂಟರೆಸ್ಟಿಂಗ್.

ನನ್ನ ಹೇರ್ ಸ್ಟೈಲ್ ಚೇಂಜ್ ಆಗುತ್ತೆ ಆದ್ರೆ ಮೈಂಡ್ ಚೇಂಜ್ ಆಗಲ್ಲ ಎಂದ ಉಪ್ಪಿ, ಫ್ಯಾನ್ಸ್ ಗೊತ್ತಿಲ್ಲದೇ ಇರೋ ಪವರ್, ಎನರ್ಜಿ ಕೊಡ್ತಾರೆ ಎಂದರು. ಅಲ್ಲದೆ, ಸದಾಶಿವನಗರಕ್ಕೆ ಶಿಫ್ಟ್ ಆದ್ರೂ ಸಹ, ಮೊದಲ ಮನೆ ಒಂಥರಾ ಎಮೋಷನಲ್. ಫ್ಯಾನ್ಸ್ ಬಯಸಿದಂತೆ ಇಲ್ಲೇ ಸೆಲೆಬ್ರೇಷನ್ ಮಾಡ್ತಿದ್ದೀವಿ ಎಂದರು.

ಸದ್ದಿಲ್ಲದ ಪ್ರಜಾಕೀಯದ ಬಗ್ಗೆಯೂ ಮಾತನಾಡಿರೋ ಉಪ್ಪಿ, ಮುಂದಿನ ದಿನಗಳಲ್ಲಿ ನಾಯಕನ ಕಾನ್ಸೆಪ್ಟ್ ಹೋಗುತ್ತೆ ಎಂದರು.

ವಿಷ್ಣುವರ್ಧನ್ ಸ್ಮಾರಕ ವಿವಾದದ ಬಗ್ಗೆಯೂ ಮಾತನಾಡಿರೋ ಉಪೇಂದ್ರ, ಸ್ಮಾರಕ ಕಂಡಿತಾ ಬೇಕು. ಫ್ಯಾಮಿಲಿ ಬಯಸಿದಂತೆ ಮೈಸೂರಲ್ಲಿ ಆಗಿದೆ. ವಿಷ್ಣುವರ್ಧನ್‌ನ ಕ್ರಿಯೇಟ್ ಮಾಡಿದ್ದು ಅಭಿಮಾನಿಗಳು. ಅಭಿಮಾನಿಗಳ ಆಸೆ ಈಡೇರಲಿ ಎಂದರು.

ಇನ್ನು ಸ್ಯಾಂಡಲ್‌ವುಡ್‌‌ನಲ್ಲಿ ನಾಯಕನಟನ ಕೊರತೆ ವಿಚಾರ ಉಪೇಂದ್ರ ಮಾತು ಮುಂದುವರೆಸಿ, ಎಲ್ಲರೂ ಸೇರಿ ಚರ್ಚೆ ಮಾಡಬೇಕು ಎಂದರು.

ಒಟ್ಟಾರೆ ಉಪೇಂದ್ರಗೆ 57 ವರ್ಷ ವಯಸ್ಸು ಅಂದ್ರೆ ಯಾರೂ ನಂಬಲ್ಲ. ಯಾಕಂದ್ರೆ ಅಷ್ಟು ಫಿಟ್ ಅಂಡ್ ಫೈನ್ ಆಗಿದ್ದಾರೆ ರಿಯಲ್ ಸ್ಟಾರ್. ಮಗನನ್ನ ಚಿತ್ರರಂಗಕ್ಕೆ ಪರಿಚಯಿಸೋ ಧಾವಂತದಲ್ಲಿರೋ ಉಪ್ಪಿ, ತಮ್ಮ ಕುಟುಂಬದ ಮತ್ತೊಂದು ಕುಡಿಯ ಮೂಲಕ ಕಲಾ ಸೇವೆ ಮಾಡೋಕೆ ಸಜ್ಜಾಗಿದ್ದಾರೆ. ಹ್ಯಾಪಿ ಬರ್ತ್ ಡೇ ಲೆಜೆಂಡ್ ಉಪ್ಪಿ ಸರ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version