ಎಸ್. ನಾರಾಯಣ್ ‘ಗಲಾಟೆ ಸೊಸೆ’ಯ ಅಸಲಿ ಕಥೆ ಗೊತ್ತಾ..?

ಇದು ಸೊಸೆ ತಂದ ಸೌಭಾಗ್ಯ ಅಲ್ಲ.. ಸೊಸೆ ಬಂದ ದೌರ್ಭಾಗ್ಯ..!

0 (14)

ಕಲಾ ಸಾಮ್ರಾಟ್ ಎಸ್ ನಾರಾಯಣ್ ಹಾಗೂ ಅವರ ಮಗ ಪವನ್ ಮೇಲೆ ಕೇಳಿಬಂದಿದ್ದ ವರದಕ್ಷಿಣೆ ಕಿರುಕುಳ ಕೇಸ್‌ಗೆ ಮೆಗಾ ಟ್ವಿಸ್ಟ್ ಸಿಕ್ಕಿದೆ. ಸೊಸೆ ತರಬೇಕಿದ್ದು ಸೌಭಾಗ್ಯ ಆದ್ರೆ ಅದು ದೌರ್ಭಾಗ್ಯ ಆಗಿರೋದು ದುರಂತ. ಇಂಟರೆಸ್ಟಿಂಗ್ ಅಂದ್ರೆ ಎಸ್ ನಾರಾಯಣ್ ಸೊಸೆ ಮೇಲೆ ಸ್ವಂತ ಅವರ ತಂದೆಯೇ ದೂರು ದಾಖಲಿಸಿದ್ದಾರೆ. ಅದ್ರ ಕಂಪ್ಲೀಟ್ ಡೀಟೈಲ್ ಇಲ್ಲಿದೆ.

ನಟ, ನಿರ್ದೇಶಕ, ನಿರ್ಮಾಪಕ, ವಿತರಕ, ಸಂಗೀತ ಸಂಯೋಜಕ, ಚಿತ್ರ ಸಾಹಿತಿ ಹೀಗೆ ಚಿತ್ರರಂಗದಲ್ಲಿ ಎಸ್ ನಾರಾಯಣ್ ಟಚ್ ಮಾಡದ ವಿಭಾಗವೇ ಇಲ್ಲ. ತಮ್ಮ ಜೀವಮಾನದಲ್ಲಿ ಬರೋಬ್ಬರಿ 50 ಚಿತ್ರಗಳನ್ನ ನಿರ್ದೇಶಿಸಿದ ಟ್ರ್ಯಾಕ್ ರೆಕಾರ್ಡ್‌ ಇರೋ ಇವರು, ಎಂದೂ ವಿವಾದಗಳನ್ನ ಮಾಡಿಕೊಂಡವರಲ್ಲ. ಚಿತ್ರರಂಗದ ದಿಗ್ಗಜ ಕಲಾವಿದರುಗಳಾದ ಡಾ. ರಾಜ್, ಅಂಬಿ, ವಿಷ್ಣು ಸೇರಿದಂತೆ ಅಣ್ಣಾವ್ರ ಮೂರೂ ಮಂದಿ ರಾಜಕುಮಾರರಿಗೆ ಆ್ಯಕ್ಷನ್ ಕಟ್ ಹೇಳಿದ ಗರಿಮೆ ಇವರದ್ದು. ಎಲ್ಲಕ್ಕಿಂತ ಮಿಗಿಲಾಗಿ ಶಿಸ್ತಿಗೆ ಇವರು ಕೇರ್ ಆಫ್ ಅಡ್ರೆಸ್.

ಸಾಮಾಜಿಕ ಕಳಕಳಿಯ ಸಿನಿಮಾಗಳನ್ನ ಮಾಡಿರೋ ಇವರು, ಕೌಟುಂಬಿಕ ಸಾಮರಸ್ಯದ ಕುರಿತ ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಅದಕ್ಕೆ ಸೂರ್ಯವಂಶಕ್ಕಿಂತ ಬಹುದೊಡ್ಡ ನಿದರ್ಶನ ಮತ್ತೊಂದು ಬೇಕಿಲ್ಲ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರೋ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಸಾಕಷ್ಟು ಮಂದಿ ಕಲಾವಿದರು ಹಾಗೂ ತಂತ್ರಜ್ಞರ ಪಾಲಿಗೆ ಇವರು ಗಾಡ್ ಫಾದರ್. ಯಾಕಂದ್ರೆ ದಚ್ಚು-ಪವಿತ್ರಾನ ಮೊದಲು ಇಂಟ್ರಡ್ಯೂಸ್ ಮಾಡಿದ್ದೇ ಎಸ್ ನಾರಾಯಣ್. ಅಲ್ಲಿ ನಟಿ ಪವಿತ್ರಾ ಎಡವಟ್ ಮಾಡಿಕೊಂಡಿದ್ರೆ, ಇಲ್ಲಿ ಸೊಸೆ ಪವಿತ್ರಾ ಕೂಡ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿ, ಪೊಲೀಸ್ ಠಾಣೆ, ಕೋರ್ಟ್‌ ಮೆಟ್ಟಿಲೇರುವಂತೆ ಮಾಡಿದ್ದಾರೆ.

