43 ಆದ್ರೂ ಸಿಂಗಲ್..ಮದ್ವೆ ಬಗ್ಗೆ ರಮ್ಯಾ ಮೈಂಡ್-ಬ್ಲೋಯಿಂಗ್ ರಿಪ್ಲೈ.!

ಪಾರ್ಟ್ನರ್ ಸಿಕ್ಕಿಲ್ಲ..ಖುಷಿನೇ ಮೊದಲ ಆಯ್ಕೆ..ರಮ್ಯಾ ರಾಕ್ಸ್..!

ಸಂಕಷ್ಟ, (18)

ಮದುವೆ ಆಗಿಲ್ಲ ಅಂದ್ರೆ ಲೈಫೇ ವೇಸ್ಟ್ ಅಂದ್ಕೋತಿರಾ..? ಹಾಗಾದ್ರೆ ಈ ಸುದ್ದಿನ ಒಮ್ಮೆ ನೋಡಿ. ನಮ್ಮ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ.. ಮದುವೆ ಬಗ್ಗೆ ಒಂದೇ ಒಂದು ಮಾತಲ್ಲಿ ಕೊಟ್ಟಿರೋ ಆ ಬೋಲ್ಡ್ ಆನ್ಸರ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌‌ನಲ್ಲಿದೆ. ಮದುವೆ ಯಾವಾಗ  ಅಂತ ಕೇಳೋಕೂ ಮೊದಲು ಮೋಹಕತಾರೆಯ ಮೈಂಡ್-ಬ್ಲೋಯಿಂಗ್ ಸ್ಟೇಟ್ಮೆಂಟ್‌ ಇಲ್ಲಿದೆ ನೋಡಿ…

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ  43ರ ಹರೆಯದಲ್ಲೂ ಕಿಲ್ಲರ್ ಲುಕ್ಸ್‌ನಿಂದಲೇ ಕೋಟಿ ಹೃದಯ ಗೆದ್ದಿರೋ ಸೆನ್ಸೇಷನಲ್ ನಟಿ. ಸಿನಿಮಾ ಲೋಕದಲ್ಲಿ ಸಾಲು ಸಾಲು ಹಿಟ್ಸ್ ಕೊಟ್ಟು, ಮಂಡ್ಯದಿಂದ ಕನಿಷ್ಠ ವಯಸ್ಸಿನ ಸಂಸದೆಯಾಗಿ ಪಾರ್ಲಿಮೆಂಟ್ ಮೆಟ್ಟಿಲೇರಿ ಕ್ರಾಂತಿ ಸೃಷ್ಟಿಸಿದ್ದ ಈ ಕ್ವೀನ್  ಸದ್ಯ ಮದುವೆ ಮ್ಯಾಟರ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾರೆ. ಮದುವೆಯಾಗುವುದು ಅಷ್ಟು ಮುಖ್ಯವೇ? ಖಂಡಿತಾ ಇಲ್ಲ ನಾನು ಯಾರೆಂಬುದನ್ನು ಮದುವೆ ನಿರ್ಧರಿಸಲ್ಲ. ಮದುವೆ ಇಲ್ಲದೆಯೂ ನಾವು ಹ್ಯಾಪಿಯಾಗಿಲ್ವಾ? ಅಂತ ಹೇಳೋ ಮೂಲಕ ಟ್ರೋಲರ್ಸ್ ಹಾಗೂ ಮದುವೆ ಕಾನ್ಸೆಪ್ಟ್ ಗೆ ಖಡಕ್ ಸವಾಲ್ ಎಸೆದಿದ್ದಾರೆ.

