ಅಬ್ಬಬ್ಬಾ.. ದೇಶದಲ್ಲಿ ಏನ್ ನಡೀತಿದೆ ಅಂದ್ರೆ.. ವಿರೋಶ್ ವೆಡ್ಡಿಂಗ್ ಅಂತಾರೆ. ಅಷ್ಟರ ಮಟ್ಟಿಗೆ ಟಾಕ್ ಆಫ್ ದಿ ಟೌನ್ ಆಗಿದೆ ರಶ್ಮಿಕಾ-ವಿಜಯ್ ಕಲ್ಯಾಣೋತ್ಸವ. ಅದಕ್ಕೆ ಅವರುಗಳು ಮೈ ಮೇಲೆ ಧರಿಸಿದ್ದ 3 ಕೆಜಿ ಬಂಗಾರದ ಒಡವೆಗಳು ಮತ್ತೊಂದು ಕಾರಣವಾಗಿದೆ. ಓ ಮೈ ಗಾಡ್.. ವಿರೋಶ್ ಮೈ ಮೇಲೆ ಇರೋದು ಪ್ಯೂರ್ ಗೋಲ್ಡಾ..? ಎಷ್ಟು ಕೋಟಿ ಮೊತ್ತದ ಗೋಲ್ಡ್ ಅದು..? ಎಷ್ಟು ಕೆಜಿ ಇದೆ..? ಯಾವ ಡಿಸೈನ್..? ಎಷ್ಟು ದಿನದಿಂದ ಅಕ್ಕಸಾಲಿಗರು ಕೆಲಸ ಮಾಡಿದ್ರು ಅನ್ನೋದ್ರ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ…
- ರಶಿ-ವಿಜ್ಜು ಮೈ ಮೇಲೆ 3 kg ಗೋಲ್ಡ್.. 10 ತಿಂಗಳ ಕರಕುಶಲ..!
- ಆಭರಣಗಳಲ್ಲಿ ದ್ರಾವಿಡ ವಾಸ್ತುಶಿಲ್ಪ.. ಹಿಂದೂ ದೇವಾಲಯ ಶೈಲಿ
- 5 ಕೋಟಿ ಮೊತ್ತದ ಜ್ಯುವೆಲ್.. ನ್ಯಾಷನಲ್ ಲೆವೆಲ್ ಸೆನ್ಸೇಷನ್
- ವರ ಕೂಡ ಕೆಜಿಗಟ್ಟಲೆ ಬಂಗಾರ.. ಹೊಸ ಟ್ರೆಂಡ್ ಸೃಷ್ಟಿಸಿದ ವಿಜ್ಜು
ಸೆಲೆಬ್ರಿಟಿಗಳು ಅಂದ್ಮೇಲೆ ಅವರುಗಳ ವೆಡ್ಡಿಂಗ್ಸ್ ತುಂಬಾ ಕಲರ್‌ಫುಲ್ ಹಾಗೂ ಬ್ಯೂಟಿಫುಲ್ ಆಗಿರುತ್ವೆ. ಅಷ್ಟೇ ದುಬಾರಿಯಾಗಿಯೂ ಇರುತ್ತವೆ. ಸದ್ಯ ಇತ್ತೀಚೆಗೆ ನಡೆದ ರಶ್ಮಿಕಾ-ವಿಜಯ್ ದೇವರಕೊಂಡ ವಿರೋಶ್ ಮದುವೆ ಎಲ್ಲೆಡೆ ಡಾಕ್ ಆಗ್ತಿದೆ. ಅದಕ್ಕೆ ಕಾರಣ ಒಂದು ಡೆಸ್ಟಿನೇಷನ್ ವೆಡ್ಡಿಂಗ್. ಮತ್ತೊಂದು ಅವರುಗಳ ಮೈ ಮೇಲೆ ಇದ್ದ ಒಡವೆಗಳು. ಅದ್ರಲ್ಲೂ ಗೋಲ್ಡ್ ಜ್ಯುವೆಲ್ಲರಿ.
