ಬೆಂಗಳೂರಲ್ಲಿ ಪೆದ್ದಿ ಪ್ರಮೋಷನ್ಸ್..ಶಿವಣ್ಣ ಜೊತೆ ಚರಣ್

ಚರಣ್‌ಗೆ ನ್ಯಾಷನಲ್ ಅವಾರ್ಡ್ ಬರಬೇಕೆಂದ ಶಿವಣ್ಣ..!!

Untitled design 2026 05 25T193107.114

ಮುಂಬೈ ಹಾಗೂ ಭೂಪಾಲ್‌ ಇವೆಂಟ್ಸ್ ಮುಗಿಸಿ, ನೇರವಾಗಿ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾರೆ ಮೆಗಾಸ್ಟಾರ್ ಚಿರಂಜೀವಿ ತನಯ ರಾಮ್ ಚರಣ್. ಪೆದ್ದಿ ಸ್ಟಾರ್‌‌ಗೆ ಉಸ್ತಾದ್ ಗೌರ್ ನಾಯ್ಡು ಕೂಡ ಸಾಥ್ ನೀಡಿದ್ದು, ದೊಡ್ಮನೆ ದೊರೆ ಶಿವಣ್ಣ-ಚರಣ್ ಸಮಾಗಮದ ಆ ಇವೆಂಟ್ ಹೇಗಿತ್ತು..? ಎಷ್ಟು ಸ್ಪೆಷಲ್ ಆಗಿತ್ತು ಅನ್ನೋದ್ರ ಫುಲ್‌ ಡಿಟೇಲ್ಸ್‌ ಇಲ್ಲಿದೆ ….

ಬಾಕ್ಸ್ ಆಫೀಸ್‌ನಲ್ಲಿ ಹಿಸ್ಟರಿ ಕ್ರಿಯೇಟ್ ಮಾಡೋಕೆ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅಭಿನಯದ, ಬುಚಿ ಬಾಬು ನಿರ್ದೇಶನದ ‘ಪೆದ್ದಿ’ ಸಿನಿಮಾ ಜೂನ್ 4ರಂದು ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಸದ್ಯ ಚಿತ್ರದ ಬಿಗ್ ಪ್ರಮೋಷನ್‌ಗಾಗಿ ಚಿತ್ರತಂಡ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ್ದು, ಮೆಗಾ ಪ್ರೆಸ್‌ಮೀಟ್ ಆಯೋಜಿಸಲಾಗಿತ್ತು. ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್, ಟಾಲಿವುಡ್ ನಟ ರಾಮ್ ಚರಣ್ ಮತ್ತು ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಸಖತ್ ಹಲ್‌ಚಲ್ ಸೃಷ್ಟಿಸಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್. ವೇದಿಕೆ ಮೇಲೆ ಬರ್ತಿದ್ದಂತೆ ಎಲ್ಲರಿಗೂ ನಮಸ್ಕಾರ, ನಿಮ್ಮನ್ನು ನೋಡಿ ನನಗೆ ಸಂತೋಷ ಆಯಿತು ಅಂತ ಪಕ್ಕಾ ಕನ್ನಡದಲ್ಲೇ ಮಾತು ಆರಂಭಿಸಿ ಕನ್ನಡಿಗರ ಮನಸ್ಸು ಗೆದ್ದರು. ತಮಗೆ ಬೆಂಗಳೂರಿನ ರಾಮೇಶ್ವರಂ ಕೆಫೆ ಫುಡ್ ಹಾಗೂ ಗಡ್‌ಬಡ್ ಐಸ್‌ಕ್ರೀಮ್ ಅಂದ್ರೆ ಪ್ರಾಣ ಅನ್ನೋದನ್ನ ನೆನಪಿಸಿಕೊಂಡ ಜಾನ್ವಿ, ವೇಯ್ಟ್ ಲಾಸ್ ಟಿಪ್ಸ್ ಕೂಡ ಕೊಟ್ಟರು. ನಿಮಗೆ ತೂಕ ಕಡಿಮೆ ಮಾಡ್ಕೋಬೇಕಾ? ಹಾಗಾದ್ರೆ ರಾಮ್ ಚರಣ್ ಅವರ ಹಾಡಿಗೆ ಡ್ಯಾನ್ಸ್ ಮಾಡಿ, ಆಟೋಮೆಟಿಕ್ ಆಗಿ ಸಣ್ಣ ಆಗ್ತೀರಾ ಅಂತ ಹೇಳಿದ್ರು. ಜೊತೆಗೆ ನಾನು ಶಿವಣ್ಣ ಜೊತೆ ಒಂದು ಸಣ್ಣ ಸೀನ್‌ನಲ್ಲಿ ಮಾಡಿದ್ದೀನಿ. ಅದ್ರಲ್ಲೇ ಗೊತ್ತಾಯ್ತು ಅವರೆಷ್ಟು ಪವರ್‌ಫುಲ್ ಆಕ್ಟರ್ ಅಂತ. ಶಿವಣ್ಣ ಕಣ್ಣುಗಳು ತುಂಬಾ ಡೇಂಜರ್, ಅದನ್ನ ಹತ್ತಿರದಿಂದ ನೋಡಿದ್ದೀನಿ ಅಂತ ಸೆಂಚುರಿ ಸ್ಟಾರ್‌ಗೆ ಜೈ ಅಂದರು.

