ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಮೇಶ್ ಅರವಿಂದ್‌ಗಿಂದು ಬರ್ತ್ ಡೇ ಸಂಭ್ರಮ. ನಟನೆ, ನಿರ್ದೇಶನ , ನಿರ್ಮಾಣ, ನಿರೂಪಣೆ ಹೀಗೆ ಎಲ್ಲದರಲ್ಲೂ ಮಿಸ್ಟರ್ ಪರ್ಫೆಕ್ಟ್. ಸದಾ ಪಾಸಿಟಿವ್ ವಿಷಯಗಳ ಮೇಲೆ ಬೆಳಕು ಚೆಲ್ಲಿ, ಸ್ಫೂರ್ತಿದಾಯಕ ಮಾತುಗಳಿಂದ ಲೈಫ್ ಗುರು ಆಗಿರೋ ರಮೇಶ್ ಅವರದ್ದು ಅದೇ ಛಾರ್ಮ್, ಅದೇ ಉತ್ಸಾಹ. ದೈಜಿ ಟೀಸರ್ ಸಮೇತ ಒಂದು ಕಲರ್‌ಫುಲ್ ಸ್ಟೋರಿ ಇಲ್ಲಿದೆ.
ಬರಲಿದೆ KD & ಯುವರ್ಸ್ ಸಿನ್ಸಿಯರ್ಲಿ ರಾಮ್ ಪ್ರಾಜೆಕ್ಟ್ಸ್
ರಮೇಶ್ ಅರವಿಂದ್ ಇಡೀ ಕರುನಾಡು ಇಷ್ಟ ಪಡುವ ಅದ್ಭುತ ಕಲಾವಿದ. ನಟನೆ, ನಿರ್ದೇಶನ, ನಿರ್ಮಾಣ, ನಿರೂಪಣೆ, ಹೀಗೆ ಸಾಕಷ್ಟು ಫೀಲ್ಡ್‌ಗಳಲ್ಲಿ ಇವರು ಒಂಥರಾ ಮಾಸ್ಟರ್. ಸ್ಫೂರ್ತಿದಾಯಕ ಮಾತುಗಳಿಂದ ಪಾಸಿಟಿವ್ ವಿಷಯಗಳನ್ನು ಹಂಚೋದ್ರಲ್ಲಿ ಎತ್ತಿದ ಕೈ. ಅದೆಷ್ಟೋ ನೊಂದು, ಬೆಂದಂತಹ ಅಸಹಾಯಕ ಹೃದಯಗಳಿಗೆ ಇವ್ರ ಮಾತುಗಳು ಪಾಸಿಟಿವ್ ಎನರ್ಜಿ ನೀಡುತ್ತವೆ.
ದೇಶ ಸುತ್ತು, ಕೋಶ ಓದು ಅನ್ನೋ ಮಾತಿನಂತೆ ರಮೇಶ್ ಅರವಿಂದ್ ಪುಸ್ತಕಪ್ರೇಮಿ. ಸಾಕಷ್ಟು ಪುಸ್ತಕಗಳನ್ನ ಓದುವ ಹವ್ಯಾಸ ಇರೋದ್ರಿಂದಲೇ ಅವರ ಮಸ್ತಕ ಅಷ್ಟು ಲವಲವಿಕೆಯಿಂದ ಇರುತ್ತೆ. ದೇಶ, ವಿದೇಶಗಳಲ್ಲೂ ಅಭಿಮಾನಿಗಳನ್ನ ಹೊಂದಿರೋ ರಮೇಶ್‌ರನ್ನ ಕಂಡ್ರೆ ಪರಭಾಷಾ ಸ್ಟಾರ್‌ಗಳಿಗೂ ಗೌರವ. ಅವ್ರ ಒಂದೊಂದು ಮಾತು ಕೂಡ ಮುತ್ತುಗಳಂತೆ ಹೊರಬರುತ್ತೆ.
