ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಸಲ್ಮಾನ್ ಸಿನಿಮಾಗಳು ರಿಲೀಸ್ ಆಗಿ ವರ್ಷಗಳೇ ಆಗ್ತಿದೆ. ಸದ್ಯ ರಿಲೀಸ್‌ಗೆ ಸಜ್ಜಾಗಿದ್ದ ‘ಬ್ಯಾಟಲ್ ಆಫ್ ಗಾಲ್ವಾನ್’ ಸಿನಿಮಾ ಕೂಡ ಪೋಸ್ಟ್‌ಪೋನ್ ಮಾಡುವ ಸೂಚನೆ ಸಿಕ್ಕಿದೆ. ಅಷ್ಟೇ ಅಲ್ಲ, ಚಿತ್ರದ ಟೈಟಲ್ ಕೂಡ ಚೇಂಚ್ ಮಾಡಲಾಗಿದೆ. ಅಷ್ಟಕ್ಕೂ ಏನಿದು ಗೊಂದಲ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಟೈಗರ್, ಕಿಸೀ ಕಾ ಭಾಯಿ ಕಿಸೀ ಕಿ ಜಾನ್ ಬಳಿಕ ಸಲ್ಲು ಸಿನಿಮಾ ಬಗ್ಗೆ ನಿರೀಕ್ಷೆ ಜಾಸ್ತಿಯಾಗಿದ್ದೇ ಹೊರತು, ಸಡನ್ ಸೈಲೆನ್ಸ್ ಕೂಡ ಫ್ಯಾನ್ಸ್‌ನ್ನು ಕಂಫ್ಯೂಸ್ ಮಾಡಿತ್ತು. ಈಗ ಅಷ್ಟೆಲ್ಲಾ ಕಾಯುತ್ತಿದ್ದ ಸಲ್ಮಾನ್ ಸಿನಿಮಾ ರಿಲೀಸ್‌ಗೆ ಸಿದ್ಧ ಅಂತ ಅನ್ನಿಸುತ್ತಿದ್ದಾಗಲೇ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಎಸ್, ವರ್ಷಗಳ ಗ್ಯಾಪ್ ನಂತರ ಸಲ್ಮಾನ್ ಖಾನ್ ಭಾರೀ ಹೈಪ್ ನಡುವೆ ‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾದ ಮೂಲಕ ಕಂಬ್ಯಾಕ್ ಮಾಡ್ತಾರೆ ಅನ್ನೋ ನಿರೀಕ್ಷೆ ಇತ್ತು. ಈ ಸಿನಿಮಾ ದೇಶಭಕ್ತಿ ಬ್ಯಾಕ್‌ಡ್ರಾಪ್‌ನಲ್ಲಿ ದೊಡ್ಡ ಮಟ್ಟದಲ್ಲಿ ಮೂಡಿ ಬರ್ತಿದೆ. ಆದರೆ ಏಕಾಏಕಿ ಟೈಟಲ್ ಚೇಂಜ್ ಮಾಡಿ ‘ಮಾತೃಭೂಮಿ’ ಅಂತ ಮರುನಾಮಕರಣ ಮಾಡಿದ್ದು ಫ್ಯಾನ್ಸ್ ಗೆ ಫುಲ್ ಶಾಕ್ ಕೊಟ್ಟಿದೆ.
ಬ್ಯಾಟಲ್ ಆಫ್ ಗಾಲ್ವಾನ್ ಟೈಟಲ್ ಚೇಂಜ್.. ಫ್ಯಾನ್ಸ್ ಶಾಕ್
ಸಲ್ಲು ಗಾಲ್ವಾನ್ ಈಗ ಮಾತೃಭೂಮಿ.. ಟೈಟಲ್ ಬದಲಿಸಿದ್ಯಾಕೆ ?
ಇಷ್ಟೇ ಅಲ್ಲ ಈ ಹಿಂದೆ ಘೋಷಿಸಿದ ಏಪ್ರಿಲ್ 10 ರಿಲೀಸ್ ಡೇಟ್ ಬಗ್ಗೆ ಈಗ ಯಾವುದೇ ಅಪ್‌ಡೇಟ್ ಇಲ್ಲ. ಹೊಸ ಪೋಸ್ಟರ್‌ನಲ್ಲಿ ಡೇಟ್ ಮಿಸ್ಸಿಂಗ್ ಟೀಂ ಸೈಲೆಂಟ್ ಫ್ಯಾನ್ಸ್ ಮಾತ್ರ ಕನ್‌ಫ್ಯೂಸ್ ಆಗಿದ್ದಾರೆ. ಸಿನಿಮಾ ಪೋಸ್ಟ್‌ಪೋನ್ ಆಯ್ತಾ..? ಇದು ಅದೇ ಪ್ರಾಜೆಕ್ಟ್ ಆ..? ಅನ್ನೋ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಭುಗಿಲೆದ್ದಿದೆ. ಮಾರ್ಚ್ 16ರಂದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡಿರುವ ಸಲ್ಮಾನ್ ಮಾತ್ರ ‘ಯುದ್ಧಕ್ಕೆ ಶಾಂತಿ ಸಿಗಲಿ’ ಅನ್ನೋ ಕ್ಯಾಪ್ಶನ್ ಕೊಟ್ಟು ಸಸ್ಪೆನ್ಸ್ ಇನ್ನೂ ಹೆಚ್ಚಿಸಿದ್ದಾರೆ.