ಇನ್ನು ಪೆದ್ದಿಯಲ್ಲಿ ಗೌರ್ ನಾಯ್ಡು ಪಾತ್ರದಲ್ಲಿ ಅಭಿನಯಿಸಿರೋ ಶಿವರಾಜ್‌ಕುಮಾರ್ ವೇದಿಕೆ ಮೇಲೆ ಮಾತನಾಡುತ್ತಾ ರಾಮ್ ಚರಣ್ ಮೇಲಿರೋ ಪ್ರೀತಿಯನ್ನು ಬಿಚ್ಚಿಟ್ಟರು. ನಾನು ಮತ್ತು ಪುನೀತ್ ರಾಜ್‌ಕುಮಾರ್ ಹೇಗೆ ಇದ್ದೇವೋ, ಹಾಗೆಯೇ ನನಗೂ ಮತ್ತು ರಾಮ್ ಚರಣ್ ನಡುವೆ ಒಂದು ಅದ್ಭುತವಾದ ಪ್ರೀತಿಯ ಬಾಂಧವ್ಯವಿದೆ. ನಮ್ಮ ಕುಟುಂಬಕ್ಕೂ ಮತ್ತು ಚಿರಂಜೀವಿ ಅವರ ಫ್ಯಾಮಿಲಿಗೂ ತುಂಬಾನೇ ಆತ್ಮೀಯ ಸಂಬಂಧವಿದೆ. ಕರ್ನಾಟಕದಲ್ಲಿ ಯಾವುದೇ ಭಾಷೆಯ ಭೇದಭಾವವಿಲ್ಲ, ಇಲ್ಲಿನ ಜನರು ಎಲ್ಲಾ ಭಾಷೆಯನ್ನೂ ಪ್ರೀತಿಸ್ತಾರೆ ಎಂದರು. ಅಲ್ಲದೇ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಶಿವಣ್ಣ, ಪೆದ್ದಿ ಕೇವಲ ಸ್ಪೋರ್ಟ್ಸ್ ಸಿನಿಮಾ ಮಾತ್ರವಲ್ಲ, ಇದರಲ್ಲೊಂದು ಎಮೋಷನ್ ಇದೆ. ಚಿತ್ರದಲ್ಲಿ ತಂದೆ-ಮಗನ ಪ್ರೀತಿ ಸಖತ್ ಆಗಿದೆ, ಅದರಲ್ಲೂ ಚಿಕ್ಕಪ್ಪ ಗೈಡ್ ಮಾಡುವ ಸೀನ್ ಅಂತೂ ನನಗಂತೂ ತುಂಬಾ ಇಷ್ಟವಾಯ್ತು. ಈ ಸಿನಿಮಾದ ನಟನೆಗೆ ರಾಮ್ ಚರಣ್‌ಗೆ ನ್ಯಾಷನಲ್ ಅವಾರ್ಡ್ ಬರಲೇಬೇಕು ಅಂತ ಭವಿಷ್ಯ ನುಡಿಯುವ ಮೂಲಕ ಚರಣ್ ನಟನೆಯನ್ನು ಕೊಂಡಾಡಿದ್ದಾರೆ. ಹಾಗೆ ಜಾನ್ವಿಗೆ, ನಿಮ್ಮ ತಾಯಿ ಶ್ರೀದೇವಿಗಿಂತ ದೊಡ್ಡ ಮಟ್ಟದಲ್ಲಿ ಹೆಸರು ಮಾಡು ಎಂದು ನಟಿಗೆ ಶುಭ ಹಾರೈಸಿದ್ರು.

