ರಾಮಾಯಣ.. ರಾಮಾಯಣ.. ರಾಮಾಯಣ.. ಇಂಡಿಯಾದಿಂದ ಹಿಡಿದು ಅಮೆರಿಕಾದ ಗ್ಲೋಬಲ್ ವೇದಿಕೆ ತನಕ ಎಲ್ಲೆಡೆ ಸದ್ದು ಗದ್ದಲ ಮಾಡ್ತಿರೋ ಇಂಡಿಯನ್ ಮೂವಿ. ಡೆಲ್ಲಿ, ಸ್ಯಾನ್ ಡಿಯಾಗೋ.. ಹೀಗೆ ಎರಡೆರಡು ಕಡೆ ಟ್ರೈಲರ್ ಪ್ರದರ್ಶನಗೊಂಡರೂ ಡಿಜಿಟಲಿ ಇನ್ನೂ ಆ ದೃಶ್ಯಗುಚ್ಚ ಹೊರಬಿದ್ದಿಲ್ಲ. ಆದ್ರೀಗ ಸ್ಪೈಡರ್‌ಮ್ಯಾನ್ ಆ ರಾಮಾಯಣ ದರ್ಶನಕ್ಕೆ ಮುಹೂರ್ತ ಫಿಕ್ಸ್ ಮಾಡಿರೋದು ಇಂಟರೆಸ್ಟಿಂಗ್. ಇದರ ಫುಲ್ ಡಿಟೇಲ್ಸ್ ಇಲ್ಲಿದೆ…
- ‘ರಾಮಾಯಣ’ ಟ್ರೈಲರ್‌ಗೆ ‘ಸ್ಪೈಡರ್‌ಮ್ಯಾನ್’ ಮುಹೂರ್ತ
- ಸ್ಪೈಡರ್‌ಮ್ಯಾನ್ ಜೊತೆ ಯಶ್-ರಣ್‌ಬೀರ್ ರಾಮಾಯಣ
- ಸೋನಿ ಪಿಕ್ಚರ್ಸ್ ಮಾಸ್ಟರ್ಪ್ಲ್ಯಾನ್.. ಗ್ಲೋಬಲ್ ಟಾರ್ಗೆಟ್
- ಇಂಡಿಯನ್ ಸಿನಿಮಾಗೆ ಹಾಲಿವುಡ್ ಬ್ಯಾನರ್ಸ್ ಸಾಥ್..!!
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ದುಬಾರಿ ಸಿನಿಮಾ ರಾಮಾಯಣ. ಹೌದು.. ಒಂದಲ್ಲ ಎರಡೆರಡು ಭಾಗಗಳಲ್ಲಿ ಈ ಚಿತ್ರ ತೆರೆಗೆ ಬರ್ತಿದ್ದು, ಸುಮಾರು 3500ರಿಂದ 4 ಸಾವಿರ ಕೋಟಿ ಭಾರೀ ಬಜೆಟ್‌ನಲ್ಲಿ ತಯಾರಾಗ್ತಿದೆ. ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿ ನಿರ್ದೇಶನದ ಹಾಗೂ ನಮಿತ್ ಮಲ್ಹೋತ್ರಾ ಜೊತೆಗೂಡಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಸಹನಿರ್ಮಾಣದ ಚಿತ್ರ ರಾಮಾಯಣ.
ರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ಲಂಕೇಶ್ವರ ರಾವಣನ ಪಾತ್ರದಲ್ಲಿ ಯಶ್ ಬಣ್ಣ ಹಚ್ಚಿರೋ ರಾಮಾಯಣ ಮೊದಲ ಭಾಗ ಇದೇ ದೀಪಾವಳಿಗೆ ಬಿಡುಗಡೆ ಆಗ್ತಿದೆ. ದ್ವಿತಿಯ ಭಾಗ 2027ರ ದೀಪಾವಳಿಗೆ ಬೆಳ್ಳಿಪರದೆ ಬೆಳಗಲಿದ್ದು, ಭಾರತದ ಮಹಾ ಕಾವ್ಯಗಳು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ವಿಜೃಂಭಿಸಲಿವೆ. ಅಂದಹಾಗೆ ರಾಮಾಯಣ ಚಿತ್ರದ ಟ್ರೈಲರ್ ಜುಲೈ 18ರಂದು ಡೆಲ್ಲಿಯ ಭಾರತ್ ಮಂಟಪ ಹಾಗೂ ಜುಲೈ 24ರಂದು ಅಮೆರಿಕಾದ ಸ್ಯಾನ್ ಡಿಯಾಗೋದ ಕಾಮಿಕ್ ಕಾನ್‌ನಲ್ಲಿ ಪ್ರದರ್ಶನಗೊಂಡಿತ್ತು. ಆದ್ರೆ ಇಂದಿಗೂ ಸಹ ಡಿಜಿಟಲಿ ಟ್ರೈಲರ್ ಹೊರಬಂದಿಲ್ಲ. ಅದಕ್ಕೆ ಕಾರಣ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರೊಟೆಸ್ಟ್ ಎನ್ನಲಾಗಿತ್ತು.
