ಕಾಂತಾರ.. ಕರಾವಳಿಯ ಸಂಸ್ಕೃತಿ ಹಾಗೂ ರಿಷಬ್-ವಿಜಯ್ ಕಿರಗಂದೂರು ಸ್ನೇಹದ ಶಕ್ತಿಯ ಪ್ರತೀಕ. ಆದ್ರೆ ಇಲ್ಲಿ ಭಾವನೆಗಳು ಹಾಗೂ ಲೆಕ್ಕಾಚಾರಗಳ ನಡುವೆ ಸಂಘರ್ಷ ಶುರುವಾಗಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಉದ್ದೇಶಪೂರ್ವಕವಾಗಿಯೇ ಹೊಂಬಾಳೆ ಫಿಲಂಸ್ ಪೇಜ್‌ನ ಅನ್‌ಫಾಲೋ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ರಿಷಬ್ ಆಪ್ತಮಿತ್ರ ಪ್ರಮೋದ್ ಶೆಟ್ಟಿ ಏನಂದ್ರು..? ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ.
- ರಿಷಬ್ ‘ಹೊಂಬಾಳೆ’ ಅನ್‌ಫಾಲೋ ಉದ್ದೇಶಪೂರ್ವಕ..?
- ಭಾವನೆಗಳು & ಬ್ಯುಸಿನೆಸ್ ಲೆಕ್ಕಾಚಾರಗಳ ಸಂಘರ್ಷವಿದು
- ಕರಾವಳಿ ಸಂಸ್ಕೃತಿ.. ವಿಜಯ್-ಶೆಟ್ರ ಸ್ನೇಹದ ಪ್ರತೀಕ ಕಾಂತಾರ
- ಆಪ್ತಮಿತ್ರ ಪ್ರಮೋದ್ ಶೆಟ್ಟಿ ಕೊಟ್ಟ ಸ್ಪಷ್ಟನೆ ಒಪ್ಪುವಂತಿದೆಯೇ..?
ಇದು ರಕ್ಷಿತ್ ಹಾಗೂ ರಿಷಬ್ ಶೆಟ್ರ ಆಪ್ತಮಿತ್ರ ಪ್ರಮೋದ್ ಶೆಟ್ಟಿ ಹಾಗೂ ಶ್ರುತಿ ಹರಿಹರನ್ ನಟನೆಯ NH66 ಚಿತ್ರದ ಮುಹೂರ್ತ ಸಂಭ್ರಮದ ಝಲಕ್. ಆರ್ ಆರ್ ನಗರದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಮುಹೂರ್ತ ಹಾಗೂ ಟೈಟಲ್ ಲಾಂಚ್ ಕಾರ್ಯಕ್ರಮ ನೆರವೇರಿತು. ರಾಯರ ಪರಮ ಭಕ್ತರಾದ ಮಂಜುನಾಥ್ ಟಿ ಆರ್, ಹಿರಿಯ ನಿರ್ದೇಶಕ ಭಾರ್ಗವ ಅವ್ರ ಗರಡಿಯಲ್ಲಿ ಪಳಗಿ, ವಿದೇಶಕ್ಕೆ ತೆರಳಿ ಅಲ್ಲಿ ಸ್ಕ್ರಿಪ್ಟ್ ರಚನೆ ಹಾಗೂ ಚಿತ್ರಕಥೆ ಬಗ್ಗೆ ವಿಶೇಷ ಅಧ್ಯಯನ ಮಾಡಿಕೊಂಡು ಬಂದು ಈ ಚಿತ್ರಕ್ಕೆ ನಿರ್ದೇಶನ, ನಿರ್ಮಾಣ ಮಾಡ್ತಿದ್ದಾರೆ. ಹೆಸರೇ ಹೇಳುವಂತೆ ಇದೊಂದು ರೋಡ್ ಸ್ಟೋರಿ. ಥ್ರಿಲ್ಲರ್ ಡ್ರಾಮಾ ಜಾನರ್‌ನ ಸಿನಿಮಾ ಆಗಿದ್ದು, ಒನ್ ಹೈವೇ.. ಮೆನಿ ಸೀಕ್ರೆಟ್ಸ್ ಅನ್ನೋ ಅಡಿಬರಹ ಕೂಡ ಇದೆ. ಏಪ್ರಿಲ್ 6ರಿಂದ ಮಂಗಳೂರಿನಲ್ಲಿ ಚಿತ್ರೀಕರಣ ಶುಭಾರಂಭ ಆಗ್ತಿದೆ.
ಅಂದಹಾಗೆ ಈ NH66 ಚಿತ್ರದ ಪೂಜಾ ಮಹೋತ್ಸವದಲ್ಲಿ ಗಮನ ಸೆಳೆದಿದ್ದು ಮಾತ್ರ ಪ್ರಮೋದ್ ಶೆಟ್ಟಿ ತಮ್ಮ ಗೆಳೆಯ ರಿಷಬ್ ಶೆಟ್ಟಿ ಕುರಿತು ಆಡಿದ ಮಾತುಗಳು. ಹೌದು.. ಹೊಂಬಾಳೆ ಫಿಲಂಸ್‌ನ ಏಕೆ ಅನ್‌ಫಾಲೋ ಮಾಡಿದ್ರು ರಿಷಬ್ ಅನ್ನೋದ್ರ ಬಗ್ಗೆ ಸ್ಪಷ್ಟನೆ ನೀಡಿದ ಪ್ರಮೋದ್ ಶೆಟ್ಟಿ, ಇದು ಕೇವಲ ಸೋಶಿಯಲ್ ಮೀಡಿಯಾ ಮ್ಯಾನೇಜ್ಮೆಂಟ್ ಇರಬಹುದು ಎಂದಿದ್ದಾರೆ.
