ಕಿಚ್ಚ ಸುದೀಪ್ ಮಗಳ ಕಂಠಕ್ಕೆ ಸಲ್ಮಾನ್ ಖಾನ್ ಫಿದಾ: ಮಸ್ತ್ ಮಲೈಕಾ ಬಗ್ಗೆ ಹೇಳಿದ್ದೇನು ಭಾಯಿಜಾನ್

ಸಾನ್ವಿ ಸುದೀಪ್ ಧ್ವನಿಯಾದ ಮಸ್ತ್ ಮಲೈಕಾ ಸಾಂಗ್ ಮೆಚ್ಚಿದ ಬಾಲಿವುಡ್ ಭಾಯಿಜಾನ್

BeFunky collage 2026 02 17T180900.101

ಕನ್ನಡ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಚಿತ್ರದ ‘ಮಸ್ತ್ ಮಲೈಕಾ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಕ್ರೇಜ್ ಸೃಷ್ಟಿಸಿದೆ. ಮಿಲಿಯನ್‌ಗಟ್ಟಲೇ ವೀವ್ಸ್ ಪಡೆದಿರುವ ಈ ಐಟಂ ಸಾಂಗ್‌ಗೆ ಧ್ವನಿ ನೀಡಿರುವವರು ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸುದೀಪ್. ಈ ಹಾಡಿನ ಯಶಸ್ಸು ಇದೀಗ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್ ಖಾನ್‌ರವರೆಗೂ ತಲುಪಿದೆ.

ಸಲ್ಮಾನ್ ಖಾನ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ‘ಮಸ್ತ್ ಮಲೈಕಾ’ ಹಾಡಿನ ಲಿಂಕ್ ಅನ್ನು ಶೇರ್ ಮಾಡಿ, “ಸುಂದರವಾದ ಹಾಡು, ಒಳ್ಳೆಯದಾಗಲಿ” ಎಂದು ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸ್ಟೋರಿಯಲ್ಲಿ ಕಿಚ್ಚ ಸುದೀಪ್ ಮತ್ತು ಸಾನ್ವಿ ಸುದೀಪ್ ಅವರನ್ನು ಟ್ಯಾಗ್ ಮಾಡಲಾಗಿದೆ. ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ದಬಾಂಗ್ 3 ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದು, ಇಬ್ಬರು ಕುಟುಂಬಗಳ ನಡುವೆ ಆಪ್ತ ಸಂಬಂಧವಿದೆ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್‌ರ ಈ ಮೆಚ್ಚುಗೆಯು ಇನ್ನಷ್ಟು ವಿಶೇಷವಾಗಿದೆ.

ಸಾನ್ವಿ ಸುದೀಪ್ ಈ ಮೆಚ್ಚುಗೆಗೆ ತುಂಬಾ ಖುಷಿಯಾಗಿದ್ದು, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ “ಎಂತಹ ಅದ್ಭುತ ಗೌರವ. ಧನ್ಯವಾದಗಳು ಸಲ್ಮಾನ್ ಸರ್” ಎಂದು ಹಂಚಿಕೊಂಡಿದ್ದಾರೆ. ‘ಮಾರ್ಕ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಸಕ್ಸಸ್ ಆಗಿದ್ದು, ‘ಮಸ್ತ್ ಮಲೈಕಾ’ ಹಾಡು ಯುವಕ-ಯುವತಿಯರಲ್ಲಿ ಭಾರಿ ಜನಪ್ರಿಯತೆ ಪಡೆದಿದೆ. ಸಾನ್ವಿ ಸುದೀಪ್‌ರ ಮೊದಲ ಗಾಯನಕ್ಕೆ ಇಷ್ಟೊಂದು ದೊಡ್ಡ ಮನ್ನಣೆ ಸಿಗುತ್ತಿರುವುದು ಕನ್ನಡ ಚಿತ್ರರಂಗಕ್ಕೂ ಹೆಮ್ಮೆಯ ಸಂಗತಿಯಾಗಿದೆ.

Exit mobile version