ಆದ್ರೀಗ ಕೊನೆಗೂ ರಾಮಾಯಣ ಚಿತ್ರದ ಟ್ರೈಲರ್ ದರ್ಶನಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಆ ಮುಹೂರ್ತವನ್ನ ನಿಗದಿ ಮಾಡಿರೋದು ವರ್ಲ್ಡ್ ಫೇಮಸ್ ಸ್ಪೈಡರ್‌ಮ್ಯಾನ್ ಅನ್ನೋದು ಅಚ್ಚರಿ. ಹೌದು.. ಸ್ಪೈಡರ್ ಮ್ಯಾನ್ ಫ್ರಾಂಚೈಸ್‌ನ ಹೊಚ್ಚ ಹೊಸ ಸಿನಿಮಾ ಸ್ಪೈಡರ್ ಮ್ಯಾನ್-ಬ್ರ್ಯಾಂಡ್ ನ್ಯೂ ಡೇ ಸಿನಿಮಾ ಇದೇ ಜುಲೈ 29, 30ಕ್ಕೆ ವರ್ಲ್ಡ್‌ವೈಡ್ ತೆರೆಗೆ ಬರ್ತಿದೆ. ಅದರೊಟ್ಟಿಗೆ ಮಹಾ ದೃಶ್ಯಕಾವ್ಯ ರಾಮಾಯಣ ಟ್ರೈಲರ್ ಕೂಡ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಹಾಗೇನಾದ್ರೂ ಆದಲ್ಲಿ, ಇದು ಒಂದೇ ಏಟಿಗೆ ಗ್ಲೋಬಲ್ ಮಾರ್ಕೆಟ್‌ಗೆ ದೊಡ್ಡ ಪ್ರಮಾಣದಲ್ಲಿ ರೀಚ್ ಆಗಲಿದೆ.
ಇಂಟರೆಸ್ಟಿಂಗ್ ಅಂದ್ರೆ ನಮಿತ್ ಮಲ್ಹೋತ್ರಾ ಡ್ರೀಮ್ ಪ್ರಾಜೆಕ್ಟ್ ರಾಮಾಯಣ ಸಿನಿಮಾದ ಜೊತೆ ಪ್ರತಿಷ್ಠಿತ ಹಾಲಿವುಡ್ ಬ್ಯಾನರ್ ಸೋನಿ ಪಿಕ್ಚರ್ಸ್ ಎಂಟರ್‌ಟೈನ್ಮೆಂಟ್ ಟೈಯಪ್ ಆಗಿದೆ. ಸದ್ಯ ಸ್ಪೈಡರ್ ಮ್ಯಾನ್ ಸಿನಿಮಾ ಸೋನಿ ಪಿಕ್ಚರ್ಸ್ ಬ್ಯಾನರ್‌ನಿಂದಲೇ ಬರ್ತಿರೋದ್ರಿಂದ, ರಾಮಾಯಣ ಟ್ರೈಲರ್ ಅದಕ್ಕೆ ಅಟ್ಯಾಚ್ ಮಾಡಿ ಬಿಡುಗಡೆ ಮಾಡ್ತಾರೆ ಅನ್ನೋ ಮಾತುಗಳು ದಟ್ಟವಾಗಿ ಕೇಳಿಬರ್ತಿವೆ. ಒಟ್ಟಾರೆ ನಮ್ಮ ಇಂಡಿಯನ್ ಸಿನಿಮಾಗಳಿಗೆ ಹೀಗೆ ಪ್ರತಿಷ್ಠಿತ ಹಾಲಿವುಡ್ ಬ್ಯಾನರ್‌ಗಳು ಸಾಥ್ ನೀಡ್ತಿರೋದು ಖುಷಿಯ ವಿಚಾರ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
