ಕಿಚ್ಚನ ಕ್ಯಾಂಪ್‌ಗೆ ರಕ್ಷಿತಾ..ಗೆಳತಿ ಹೆಜ್ಜೆಗೆ ಬಾದ್‌ಷಾ ಕಿಚ್ಚ ಸುದೀಪ್‌‌‌ ಸಾಥ್..!

ಅಂದು ಏಳುಮಲೆ..ಈಗ ಪಬ್ ಓಪನಿಂಗ್‌ಗೆ ಸಾಥ್

Web 2025 11 26T181738.537

ಕಿಚ್ಚ-ದಚ್ಚು ಇಬ್ಬರಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ ಯಾರಿಗೆ ತುಂಬಾ ಕ್ಲೋಸ್ ಅಂದ್ರೆ ಒನ್ ಅಂಡ್ ಓನ್ಲಿ ದರ್ಶನ್ ಅಂತಾರೆ ಜನ. ಆದ್ರೀಗ ವರಸೆ ಬದಲಾಗಿದೆ. ಕಿಚ್ಚನ ಕ್ಯಾಂಪ್ ಸೇರಿದ್ದಾರೆ ರಕ್ಷಿತಾ ಪ್ರೇಮ್. ಗೆಳತಿ ಹಾಗೂ ಆಕೆಯ ಸಹೋದರ ರಾಣಾ ಹೊಸ ಹೆಜ್ಜೆಗೆ ಸ್ವತಃ ಬಾದ್‌ಷಾ ಸುದೀಪ್ ಅವ್ರೇ ಸಾಥ್ ನೀಡಿರೋದು ಇಂಟರೆಸ್ಟಿಂಗ್. ಏನು ಆ ಹೆಜ್ಜೆ ಅನ್ನೋ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ ನೋಡಿ.

ಸ್ಯಾಂಡಲ್‌ವುಡ್‌ನ ಕ್ರೇಜಿ ಕ್ವೀನ್ ರಕ್ಷಿತಾ ಇಂದಿಗೂ ಕನ್ನಡಿಗರ ಅಚ್ಚುಮೆಚ್ಚಿನ ನಟಿಮಣಿಯರಲ್ಲಿ ಒಬ್ಬರು. ಅದಕ್ಕೆ ಕಾರಣ ಅವ್ರು ಮಾಡಿದ ಸಿನಿಮಾಗಳು. ಕನ್ನಡದ ಜೊತೆ ಜೊತೆಗೆ ಪರಭಾಷೆಗಳಲ್ಲೂ ಮಿಂಚು ಹರಿಸಿದ ಪಾತ್ರಗಳು. ಅದ್ರಲ್ಲೂ ಅಪ್ಪು, ಕಿಚ್ಚ ಹಾಗೂ ದಚ್ಚುಗೆ ರಕ್ಷಿತಾ ಅಚ್ಚುಮೆಚ್ಚು. ಆದ್ರೆ ರಕ್ಷಿತಾಗೆ ಜಾಸ್ತಿ ಇಷ್ಟ ಅಂದ್ರೆ ಯಾರಪ್ಪಾ ಅಂತ ನೋಡಿದ್ರೆ ಒನ್ ಅಂಡ್ ಓನ್ಲಿ ಡಿಬಾಸ್ ದರ್ಶನ್ ಕಾಣಿಸ್ತಿದ್ರು.

ಕಿಚ್ಚನ ಕ್ಯಾಂಪ್‌ಗೆ ರಕ್ಷಿತಾ.. ಗೆಳತಿ ಹೆಜ್ಜೆಗೆ ಸುದೀಪ..!