ಇನ್ನು ರಿಲೀಸ್ ಆಗಿರುವ ಹೊಸ ಪೋಸ್ಟರ್‌ನಲ್ಲಿ ರಕ್ತಸಿಕ್ತವಾಗಿ ಕಾಣಿಸಿಕೊಂಡಿರುವ ಸಲ್ಮಾನ್ ಖಾನ್, ಮುಳ್ಳುತಂತಿಗಳ ನಡುವೆ ಹೋರಾಡ್ತಿರುವ ದೃಶ್ಯ ಫ್ಯಾನ್ಸ್‌ಗೆ ರೋಮಾಂಚನ ಕೊಡ್ತಿದೆ. ಭಾರತ ಮತ್ತು ಚೀನಾ ನಡುವೆ 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ಕಥೆಯನ್ನು ಸಿನಿಮಾ ಹೊಂದಿದ್ದು, ‘ಶೂಟ್‌ಔಟ್ ಆ್ಯಟ್ ಲೋಖಂಡ್‌ವಾಲಾ’ ಸಿನಿಮಾ ಖ್ಯಾತಿಯ ಅಪೂರ್ವ ಲಖ್ಹಿಯಾ ನಿರ್ದೇಶಿದ್ದಾರೆ. ಅಂದಹಾಗೆ ಯುದ್ಧವನ್ನು ತಾತ್ವಿಕ ದೃಷ್ಟಿಕೋನದಿಂದ ನೋಡುವ ಹಾಗೂ ಶಾಂತಿಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಚಿತ್ರತಂಡ ಈ ನಿರ್ಧಾರ ಮಾಡಿದೆ ಎನ್ನಲಾಗಿದೆ.
ಯುದ್ಧಕ್ಕೆ ಶಾಂತಿ ಸಿಗಲಿ.. ಖಾನ್ ಪೋಸ್ಟ್ ಗೆ ಫ್ಯಾನ್ಸ್ ಕನ್ಫ್ಯೂಸ್
ರಿಲೀಸ್ ಬಗ್ಗೆ ಇಲ್ಲ ಕ್ಲ್ಯಾರಿಟಿ.. ಲೇಟ್ ಆಗ್ತಿರೋದು ಏಕೆ ಗೊತ್ತಾ ?
ಶೀರ್ಷಿಕೆ ಬದಲಾವಣೆ ಬಗ್ಗೆ ಮಾತನಾಡಿರುವ ನಿರ್ದೇಶಕ ಅಪೂರ್ವ ಲಖಿಯಾ, ‘ಇದು ದಿಢೀರ್ ನಿರ್ಧಾರವಲ್ಲ. ನಾವು ಮೊದಲಿನಿಂದಲೂ ಬ್ಯಾಟಲ್ ಆಫ್ ಗಲ್ವಾನ್ ಮತ್ತು ಮಾತೃಭೂಮಿ ಎಂಬ ಎರಡು ಶೀರ್ಷಿಕೆಗಳನ್ನು ನೋಂದಾಯಿಸಿದ್ದೆವು. ಚಿತ್ರೀಕರಣದ ಹಂತದಲ್ಲಿ ನಮಗೆ ಇದು ಕೇವಲ ಒಂದು ಯುದ್ಧದ ಕಥೆಯಲ್ಲ, ಬದಲಾಗಿ ಮಾನವೀಯತೆ, ಸಹಾನುಭೂತಿ ಮತ್ತು ಸೈನಿಕರ ಹೋರಾಟಗಳ ಕಥೆ ಎಂದು ಅರಿವಾಯಿತು. ಹಾಗಾಗಿ ಮಾತೃಭೂಮಿ ಎಂಬ ಹೆಸರು ಹೆಚ್ಚು ಸೂಕ್ತವೆನಿಸಿತು’ ಎಂದು ವಿವರಿಸಿದ್ದಾರೆ.
‘ಮಾತೃಭೂಮಿ’ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆಗೆ ಚಿತ್ರಾಂಗದಾ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಲ್ಮಾನ್ ಖಾನ್ ಫಿಲ್ಮ್ಸ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಶೀರ್ಷಿಕೆ ಬದಲಾವಣೆಯ ಸುದ್ದಿ ಕೇಳಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದು ಮಾರ್ಕೆಟಿಂಗ್ ಸ್ಟಂಟ್ ಆ..? ಅಥವಾ ಲಾಸ್ಟ್ ಮಿನಿಟ್ ಪ್ಲಾನ್..? ಅನ್ನೋ ಚರ್ಚೆ ಜೋರಾಗಿದೆ. ಒಟ್ಟಿನಲ್ಲಿ ವರ್ಷಗಳ ಬಳಿಕ ಬರುತ್ತಿರೋ ಸಲ್ಮಾನ್ ಖಾನ್ ಸಿನಿಮಾ ಈಗ ರಿಲೀಸ್‌ಗೂ ಮುಂಚೆನೇ ಭಾರೀ ಹೈಪ್ ಕ್ರಿಯೇಟ್ ಮಾಡಿದೆ.
