ರಶ್ಮಿಕಾ, ತೃಪ್ತಿ ದಿಮ್ರಿ ಅಲ್ಲ..ರುಕ್ಮಿಣಿ ಈಗ ಹೊಸ ನ್ಯಾಷನಲ್ ಕ್ರಶ್..!

ಕಾಂತಾರ ಕ್ವೀನ್ ಕನ್ನಡತಿ ರುಕ್ಕಮ್ಮ ಎಲ್ಲೆಡೆ ಸಖತ್ ಸೆನ್ಸೇಷನ್

Untitled design (65)

ಟ್ರೆಂಡ್ ಯಾವಾಗ್ಲೂ ಒಂದೇ ತರಹ ಇರಲ್ಲ. ಜನರ ಅಭಿರುಚಿಗೆ ತಕ್ಕನಾಗಿ ಅದು ಕಾಲ ಕಾಲಕ್ಕೆ ಬದಲಾಗ್ತಾ ಇರುತ್ತೆ. ರಶ್ಮಿಕಾ ನ್ಯಾಷನಲ್ ಕ್ರಶ್ ಪಟ್ಟವನ್ನ ತೃಪ್ತಿ ದಿಮ್ರಿ ಅಲಂಕರಿಸಿದ್ರು. ಆದ್ರೀಗ ನಮ್ಮ ಕನ್ನಡತಿ, ಕಾಂತಾರ ಕ್ವೀನ್ ರುಕ್ಮಿಣಿ ವಸಂತ್ ಮುಡಿ ಸೇರಿದೆ. ಈ ಕುರಿತ ರಂಗೀನ್ ಕಹಾನಿ ಇಲ್ಲಿದೆ.

ಸಪ್ತ ಸಾಗರದಾಚೆ ಎಲ್ಲೋ ಚಿತ್ರದಿಂದ ಕನ್ನಡಿಗರ ಮನೆ. ಮನಗಳನ್ನ ತಲುಪಿದ ರುಕ್ಮಿಣಿ ವಸಂತ್, ಸದ್ಯ ಕಾಂತಾರ ಚಾಪ್ಟರ್-1 ಚಿತ್ರದಿಂದ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದಂತಹ, ಅಶೋಕಚಕ್ರ ವಿಜೇತ ಮೇಜರ್ ವಸಂತ್ ವೇಣುಗೋಪಾಲ್ ಮುದ್ದಿನ ಮಗಳು. ತಾನೊಬ್ಬ ಆರ್ಮಿ ಆಫೀಸರ್ ಮಗಳು ಅನ್ನೋದನ್ನ ಗಮನದಲ್ಲಿಟ್ಟುಕೊಂಡಿರೋ ರುಕ್ಮಿಣಿ, ಕಲ್ಟ್ ಕ್ಲಾಸಿಕ್ ಬ್ಯೂಟಿಯಾಗಿ ಎಚ್ಚರಿಕೆಯ ಹೆಜ್ಜೆಗಳನ್ನ ಇಡ್ತಿರೋದು ಇಂಟರೆಸ್ಟಿಂಗ್.

ರಿಷಬ್ ಶೆಟ್ಟಿಯ ಕಾಂತಾರ ಚಿತ್ರದಲ್ಲಿ ರಾಜಕುಮಾರಿ ಕನಕವತಿಯಾಗಿ ನಟಿಸಿರೋ ರುಕ್ಕಮ್ಮನದ್ದೇ ಎಲ್ಲೆಡೆ ಸದ್ದು. ಹೌದು.. ಬಾಂಗ್ರಾ ಪ್ರಿನ್ಸೆಸ್ ಆಗಿ ಮಿಂಚಿರೋ ರುಕ್ಮಿಣಿ, ಬ್ರಹ್ಮಕಲಶ ಹಾಡಲ್ಲಿ ಕ್ಲಾಸಿಕಲ್ ಡ್ಯಾನ್ಸ್‌‌ನಿಂದ ನೋಡುಗರಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ. ರಿಷಬ್‌‌ರಷ್ಟೇ ಪ್ರೇಕ್ಷಕರು ರುಕ್ಮಿಣಿ ಪಾತ್ರಕ್ಕೂ ವಿಶ್ವದ ಮೂಲೆ ಮೂಲೆಯಲ್ಲಿ ಮೆಚ್ಚುಗೆಗಳನ್ನ ವ್ಯಕ್ತಪಡಿಸ್ತಿದ್ದಾರೆ.

ಅನಿಮಲ್ ಚಿತ್ರ ರಿಲೀಸ್ ಆಗೋವರೆಗೂ ನ್ಯಾಷನಲ್ ಕ್ರಶ್ ಪಟ್ಟವನ್ನು ನಮ್ಮ ಕನ್ನಡತಿ ರಶ್ಮಿಕಾ ಮಂದಣ್ಣ ಅಲಂಕರಿಸಿದ್ರು. ಆದ್ರೆ ಅನಿಮಲ್ ಚಿತ್ರದ ಬಳಿಕ ಆ ಕಿರೀಟ ಬಾಲಿವುಡ್‌‌ನ ಹಾಟ್ ಬ್ಯೂಟಿ ತೃಪ್ತಿ ದಿಮ್ರಿ ಪಾಲಾಯ್ತು. ರಣ್‌ಬೀರ್ ಜೊತೆ ತೃಪ್ತಿಯ ಹಸಿಬಿಸಿ ದೃಶ್ಯಗಳು ಚಿತ್ರದ ತೀವ್ರತೆಯನ್ನ ಹೆಚ್ಚಿಸಿದ್ದವು. ಅಲ್ಲದೆ, ಅದು ಆಕೆಯ ಕರಿಯರ್‌ಗೂ ಪ್ಲಸ್ ಆಯ್ತು.

ಆದ್ರೀಗ ನಯಾ ನ್ಯಾಷನಲ್ ಕ್ರಶ್ ಯಾರು ಅಂದ್ರೆ ಎಲ್ಲರೂ ನಮ್ಮ ಕನ್ನಡತಿ ರುಕ್ಮಿಣಿ ವಸಂತ್ ಕಡೆ ಬೆರಳು ತೋರಿಸ್ತಿದ್ದಾರೆ. ಯೆಸ್.. ಕಾಂತಾರ ಕ್ವೀನ್ ಪಾಲಾಗಿದೆ ಆ ನ್ಯಾಷನಲ್ ಕ್ರಶ್ ಪಟ್ಟ. ಅಷ್ಟರ ಮಟ್ಟಿಗೆ ಎಲ್ಲರ ಮನಸ್ಸುಗಳಿಗೆ ಇಳಿದಿದ್ದಾರೆ ಕರುನಾಡ ರುಕ್ಕಮ್ಮ. ಸದ್ಯ ಯಶ್‌ರ ಟಾಕ್ಸಿಕ್ ಹಾಗೂ ಜೂನಿಯರ್ ಎನ್‌ಟಿಆರ್‌‌ರ ಡ್ರ್ಯಾಗನ್ ಚಿತ್ರಗ್ಳಿಗೂ ಇವರೇ ನಾಯಕನಟಿಯಾಗಿದ್ದು, ತೆಲುಗು, ತಮಿಳಲ್ಲೆಲ್ಲಾ ತಮ್ಮ ಛಾಪು ಮೂಡಿಸ್ತಿದ್ದಾರೆ. ಇದು ಆಕೆಯ ಫ್ಯಾನ್ಸ್ ಜೊತೆ ಕನ್ನಡಿಗರು ಕೂಡ ಹೆಮ್ಮೆ ಪಡುವಂತಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version