ನ್ಯಾಷನಲ್ ಕ್ರಶ್ ರಶ್ಮಿಕಾಗೆ ವಿಜಯ್ ದೇವರಕೊಂಡ ಜೊತೆ ಮದುವೆ ನಿಶ್ಚಯವಾಗಿದ್ದು, ಫೆಬ್ರವರಿ 26ರಂದು ಸಪ್ತಪದಿ ತುಳಿಯೋಕೆ ಸಜ್ಜಾಗಿದ್ದಾರೆ. ಅದರ ಬೆನ್ನಲ್ಲೀಗ ಶ್ರೀಲಂಕಾದಲ್ಲಿ ತನ್ನ ಗರ್ಲ್ಸ್ ಗ್ಯಾಂಗ್‌ಗೆ ಬ್ಯಾಚುಲರ್ ಪಾರ್ಟಿ ಕೂಡ ಕೊಡಿಸಿದ್ದಾರೆ ನಮ್ಮ ಕೂರ್ಗ್ ಚೆಲುವೆ. ಆ ಕುರಿತ ಕಲರ್‌ಫುಲ್ ಕಹಾನಿ ನಿಮಗಾಗಿ ಕಾಯ್ತಿದೆ.
ರಶ್ಮಿಕಾ ಮಂದಣ್ಣ..ಕನ್ನಡತಿಯಾದ್ರೂ ಪ್ಯಾನ್ ಇಂಡಿಯಾ ಸಿನಿಮಾಗಳ ಕ್ವೀನ್ ಆಗಿ ರಾರಾಜಿಸ್ತಿರೋ ಚೆಲುವೆ. ಅಷ್ಟೇ ಅಲ್ಲ, ಸಿಕ್ಕಾಪಟ್ಟೆ ಬ್ಯುಸಿಯೆಸ್ಟ್ ನಟೀಮಣಿ ಕೂಡ ಹೌದು ಈ ನ್ಯಾಷನಲ್ ಕ್ರಶ್. ಹಂತ ಹಂತವಾಗಿ ಬೆಳೆದ ಕಿರಿಕ್ ಬ್ಯೂಟಿ, ಸದ್ಯ ಬಾಲಿವುಡ್‌ನ ಟಾಪ್ ಮೋಸ್ಟ್ ಹೀರೋಯಿನ್ಸ್‌ನಲ್ಲಿ ಒಬ್ಬರು. ಸಾಲು ಸಾಲು ಸಕ್ಸಸ್‌ಫುಲ್ ಸಿನಿಮಾಗಳಿಂದ ದಿನೇ ದಿನೆ ಉತ್ತುಂಗಕ್ಕೆ ಏರುತ್ತಲೇ ಇದ್ದಾರೆ ಈ ಹೆಮ್ಮೆಯ ಕನ್ನಡತಿ.
ರಶ್ಮಿಕಾ ಬ್ಯಾಚುಲರ್ ಪಾರ್ಟಿ..ಶ್ರೀಲಂಕಾದಲ್ಲಿ ಗರ್ಲ್ಸ್ ಗ್ಯಾಂಗ್
ಫೆಬ್ರವರಿ 26ಕ್ಕೆ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮದ್ವೆ
ಕುಬೇರ, ಥಮಾ ಹಾಗೂ ದಿ ಗರ್ಲ್ ಫ್ರೆಂಡ್ ಸಿನಿಮಾಗಳ ಬ್ಯಾಕ್ ಟು ಬ್ಯಾಕ್ ಸಕ್ಸಸ್‌ನಿಂದ ಇದೇ ವರ್ಷ ಹ್ಯಾಟ್ರಿಕ್ ಹಿಟ್ ಹೊಡೆದ ರಶ್ಮಿಕಾ, ಇತ್ತೀಚೆಗೆ ವಿಜಯ್ ದೇವರಕೊಂಡನ ಮದ್ವೆ ಆಗೋ ವಿಚಾರ ಕೂಡ ಖಚಿತಪಡಿಸಿದ್ರು. ಟಾಲಿವುಡ್‌ನ ಸೆನ್ಸೇಷನಲ್ ನಟ, ಬ್ಯುಸಿನೆಸ್‌ಮ್ಯಾನ್ ಕೂಡ ಆಗಿರೋ ವಿಜಯ್ ದೇವರಕೊಂಡ ಯೂತ್‌ನಲ್ಲಿ ಕ್ರೇಜ್ ಹೆಚ್ಚಿಸಿದ್ದಾರೆ. ರಶ್ಮಿಕಾ ಜೊತೆಗೂ ಎರಡು ಸಿನಿಮಾಗಳಲ್ಲಿ ತೆರೆಹಂಚಿಕೊಂಡಿದ್ದ ವಿಜಯ್, ಈಗ ರಶ್ಮಿಕಾ ಕೈ ಹಿಡಿಯುತ್ತಿದ್ದಾರೆ.