60 ವರ್ಷಗಳನ್ನ ಪೂರೈಸಿ 61ನೇ ವಸಂತಕ್ಕೆ ಕಾಲಿಟ್ಟಿರೋ ರಮೇಶ್ ಅರವಿಂದ್, ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. ವಯಸ್ಸು ಮಾತ್ರ 61. ಆದ್ರೆ ಅವ್ರ ಮನಸ್ಸು 16ರ ಹರೆಯದ್ದು. ಸಿನಿಮಾಗಳ ಜೊತೆ ಕಿರುತೆರೆಯಲ್ಲೂ ಬ್ಯುಸಿ ಇರೋ ಇವರು, ಮಹಾನಟಿ ಶೋನ ಜಡ್ಜ್ ಕೂಡ ಹೌದು. ಅಲ್ಲದೆ, ಶಿವಾಜಿ ಸುರತ್ಕಲ್ ಡೈರೆಕ್ಟರ್ ಆಕಾಶ್ ಶ್ರೀವತ್ಸ ಜೊತೆ ದೈಜಿ ಅನ್ನೋ ಮತ್ತೊಂದು ಸಿನಿಮಾ ಮಾಡಿದ್ದಾರೆ. ಬರ್ತ್ ಡೇ ವಿಶೇಷ ಟೀಸರ್ ಲಾಂಚ್ ಆಗಿದ್ದು, ಪ್ರೇತಾತ್ಮಗಳ ದೈವ ದೈಜಿ ವರ್ಲ್ಡ್ ಅನಾವರಣಗೊಂಡಿದೆ.
ರಾಧಿಕಾ ನಾರಾಯಣ್, ದಿಗಂತ್, ಅವಿನಾಶ್, ಜಟ್ಟ ಗಿರಿರಾಜ್, ನಿಧಿ ಹೆಗಡೆ, ಬಾದಲ್, ರಮೇಶ್ ಪಂಡಿತ್ ಹೀಗೆ ದೊಡ್ಡ ತಾರಾಗಣವಿರೋ ಈ ದೈಜಿ ಸಿನಿಮಾ ಬಹುತೇಕ ಫಾರಿನ್ ಲೊಕೇಷನ್ಸ್‌ನಲ್ಲೇ ಚಿತ್ರಿತವಾಗಿದೆ. ರವಿ ಕಶ್ಯಪ್ ನಿರ್ಮಾಣದ ಈ ದೈಜಿ ನೋಡುಗರಿಗೆ ಒಂದು ಫ್ರೆಶ್ ಫೀಲ್ ಅಂತೂ ಕೊಡಲಿದೆ. ಆರ್ಟ್ ಮಿಕ್ಸ್ಡ್ ಹಾರರ್ ಥ್ರಿಲ್ಲರ್ ಮಸ್ತ್ ಮಜಾ ಕೊಡೋದ್ರಲ್ಲಿ ಡೌಟೇ ಇಲ್ಲ.
ಇದಲ್ಲದೆ ರಮೇಶ್ ಅವರ ಕೆಡಿ ಸಿನಿಮಾ ಕೂಡ ರಿಲೀಸ್‌ಗೆ ಸಜ್ಜಾಗ್ತಿದೆ. ಹೌದು, ಜೋಗಿ ಪ್ರೇಮ್ ನಿರ್ದೇಶನದ ಹಾಗೂ ಧ್ರುವ ಸರ್ಜಾ-ಸಂಜಯ್ ದತ್ ನಟನೆಯ ಮಲ್ಟಿಸ್ಟಾರ್ ಸಿನಿಮಾ ಕೆಡಿಯಲ್ಲಿ ಕ್ರೇಜಿಸ್ಟಾರ್ ಜೊತೆ ರಮೇಶ್ ಅರವಿಂದ್ ಕೂಡ ಬಣ್ಣ ಹಚ್ಚಿದ್ದಾರೆ. ಕತ್ತಿ ಹಿಡಿದು ನೆತ್ತರು ಹರಿಸೋ ಮಾಸ್ ಅವತಾರದಲ್ಲಿ ಮಿಂಚಲಿದ್ದಾರೆ.
ಯುವರ್ಸ್ ಸಿನ್ಸಿಯರ್ಲಿ ರಾಮ್ ಮತ್ತೊಂದು ಮಲ್ಟಿಸ್ಟಾರರ್. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ರಮೇಶ್ ಅರವಿಂದ್ ಸ್ಕ್ರೀನ್ ಶೇರ್ ಮಾಡಿದ್ದು, ಇದು ವಿಖ್ಯಾತ್ ನಿರ್ಮಾಣದಲ್ಲಿ ಪೇಂಟಿಂಗ್‌ನಂತೆ ವಿಶ್ಯುವಲ್ ಟ್ರೀಟ್ ನೀಡೋದು ಪಕ್ಕಾ. ಬರ್ತ್ ಡೇ ಸಂಭ್ರಮದಲ್ಲಿರೋ ರಮೇಶ್‌ರಿಗೆ ಮತ್ತಷ್ಟು, ಮಗದಷ್ಟು ಚಿತ್ರಗಳಿಂದ ರಂಜಿಸ್ತಾ ಇರಿ ಅಂತ ಹುಟ್ಟು ಹಬ್ಬಕ್ಕೆ ಹಾರೈಸೋಣ.