ವಿಜಯ್ ದೇವರಕೊಂಡ ಜೊತೆ ಸಪ್ತಪದಿ ತುಳಿಯೋಕೆ ಶುಭ ಮುಹೂರ್ತ ಫಿಕ್ಸ್ ಮಾಡಿಕೊಂಡಿರೋ ನ್ಯಾಷನಲ್ ಕ್ರಶ್, ಕೊನೆಗೂ ಮದ್ವೆ ಬಗ್ಗೆ ಅಧಿಕೃತವಾಗಿ ಬಾಯಿಬಿಟ್ಟಿದ್ದಾರೆ. ಇದರೊಟ್ಟಿಗೆ ತಮ್ಮ ಜೀವನದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿರೋ ಸಮಂತಾ, ಎರಡನೇ ಮದ್ವೆ ಬಹುತೇಕ ಕನ್ಫರ್ಮ್ ಆಗಿದೆ. ಈ ಎರಡೂ ಖುಷಿ ಕ್ಷಣಗಳ ಝಲಕ್ ನಿಮಗಾಗಿ ಕಾಯ್ತಿದೆ. ಜಸ್ಟ್ ಎಂಜಾಯ್.
ಯೆಸ್.. 2021ರಲ್ಲಿ ನಟ ನಾಗಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟಂತಹ ಬಹುಭಾಷಾ ನಟಿ ಸಮಂತಾ, ಇಷ್ಟು ದಿನ ಸಿಂಗಲ್ ಆಗಿಯೇ ಇದ್ರು. ಆದ್ರೀಗ ಫ್ಯಾಮಿಲಿಮ್ಯಾನ್ ವೆಬ್ ಸೀರೀಸ್ ಡೈರೆಕ್ಟರ್ ರಾಜ್ ಜೊತೆ ಎರಡನೇ ಮದ್ವೆ ಆಗಲು ಸಜ್ಜಾಗಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ತಮ್ಮದೇ ಪರ್ಫ್ಯೂಮ್ ಕಂಪೆನಿಯ ಲಾಂಚ್ ಇವೆಂಟ್‌ನಲ್ಲಿ ರಾಜ್ ಜೊತೆ ತುಂಬಾ ಕ್ಲೋಸ್ ಆಗಿರೋ ಫೋಟೋ ಮೂಲಕ ಹಿಂಟ್ ನೀಡಿದ್ದಾರೆ.
ಫ್ಯಾಮಿಲಿಮ್ಯಾನ್ ಡೈರೆಕ್ಟರ್ ರಾಜ್ ಜೊತೆ ಸಮಂತಾ ಮದ್ವೆ ?
ಫೋಟೋ ಮೂಲಕ ರಾಜನ ರಾಣಿ ನಾನೇ ಎಂದ ಸ್ಯಾಮ್..!!
ಫ್ಯಾಮಿಲಿಮ್ಯಾನ್ ಸೀಸನ್-2 ಹಾಗೂ ಸಿಟಾಡೆಲ್ ಹನಿ ಬನಿ ವೆಬ್ ಸೀರೀಸ್‌ಗಳಲ್ಲಿ ಸಮಂತಾಗೆ ಅವಕಾಶ ನೀಡಿ, ಆಕೆಯನ್ನ ನ್ಯಾಷನಲ್ ಲೆವೆಲ್‌ಗೆ ರೀಚ್ ಆಗುವಂತೆ ಮಾಡಿದ್ದು ಇದೇ ರಾಜ್. ಅಲ್ಲದೆ ರಾಜ್‌ಗೂ ಇದು ಎರಡನೇ ಮದ್ವೆ. ಈ ಹಿಂದೆ 2015ರಲ್ಲೇ ಶ್ಯಾಮಲಿ ಅನ್ನೋರನ್ನ ಮದ್ವೆ ಆಗಿದ್ದ ರಾಜ್, ಸಮಂತಾ ರಾಜ್ ಬಾಳಿಗೆ ಎಂಟ್ರಿ ಕೊಟ್ಟ ಬಳಿಕ, ಆತನ ಲೈಫ್ ಹಾಳಾಗ್ತಾ ಬಂತು. ಆ ಬಗ್ಗೆ ಖುದ್ದು ಶ್ಯಾಮಲಿ ಅವ್ರೇ ಒಂದಷ್ಟು ಪೋಸ್ಟ್‌ಗಳ ಮೂಲಕ ನೋವು ಹೊರಹಾಕಿದ್ರು. ಹಾಗಾಗಿ 2022ರಲ್ಲಿ ರಾಜ್‌ಗೆ ಶ್ಯಾಮಲಿ ಡಿವೋರ್ಸ್ ನೀಡಿದ್ರು. ಇದೀಗ ಸ್ಯಾಮ್ ರಾಜ್ ಹೃದಯಕ್ಕೆ ನಾನೇ ರಾಣಿ ಅನ್ನೋದನ್ನ ಜಗಜ್ಜಾಹಿರ ಮಾಡಿದ್ದಾರೆ.