2026ರ ಹೊಸ ವರ್ಷದಲ್ಲಿ ಅಂದ್ರೆ ಫೆಬ್ರವರಿ 26ಕ್ಕೆ ರಶ್ಮಿಕಾ-ವಿಜಯ್ ಕಲ್ಯಾಣಕ್ಕೆ ಶುಭ ಮುಹೂರ್ತ ನಿಶ್ಚಯವಾಗಿದ್ದು, ಉದಯಪುರದ ಪ್ಯಾಲೆಸ್‌ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಆಗಲಿದ್ದಾರೆ ಎನ್ನಲಾಗಿದೆ. ಇದೀಗ ಅದಕ್ಕೆ ಪೂರಕವಾಗಿ, ತಮಿಳು, ಹಿಂದಿ ಹಾಗೂ ತೆಲುಗು ಚಿತ್ರಗಳ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಶ್ರೀಲಂಕಾಗೆ ಹಾರಿದ್ದಾರೆ ರಶ್ಮಿಕಾ. ಅದೂ ತನ್ನ ಗರ್ಲ್ಸ್ ಗ್ಯಾಂಗ್ ಜೊತೆ ಅನ್ನೋದು ಇಂಟರೆಸ್ಟಿಂಗ್. ಅಲ್ಲಿಯೇ ರಶ್ಮಿಕಾ ಕ್ಲೋಸ್ ಸರ್ಕಲ್‌ನಲ್ಲಿರೋ ಆಪ್ತ ಗೆಳತಿಯರಿಗೆ ಬ್ಯಾಚುಲರ್ ಪಾರ್ಟಿ ಕೂಡ ಕೊಡಿಸಿದ್ದಾರೆ ನ್ಯಾಷನಲ್ ಕ್ರಶ್.
ಉದಯಪುರ ಪ್ಯಾಲೆಸ್‌ನಲ್ಲಿ ಕನ್ನಡತಿಯ ಡಿಸ್ಟಿನೇಷನ್ ವೆಡ್ಡಿಂಗ್
ಕಿರಿಕ್ ಪಾರ್ಟಿ ನಟಿಯನ್ನ ಮರೆಯದ ರಶ್ಮಿಕಾ..ಸ್ನೇಹ ಮಿಲನ..!
ಅಂದಹಾಗೆ ರಶ್ಮಿಕಾ ಜೊತೆ ಕಿರಿಕ್ ಪಾರ್ಟಿ ಸಿನಿಮಾದ ಸಹನಟಿ ಸಂಯುಕ್ತಾ ಹೆಗಡೆ ಕೂಡ ಬ್ಯಾಚುಲರ್ ಪಾರ್ಟಿಗೆ ಸಾಕ್ಷಿ ಆಗಿದ್ದಾರೆ. ಇದರಲ್ಲೇ ಗೊತ್ತಾಗುತ್ತೆ ರಶ್ಮಿಕಾ ಫ್ರೆಂಡ್‌ಶಿಪ್‌ಗೆ ಎಷ್ಟು ಪ್ರಾಮುಖ್ಯತೆ ಕೊಡ್ತಾರೆ ಅನ್ನೋದು. ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಹಾಗೂ ಸಂಯುಕ್ತಾ ಇಬ್ಬರೂ ತೆರೆ ಹಂಚಿಕೊಂಡಿದ್ದರು. ಸಿನಿಮಾ ಬಂದು ಇಷ್ಟು ವರ್ಷಗಳಾದ್ರೂ ಇಂದಿಗೂ ಅವರಿಬ್ಬರ ನಡುವೆ ಅದೇ ಬಾಂಡಿಂಗ್ ಇರೋದು ಖುಷಿಯ ವಿಚಾರ.
ಸದ್ಯ ರಶ್ಮಿಕಾ ಹಿಂದಿಯಲ್ಲಿ ಕಾಕ್ಟೇಲ್-2 ಹಾಗೂ ತೆಲುಗಿನಲ್ಲಿ ಮೈಸಾ ಅನ್ನೋ ಮಹಿಳಾ ಪ್ರಧಾನ ಸಿನಿಮಾಗೆ ಕಮಿಟ್ ಆಗಿದ್ದು, ಅವುಗಳ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೆ ಬಿಡುವಿನ ವೇಳೆ ಶಾಪಿಂಗ್ ಸೇರಿದಂತೆ ಮದುವೆ ತಯಾರಿಗಳನ್ನ ಕೂಡ ಮಾಡಿಕೊಳ್ತಿದ್ದಾರೆ ಅನ್ನೋದು ಆಪ್ತ ವಲಯಗಳ ಮಾಹಿತಿಯಾಗಿದೆ.