ರಿಷಬ್ ಆಪ್ತ ಪ್ರಮೋದ್ ಶೆಟ್ರು ನೀಡಿದ ಹೇಳಿಕೆ ಆಧರಿಸಿ, ಹಿರಿಯ ಪತ್ರಕರ್ತರೊಬ್ಬರು ಇದನ್ನ ಬಹಳ ವಿಶೇಷವಾಗಿ ಅನಲೈಸ್ ಮಾಡಿದ್ದಾರೆ. ಭಾವನೆಗಳಿಗಿಂತ ಬ್ಯುಸಿನೆಸ್ ದೊಡ್ಡದು ಅನಿಸಿದಾಗ ಇಂತಹ ಡಿಜಿಟಲ್ ಕಟ್ ಆಫ್‌ಗಳು ಅನಿವಾರ್ಯವಾಗುತ್ತವೆ ಅನ್ನೋ ಕಹಿಸತ್ಯ ಹೊರಹಾಕಿದ್ದಾರೆ. ರಿಷಬ್ ಶೆಟ್ಟಿ ಫಿಲಂಸ್ ಬ್ಯಾನರ್‌ನಡಿ ಸ್ವತಂತ್ರವಾಗಿ ಫಿಲ್ಮ್ ಪ್ರೊಡಕ್ಷನ್ ಶುರು ಮಾಡೋ ಮಾತುಗಳು ಕೇಳಿಬಂದಿವೆ ಅಂದ್ರೆ, ಅಲ್ಲಿ ಪಕ್ಕಾ ಮಾರ್ಕೆಟಿಂಗ್ ಸ್ಟ್ರ್ಯಾಟಜಿ ಕೆಲಸ ಮಾಡ್ತಿದೆ ಎಂದರ್ಥ.
ಅನ್ ಫಾಲೋ ಮಾಡೋದು ಜಸ್ಟ್ ಒಂದು ಬಟನ್ ಒತ್ತುವ ಕ್ರಿಯೆ ಮಾತ್ರವಲ್ಲ. ಅದೊಂದು ಭಾವನಾತ್ಮಕ ಸಂಬಂಧದ ಅಂತ್ಯವೂ ಹೌದು. ಅದೇ ರೀತಿ ಮಗದೊಂದು ಹೊಸ ಹಾದಿಯ ಉಗಮದ ಮುನ್ಸೂಚನೆಯೂ ಹೌದು. ತನಗೆ ಅವಕಾಶ ನೀಡಿ, ಬಹುದೊಡ್ಡ ಸ್ಟಾರ್ ಮಾಡಿದ ಪ್ರೊಡಕ್ಷನ್ ಬ್ಯಾನರ್‌ನಿಂದ ಅಂತರ ಕಾಯ್ದುಕೊಳ್ಳುವುದು ತಮಾಷೆಯ ಮಾತಲ್ಲ. ಅಂದಹಾಗೆ ಕಾಂತಾರ ಸಿನಿಮಾ ಕರಾವಳಿ ಸಂಸ್ಕೃತಿ ಎಷ್ಟು ಸತ್ಯವೋ, ರಿಷಬ್ ಶೆಟ್ಟಿ ಕನಸುಗಳನ್ನ ನನಸು ಮಾಡಿದ ವಿಜಯ್ ಕಿರಗಂದೂರು ಅವ್ರ ಸ್ನೇಹ, ನಂಬಿಕೆ ಕೂಡ ಅಷ್ಟೇ ಸತ್ಯ. ಇದೀಗ ಸ್ನೇಹ ಸಂಬಂಧದ ಭಾವನೆಗಳು ಹಾಗೂ ಬ್ಯುಸಿನೆಸ್ ಲೆಕ್ಕಾಚಾರಗಳ ನಡುವೆ ದೊಡ್ಡ ಸಂಘರ್ಷ ಏರ್ಪಟ್ಟಂತಿದೆ. ಸಿನಿಮಾ ಅನ್ನೋದು ಹಂಡ್ರೆಡ್ ಪರ್ಸೆಂಟ್ ಬ್ಯುಸಿನಸ್. ಇಲ್ಲಿ ಸೆಂಟಿಮೆಂಟ್‌ಗಿಂತ ಸ್ಟೇಟ್ಮೆಂಟ್‌ಗಳಿಗೇ ಬೆಲೆ ಜಾಸ್ತಿ ಅನ್ನೋ ಹಿರಿಯ ಪತ್ರಕರ್ಯರ ಮಾತು ನಿಜ ಅನಿಸ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