ಹೌದು, ಎಸ್ ನಾರಾಯಣ್ ಮಗ ಪವನ್‌ಗೆ ಪವಿತ್ರಾನ ಸೊಸೆ ಆಗಿಸಿಕೊಂಡಿದ್ದ ಕಲಾ ಸಾಮ್ರಾಟ್, ಅವರಿಗೆ ಮದ್ವೆ ಮಾಡಿದ ನಾಲ್ಕೈದು ವರ್ಷಗಳ ನಂತ್ರ ಇಂಥದ್ದೊಂದು ಆರೋಪ ಎದುರಿಸುವಂತಾಗಿದೆ. ಆದ್ರೆ ಆ ಕಹಾನಿಗೆ ಈಗ ಒಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದೇನಪ್ಪಾ ಅಂದ್ರೆ ಸೊಸೆಯಿಂದ ಬರೀ ಮಾವ ಎಸ್ ನಾರಾಯಣ್, ಅತ್ತೆ ಹಾಗೂ ಪತಿ ಪವನ್‌ಗಷ್ಟೇ ಟಾರ್ಚರ್ ಅಲ್ಲ. ಅತ್ತ ಹೆತ್ತ ತಂದೆ-ತಾಯಿಗೂ ಈ ಪವಿತ್ರಾ ಸಾಕಷ್ಟು ಕಾಟ ನೀಡಿದ್ದಾರೆ.

ಮಾತು ಎತ್ತಿದ್ರೆ ನಾನು ಸೂಸೈಡ್ ಮಾಡ್ಕೋತೀನಿ.. ನಿಮ್ಮ ಹೆಸರು ಬರೆದಿಡ್ತೀನಿ.. ಅಂತೆಲ್ಲಾ ಬ್ಲ್ಯಾಕ್ ಮೇಲ್ ಮಾಡೋ ಪವಿತ್ರಾ, ತವರು ಮನೆ ಹಾಗೂ ಮಾವನ ಮನೆ ಬಿಟ್ಟು ಗಂಡನೊಂದಿಗೆ ಪ್ರತ್ಯೇಕವಾಗಿ ವಾಸಿಸ್ತಿದ್ದರಂತೆ. ಪವಿತ್ರಾ- ಪವನ್ ದಂಪತಿಗೆ ಮೂರೂವರೆ ವರ್ಷದ ಮಗು ಕೂಡ ಇದ್ದು, ಆ ಮಗುವಿನ ಭವಿಷ್ಯದ ದೃಷ್ಠಿಯಿಂದ ಎಸ್ ನಾರಾಯಣ್ ಎಲ್ಲಾ ಅವಮಾನ, ಅಪಮಾನಗಳನ್ನು ನುಂಗಿಕೊಂಡು ಮೌನಕ್ಕೆ ಜಾರಿದ್ದರು. ಆದ್ರೀಗ ತವರು ಮನೆಯಲ್ಲೇ ಠಿಕಾಣಿ ಹೊಡೆದಿರೋ ಪವಿತ್ರಾ, ಇಲ್ಲಿ ಅತ್ತೆ ಮಾವ, ಅಲ್ಲಿ ಹೆತ್ತವರ ಮಾತಿಗೂ ಬೆಲೆ ಕೊಡದೆ ಸ್ವೇಚ್ಚಾಚಾರದಿಂದ ಬದುಕ್ತಿದ್ದಾರೆ.

