ಸುದೀಪ್ ಮಗ ಕೂಡ ‘ಕೋಟಿ’ಗೊಬ್ಬ..ಹೇಗೆ ಗೊತ್ತಾ..?

ಡೆಬ್ಯೂಟ್ ಆ್ಯಕ್ಟರ್ ಸಂಚಿತ್ ಬರೆದ್ರು ಆಲ್ ಟೈಂ ರೆಕಾರ್ಡ್‌

Untitled design 2025 11 15T164345.240

ನಮ್ಮ ಚಂದನವನದಲ್ಲಿ ಕೋಟಿಗೊಬ್ಬ ಅಂದಾಕ್ಷಣ ಮೊದಲು ನೆನಪಾಗ್ತಿದ್ದಿದ್ದು ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್. ಆದ್ರೆ ಕೋಟಿಗೊಬ್ಬ ಟೈಟಲ್‌‌ನ ಇಟ್ಕೊಂಡು ಸಿನಿಮಾಗಳನ್ನ ಮಾಡ್ತಾ ಸುದೀಪ್ ಕೂಡ ಕೋಟಿಗೊಬ್ಬನಾಗಿ ಮಿಂಚಿದ್ರು. ಇದೀಗ ಕಿಚ್ಚನ ಮಗ ಮ್ಯಾಂಗೋ ಪಚ್ಚ ಕೂಡ ಕೋಟಿಗೊಬ್ಬ ಆಗಿ ರಾರಾಜಿಸ್ತಿದ್ದಾರೆ. ಅದ್ಹೇಗೆ ಅನ್ನೋದಕ್ಕೆ ಇಲ್ಲಿದೆ ಉತ್ತರ.

ಕಿಚ್ಚ ಸುದೀಪ್.. ಇಂದು ಆಲ್ ಇಂಡಿಯಾ ಕಟೌಟ್ ಆಗಿ ರಾರಾಜಿಸ್ತಿರಬಹುದು. ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿರಬಹುದು. ಆದ್ರೆ ಸ್ಪರ್ಶ ಚಿತ್ರಕ್ಕೂ ಮುನ್ನ ಸಿಕ್ಕಾಪಟ್ಟೆ ಸೈಕಲ್ ಹೊಡೆದಿದ್ದಾರೆ. ಐರೆನ್ ಲೆಗ್ ಅಂತೆಲ್ಲಾ ಅನಿಸಿಕೊಂಡು, ಆ ಅವಮಾನ, ಅಪಮಾನಗಳನ್ನ ಮೆಟ್ಟಿ ನಿಂತು ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದಾರೆ. ನಟನೆ ಜೊತೆ ಚಿತ್ರರಂಗದ ಬಹುತೇಕ ಎಲ್ಲಾ ವಿಭಾಗಗಳಲ್ಲಿ ಗುರ್ತಿಸಿಕೊಂಡಿದ್ದಾರೆ. ಇವ್ರ ನಡೆ, ನುಡಿ, ಜರ್ನಿ ಎಲ್ಲವೂ ಸ್ಫೂರ್ತಿದಾಯಕ. ಅಲ್ಲದೆ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ ಅಭಿನಯ ಚಕ್ರವರ್ತಿ ಕೋಟಿಗೊಬ್ಬ ಕೂಡ ಹೌದು.

ಇದೀಗ ಕಿಚ್ಚನ ಮಗ ಕೂಡ ಕೋಟಿಗೊಬ್ಬ ಅನ್ನೋ ಟೈಟಲ್ ಪಡೆದುಕೊಂಡಿದ್ದಾರೆ. ಯೆಸ್.. ಮ್ಯಾಂಗೋ ಪಚ್ಚನಾಗಿ ಚಿತ್ರರಂಗಕ್ಕೆ ಕಾಲಿಡ್ತಿರೋ ಕಿಚ್ಚನ ಮಗ ಸಂಚಿತ್ ಸಂಜೀವ್, ತಮ್ಮ ಚೊಚ್ಚಲ ಚಿತ್ರದ ಆಡಿಯೋನ ಬರೋಬ್ಬರಿ 1 ಕೋಟಿ 20 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಹೌದು.. ಸರಿಗಮ ಕಂಪೆನಿಗೆ ಹೀಗೆ ಹೀರೋ ಒಬ್ಬರ ಚೊಚ್ಚಲ ನಟನೆಯ ಸಿನಿಮಾವೊಂದು ದಾಖಲೆ ಮೊತ್ತಕ್ಕೆ ಸೋಲ್ಡ್ ಔಟ್ ಆಗಿರೋದು ಇದೇ ಮೊದಲು. ಈ ಮೂಲಕ ಡೈರೆಕ್ಟರ್ ವಿವೇಕ ಕೂಡ ಸಂಚಿತ್ ಜೊತೆ ಹೊಸ ದಾಖಲೆ ಬರೆದಿದ್ದಾರೆ.

ಮೈಸೂರು ಮೂಲದ ಕ್ರೈಂ ಥ್ರಿಲ್ಲರ್ ಸಿನಿಮಾ ಇದಾಗಿದ್ದು, 2001 ರಿಂದ 2011ರ ಅವಧಿಯಲ್ಲಿ  ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳನ್ನ ಆಧರಿಸಿ ಈ ಸಿನಿಮಾ ತಯಾರಾಗ್ತಿದೆ. ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ಮಾಡಲಾಗಿದೆ. ಚರಣ್ ರಾಜ್ ಸಂಗೀತ ಚಿತ್ರಕ್ಕಿದ್ದು, ಪ್ರಿಯಾ ಸುದೀಪ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಜಂಟಿಯಾಗಿ ಈ ಮ್ಯಾಂಗೋ ಪಚ್ಚ ಚಿತ್ರವನ್ನು ನಿರ್ಮಾಣ ಮಾಡ್ತಿದ್ದಾರೆ. ಸಂಚಿ ಚೊಚ್ಚಲ ಚಿತ್ರಕ್ಕೆ ನಟಿ ಕಾಜಲ್ ಕುಂದರ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ಈಗಾಗ್ಲೇ ರಿವೀಲ್ ಆಗಿರೋ ಟೀಸರ್‌‌ಗಳಲ್ಲಿ ಕಿಚ್ಚನಂತಹ ಖಡಕ್ ಬೇಸ್ ವಾಯ್ಸ್ ಇರೋ ಸಂಚಿತ್ ಡೈಲಾಗ್‌ ಕಿಕ್ ಕೊಟ್ಟಿದೆ. ರೆಟ್ರೋ ಲುಕ್‌‌ನಲ್ಲಿ ಸಂಚಿತ್ ಕೂಡ ವಿಂಟೇಜ್ ಕಿಚ್ಚನಂತೆ ಕಾಣ್ತಿದ್ದಾರೆ. ಹೆರಿಟೇಜ್ ಸಿಟಿಯ ಕಥಾನಕ ಇದಾಗಿದ್ದು, ಪ್ರೇಕ್ಷಕರಿಗೆ ತಪ್ಪದೆ ಇದು ರುಚಿಸಲಿದೆ. ಕಿಚ್ಚನಂತೆ ಪಚ್ಚ ಕೂಡ ಹೊಸ ಇತಿಹಾಸ ಸೃಷ್ಟಿಸಲಿ ಅನ್ನೋದು ಸುದೀಪ್ ಅಭಿಮಾನಿಗಳು ಹಾಗೂ ಕನ್ನಡ ಕಲಾಭಿಮಾನಿಗಳ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

Exit mobile version