ಕನ್ನಡತಿ ಸೀರಿಯಲ್ ಖ್ಯಾತಿಯ ನಟಿ ರಂಜನಿ ರಾಘವನ್ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಇದೇ ಸಮಯದಲ್ಲಿಯೇ ಇವರ ಮೊದಲ ನಿರ್ದೇಶನದ ‘ಡಿ ಡಿ ಢಿಕ್ಕಿ’ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿರೋ ಸುದ್ದಿನೂ ಹೊರ ಬಂದಿದೆ.. ಹೌದು ಕನ್ನಡತಿ ಸೀರಿಯಲ್ ಖ್ಯಾತಿಯ ನಟಿ ರಂಜಿನಿ ರಾಘವನ್ ಡೈರೆಕ್ಟರ್ ಆಗಿರೋದು ಗೊತ್ತೇ ಇದೆ. ತಮ್ಮ ಮೊದಲ ಚಿತ್ರದ ಕಥೆಯನ್ನ ಇಳಯರಾಜಾ ಅವರಿಗೆ ಹೇಳಿ ಭೇಷ್ ಅನಿಸಿಕೊಂಡಿದ್ದಾರೆ. ಸ್ವತಃ ಇಳಯರಾಜಾ ಅವರೇ ನಾನು ಈ ಚಿತ್ರಕ್ಕೆ ಸಂಗೀತ ಮಾಡ್ಲಾ ಅಂತಲೂ ಹೇಳಿರೋದು ಇದೆ. ಇದು ಒಬ್ಬ ಮಹಿಳಾ ನಿರ್ದೇಶಕಿಯ ಅದರಲ್ಲೂ ಮೊದಲ ಸಿನಿಮಾದ ನಿರ್ದೇಶಕಿಯ ಹೆಗ್ಗಳಿಕೆ.
ಇನ್ನೂ ‘ಡಿ ಡಿ ಢಿಕ್ಕಿ’ ಸಿನಿಮಾದಲ್ಲಿ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್ ಬಾಲ ನಟನಾಗಿ ಕಾಣಿಸಿಕೊಳ್ತಾಯಿದ್ದಾರೆ.. ಅಷ್ಟೇ ಅಲ್ಲದೇ ಲವ್ಲಿ ಸ್ಟಾರ್ ಪ್ರೇಮ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ತಾಯಿದ್ದು, ವಿಹಾನ್ಗೆ ತಂದೆಯಾಗಿ ನಟಿಸಿದ್ದಾರೆ..ಇದು ತಂದೆ ಮಗನ ಚಿತ್ರವಾಗಿದ್ದು, ಚಿತ್ರದಲ್ಲಿ ಎಲ್ಲರ ಹೃದಯ ತಟ್ಟುವ ಕಥೆ ಇದೆ ಎಂದು ಮೇಲ್ನೋಟಕ್ಕೆ ಅನಿಸ್ತಾಯಿದೆ.. ಸದ್ಯ ನಿರೀಕ್ಷಿತ ಡಿ ಡಿ ಢಿಕ್ಕಿ ಚಿತ್ರದ ಕೆಲಸ ಎಲ್ಲಿಗೆ ಬಂತು ಅಂತೀರಾ..? ಈ ಪ್ರಶ್ನೆಗೆ ರಂಜನಿ ರಾಘವನ್ ಜನ್ಮ ದಿನದಂದೇ ಉತ್ತರ ಸಿಕ್ಕಿದೆ.