ರಶ್ಮಿಕಾ ಹಾಗೂ ವಿಜಯ್ ದಿಢೀರ್ ಅಂತ ಮದ್ವೆ ಆದರಾದ್ರೂ ಅದಕ್ಕಾಗಿ ಒಂದು ವರ್ಷಕ್ಕೂ ಮೊದಲೇ ತಯಾರಿಗಳು ನಡೆದಿವೆ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಯಾಕಂದ್ರೆ ರಶ್ಮಿಕಾ-ವಿಜಯ್ ವೆಡ್ಡಿಂಗ್ ಜ್ಯುವೆಲ್ಲರಿ ಮೊತ್ತ ಬರೋಬ್ಬರಿ 5 ಕೋಟಿಗೂ ಅಧಿಕ. ಹೌದು.. ಸುಮಾರು 3 ಕೆಜಿ ಪ್ಯೂರ್ ಗೋಲ್ಡ್‌ನಿಂದ ಅವರು ಬಂಗಾರದ ಆಭರಣಗಳನ್ನ ತಯಾರಿಸಿ ಧರಿಸಿದ್ದಾರೆ.
ಸುಮಾರು 10 ತಿಂಗಳಿಂದ ಇವರಿಬ್ಬರ ಆಭರಣಗಳನ್ನ ಹ್ಯಾಂಡ್‌ಮೇಡ್ ಮೂಲಕ ತಯಾರಿಸಲಾಗಿದೆಯಂತೆ. ಹೌದು.. ಕರಕುಶಲ ಪದ್ಧತಿ ಮೂಲಕ ಇವು ತಯಾರಾಗಿದ್ದು, ಆಭರಣಗಳಲ್ಲಿ ದ್ರಾವಿಡ ವಾಸ್ತುಶಿಲ್ಪ.. ಹಿಂದೂ ದೇವಾಲಯಗಳ ಶೈಲಿ ಇದೆಯಂತೆ. ಇದೊಂಥರಾ ಗೋಲ್ಡನ್ ಟ್ರಿಬ್ಯೂಟ್ ಅಂದ್ರೂ ತಪ್ಪಾಗಲ್ಲ. ಅಂದಹಾಗೆ ಹಿಂದೂ ಸಂಪ್ರದಾಯಗಳಲ್ಲಿ ವರ ಕೂಡ ಇಷ್ಟೊಂದು ಜ್ಯುವೆಲ್ಲರಿ ಧರಿಸಬಹುದು ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಈ ವಿರೋಶ್ ಮದ್ವೆ ಮೂಲಕ ವಿಜಯ್ ಧರಿಸಿ, ಒಂಥರಾ ಟ್ರೆಂಡ್ ಸೃಷ್ಟಿಸಿದ್ದಾರೆ.
ಅಂದಹಾಗೆ ರಶ್ಮಿಕಾ-ವಿಜಯ್ ದಂಪತಿಯ ಸದ್ಯದ ಆಸ್ತಿಯ ಒಟ್ಟು ಮೊತ್ತ 130 ಕೋಟಿ ರೂಪಾಯಿ ಎನ್ನಲಾಗ್ತಿದೆ. ಸಿನಿಮಾ, ಬ್ಯುಸಿನೆಸ್, ಆ್ಯಡ್ ಫಿಲಂಸ್‌ನಿಂದ ದುಡಿದ ದುಡ್ಡನ್ನ ಲೈಫ್‌ನಲ್ಲಿ ತಮಗಿಷ್ಟ ಬಂದಂತೆ ಇರಲು ಬಳಸೋದ್ರಲ್ಲಿ ತಪ್ಪೇ ಇಲ್ಲ. ಸೋ.. ಇಬ್ಬರೂ ಸಹ ಚಿತ್ರರಂಗದ ಹಿನ್ನೆಲೆ ಉಳ್ಳವರೇ ಆಗಿರೋದ್ರಿಂದ ಇವರುಗಳ ವಿವಾಹ ಮಹೋತ್ಸವ ಬಹಳ ಲ್ಯಾವಿಶ್ ಆಗಿ ಕಂಡುಬಂದಿದೆ.
