ರಶ್ಮಿಕಾ-ವಿಜಯ್‌ ಸಾಮಾಜಿಕ ಕಾರ್ಯಕ್ಕೆ ಎಲ್ಲೆಡೆ ಜೈಕಾರ

ಕೊಟ್ಟ ಮಾತು ಉಳಿಸಿಕೊಂಡ ತಾರಾ ದಂಪತಿ ವಿರೋಶ್..!

Untitled design 2026 06 15T170358.331

ಕೋಟಿ ಕೋಟಿ ರೆಮ್ಯುನರೇಷನ್ ಪಡೆಯೋ ಅದಷ್ಟೋ ಮಂದಿ ಸ್ಟಾರ್‌‌ಗಳಿಗೆ ತಮ್ಮ ಜೀವನದ ಉದ್ದೇಶಗಳೇ ಗೊತ್ತಿಲ್ಲ. ಆದ್ರೆ ಕೆಲ ಸೆಲೆಬ್ರಿಟಿಗಳು ತಮ್ಮಿಂದ ಸಮಾಜಕ್ಕೆ ಏನಾದ್ರೂ ಒಂದು ಸಣ್ಣ ಕೊಡುಗೆ ಆಗಬೇಕು ಅಂತ ಪರಿತಪಿಸುತ್ತಾರೆ. ಅಂಥವ್ರ ಸಾಲಿನಲ್ಲಿ ಸದ್ಯ ಇತ್ತೀಚೆಗೆ ಮದ್ವೆಯಾದ ರಶ್ಮಿಕಾ-ವಿಜಯ್ ದೇವರಕೊಂಡ ಸಖತ್ ಸುದ್ದಿಯಲ್ಲಿದ್ದಾರೆ. ನೂರಾರು ಮಂದಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಬೆನ್ನಿಗೆ ನಿಂತಿದ್ದಾರೆ. ಇದರ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ ನೋಡಿ..

ಇಂಡಿಯಾದ ಮೋಸ್ಟ್ ಪಾಪ್ಯುಲರ್ ಸೆಲೆಬ್ರಿಟಿ ಕಪಲ್‌‌‌ ಅಂದ್ರೆ ಅದು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ. ಇತ್ತೀಚೆಗೆ ಇವರಿಬ್ಬರೂ ಹಲವು ವರ್ಷಗಳ ಇವ್ರ ಸ್ನೇಹ, ಪ್ರೀತಿಗೆ ಸಪ್ತಪದಿ ತುಳಿದು ಹೊಸಬಾಳಿಗೆ ಕಾಲಿಟ್ಟಿದ್ದರು. ಸತಿ-ಪತಿಗಳಾದ ಬಳಿಕ ಈ ನೂತನ ದಂಪತಿ ವಿಜಯ್ ಅವ್ರ ಹುಟ್ಟೂರು ತುಮ್ಮನ್‌ಪೇಟ್‌ಗೆ ಹೋಗಿದ್ದರು. ಅಲ್ಲಿ ಫಾರ್ಮ್ ಹೌಸ್‌‌‌ ಕಟ್ಟಿಸಿದ್ದ ಹಿನ್ನೆಲೆ ಅದ್ರ ಗೃಹ ಪ್ರವೇಶ ಮಾಡಿ, ಅಲ್ಲಿನ ಜನಕ್ಕೆ ಊಟ ಕೂಡ ಹಾಕಿಸಿದ್ದರು.

ಅಷ್ಟೇ ಅಲ್ಲ.. ಅಂದು ಜನಕ್ಕೆ ಒಂದು ಪ್ರಾಮಿಸ್ ಕೂಡ ಮಾಡಿದ್ರು. ಮೆರಿಟ್‌‌ನಲ್ಲಿ ಪಾಸ್ ಆದಂತಹ ಸರ್ಕಾರಿ ಶಾಲಾ ಮಕ್ಕಳನ್ನ ಉತ್ತೇಜಿಸೋ ಸಲುವಾಗಿ ಅವರಿಗೆ ಸ್ಕಾಲರ್‌ಶಿಪ್ ನೀಡೋದಾಗಿ ಅನೌನ್ಸ್ ಮಾಡಿದ್ರು. ಆ ಕೊಟ್ಟ ಮಾತನ್ನ ಇದೀಗ ಉಳಿಸಿಕೊಂಡಿದೆ ಈ ತಾರಾ ಜೋಡಿ. ಹೌದು.. ಇತ್ತೀಚೆಗೆ ತೆಲಂಗಾಣದ ಸುಮಾರು 44 ಸರ್ಕಾರಿ ಶಾಲೆಗಳ 180ಕ್ಕೂ ಅಧಿಕ ಮಕ್ಕಳಿಗೆ ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿ ವೇತನ ನೀಡಿ, ಅವ್ರ ಪ್ರೀತಿ ಪಾತ್ರಕ್ಕೆ ಒಳಗಾಗಿದ್ದಾರೆ.