ಹೌದು.. ‘ಡಿ ಡಿ ಢಿಕ್ಕಿ’ ಚಿತ್ರದ ಚಿತ್ರೀಕರಣ ಪೂರ್ಣ ಆಗಿದೆ. ಇದನ್ನ ಹೇಳುವುದಕ್ಕೆ ಒಂದು ವಿಡಿಯೊ ರೆಡಿ ಆಗಿದ್ದು,ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಚಿತ್ರೀಕರಣದ ಮೊದಲ ದಿನದಿಂದ ಹಿಡಿದು ಕೊನೆಯ ಗಳಿಗೆಯ ಕೆಲವು ಪ್ರಮುಖ ವಿಡಿಯೋ ಕ್ಲಿಪ್ ಇದರಲ್ಲಿವೆ. ಚಿತ್ರೀಕರಣದ ವೇಳೆ ರಂಜನಿ ರಾಘವನ್ ಎಮೋಷನಲ್ ಆಗಿರೋದು ಇದೆ. ತಮಗೆ ಗೊತ್ತಿಲ್ಲದೆ ಕಣ್ಣಲ್ಲಿ ನೀರು ಬರ್ತಾನೆ ಇರೋ ಕ್ಷಣಗಳು ಇವೆ. ಆ ರೀತಿಯ ಈ ಚಿತ್ರದ ಚಿತ್ರೀಕರಣದ ಕೆಲಸವನ್ನ ರಂಜನಿ ರಾಘವನ್ ಇದೀಗ ಪೂರ್ಣ ಮಾಡಿದ್ದಾರೆ.. ಹಾಗಾಗಿ ಸಹಜವಾಗಿ ಭಾವುಕರಾಗಿದ್ದಾರೆ.
ಇನ್ನೂ ಮೊದಲೇ ಹೇಳಿದಹಾಗೆ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪುತ್ರ ವಿಹಾನ್, ಲವ್ಲಿ ಸ್ಟಾರ್ ಪ್ರೇಮ್ ಜೊತೆಗೆ ನಟಿಸಿದ್ದಾರೆ. ಚಿತ್ರದಲ್ಲಿ ಸುಮಾರು ವಿಚಾರಗಳು ಇದ್ದು, ಇಳಯರಾಜಾ ಕೂಡ ಇಂಪ್ರೆಸ್ ಆಗಿದ್ದಲ್ಲದೇ, ಈ ಚಿತ್ರಕ್ಕೆ ನಾನೇ ಸಂಗೀತ ಮಾಡ್ಲಾ ಅಂತ ಕೇಳಿರೋದು ‘ಡಿ ಡಿ ಢಿಕ್ಕಿ’ ಸಿನಿಮಾದ ಕಥೆ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.. ‘ಡಿ ಡಿ ಢಿಕ್ಕಿ’ ಸಿನಿಮಾದಲ್ಲಿ ಅಪ್ಪ ಮತ್ತು ಮಗನ ಕಥೆ ಇದೆ. ಪ್ರೇಮ್ ಹಾಗೂ ವಿಹಾನ್ ಜೋಡಿಯು ಪ್ರೇಕ್ಷಕರಿಗೆ ಎಮೋಷನಲಿ ಕನೆಕ್ಟ್ ಆಗಲಿದ್ಯಂತೆ.
ಕತೆಯ ಡಬ್ಬಿ ಪುಸ್ತಕ ಆದ್ಮೇಲೆ ‘ಡಿ ಡಿ ಢಿಕ್ಕಿ’ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ ರಂಜನಿ ರಾಘವನ್. ಚಿತ್ರದ ಕೆಲಸವೆಲ್ಲೂ ಪೂರ್ಣಗೊಂಡಿದ್ದು,ಈ ವಿಷಯವನ್ನ ರಂಜನಿ ರಾಘವನ್ ಜನ್ಮದಿನದಂದೇ ಮೇಕಿಂಗ್ ವಿಡಿಯೋ ಮೂಲಕವೇ ಹೇಳಲಾಗಿದೆ.. ಸದ್ಯದಲ್ಲೇ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಲಿದ್ದು ಪ್ರೇಕ್ಷಕರಿಗೆ ಒಳ್ಳೆ ಸಿನಿಮಾ ನೀಡೋ ನಂಬಿಕೆಯಲ್ಲಿದ್ದಾರೆ ಚಿತ್ರತಂಡ..
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್