ವೋಗ್ ಕವರ್‌‌ಪೇಜ್‌‌ನಲ್ಲಿ ಬಿಟೌನ್ ರೇಖಾ ಲಕಲಕ !

70ರ ಹರೆಯದಲ್ಲೂ ನಟಿಯರನ್ನ ನಾಚಿಸೋ ಸೊಬಗು

Web 2025 06 20t183900.502

ಬಾಲಿವುಡ್‌ನ ಎವರ್‌‌ಗ್ರೀನ್ ಐಕಾನ್ ರೇಖಾ 70ರ ಹರೆಯದಲ್ಲೂ ಇಂದಿನ ಚೆಂದುಳ್ಳಿ ಚೆಲುವೆಯರನ್ನ ನಾಚಿಸುವಂತಿದ್ದಾರೆ. ವೋಗ್ ಕವರ್‌ ಪೇಜ್‌‌ನಲ್ಲಿ ಮಿಂಚುತ್ತಿರೋ ಅವರ ಕಲರ್‌‌ಫುಲ್ ಫೋಟೋಶೂಟ್ ಮತ್ತೊಮ್ಮೆ ವೈರಲ್ ಆಗ್ತಿದೆ. ಅದರೊಟ್ಟಿಗೆ ಚಂದನ್ ಶೆಟ್ಟಿಯ ಬ್ಯೂಟಿಫುಲ್ ಱಪ್ ಸಾಂಗ್ ಕೂಡ ನಿಮಗಾಗಿ ಕಾಯ್ತಿದೆ.

ಜೆಮಿನಿ ಗಣೇಶನ್ ಪುತ್ರಿ, ಬಾಲಿವುಡ್‌ನ ಎವರ್‌ಗ್ರೀನ್ ಅಭಿನೇತ್ರಿ ರೇಖಾ ಇಂದಿಗೂ ಅದೇ ಛಾರ್ಮ್‌, ಅದೇ ಜೀವನೋತ್ಸಾಹ. ಸಾಮಾನ್ಯವಾಗಿ ಪ್ರತಿಷ್ಠಿತ ಮ್ಯಾಗಜಿನ್‌‌ಗಳಲ್ಲಿ ಸದ್ಯ ಮಿಂಚುತ್ತಿರೋ ನಟೀಮಣಿಯರ ಕವರ್ ಪೇಜ್ ಫೋಟೋಶೂಟ್‌‌ಗಳು ಬಿತ್ತರಗೊಳ್ಳುತ್ತವೆ. ಆದ್ರೆ ಫೇಮಸ್ ವೋಗ್ ನಿಯತಕಾಲಿಕೆಯ ಕವರ್ ಪೇಜ್‌ನಲ್ಲಿ 70ರ ಹರೆಯದ ರೇಖಾ ಕಮಾಲ್ ಮಾಡಿದ್ದಾರೆ.

ADVERTISEMENT
ADVERTISEMENT

ಈ ಫೋಟೋಶೂಟ್ ಈಗಾಗ್ಲೇ ಪ್ರಕಟವಾಗಿದ್ರೂ ಸಹ, ಈಗ ಮತ್ತೆ ವೈರಲ್ ಆಗ್ತಿರೋದು ವಿಶೇಷ. ಅಂದಹಾಗೆ ರೇಖಾ ತಮ್ಮ ಸೌಂದರ್ಯ ಕಾಪಾಡಿಕೊಂಡು ಬಂದಿರೋ ಪರಿ ನಿಜಕ್ಕೂ ಗ್ರೇಟ್ ಅನಿಸುತ್ತೆ. 1969ರ ಅಣ್ಣಾವ್ರ ಆಪರೇಷನ್ ಜಾಕ್‌ಪಾಟ್‌‌ನಲ್ಲಿ ಸಿಐಡಿ 999 ಸಿನಿಮಾದಿಂದ ಇಂದಿನವರೆಗೆ ಕಿಂಚಿತ್ತೂ ಬದಲಾಗಿಲ್ಲ.

ಬಹುತೇಕ ಎಲ್ಲಾ ಚಿತ್ರರಂಗಗಳ ಸೂಪರ್ ಸ್ಟಾರ್ಸ್‌ ಜೊತೆ ಮಿಂಚಿದ ಹಿರಿಯ ಅಭಿನೇತ್ರಿ ಇಂದಿಗೂ ತನ್ನ ವರ್ಚಸ್ಸು ಕಾಪಾಡಿಕೊಂಡು ಬಂದಿರೋದು ವ್ಹಾವ್ ಫೀಲ್ ತರಿಸುತ್ತೆ. ಪದ್ಮಶ್ರೀ ಪುರಸ್ಕೃತ ಅಭಿನೇತ್ರಿ ಇಂದಿನ ಜನರೇಷನ್ ನಟಿಮಣಿಯರಿಗೆ ರೋಲ್ ಮಾಡೆಲ್.

Exit mobile version