‘ಕನ್ನಡ’ ಮರೆಯದ ರಶ್ಮಿಕಾ..ತೆಲುಗು ಸೊಸೆಗೆ ಶಹಬ್ಬಾಸ್‌‌ಗಿರಿ

ಬಿಗ್‌ಬಾಸ್ ಮನೆಯಲ್ಲಿ ಮುಕೇಶ್ ಜೊತೆ ರಶ್ಮಿಕಾ ಕನ್ನಡ ಟಾಕ್

Untitled design 2026 11 24T152934.045

ಕನ್ನಡತಿ ಆಗಿದ್ದುಕೊಂಡು ಕನ್ನಡ ಮಾತಾಡಲ್ಲ ಅನ್ನೋ ಕಾರಣಕ್ಕೆ ವಿವಾದಗಳನ್ನ ಮೈ ಮೇಲೆ ಎಳೆದುಕೊಳ್ತಿದ್ದ ಹಾಗೂ ಕನ್ನಡಿಗರ ಕೆಂಗಣ್ಣಿಗೆ ಗುರಿ ಆಗ್ತಿದ್ದಂತಹ ನ್ಯಾಷನಲ್ ಕ್ರಶ್ ರಶ್ಮಿಕಾ ಕನ್ನಡವನ್ನ ಮರೆತಿಲ್ಲ ಅನ್ನೋದು ಸ್ಪಷ್ಟ. ಇತ್ತೀಚೆಗೆ ತೆಲುಗು ಬಿಗ್‌ಬಾಸ್ ಮನೆಗೆ ಹೋಗಿದ್ದ ಮೈಸಾ ಅಲಿಯಾಸ್ ರಶ್ಮಿಕಾ.. ಸ್ವಚ್ಚ ಕನ್ನಡದಲ್ಲಿ ಮಾತನಾಡಿ ಭೇಷ್ ಅನಿಸಿಕೊಂಡಿದ್ದಾರೆ.

ನಮ್ಮ ಕನ್ನಡದ ಕಿರಿಕ್ ಬ್ಯೂಟಿ.. ಮಡಿಕೇರಿಯ ಚೆಲುವೆ.. ಸದ್ಯ ತೆಲುಗು ಸೊಸೆಯಾಗಿ ಪ್ಯಾನ್ ಇಂಡಿಯಾ ಸಂಚನಲ ಮೂಡಿಸ್ತಿರೋ ನ್ಯಾಷನಲ್ ಕ್ರಶ್ ರಶ್ಮಿಕಾ ಮತ್ತೆ ಸುದ್ದಿಯಲ್ಲಿದ್ದಾರೆ. ಸದಾ ಒಂದಿಲ್ಲೊಂದು ಕಾರಣಕ್ಕೆ ಟಾಕ್ ಆಫ್ ದಿ ಟೌನ್ ಆಗುವ ಈಕೆ.. ವಿವಾದಗಳು ಹಾಗೂ ಸಿನಮಾಗಳಿಂದಾಗಿಯೇ ಚಾಲ್ತಿಯಲ್ಲಿದ್ದಾರೆ. ಇಷ್ಟು ದಿನ ಕನ್ನಡತಿ ಆಗಿದ್ದುಕೊಂಡು ಕನ್ನಡ ಮಾತಾಡಲ್ಲ ಅಂದಿದ್ರು ಜನ. ಆದ್ರೀಗ ದಿಢೀರ್ ಅಂತ ಕನ್ನಡ ಮಾತಾಡಿ ಸದ್ದು ಮಾಡ್ತಿದ್ದಾರೆ.

ಯೆಸ್.. ರಶ್ಮಿಕಾ ಹೀಗೆ ಕನ್ನಡದಲ್ಲಿ ಮಾತಾಡಿರೋದು ಒಬ್ಬ ಕನ್ನಡಿಗನ ಜೊತೆ ಅನ್ನೋದು ವಿಶೇಷ. ಇತ್ತೀಚೆಗೆ ತಮ್ಮ ಮೈಸಾ ಚಿತ್ರದ ಪ್ರಮೋಷನ್ಸ್‌‌ಗಾಗಿ ತೆಲುಗು ಬಿಗ್‌ಬಾಸ್ ವೇದಿಕೆ ಹತ್ತಿದ್ದ ನ್ಯಾಷನಲ್ ಕ್ರಶ್.. ಅಲ್ಲಿದ್ದ ಕರ್ನಾಟಕ ಮೂಲದ ಮುಕೇಶ್ ಅನ್ನೋ ಕಂಟೆಸ್ಟೆಂಡ್ ಜೊತೆ ಹೀಗೆ ಮಾತನಾಡಿದ್ದಾರೆ. ಆತ ಹಾಯ್ ರಶ್ಮಿಕಾ ಹೇಗಿದ್ದೀರಾ ಎಂದ ಪ್ರಶ್ನೆಗೆ.. ನಾನು ಚೆನ್ನಾಗಿದ್ದೀನಿ.. ನೀವು..? ಅಂತ ರಶ್ಮಿಕಾ ಸ್ವಚ್ಚ ಕನ್ನಡದಲ್ಲಿ ಮಾತಾಡಿ ಭೇಷ್ ಅನಿಸಿಕೊಂಡಿದ್ದಾರೆ.

