ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ವಿಶ್ವಾದ್ಯಂತ ತೆರೆಕಾಣಲಿದೆ. ಈ ಸಿನಿಮಾಗೆ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಶುಭಾಶಯ ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಡೆವಿಲ್ ಸಿನಿಮಾ ಪೋಸ್ಟರ್ ಹಂಚಿಕೊಂಡಿರುವ ರಿಷಭ್, “ದರ್ಶನ್ ಸರ್ ಹಾಗೂ ಅವರ ಡೆವಿಲ್ ತಂಡಕ್ಕೆ ಶುಭವಾಗಲಿ. ಸಿನಿಮಾ ಬ್ಲಾಕ್‌ಬಸ್ಟರ್ ಕಾಣಲಿ. ದೊಡ್ಡ ಪರದೆಯಲ್ಲಿ ಅಬ್ಬರಿಸಲಿ” ಎಂದು ಬರೆದಿದ್ದಾರೆ. ಈ ಪೋಸ್ಟ್‌ಗೆ ದರ್ಶನ್ ಫ್ಯಾನ್ಸ್ ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ. ಸಾವಿರಾರು ರೀಟ್ವೀಟ್‌ಗಳು ಮತ್ತು ಲೈಕ್ ನೀಡಿದ್ದು, ಇದು ವೈರಲ್ ಆಗಿದೆ.
ರಿಷಭ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ತಮ್ಮ ‘ಕಾಂತಾರ’ ಸಿನಿಮಾದ ಮೂಲಕ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ ನಟ-ನಿರ್ದೇಶಕ. ಇದೀಗ ದರ್ಶನ್ ಸಿನಿಮಾಗೆ ಅವರು ಶುಭ ಕೋರಿದ್ದಾರೆ. ಡೆವಿಲ್ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿರುವ ಅಜನೀಶ್ ಲೋಕನಾಥ್ ಅವರನ್ನು ಕೂಡ ರಿಷಭ್ ಟ್ಯಾಗ್ ಮಾಡಿದ್ದಾರೆ. ಅಜನೀಶ್ ಮತ್ತು ರಿಷಭ್, ‘ಕಾಂತಾರ’ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಅಜನೀಶ್ ಅವರ ಸಂಗೀತ ‘ಕಾಂತಾರ’ದಲ್ಲಿ ಜನಪ್ರಿಯತೆ ಗಳಿಸಿತ್ತು, ಮತ್ತು ಡೆವಿಲ್‌ನಲ್ಲಿ ಅದೇ ಮ್ಯಾಜಿಕ್ ಮರುಕಳಿಸುವ ನಿರೀಕ್ಷೆಯಿದೆ.
‘ದಿ ಡೆವಿಲ್’ ಸಿನಿಮಾ ಆಕ್ಷನ್, ಡ್ರಾಮಾ ಮತ್ತು ಥ್ರಿಲ್ಲರ್ ಅಂಶಗಳನ್ನು ಹೊಂದಿದ ಸ್ಟೈಲಿಶ್ ಚಿತ್ರವಾಗಿದೆ.. ದರ್ಶನ್ ಜೊತೆಗೆ ರಚನಾ ರೈ, ಮಹೇಶ್ ಮಂಜ್ರೇಕರ್, ಹುಲಿ ಕಾರ್ತಿಕ್ ಮತ್ತು ಅಚ್ಯುತ್ ಕುಮಾರ್ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಡಿಸೆಂಬರ್ 11 ರಂದು ತೆರೆಗೆ ಅಪ್ಪಳಿಸಿದೆ. ಈ ಸಿನಿಮಾ ನೂರಾರು ಥಿಯೇಟರ್‌ಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ. ಡಿಸೆಂಬರ್ 5ರಂದು ಬಿಡುಗಡೆಯಾದ ಟ್ರೈಲರ್ ಫ್ಯಾನ್ಸ್ ಮೆಚ್ಚುಗೆ ಗಳಿಸಿದ್ದು, ಡಾರ್ಕ್ ಮತ್ತು ಬ್ರೂಟಲ್ ಸ್ಟೈಲ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ.
ದರ್ಶನ್ ಅವರ ಹಿಂದಿನ ಸಿನಿಮಾಗಳಾದ ‘ಕಾಟೇರಾ’ ಮತ್ತು ‘ರಾಬರ್ಟ್’ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಸೃಷ್ಟಿಸಿವೆ. ‘ಡೆವಿಲ್’ ಕೂಡ ಅದೇ ಮಟ್ಟದ ಯಶಸ್ಸು ಕಾಣುವ ನಿರೀಕ್ಷೆಯಿದೆ. ನಟ ದರ್ಶನ್ ಜೈಲಿನಲ್ಲಿರುವಾಗಲೇ ಅವರ ಚಿತ್ರ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಈಗಾಗಲೇ ಕೌಂಟ್‌ಡೌನ್‌ಗೆ ಶುರುಮಾಡಿದ್ದಾರೆ.
