ಎಲ್ಲರ ಚಿತ್ತ ರಾಕಿ-ರಣ್‌ಬೀರ್ ‘ರಾಮಾಯಣ’ ಟೀಸರ್‌‌ನತ್ತ

ಮುಂಬೈ ಕಬ್ಜ ಮಾಡಲು ರಾಕಿಭಾಯ್ ಮಾಸ್ಟರ್‌ ಪ್ಲ್ಯಾನ್..!

Web 2025 07 01t131711.672

ರಾಮಾಯಣ ವಿಶ್ವ ಸಿನಿದುನಿಯಾಗಾಗಿ ಭಾರತೀಯ ಚಿತ್ರರಂಗದಿಂದ ತಯಾರಾಗ್ತಿರೋ ಮಾಸ್ಟರ್‌ಪೀಸ್ ಸಿನಿಮಾ. ಇಲ್ಲಿಯವರೆಗೂ ಅಂತೆ ಕಂತೆಗಳ ಸಂತೆಯಾಗಿದ್ದ ರಾಮಾಯಣ, ಇದೀಗ ಫಸ್ಟ್ ಗ್ಲಿಂಪ್ಸ್ ಮೂಲಕ ಚಿತ್ರದ ಗತ್ತು, ಗಮ್ಮತ್ತು ತೋರುವುದಕ್ಕೆ ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ರಣ್‌ಬೀರ್ ರಾಮಾಯಣದ ಟೀಸರ್ ಯಾವಾಗ..? ಎಲ್ಲಿ..? ಹೇಗೆ ರಿಲೀಸ್ ಆಗಲಿದೆ ಅನ್ನೋದ್ರ ಎಕ್ಸ್‌ಕ್ಲೂಸಿವ್ ಖಬರ್ ನಿಮ್ಮ ಮುಂದೆ.

ರಾಮಾಯಣ ಬಾಲಿವುಡ್‌ ಅಂಗಳದಲ್ಲಿ ಈ ಸಿನಿಮಾ ಅನೌನ್ಸ್ ಆದ ದಿನದಿಂದ ಸಿಕ್ಕಾಪಟ್ಟೆ ದೊಡ್ಡ ಮಟ್ಟಕ್ಕೆ ಸೌಂಡ್ ಮಾಡ್ತಿದೆ. ಅದಕ್ಕೆ ಕಾರಣ ದಂಗಲ್ ಫೇಮ್ ಡೈರೆಕ್ಟರ್ ನಿತೇಶ್ ತಿವಾರಿ ಹಾಗೂ ತಾರಾಗಣ. ಯೆಸ್.. ರಣ್‌ಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಅಂತಹ ಅದ್ಭುತ ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದು, ನಮಿತ್ ಮಲ್ಹೋತ್ರಾ ಸುಮಾರು 1000 ಕೋಟಿ ಬಿಗ್ ಬಜೆಟ್‌‌ನಲ್ಲಿ ಸಿನಿಮಾನ ನಿರ್ಮಾಣ ಮಾಡ್ತಿದ್ದಾರೆ.

ADVERTISEMENT
ADVERTISEMENT

ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಲಂಕಾಧಿಪತಿ ರಾವಣನ ಪಾತ್ರಕ್ಕೆ ಜೀವ ತುಂಬುತ್ತಿದ್ದು, ನಟನೆ ಜೊತೆಗೆ ತಾವು ಕೂಡ ಸಿನಿಮಾದ ಸಹನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಎರಡು ಭಾಗಗಳಲ್ಲಿ ಬರ್ತಿರೋ ರಾಮಾಯಣ ಸಿನಿಮಾ, 2026ರ ದೀಪಾವಳಿಗೆ ಮೊದಲ ಭಾಗ ಹಾಗೂ 2027ರ ದೀಪಾವಳಿಗೆ ಎರಡನೇ ಭಾಗ ನೋಡುಗರನ್ನ ರಂಜಿಸಲಿದೆ. ಇತ್ತೀಚೆಗೆ ಸಿನಿಮಾದ ಉಳಿದ ಪಾತ್ರಗಳ ಕುರಿತ ಮಾಹಿತಿ ರಿವೀಲ್ ಮಾಡಿತ್ತು ಟೀಂ. ಆದ್ರೆ ಅಧಿಕೃತವಾಗಿ ಇಲ್ಲಿಯವರೆಗೆ ಯಾವುದೇ ಫಸ್ಟ್‌ಲುಕ್ ಪೋಸ್ಟರ್‌ಗಳು ಹೊರಬಂದಿಲ್ಲ.

ಫ್ಯಾನ್ ಮೇಡ್ ಎಐ ಪೋಸ್ಟರ್‌ಗಳು, ಫಸ್ಟ್ ಲುಕ್‌ಗಳು ಹಾಗೂ ಟೀಸರ್, ಟ್ರೈಲರ್‌‌ಗಳು ಬಹಳ ವೈಭವೋಪೇತವಾಗಿ ಸಿದ್ದಗೊಂಡು, ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸ್ತಿವೆ. ಪ್ರಧಾನಿ ನರೇಂದ್ರ ಮೋದಿ ಕೂಡ ಮುಂಬೈನಲ್ಲಿರೋ ರಾಮಾಯಣ ಸೆಟ್‌ಗೆ ಭೇಟಿ ನೀಡಿ, ಚಿತ್ರತಂಡವನ್ನು ಶ್ಲಾಘಿಸಿ, ಅಭಿನಂದಿಸಿದ್ದರು. ಇದೀಗ ಸಿನಿಮಾದ ಫಸ್ಟ್ ಗ್ಲಿಂಪ್ಸ್ ಟೀಸರ್ ಹೊರಬರುವ ಸಮಯವಾಗಿದೆ. ಅದಕ್ಕೆ ಚಿತ್ರತಂಡ ಮುಹೂರ್ತ ಕೂಡ ಫಿಕ್ಸ್ ಮಾಡಿದ್ದಾರೆ.