ಸಂದರ್ಶನವೊಂದರಲ್ಲಿ ಮದುವೆ ಹಾಗೂ ರಿಲೇಶನ್‌ಶಿಪ್ ಬಗ್ಗೆ ಮುಕ್ತವಾಗಿ ಮಾತನಾಡಿದ ರಮ್ಯಾ, ಲೈಫಲ್ಲಿ ಹ್ಯಾಪಿಯಾಗಿರುವುದೇ ಅಲ್ಟಿಮೇಟ್ ಗೋಲ್. ಒಂದೋ ನೀವು ಮದುವೆಯಾಗಬೇಕು, ಇಲ್ಲವೇ ಖುಷಿಯಾಗಿರಬೇಕು ಅಂತ ಚಾಟಿ ಬೀಸಿದ್ದಾರೆ. ಹಾಗಂತ ರಮ್ಯಾ ಮದುವೆ ಸಿಸ್ಟಮ್ ವಿರುದ್ಧವೇನೂ ಇಲ್ಲ. ಇದು ಎಲ್ಲ ಮಹಿಳೆಯರಿಗೂ ಅನ್ವಯಿಸದಿರಬಹುದು. ನಿಮ್ಮ ಮೌಲ್ಯಗಳನ್ನು ಅರ್ಥೈಸಿಕೊಳ್ಳುವ, ಲೈಫ್ ಲಾಂಗ್ ಜೊತೆಗಿರುವ ಬೆಸ್ಟ್ ಫ್ರೆಂಡ್ ಸಿಕ್ಕರೆ ಮದುವೆಯಾಗುವುದು ಬೆಸ್ಟ್ ನಿರ್ಧಾರ. ಆದರೆ ಮನುಷ್ಯರು ಬದಲಾಗುತ್ತಾರೆ, ಅಲ್ಲಿಯೇ ಸಮಸ್ಯೆ ಶುರುವಾಗೋದು ಎಂದು ಪ್ರಾಕ್ಟಿಕಲ್ ಲೈಫ್ ಪಾಠ ಹೇಳಿದ್ದಾರೆ.

ಇನ್ನು ತಮ್ಮ ಪರ್ಸನಲ್ ಲೈಫ್ ಬಗ್ಗೆ ಮೌನ ಮುರಿದಿರೋ ಮೋಹಕ ತಾರೆ, ನನಗೆ ಇದುವರೆಗೆ ನನ್ನ ಲೈಫ್‌ಗೆ ಮ್ಯಾಚ್ ಆಗುವಂತಹ ಸೂಕ್ತ ವ್ಯಕ್ತಿ ಸಿಕ್ಕಿಲ್ಲ. ಸದ್ಯಕ್ಕೆ ನಾನು ಅದರತ್ತ ತಲೆಕೆಡಿಸಿಕೊಳ್ಳುತ್ತಲೂ ಇಲ್ಲ, ರಿಲೇಶನ್‌ಶಿಪ್‌ಗೆ ಕೊಡಲು ನನ್ನ ಹತ್ತಿರ ಸಮಯವೂ ಇಲ್ಲ. ಎಂದು ಸ್ಟ್ರೇಟ್-ಫಾರ್ವರ್ಡ್ ಆಗಿ ಉತ್ತರ ಕೊಟ್ಟಿದ್ದಾರೆ. ಆ್ಯಪಲ್ ಬಾಕ್ಸ್ ಸ್ಟುಡಿಯೋಸ್  ಬ್ಯಾನರ್ ನಿರ್ಮಿಸಿ, ಹೊಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ಕೆಮಿಯೋ ಮಾಡಿ, ಕಂಬ್ಯಾಕ್‌ನತ್ತ ಗೇರ್ ಬದಲಾಯಿಸಿರೋ ರಮ್ಯಾ, ಮದುವೆ ಆತುರಕ್ಕಿಂತ ತಮ್ಮ ಸ್ವಂತ ಖುಷಿ ಹಾಗೂ ಕೆರಿಯರ್‌ಗೆ ಆದ್ಯತೆ ನೀಡಿ ಹೊಸ ಟ್ರೆಂಡ್ ಸೆಟ್ ಮಾಡುತ್ತಿದ್ದಾರೆ.

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version