ಮಹಾರಾಜನಂತೆ ಮಿಂಚು ಹರಿಸಿದ ವಿಜಯ್ ದೇವರಕೊಂಡ ಲುಕ್ ಸಖತ್ ಕಿಕ್ ಕೊಡ್ತಿತ್ತು. ಅದ್ರಲ್ಲೂ ಮಹಾರಾಜರು ಆ ಕಾಲದಲ್ಲಿ ಧರಿಸುತ್ತಿದ್ದ ಬಂಗಾರದ ಒಡವೆಗಳ ರೀತಿ ವಿಜಯ್ ನೋಡುಗರ ಕಣ್ಣು ಕುಕ್ಕಿದ್ದಾರೆ. ಗಾಡೆಸ್ ರೀತಿ ಕಂಡ ರಶ್ಮಿಕಾ, ಲಕ್ಷ್ಮೀ ಕಾಯಿನ್ಸ್ ಹೊಂದಿರೋ ಜ್ಯುವೆಲ್ಲರಿಯಿಂದ ಕಮಾಲ್ ಮಾಡಿದ್ರು. ಅವರಿಬ್ಬರೋ ಸಪ್ತಪದಿ ತುಳಿದ ಫೋಟೋನ ನೆಟ್ಟಿಗರು ಶಿವ-ಪಾರ್ವತಿಯರಿಗೆ ಹೋಲಿಸಿ ಮಾತಾಡ್ತಿರೋದು ಇಂಟರೆಸ್ಟಿಂಗ್. ಒಟ್ಟಾರೆ ವಿರೋಶ್ ತಮ್ಮ ಮದ್ವೆಯಿಂದ ಸಾರ್ವಕಾಲಿಕ ದಾಖಲ ಬರೆದಿದ್ದಾರೆ.
ಇಂಡಿಯಾ ವರ್ಲ್ಡ್ ಕಪ್ ಗೆದ್ದಾಗಿನ ವೀವ್ಸ್‌ಗಿಂತ ಇವರುಗಳ ಮದ್ವೆ ಫೋಟೋಸ್‌ಗೆ ಬಂದ ಲೈಕ್ಸ್, ಕಮೆಂಟ್ಸ್ ಹಾಗೂ ಶೇರ್ಸ್ ಜಾಸ್ತಿ ಇದೆ ಎನ್ನಲಾಗ್ತಿದೆ. ಅದೇನೇ ಇರಲಿ ನೂತನ ದಾಂಪತ್ಯಕ್ಕೆ ಕಾಲಿಟ್ಟಿರೋ ರಶಿ-ವಿಜ್ಜು ಆರತಕ್ಷತೆ ಮದ್ವೆಯನ್ನ ಮೀರಿದ ರೇಂಜ್‌ಗೆ ಟ್ರೆಂಡ್ ಆಗಲಿದ್ದು, ಮೋದಿಯಿಂದ ಹಿಡಿದು ಅಮಿತಾಬ್, ರಜನೀಕಾಂತ್, ವಿಜಯ್ ಸೇರಿದಂತೆ ಇಡೀ ಭಾರತೀಯ ಚಿತ್ರರಂಗ ಹಾಗೂ ರಾಜಕೀಯ ರಂಗ ಸಾಕ್ಷಿಯಾಗಲಿದೆ. ಸೋ ಎಲ್ಲರ ಚಿತ್ತ ಮಾರ್ಚ್ 4ರಂದು ಹೈದ್ರಾಬಾದ್‌ನಲ್ಲಿ ನಡೆಯಲಿರೋ ವಿರೋಶ್ ಆರತಕ್ಷತೆ ಮೇಲೆ ನೆಟ್ಟಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