ಹೊತ್ತು ಗೊತ್ತು ಇಲ್ಲದೆ ಎಷ್ಟೊತ್ತರಲ್ಲಿ ಅಂದ್ರೆ ಅಷ್ಟೊತ್ತರಲ್ಲಿ ಹೊರಗೆ ಹೋಗುವ ಪವಿತ್ರಾ, ಮನೆಯಲ್ಲಿ ಹಿರಿಯರಿಗೂ ಒಂದು ಮಾತು ಹೇಳಲ್ಲ, ಕೇಳಲ್ಲವಂತೆ. ಅಂದಹಾಗೆ ಮಗಳ ಈ ವರ್ತನೆಗೆ ಬೇಸತ್ತ ತಂದೆ ಶಿವಕುಮಾರ್ ಸ್ವತಃ ಮಗಳು ಪವಿತ್ರಾ ಮೇಲೆಯೇ ದೂರು ದಾಖಲಿಸಿದ್ದಾರೆ. ಹೌದು, ಜ್ಞಾನಜ್ಯೋತಿ ಪೊಲೀಸ್ ಠಾಣೆಯಲ್ಲಿ ಗಂಡನ ಮನೆ ಬಿಟ್ಟು ಬಂದು, ಪೋಷಕರ ಮೇಲೆ ಕಿರುಚಾಡುವ ಮಗಳನ್ನ ಸ್ಟೇಷನ್‌ಗೆ ಕರೆಸಿ ಬುದ್ದಿ ಹೇಳುವಂತೆ ಅಪ್ಪನೇ ದೂರು ನೀಡಿದ್ದಾರೆ. ಆ ದೂರಿನ ಎಕ್ಸ್‌‌ಕ್ಲೂಸಿವ್ ಪ್ರತಿ ನಮ್ಮ ಗ್ಯಾರಂಟಿ ನ್ಯೂಸ್‌ಗೆ ದೊರಕಿದೆ.

ಸಾಲದು ಅಂತ ನಮ್ಮ ಗ್ಯಾರಂಟಿ ನ್ಯೂಸ್ ಸಿನಿಮಾ ಪ್ರತಿನಿಧಿ ಕೀರ್ತಿ ಪಾಟೀಲ್ ಜೊತೆ ಮಾತನಾಡಿರೋ ಪವಿತ್ರಾ ತಂದೆ ಶಿವಕುಮಾರ್, ನನಗೆ ಆಕೆ ಮಗಳೇ ಅಲ್ಲ. ತಂದೆಯಾಗಿ ಮದುವೆ ಮಾಡಿಕೊಟ್ಟಿದ್ದೇನೆ. ನನ್ನ ಆಕೆಯ ಸಂಬಂಧ ಮುಗಿದಿದೆ ಅಂತ ಕಡ್ಡಿ ಮುರಿದಂತೆ ಮಾತನಾಡಿದ್ದಾರೆ.

ಅಂದಹಾಗೆ ಜವಾಬ್ದಾರಿಯುತ ನಿವೃತ್ತ ಹೆಡ್ ಕಾನ್ಸ್‌ಟೇಬಲ್ ಆಗಿದ್ದ ಶಿವಕುಮಾರ್, ಮಗಳಿಂದ ಅದಷ್ಟು ಕಿರಿಕಿರಿ ಅನುಭವಿಸಿರಬೇಡ ಅಲ್ಲವೇ? ಇತ್ತ ಎಸ್ ನಾರಾಯಣ್ ಕುಟುಂಬಕ್ಕೂ ಟಾರ್ಚರ್ ನೀಡಿ, ಬ್ಲ್ಯಾಕ್‌‌ಮೇಲ್ ಮಾಡಿರೋ ಪವಿತ್ರಾ ವಿರುದ್ಧ, ಕೋರ್ಟ್‌ನಲ್ಲಿ ಸಾಕಷ್ಟು ಗುಟ್ಟುಗಳನ್ನು ರಟ್ಟು ಮಾಡಲಿದೆ ಕಲಾಸಾಮ್ರಾಟ್ ಫ್ಯಾಮಿಲಿ. ಕೋರ್ಟ್‌ ಹಾಗೂ ಸಮಾಜದ ಮುಂದೆ ಅಸಲಿ ಮುಖವಾಡ ಕಳಚಿ ಬೀಳುವ ಮೊದಲು ಪರಸ್ಪರ ಮಾತುಕತೆ ಮೂಲಕ ರಾಜಿಯಾದರೆ ಆಕೆಗೇ ಒಂದಷ್ಟು ಮರ್ಯಾದೆ ಆದ್ರೂ ಉಳಿಯಲಿದೆ.

Exit mobile version