ಕೂಡಲೇ ಬಿಗ್‌ಬಾಸ್ ಹೋಸ್ಟ್ ಕಿಂಗ್ ನಾಗಾರ್ಜುನ್.. ನನಗೊಂದು ಡೌಟು.. ನೀವು ವಿಜಯ್ ದೇವರಕೊಂಡಗೆ ಯಾವ್ಯಾವ ಭಾಷೆಯಲ್ಲಿ ಪ್ರಪೋಸ್ ಮಾಡಿದ್ದೀರಿ ಅಂತ ಕೇಳ್ತಾರೆ. ಆಗ ಬಹುತೇಕ ಎಲ್ಲಾ ಭಾಷೆಗಳಲ್ಲಿ ಎಂದ ರಶಿ.. ಕೊರಿಯನ್‌‌ನಲ್ಲೂ ಪ್ರೇಮ ನಿವೇದನೆ ಮಾಡಿದ್ದನ್ನ ನೆನೆದರು.

ಮೈಸಾ ಸಿನಿಮಾದ ರಾಮುಲಮ್ಮ ಸಾಂಗ್ ಸಖತ್ ವೈಬ್ ಕೊಡ್ತಿದ್ದು.. ಸಿನಿಮಾ ಇದೇ ನವೆಂಬರ್ 27ಕ್ಕೆ ಬರ್ತಿಲ್ಲ. ಪೋಸ್ಟ್‌ಪೋನ್ ಆಗೋ ಮೂಲಕ ಫ್ಯಾನ್ಸ್‌ಗೆ ನಿರಾಸೆ ಮೂಡಿಸಿದೆ. ಆದ್ರೆ ಲೇಟ್ ಆದ್ರೂ ಲೇಟೆಸ್ಟ್ ಆಗಿ ತೆರೆಗಪ್ಪಳಿಸಲಿದ್ದು.. ರಶ್ಮಿಕಾ ಸಖತ್ ಫೈಟ್ಸ್ ಕೂಡ ಮಾಡಿದ್ದಾರೆ. ಮದ್ವೆ ನಂತ್ರ ನೀವು ಮತ್ತಷ್ಟು ಸುಂದರವಾಗಿದ್ದೀರಿ ಎಂದ ನಾಗಾರ್ಜುನ್.. ಫೈಟ್ಸ್ ಜೋರಾಗಿ ಮಾಡಿದಂಗಿದೆ.. ಮದ್ವೆಗೆ ಪ್ರಿಪರೇಷನ್‌‌ ಹಾ ಅಂತ ಕಿಚಾಯಿಸಿದ್ದಾರೆ. ಅದಕ್ಕೆ ರಶ್ಮಿಕಾ ಕೂಡ ನೀವೆಲ್ಲಾ ಮಾಡ್ತೀರಿ.. ನಿಮ್ಮಿಂದ ಸ್ಫೂರ್ತಿ ತೆಗೆದುಕೊಂಡೇ ಟ್ರೈ ಮಾಡಿದ್ದೀನಿ ಎಂದಿದ್ದಾರೆ.

ಒಟ್ಟಾರೆ.. ಮದ್ವೆ ನಂತ್ರ ಸಿನಿಮಾಗಳಲ್ಲಿ ಮತ್ತಷ್ಟು ಬ್ಯುಸಿ ಆಗಿರೋ ಕನ್ನಡತಿ.. ಅಪರೂಪಕ್ಕೆ ಕನ್ನಡದಲ್ಲಿ ಮಾತಾಡಿ ಕನ್ನಡಿಗರ ದಿಲ್ ದೋಚಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version