ಡೈರೆಕ್ಟರ್ ಕ್ಯಾಪ್ ತೊಟ್ಟ ತೆಲುಗಿನ ನಟ ರಾಮ್ ಪೋತಿನೇನಿ: RAPO23 ಸಿನಿಮಾ ಅನೌನ್ಸ್

Untitled design 2026 05 17T190616.227

ತೆಲುಗಿನ ಪ್ರತಿಭಾನ್ವಿತ ನಟ ರಾಮ್ ಪೋತಿನೇನಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಜನ್ಮದಿನದ ಪ್ರಯುಕ್ತ ರಾಮ್ ಹೊಸ ಸಿನಿಮಾ ಘೋಷಣೆಯಾಗಿದೆ. ಈ ಬಾರಿ ರಾಮ್ ಪೋತಿನೇನಿ ನಟನೆ ಜೊತೆಗೆ ನಿರ್ದೇಶನಕ್ಕೆ ಇಳಿದಿದ್ದಾರೆ.

ಎನರ್ಜೆಟಿಕ್ ಸ್ಟಾರ್ ರಾಮ್ ಪೋತಿನೇನಿ ಆಂಧ್ರ ಕಿಂಗ್ ತಾಲೂಕಾ ಸಿನಿಮಾಗೆ ಸಾಹಿತ್ಯ ಬರೆದು ಸೈ ಎನಿಸಿಕೊಂಡಿದ್ದರು. ಇದೀಗ ಅವರು ಮತ್ತೊಂದು ಹೆಜ್ಜೆ ಮುಂದೆ ಇಟ್ಟು ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ತಮ್ಮ 23ನೇ ಚಿತ್ರಕ್ಕೆ ರಾಮ್ ಆಕ್ಷನ್ ಕಟ್ ಹೇಳುತ್ತಿದ್ದು, ಅವರ ಬರ್ತಡೇ ಪ್ರಯುಕ್ತ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ವೀರ ಪಾತ್ರದಲ್ಲಿ ರಾಮ್ ಪೋತಿನೇನಿ ನಟಿಸುತ್ತಿದ್ದು, ಜಾಕೆಟ್ ಧರಿಸಿ ವಿ ಕಟ್ ಹೇರ್ ಸ್ಟೈಲ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಆದರೆ ಮುಖ ರಿವೀಲ್ ಮಾಡದೆ ಕುತೂಹಲ ಹೆಚ್ಚಿಸಿದ್ದಾರೆ.

ಸಿನಿಮಾಗೆ RAMO23 ಎಂಬ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ. ಜೂನ್ ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಡಿಸೆಂಬರ್ ನಲ್ಲಿ ಚಿತ್ರ ಬಿಡುಗಡೆ‌ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಅಂದಹಾಗೇ ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವಾಗಿದ್ದು, ತಮ್ಮದೇ ರಾಪೋ ಸಿನಿಮ್ಯಾಟಿಕ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಶೀಘ್ರದಲ್ಲೇ ರಾಮ್ ಪೋತಿನೇನಿ ರಿವೀಲ್ ಮಾಡಲಿದ್ದಾರೆ.

Exit mobile version