ಸಾನ್ವಿ ಕಂಠ..ಮಸ್ತ್ ಮಲೈಕಾಗೆ ಸುಸ್ತಾಗುವಂತೆ ಕುಣಿದ ಕಿಚ್ಚ ಸುದೀಪ್

ಮಸ್ತ್ ಆಗಿ ಸೊಂಟ ಬಳುಕಿಸಿದ ಸಿಕ್ಸ್ ಪ್ಯಾಕ್ ಚೆಲುವೆ ನಿಶ್ವಿಕಾ

Untitled design 2025 12 16T144115.962

ಮಾರ್ಕ್ ಹೈ ವೋಲ್ಟೇಜ್ ಟ್ರೈಲರ್ ನೋಡಿ ಅರೇ.. ಹೀರೋಯಿನ್ ಇಲ್ವಲ್ಲಾ ಅಂತ ಫೀಲ್ ಆಗ್ತಿದ್ದ ಸುದೀಪಿಯೆನ್ಸ್‌ಗೆ ಕಿಚ್ಚ ಕೊನೆಗೂ ಗುಡ್‌ ನ್ಯೂಸ್ ಕೊಟ್ಟಿದ್ದಾರೆ. ಬ್ಯೂಟಿಫುಲ್ ಮಲೈಕಾ ಜೊತೆ ಕಲರ್‌‌ಫುಲ್ ಡ್ಯಾನ್ಸಿಂಗ್‌ ನಂಬರ್‌‌ನೊಂದಿಗೆ ಬಂದಿದ್ದಾರೆ. ಸಾನ್ವಿ ಸುದೀಪ್ ಕಂಠದಲ್ಲಿ ಮಸ್ತ್ ಮಲೈಕಾಗೆ ಸುಸ್ತಾಗುವಂತೆ ಕುಣಿದ ನಿಶ್ವಿಕಾ-ಬಾದ್‌ಷಾ ಬ್ಯಾಂಗ್ ಬ್ಯಾಂಗ್ ಸ್ಟೋರಿ ಇಲ್ಲಿದೆ.

ಇದು ಇದೇ ಡಿಸೆಂಬರ್ 25ಕ್ಕೆ ಥಿಯೇಟರ್‌ಗೆ ಎಂಟ್ರಿ ಕೊಡ್ತಿರೋ ಅಜಯ್ ಮಾರ್ಕಂಡೇಯ ಅಕ ಮಾರ್ಕ್‌ ಚಿತ್ರದ ಡ್ಯಾನ್ಸ್ ನಂಬರ್. ಇಲ್ಲಿಯವರೆಗೆ ಮ್ಯಾಕ್ಸ್ ಚಿತ್ರದಂತೆ ಮಾರ್ಕ್‌ ಕೂಡ ಹೈ ವೋಲ್ಟೇಜ್ ಆ್ಯಕ್ಷನ್ ವೆಂಚರ್ ಅಂದುಕೊಂಡಿದ್ದ ಚಿತ್ರಪ್ರೇಮಿಗಳಿಗೆ ಈ ಸಾಂಗ್‌ನಿಂದ ಸರ್‌‌ಪ್ರೈಸ್ ನೀಡಿದ್ದಾರೆ ಬಾದ್‌ಷಾ ಕಿಚ್ಚ ಸುದೀಪ್. ಯೆಸ್.. ಮೈ ಕೈ ಕುಣಿಸೋ ಮಸ್ತ್ ಮಲೈಕಾ ಸಾಂಗ್ ಮಾರ್ಕ್‌ ಚಿತ್ರದ ಗ್ಲಾಮರ್ ಹೆಚ್ಚಿಸಿದೆ.

ಆರಡಿ ಕಟೌಟ್ ಕಿಚ್ಚನ ಜೊತೆ ಈ ಹಾಡಲ್ಲಿ ಸೊಂಟ ಬಳುಕಿಸಿರೋದು ನಿಶ್ವಿಕಾ ನಾಯ್ಡು. ಸ್ಯಾಂಡಲ್‌ವುಡ್‌ನ ಸಿಕ್ಸ್ ಪ್ಯಾಕ್ ಚೆಲುವೆ ಅಂತಲೇ ಫೇಮಸ್ ಆಗಿರೋ ನಿಶ್ವಿಕಾ, ಹಿತ್ತಲಕೆ ಕರಿಬ್ಯಾಡ ಮಾವ ಹಾಡಿನಿಂದ ಪ್ಯಾನ್ ಇಂಡಿಯಾ ಸದ್ದು ಮಾಡಿದ್ರು. ಇದೀಗ ಕಿಚ್ಚನ ಜೊತೆ ಬೃಹದಾಕಾರದ ಬೋಟ್ ಸೆಟ್‌‌ನಲ್ಲಿ ಕಲರ್‌‌ಫುಲ್ ಕಾಸ್ಟ್ಯೂಮ್‌‌ನೊಂದಿಗೆ ಸ್ಟೆಪ್ ಹಾಕಿದ್ದಾರೆ.