ಇದೇ ಜುಲೈ 3ರಂದು ರಾಮಾಯಣ ದಿ ಇಂಟ್ರಡಕ್ಷನ್ ಸಿನಿಮಾದ ಫಸ್ಟ್‌ಲುಕ್ ಗ್ಲಿಂಪ್ಸ್ ಟೀಸರ್ ರಿವೀಲ್ ಆಗ್ತಿದೆ. ಅಂದಹಾಗೆ ರಾಮಾಯಣ ಟೀಸರ್‌ನತ್ತ ಎಲ್ಲರ ಚಿತ್ತ ಹರಿದಿದ್ದು, ಮುಂಬೈ, ಡೆಲ್ಲಿ, ಅಹಮದಾಬಾದ್, ಹೈದ್ರಾಬಾದ್, ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಪುಣೆ ಹಾಗೂ ಕೊಚ್ಚಿಯಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆಯಂತೆ. ಅಂದಹಾಗೆ ಚಿತ್ರತಂಡ ಮುಂಬೈನಲ್ಲಿ ಅಫಿಶಿಯಲಿ ಲಾಂಚ್ ಮಾಡಲಿದ್ದು, ಫ್ಯಾನ್ಸ್ ಅಸೋಸಿಯೇಷನ್‌‌ಗಳಿಂದ ಎಲ್ಲಾ ಸಿಟಿಗಳಲ್ಲಿ ಲಾಂಚ್ ಮಾಡಲು ಯೋಜನೆ ರೂಪಿಸಲಾಗಿದೆ.

ಬೆಂಗಳೂರಿನ ಫೋರಂ ಮಾಲ್‌ನಲ್ಲಿರೋ ಪಿವಿಆರ್‌‌ನಲ್ಲಿ ಜುಲೈ 3ರ ಬೆಳಗ್ಗೆ 11.30ಕ್ಕೆ ರಾಮಾಯಣ ಟೀಸರ್ ಲಾಂಚ್ ಫಂಕ್ಷನ್ ಆಯೋಜಿಸಲಾಗಿದೆ. ಅಂದಹಾಗೆ ಯಶ್ ಈ ಚಿತ್ರದ ಟೀಸರ್ ಲಾಂಚ್‌ಗಾಗಿ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿರೋ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಆದ್ರೆ ಅಸಲಿ ಮ್ಯಾಟರ್ ಏನಪ್ಪಾಂದ್ರೆ, ರಾಮಾಯಣ ಟೀಸರ್ ಫಂಕ್ಷನ್‌ಗೆ ಯಶ್ ಗೈರಾಗಲಿದ್ದಾರಂತೆ. ಟಾಕ್ಸಿಕ್ ಹಾಗೂ ರಾಮಾಯಣ ಹೆಕ್ಟಿಕ್ ಶೆಡ್ಯೂಲ್‌ಗಳ ನಡುವೆ ಸಣ್ಣದೊಂದು ವಿರಾಮ ಪಡೆದಿರೋ ರಾಕಿಭಾಯ್, ಫ್ಯಾಮಿಲಿ ಜೊತೆ ಅಮೆರಿಕಾ ಫ್ಲೈಟ್ ಹತ್ತಿದ್ದಾರೆ.

ಇದೇ ಮೊದಲ ಬಾರಿಗೆ ಮುಂಬೈನ ಪಾಪರಾಜೀಸ್‌ಗೆ ಫೋಟೋಸ್ ನೀಡಿರುವ ಯಶ್, ಅವ್ರ ದಿಲ್ ದೋಚಿದ್ದಾರೆ. ಯಶ್ ಮುಂಬೈ ರಿಜಿಸ್ಟ್ರೇಷನ್‌ 8055 ನಂಬರ್‌ನ ದುಬಾರಿ ಕಾರ್ ಕೂಡ ಖರೀದಿಸಿದ್ದು, BOSS ಅಂತಿರೋ ಅದೇ ಕಾರ್‌ನಲ್ಲೇ ಏರ್‌ಪೋರ್ಟ್‌ಗೆ ಬಂದು ಇಳಿದಿರೋದು ಇಂಟರೆಸ್ಟಿಂಗ್. ಒಟ್ಟಾರೆ, ರಾಮಾಯಣ ಸಿನಿಮಾ ಹತ್ತು, ಹಲವು ಕಾರಣಗಳಿಂದಾಗಿ ಅತೀವ ನಿರೀಕ್ಷೆ ಮೂಡಿಸಿದ್ದು, ಚರಿತ್ರೆ ಸೃಷ್ಠಿಸುವಂತಹ ಮಾಸ್ಟರ್‌ಪೀಸ್ ಸಿನಿಮಾ ಆಗೋದ್ರಲ್ಲಿ ಯಾವುದೇ ಡೌಟ್ ಇಲ್ಲ.

Exit mobile version