ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್‌ಗೆ ಯಾಕೋ ಟೈಮ್ ಸರಿನೇ ಹೋಗ್ತಿಲ್ಲ. ಒಂದ್ಕಡೆ ಬ್ಯಾಕ್ ಟು ಬ್ಯಾಕ್ ಫ್ಲಾಪ್‌ಗಳು. ಮತ್ತೊಂದ್ಕಡೆ ಮಾಡಿರೋ ಸಿನಿಮಾ ಕೂಡ ರಿಲೀಸ್ ಮಾಡೋಕೆ ಆಗದೇ ಇರೋದು. ಪ್ರತಿ ಈದ್‌ಗೂ ಒಂದೊಂದು ಸಿನಿಮಾ ಮೂಲಕ ರಂಜಿಸೋಕೆ ಬರ್ತಿದ್ದ ಸಲ್ಲು, ಈ ಬಾರಿ ದಿ ಬ್ಯಾಟಲ್ ಆಫ್ ಗಾಲ್ವಾನ್ ಸಿದ್ಧಗೊಳಿಸಿದ್ರು. ಅದಕ್ಕೆ ಟೈಟಲ್ ಬದಲಾಗಿದ್ದು, ಅಷ್ಟೇ ಅಲ್ಲ ರಿಲೀಸ್ ಡೇಟ್ ಕೂಡ ಪೋಸ್ಟ್‌ಪೋನ್ ಆಗಿತ್ತು. ಆದ್ರೀಗ ರಿಲೀಸ್ ಆದೋದೇ ಡೌಟ್ ಎನ್ನಲಾಗ್ತಿದೆ.
ಮಾತೃಭೂಮಿ.. ನಟ ಸಲ್ಮಾನ್ ಖಾನ್ ನಟಿಸ್ತಿರೋ ಬಹುನಿರೀಕ್ಷಿತ ಸಿನಿಮಾ. ಕಳೆದ ವರ್ಷ ಸಿಕಂದರ್ ಮಾಡಿದ್ದ ಬಾಲಿವುಡ್ ಭಾಯಿಜಾನ್, ಈ ವರ್ಷ ಮಾತೃಭೂಮಿ ಮೂಲಕ ನೈಜ ಘಟನೆ ಆಧಾರಿತ ವಾರ್ ಬೇಸ್ಡ್ ಸಿನಿಮಾದಿಂದ ದೇಶಪ್ರೇಮ ಹೆಚ್ಚಿಸೋ ಕಾರ್ಯ ಮಾಡಲಿದ್ದರು. ಆದ್ರೆ ಪರಿಸ್ಥಿತಿಗಳು ಅಂದುಕೊಂಡಂತೆ ಆಗುತ್ತಿಲ್ಲ ಅನ್ನೋದು ಬೇಸರದ ವಿಷಯ. ಯಾಕಂದ್ರೆ ಮಾತೃಭೂಮಿ ಸಿನಿಮಾದ ಮೂಲ ಹೆಸರು ಗಾಲ್ವಾನ್. ಗಾಲ್ವಾನ್ ಟೈಟಲ್‌ನಲ್ಲೇ ಟೀಸರ್ ಲಾಂಚ್ ಮಾಡಿದ್ದ ಸಲ್ಲು, ಅದಾದ ಬಳಿಕ ಡಿಢೀರ್ ಅಂತ ಆ ಟೈಟಲ್‌ನ ಮಾತೃಭೂಮಿ ಅಂತ ಬದಲಿಸಿಬಿಟ್ಟರು.
ಸಲ್ಮಾನ್‌ಗೆ ಮತ್ತೆ ಆಘಾತ.. ಮಾತೃಭೂಮಿ ರಿಲೀಸ್ ಕ್ಯಾನ್ಸಲ್
ಟೈಟಲ್ ಅಷ್ಟೇ ಬದಲಾಗಿಲ್ಲ.. ರಿಲೀಸ್‌ನಲ್ಲಿ ದೊಡ್ಡ ಬದಲಾವಣೆ
ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ಇದೇ ಏಪ್ರಿಲ್ 17ಕ್ಕೆ ಮಾತೃಭೂಮಿ ತೆರೆಗಪ್ಪಳಿಸಬೇಕಿತ್ತು. ಆದ್ರೆ ರಿಲೀಸ್ ಡೇಟ್‌ನ ಮೇ 15ಕ್ಕೆ ಪೋಸ್ಟ್‌ಪೋನ್ ಮಾಡಿತ್ತು ಚಿತ್ರತಂಡ. ಇದೀಗ ಆಗಸ್ಟ್ 14ರ ಸ್ವಾತಂತ್ರ್ಯ ದಿನಾಚರಣೆಗೆ ಬೆಳ್ಳಿತೆರೆ ಬೆಳಗಲಿದೆ ಎನ್ನಲಾಗ್ತಿದೆ. ಕೆಲವರು ಈ ಸಿನಿಮಾ ರಿಲೀಸ್ ಆಗೋದೇ ಡೌಟು. ಅಂದುಕೊಂಡಂತೆ ಸಿನಿಮಾ ಮೂಡಿಬರದೇ ಇರೋದೇ ಅದಕ್ಕೆ ಪ್ರಮುಖ ಕಾರಣ ಅಂತಿದ್ದಾರೆ. ಹೀಗಾಗಿ ಸಲ್ಮಾನ್ ಖಾನ್ ಫ್ಯಾನ್ಸ್‌ಗೆ ಇದು ಭಾರೀ ನಿರಾಸೆ ತಂದಿದೆ.