ಮಸ್ತ್ ಮಲೈಕಾ ಅನ್ನೋ ಈ ಹಾಡಿನ ಹೈಲೈಟ್ ಸಾನ್ವಿ ಸುದೀಪ್ ಗಾಯನ. ಯೆಸ್.. ಮ್ಯಾಕ್ಸ್ ಚಿತ್ರದಲ್ಲಿ ಕೂಡ ತಂದೆಗಾಗಿ ತಾವೇ ಒಂದು ಹಾಡಿಗೆ ಲಿರಿಕ್ಸ್ ಬರೆದು ಹಾಡಿದ್ರು ಸಾನ್ವಿ. ಮಾರ್ಕ್‌ನಲ್ಲಿ ಗಾಯಕ ನಕಾಶ್ ಜೊತೆಗೂಡಿ ಸಾನ್ವಿ ಸುದೀಪ್ ಈ ಹಾಡನ್ನ ಹಾಡಿದ್ದಾರೆ. ಅಫಿಶಿಯಲಿ ಪ್ರೊಫೆಷನಲ್ ಸಿಂಗರ್ ಆಗಿ ತಮ್ಮ ಛಾಪನ್ನು ಒತ್ತಿದ್ದಾರೆ. ಇದು ನಿಜಕ್ಕೂ ಕಿಚ್ಚ ಸುದೀಪ್ ಹಾಗೂ ಪ್ರಿಯಾ ಸುದೀಪ್ ಸೇರಿದಂತೆ ಅವ್ರ ಫ್ಯಾನ್ಸ್‌ಗೆ ಸ್ಪೆಷಲ್ ಮೊಮೆಂಟ್.

ಅಂದಹಾಗೆ ಮಸ್ತ್ ಮಲೈಕಾ ಹಾಡಿಗೆ ಈ ಹಿಂದಿನ ಸೈಕೋ ಸೈತಾನ್ ಗೀತೆಗೆ ಸಾಹಿತ್ಯ ರಚಿಸಿದ್ದ ಅನೂಪ್ ಭಂಡಾರಿ ಅವರೇ ಪದಗಳನ್ನ ಪೋಣಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಹಾಗೂ ಶೋಭಿ ಮಾಸ್ಟರ್ ಕೊರಿಯೋಗ್ರಫಿ ಈ ಹಾಡಿಗಿದೆ. ಇದು ಬರೀ ಹಾಡಲ್ಲ.. ಕಥೆಗೆ ಪೂರಕವಾಗಿದ್ದು, ವಿಲನ್ ಮಗಳಿಗೆ ಕುಣಿಯುತ್ತಲೇ ರಿಂಗ್ ಕೊಟ್ಟು ಪ್ರಪೋಸ್ ಮಾಡುವಂತಹ ಸಸ್ಪೆಂಡೆಡ್ ಪೊಲೀಸ್ ಆಫೀಸರ್ ಅಜಯ್ ಮಾರ್ಕಂಡೇಯನ ಝಲಕ್ ಕೂಡ ಕಣ್ಣಿಗೆ ಕಾಣುತ್ತೆ.

ಮಾರ್ಕ್‌ ಚಿತ್ರದಲ್ಲಿ ದೀಪ್ಷಿಕಾ, ನವೀನ್ ಚಂದ್ರ, ಗುರು ಸೋಮಸುಂದರಂ, ರೋಶಿನಿ ಪ್ರಕಾಶ್, ಗೋಪಾಲ್‌ಕೃಷ್ಣ ದೇಶಪಾಂಡೆ, ಮಹಾಂತೇಶ್ ಹಿರೇಮಠ್, ಡ್ರ್ಯಾಗನ್ ಮಂಜು, ಆರ್ಚನಾ ಕೊಟ್ಟಿಗೆ, ಯೋಗಿ ಬಾಬು, ಶೈನ್ ಟಾಮ್ ಚಾಕೋ ಸೇರಿದಂತೆ ಬಹುದೊಡ್ಡ ತಾರಾಗಣವಿದೆ. ಸತ್ಯ ಜ್ಯೋತಿ ಫಿಲಂಸ್ ಜೊತೆ ಕಿಚ್ಚ ಕ್ರಿಯೇಷನ್ ಬ್ಯಾನರ್‌‌ನಡಿ ಸಿನಿಮಾ ತಯಾರಾಗಿದ್ದು, ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮೂಲಕ ಪ್ರಿಯಾ ಸುದೀಪ್ ಅವರೇ ಇದನ್ನ ಡಿಸ್ಟ್ರಿಬ್ಯೂಟ್ ಮಾಡ್ತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version