ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಧುರಂಧರ್ ಸಿನಿಮಾದ ಕಲೆಕ್ಷನ್ ನೋಡಿ ಇಡೀ ವಿಶ್ವ ಸಿನಿದುನಿಯಾ ಬೆಚ್ಚಿಬಿದ್ದಿದೆ. ಪುಷ್ಪ, ಬಾಹುಬಲಿ ದಾಖಳೆಗಳನ್ನ ಪುಡಿ ಪುಡಿ ಮಾಡಿದೆ. ಈ ಮಧ್ಯೆ ನಾಯಕನಟ ರಣ್ವೀರ್ ಸಿಂಗ್‌ಗೆ ದುಬಾರಿ ಕಾರ್‌ವೊಂದು ಗಿಫ್ಟ್ ಆಗಿ ಸಿಕ್ಕಿದೆ. ಹಾಗಾದ್ರೆ ಗಿಫ್ಟ್ ಕೊಟ್ಟಿದ್ದು ಯಾರು..? ಅದ್ರ ಬೆಲೆ ಎಷ್ಟು ಕೋಟಿ..? ಇಲ್ಲಿದೆ ನೋಡಿ ಉತ್ತರ.+
ಧುರಂಧರ್ ಗೆದ್ದ ಬೆನ್ನಲ್ಲೇ ರಣ್ವೀರ್‌ಗೆ 5ಕೋಟಿ ಕಾರ್ ಗಿಫ್ಟ್..!
GMC ಹಮ್ಮರ್ ದುಬಾರಿ ಕಾರ್ ಗಿಫ್ಟ್ ಮಾಡಿದ್ಯಾರು ಗೊತ್ತಾ?
ರಣವೀರ್ ಸಿಂಗ್ ಅಭಿನಯದ ʻದುರಂಧರ್ 2’ ಸಿನಿಮಾ ಜಾಗತಿಕವಾಗಿ 1361 ಕೋಟಿ ಗಳಿಸಿ ಇತಿಹಾಸ ಸೃಷ್ಟಿಸಿದೆ. ಈ ಭರ್ಜರಿ ಯಶಸ್ಸಿನ ಖುಷಿಯಲ್ಲಿ ನಿರ್ದೇಶಕ ಆದಿತ್ಯ ಧರ್ ಮತ್ತು ಅವರ ಪತ್ನಿ ಯಾಮಿ ಗೌತಮ್ ದಂಪತಿ ರಣ್ವೀರ್ ಸಿಂಗ್‌ಗೆ 5 ಕೋಟಿ ರೂಪಾಯಿ ಬೆಲೆಯ ಐಷಾರಾಮಿ ʻGMC ಹಮ್ಮರ್ʼ ಕಾರನ್ನ ಉಡುಗೊರೆಯಾಗಿ ನೀಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇತ್ತೀಚೆಗೆ ಧುರಂಧರ್ ಸ್ಟಾರ್ ರಣ್ವೀರ್ ಏರ್‌ಪೋರ್ಟ್‌ಗೆ ಅತ್ಯಂತ ದುಬಾರಿ ʻGMC ಹಮ್ಮರ್ ಇವಿ ಎಸ್‌ಯುವಿ ಕಾರಿನಲ್ಲಿ ಬಂದಿಳಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು. ಇದನ್ನ ಕಂಡ ನೆಟ್ಟಿಗರು, ದುರಂಧರ್ 2 ಬ್ಲಾಕ್‌ಬಸ್ಟರ್ ಯಶಸ್ಸಿಗೆ ನಿರ್ದೇಶಕ ಆದಿತ್ಯ ಧರ್ ದಂಪತಿ ರಣ್ವೀರ್‌ಗೆ ಈ ಕಾರನ್ನ ಗಿಫ್ಟ್ ನೀಡಿದ್ದಾರೆ ಅನ್ನೋ ಚರ್ಚಿಸಲು ಆರಂಭಿಸಿದ್ದಾರೆ. ಆದ್ರೆ, ಈ ವೈರಲ್ ಸುದ್ದಿಯ ಬೆನ್ನತ್ತಿದ್ದಾಗ ತಿಳಿದುಬಂದ ಸತ್ಯವೇ ಬೇರೆ. ಮೂಲಗಳ ಪ್ರಕಾರ, ರಣ್ವೀರ್ ಈ ಐಷಾರಾಮಿ ಕಾರನ್ನ ಕಳೆದ ವರ್ಷವೇ ಖರೀದಿಸಿದ್ದರು. ಈ ಹಿಂದೆಯೂ ಹಲವು ಬಾರಿ ಇದೇ ಕಾರಿನಲ್ಲಿ ರಣ್ವೀರ್ ಓಡಾಡಿರೋದು ಕಂಡುಬಂದಿದೆ. ಹೀಗಾಗಿ, ಇದು ಡೈರೆಕ್ಟರ್ ಗಿಫ್ಟ್ ಅಲ್ಲ.
ಡೈರೆಕ್ಟರ್ ಆದಿತ್ಯ ಧರ್ ಉಡುಗೊರೆ ನೀಡಿದ್ದಾರೆ ಎಂದು ಸುದ್ದಿ
ವರ್ಲ್ಡ್‌ವೈಡ್ 1361 ಕೋಟಿ ಗಳಿಸಿರೋ ಧುರಂಧರ್ ಭಾಗ-2
ಎನಿವೇ ದುರಂಧರ್ 2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬ್ಯಾಂಗ್ ಮಾಡ್ತಿದೆ. ನೋಡುಗರ ನಾಡಿಮಿಡಿತ ಹೆಚ್ಚಿಸೋದ್ರ ಜೊತೆ ಆದಿತ್ಯ ಧರ್‌ನ ಸೂಪರ್ ಸ್ಟಾರ್ ಡೈರೆಕ್ಟರ್ ಮಾಡಿದೆ. ರಣ್ವೀರ್ ಮನೆ ಮುಂದೆ ಇತರೇ ಪ್ರೊಡಕ್ಷನ್ ಬ್ಯಾನರ್‌ಗಳು ಕ್ಯೂ ನಿಲ್ಲುವಂತಾಗಿದೆ.