ಈಗಾಗ್ಲೇ ಟೀಸರ್ ಹಾಗೂ ಮೂರು ಸಾಂಗ್ಸ್ ರಿಲೀಸ್ ಮಾಡಿರೋ ಚಿತ್ರತಂಡ, ಪದೇ ಪದೆ ರೀ-ಶೂಟ್ ಮಾಡ್ತಿದೆ. ಎಡಿಟ್ ಮಾಡಿ ನೋಡ್ತಿದೆ ಅನ್ನೋದು ಟಾಕ್. ನಿರ್ದೇಶಕ ಅಪೂರ್ವ ಲಾಖಿಯಾ ಕೂಡ ಈ ಚಿತ್ರಕ್ಕಾಗಿ ಸಾಕಷ್ಟು ರಿಸರ್ಚ್ ಮಾಡಿಕೊಂಡೇ ಶೂಟಿಂಗ್ ಅಡ್ಡಾಗೆ ಇಳಿದಿದ್ರೂ ಸಹ, ಇಲ್ಲಿ ಎಮೋಷನ್ ಕೊರತೆ ಎದ್ದು ಕಾಣ್ತಿದೆಯಂತೆ. ಅದೇ ಕಾರಣದಿಂದ ಭಾವನಾತ್ಮಕ ವಿಷಯಗಳನ್ನ ಸೇರಿಸಲು ಸಾಕಷ್ಟು ಕಸರತ್ತು ನಡೆಯುತ್ತಿದೆ ಎನ್ನಲಾಗ್ತಿದೆ.
ಗಾಲ್ವಾನ್ ಕಣಿವೆಯ ಇಂಡೋ-ಚೈನಾ ಸೈನಿಕರ ಸಂಘರ್ಷ ಕಥೆ
ಪದೇ ಪದೆ ರೀ-ಶೂಟ್.. ರೈಟ್ ಟ್ರ್ಯಾಕ್‌ಗೆ ಬಾರದ ಮಾತೃಭೂಮಿ
ಅಂದಹಾಗೆ ಮಾತೃಭೂಮಿ ಸಿನಿಮಾಗೆ ಬಂಡವಾಳ ಹೂಡುತ್ತಿರೋದು ಸಲ್ಮಾನ್ ಖಾನ್ ಅನ್ನೋದು ಇಂಟರೆಸ್ಟಿಂಗ್. ಸಲ್ಮಾನ್ ಖಾನ್ ಫಿಲಂಸ್ ಬ್ಯಾನರ್‌ನಡಿ ಈ ಚಿತ್ರ ತಯಾರಾಗ್ತಿದ್ದು, ರಿಲೀಸ್ ಬಳಿಕ ಫ್ಲಾಪ್ ಆದ್ರೆ ಕಷ್ಟವಾಗಲಿದೆ. ಈಗಾಗ್ಲೇ ಸಾಕಷ್ಟು ಫ್ಲಾಪ್ ಮೂವಿಗಳಿಂದ ಸೋತು ಸುಣ್ಣವಾಗಿರೋ ಸಲ್ಲು, ಮತ್ತೊಮ್ಮೆ ಆ ಸೋಲಿನ ಸುಳಿಗೆ ಸಿಲುಕಲು ತಯಾರಿಲ್ಲ. ಅದೇ ಕಾರಣಕ್ಕೆ ಪಕ್ವತೆ ಮಾಡಿಕೊಂಡೇ ತೆರೆಗೆ ಬರೋ ಧಾವಂತದಲ್ಲಿದ್ದಾರೆ ಭಾಯಿಜಾನ್ ಸಲ್ಲು.
ಮಾತೃಭೂಮಿ ಸಿನಿಮಾ ಭಾರತ ಹಾಗೂ ಚೀನಾ ಸೈನಿಕರ ಸಂಘರ್ಷದ ನೈಜ ಕಥಾನಕ ಆಧರಿಸಿ ತಯಾರಾಗ್ತಿದೆ. ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಕಳೆದ 45 ವರ್ಷಗಳಲ್ಲಿ ನಡೆಯದಂತಹ ಡೆಡ್ಲಿ ಹಾಗೂ ಹಿಂಸಾತ್ಮಕ ಘರ್ಷಣೆ ಇದಾಗಿತ್ತು. 2020ರ ಜೂನ್ 15ರಂದು ಇಂಡಿಯಾ-ಚೀನಾ ಗಡಿರೇಖೆ ಬಳಿ ನಡೆದ ಆ ಸಂಘರ್ಷದಲ್ಲಿ ನಮ್ಮ ಭಾರತದ 20ಕ್ಕೂ ಅಧಿಕ ಯೋಧರು ಹುತಾತ್ಮರಾದರು. ಚೀನಾ ಸೈನಿಕರು ಅಕ್ರಮವಾಗಿ ನಿರ್ಮಿಸಿದ್ದ ಟೆಂಟ್‌ಗಳನ್ನ ತೆರವುಗೊಳಿಸುವಾಗ ಹಾಗೂ ಗಡಿ ಒಪ್ಪಂದವನ್ನು ಉಲ್ಲಂಘಿಸಿದ ಕಾರಣಕ್ಕೆ ಈ ಸಂಘರ್ಷ ಶುರುವಾಗಿತ್ತು. ಕರ್ನಲ್ ಸಂತೋಷ್ ಬಾಬು ನೇತೃತ್ವದಲ್ಲಿ ನಮ್ಮ ಭಾರತೀಯ ಸೇನೆ, ಚೀನಾ ಸೇನೆಯನ್ನ ಎದುರಿಸಿತ್ತು.