‘ಹೌದು.. ನಾನು ವಿಜಯ್ ಮದ್ವೆ ಆಗ್ತಿದ್ದೀವಿ’ ಎಂದ ರಶ್ಮಿಕಾ..!
ಎಂಗೇಜ್ಮೆಂಟ್ ಸತ್ಯ.. ಫೆಬ್ರವರಿ 26ಕ್ಕೆ ಶುಭ ಮುಹೂರ್ತ ಫಿಕ್ಸ್
ಕಿರಿಕ್ ಪಾರ್ಟಿ ಚಿತ್ರದ ಸಹನಟ ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಮುರಿದು ಬಿದ್ದ ಬಳಿಕ ನಟಿ ರಶ್ಮಿಕಾ ಮಂದಣ್ಣ ತಮ್ಮ ಕರಿಯರ್ ಮೇಲೆ ಫೋಕಸ್ ಮಾಡಿದ್ರು. ಹಂತ ಹಂತವಾಗಿ ಸೌತ್‌ನಿಂದ ಬಾಲಿವುಡ್‌ವರೆಗೆ ಜರ್ನಿ ಮಾಡಿ, ಸದ್ಯ ಬಾಲಿವುಡ್‌ನ ಮೋಸ್ಟ್ ಡಿಮ್ಯಾಂಡಿಂಗ್ ನಟಿಯಾಗಿ ರಾರಾಜಿಸ್ತಿದ್ದಾರೆ. ಸಾಲು ಸಾಲು ಸಿನಿಮಾಗಳ ಸಕ್ಸಸ್, ಕೋಟ್ಯಂತರ ರೂಪಾಯಿ ಆದಾಯ, ಒಳ್ಳೆಯ ನೇಮು, ಫೇಮು ಎಲ್ಲಾ ಗಳಿಸಿರೋ ನ್ಯಾಷನಲ್ ಕ್ರಶ್ ರಶ್ಮಿಕಾ ಕೊನೆಗೂ ಮದ್ವೆ ಆಗೋಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಯೆಸ್.. ಅಭಿಮಾನಿಯೊಬ್ಬ ಕೇಳಿದ ಸ್ಟ್ರೈಟ್ ಹಿಟ್ ಪ್ರಶ್ನೆಗೆ ಅಷ್ಟೇ ಸ್ಟ್ರೈಟ್ ಫಾರ್ವಡ್ ಆನ್ಸರ್ ನೀಡಿ ಅಚ್ಚರಿ ಮೂಡಿಸಿದ್ದಾರೆ ರಶ್ಮಿಕಾ. ಹೌದು.. ನಾನು ವಿಜಯ್ ಮದ್ವೆ ಆಗ್ತಿದ್ದೀವಿ ಎಂದಿದ್ದಾರೆ ಕೂರ್ಗ್ ಚೆಲುವೆ ರಶ್ಮಿಕಾ. ಒಟ್ಟೊಟ್ಟಿಗೆ ಎರಡ್ಮೂರು ಚಿತ್ರಗಳಲ್ಲಿ ನಟಿಸಿರೋ ರಶ್ಮಿಕಾ-ವಿಜಯ್ ದೇವರಕೊಂಡ, ಇತ್ತೀಚೆಗೆ ಸೀಕ್ರೆಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ರು.
2026ರ ಫೆಬ್ರವರಿ 26ರಂದು ಉದಯಪುರದ ಪ್ಯಾಲೆಸ್‌ನಲ್ಲಿ ರಾಯಲ್ ವೆಡ್ಡಿಂಗ್‌ಗೂ ಸಿದ್ದತೆಗಳು ನಡೆಯುತ್ತಿದ್ದು, ಮದ್ವೆ ಆಗೋದನ್ನ ರಶ್ಮಿಕಾನೇ ಖಚಿತಪಡಿಸಿರೋದು ಫ್ಯಾನ್ಸ್‌ಗೆ ಖುಷಿ ತಂದಿದೆ.