ಇನ್ನು ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮೈಕ್ ಹಿಡಿಯುತ್ತಿದ್ದಂತೆ ನೆಕ್ಸ್ಟ್ ಟೈಮ್ ಪಕ್ಕಾ ಕನ್ನಡದಲ್ಲೇ ಮಾತಾಡ್ತೀನಿ, ಈಗ ಸ್ವಲ್ಪ ಸ್ವಲ್ಪ ಗೊತ್ತು ಎನ್ನುತ್ತಾ ಕನ್ನಡಿಗರ ಚಪ್ಪಾಳೆ ಗಿಟ್ಟಿಸಿಕೊಂಡರು. ಪೆದ್ದಿ ಚಿತ್ರಕ್ಕಾಗಿ ಬರೋಬ್ಬರಿ ಎರಡು ವರ್ಷಗಳ ಕಾಲ ಕಠಿಣ ಪರಿಶ್ರಮ ಪಟ್ಟಿರುವುದಾಗಿ ಹೇಳಿದ ಚರಣ್, ವೇದಿಕೆಯಲ್ಲಿ ಶಿವರಾಜ್ ಕುಮಾರ್ ಸರ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದು ನನ್ನ ಜನ್ಮ ಪಾವನ ಅಂದ್ರು. ಇದೇ ವೇಳೆ ವೇದಿಕೆ ಮುಂಭಾಗದಲ್ಲಿದ್ದ ತನ್ನ ಪುಟ್ಟ ಅಭಿಮಾನಿಯೊಬ್ಬನನ್ನು ಸ್ಟೇಜ್ ಮೇಲಕ್ಕೆ ಕರೆಸಿಕೊಂಡ ರಾಮ್ ಚರಣ್, ಆತನನ್ನು ಪ್ರೀತಿಯಿಂದ ತಬ್ಬಿಕೊಂಡು, ಕ್ರಿಕೆಟ್ ಬ್ಯಾಟ್ ಮೇಲೆ ಪೆದ್ದಿ ಎಂದು ಆಟೋಗ್ರಾಫ್ ಹಾಕಿ ಕೊಡುವ ಮೂಲಕ ಫ್ಯಾನ್ ಮೊಮೆಂಟ್ ಹೈಲೈಟ್ ಮಾಡಿದ್ರು.

ಒಟ್ಟಿನಲ್ಲಿ, 1980ರ ದಶಕದ ಹಿನ್ನೆಲೆಯುಳ್ಳ, ಕ್ರಿಕೆಟ್, ಕುಸ್ತಿ ಹಾಗೂ ಓಟದ ರೇಸ್‌ನಂತಹ ಕ್ರೀಡೆಗಳ ಜೊತೆಗೆ ಭರಪೂರ ಕಮರ್ಷಿಯಲ್ ಎಮೋಷನ್ ಒಳಗೊಂಡಿರುವ ಪೆದ್ದಿ ಸಿನಿಮಾ  ಸಿನಿ ದುನಿಯಾದಲ್ಲಿ ಭಾರಿ ಹವಾ ಸೃಷ್ಟಿಸುತ್ತಿದೆ. ಚಿತ್ರದ ಟ್ರೈಲರ್ ಹಾಗೂ ಎ.ಆರ್. ರೆಹಮಾನ್ ಮ್ಯೂಸಿಕ್ ಈಗಾಗಲೇ ಧೂಳೆಬ್ಬಿಸುತ್ತಿದ್ದು, ಜೂನ್ 4ರಂದು ಬೆಳ್ಳಿಪರದೆ ಮೇಲೆ ಈ ಮೆಗಾ ಹಬ್ಬವನ್ನು ಕಣ್ಣುಂಬಿಕೊಳ್ಳಲು ಇಡೀ ಕರ್ನಾಟಕ ಕಾಯುತ್ತಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
Exit mobile version