ತೆಲಂಗಾಣದ ಅಚಂಪೇಟ್ ಮಂಡಲದ 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮೆರಿಟ್ ಸ್ಕಾಲರ್‌ಶಿಪ್ ಅವಾರ್ಡ್ಸ್‌‌ ನೀಡಿ ಉತ್ತೇಜಿಸಲಾಗಿದೆ. ಅಂದಹಾಗೆ ವಿಜಯ್ ದೇವರಕೊಂಡ ತಂದೆ ಜನಿಸಿದ ಹಳ್ಳಿ ತುಮ್ಮನ್‌ಪೇಟ್. ಫೆಬ್ರವರಿಯಲ್ಲಿ ನಾನು-ರಶ್ಮಿಕಾ ಮದ್ವೆ ಆದಾಗ ನಿಮಗೆ ಪ್ರಾಮಿಸ್ ಮಾಡಿದ್ವಿ. ಅದ್ರಂತೆ ನಾವೀಗ ವಿದ್ಯಾರ್ಥಿ ವೇತನ ನೀಡಲು ಬರ್ತಿದ್ದೀವಿ ಅಂತ ಪೋಸ್ಟ್ ಮಾಡಿದ್ರು ವಿಜಯ್. ಇದೀಗ ದಿ ದೇವರಕೊಂಡ ಫೌಂಡೇಶನ್‌‌ ವತಿಯಿಂದ ರಶ್ಮಿಕಾ-ವಿಜಯ್ ಆ ಶಾಲೆಗಳಿಗೆ ತೆರಳಿ, ಸುಮಾರು 180ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ನೀಡಿ, ಅವ್ರ ಉತ್ಸಾಹ ಮತ್ತಷ್ಟು ಹೆಚ್ಚಿಸಿದ್ದಾರೆ.

ಇದನ್ನ ಮುಂದಿನ ದಿನಗಳಲ್ಲಿ ತೆಲಂಗಾಣ ರಾಜ್ಯಕ್ಕೆಲ್ಲಾ ವಿಸ್ತರಿಸೋ ಯೋಜನೆಯಲ್ಲಿರೋ ರಶ್ಮಿಕಾ ದಂಪತಿ, ಅದೆಷ್ಟೋ ಮಂದಿಗೆ ಮಾದರಿ ಹಾಗೂ ಸ್ಫೂರ್ತಿಯಾಗಿದ್ದಾರೆ. ಯಾಕಂದ್ರೆ ಕೋಟಿ ಕೋಟಿ ರೆಮ್ಯುನರೇಷನ್ ಪಡೆಯುವ ಸ್ಟಾರ್‌ಗಳು ತಾವಾಯ್ತು, ತಮ್ಮ ಕುಟುಂಬವಾಯ್ತು ಅಂತ ಮೋಜು, ಮಸ್ತಿ ಮಾಡಿ, ಲ್ಯಾವಿಶ್ ಲೈಫ್ ಲೀಡ್ ಮಾಡುವ ಈ ದಿನಗಳಲ್ಲಿ ಹೀಗೆ ತಮ್ಮ ಆದಾಯದ ಒಂದು ಭಾಗ ಸಮಾಜ ಸೇವೆ ಬಳಸ್ತಿರೋ ವಿರೋಶ್ ದಂಪತಿ ನಿಜಕ್ಕೂ ಗ್ರೇಟ್.

ಸದ್ಯ ರಶ್ಮಿಕಾ ಮಂದಣ್ಣ ಬಾಲಿವುಡ್‌ನ ಕಾಕ್ಟೇಲ್-2, ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಮೈಸಾ ಹಾಗೂ ರಣಬಾಲಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ವಿಜಯ್ ದೇವರಕೊಂಡ ಕೂಡ ರಣಬಾಲಿ ಹಾಗೂ ರೌಡಿ ಜನಾರ್ಧನ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇವರಿಬ್ಬರೂ ಸಾಲು ಸಾಲು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದು, ಅವುಗಳ ಶೂಟಿಂಗ್ ಹಾಗೂ ಡಬ್ಬಿಂಗ್ ನಡುವೆ ಹೀಗೆ ಸಾಮಾಜಿಕ ಕಾರ್ಯಗಳಲ್ಲಿ ಕೂಡ ತೊಡಗಿಸಿಕೊಳ್ತಿರೋದು ಖುಷಿಯ ವಿಚಾರ. ಇವ್ರ ಈ ಕಾರ್ಯಗಳು ಹೀಗೇ ಮುಂದುವರೆಯಲಿ. ಮತ್ತಷ್ಟು ಸ್ಟಾರ್‌ಗಳಿಗೆ ಮಾದರಿ ಆಗಲಿ. ಮಗದಷ್ಟು ವಿದ್ಯಾರ್ಥಿಗಳಿಗೆ ಆಶಾಕಿರಣವಾಗಲಿ ಅನ್ನೋದು ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version