ಅಂದು ಏಳುಮಲೆ..ಈಗ ಪಬ್ ಓಪನಿಂಗ್‌ಗೆ ಸಾಥ್

ಆದ್ರೆ ರಕ್ಷಿತಾ ಪ್ರೇಮ್ ಎಂದೂ ಕೂಡ ಸುದೀಪ್ ಜೊತೆಗಿನ ಸ್ನೇಹ ಬಾಂಧವ್ಯವನ್ನು ಕಳೆದುಕೊಂಡಿರಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಟ ದರ್ಶನ್ ಹತ್ಯೆ ಪ್ರಕರಣವೊಂದರಲ್ಲಿ ಜೈಲಲ್ಲಿ ಇದ್ದಾರೆ. ಹಾಗಾಗಿ ಇತ್ತೀಚೆಗೆ ಝೀ ಕನ್ನಡದಲ್ಲಿನ ಕಿರುತೆರೆ ಶೋಗಳನ್ನ ತೊರೆದ ಅವರು ಸದ್ಯದಲ್ಲೇ ಮಹತ್ವದ ಹೆಜ್ಜೆ ಇಡ್ತೀನಿ ಅಂದಿದ್ರು. ಆ ಹೆಜ್ಜೆಗೆ ಈಗ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ.

ನಾಗರಭಾವಿಯಲ್ಲಿ ನಟಿ ರಕ್ಷಿತಾ ತಮ್ಮ ಸಹೋದರ ಏಳುಮಲೆ ಚಿತ್ರದ ಹೀರೋ ರಾಣಾ ಜೊತೆಗೂಡಿ ಲೆವೆಲ್ಸ್ ಅನ್ನೋ ಪಬ್ ಆರಂಭಿಸಿದ್ದಾರೆ. ನಿನ್ನೆ ಅದ್ರ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮ ಇತ್ತು. ಅದಕ್ಕೆ ಚೀಫ್ ಗೆಸ್ಟ್ ಆಗಿ ಬಾದ್‌ಷಾ ಕಿಚ್ಚ ಸುದೀಪ್ ಬಂದು, ಗೆಳತಿಯ ಕನಸಿಗೆ ಸಾಥ್ ನೀಡಿದ್ದು ಇಂಟರೆಸ್ಟಿಂಗ್ ಅನಿಸಿತು. ಇದನ್ನ ಕಂಡು ಕಿಚ್ಚನ ಕ್ಯಾಂಪ್ ಸೇರಿದ್ರಾ ರಕ್ಷಿತಾ ಅನ್ನೋ ಮಾತುಗಳು ಕೂಡ ದಟ್ಟವಾಗಿ ಕೇಳಿಬರ್ತಿರೋದು ಇಂಪ್ರೆಸ್ಸೀವ್.

ರಕ್ಷಿತಾ-ರಾಣಾ ಹೊಸ ಹೆಜ್ಜೆಗೆ ಬಾದ್‌ಷಾ ಶುಭಾಶಯ..!

ಇದೇ ಕಾರಣಕ್ಕೆ ಕಿರುತೆರೆ ತೊರೆದ್ರಾ ಕ್ರೇಜಿಕ್ವೀನ್ ರಕ್ಷಿತಾ?

ಬಾವ ಜೋಗಿ ಪ್ರೇಮ್ ಅವರೇ ಇಂಟ್ರಡ್ಯೂಸ್ ಮಾಡಿದ ರಾಣಾ, ಏಕ್ ಲವ್ ಯಾ ಅನ್ನೋ ಚಿತ್ರದಿಂದ ಹೀರೋ ಆಗಿ ಲಾಂಚ್ ಆಗಿದ್ರು. ಆದ್ರೆ ಇತ್ತೀಚೆಗೆ ತರುಣ್ ಸುಧೀರ್ ನಿರ್ಮಾಣದ ಏಳುಮಲೆ ಸಿನಿಮಾದಿಂದ ಚಿತ್ರರಂಗದಲ್ಲಿ ಸ್ಟಾರ್ ಆಗುವ ಭರವಸೆ ಹುಟ್ಟಿಸಿದ್ರು ರಾಣಾ. ಇದೀಗ ಅಕ್ಕ ರಕ್ಷಿತಾ ಜೊತೆಗೂಡಿ ಪಬ್ ತೆರೆದಿದ್ದಾರೆ. ಅದಕ್ಕೆ ಸಾಕಷ್ಟು ಮಂದಿ ಚಿತ್ರರಂಗದ ಗಣ್ಯರು ಬಂದು ಸಾಥ್ ನೀಡಿದ್ದು ವಿಶೇಷ. ತರುಣ್ ಸುಧೀರ್-ಸೋನಾಲ್ ದಂಪತಿ, ಸುದೀಪ್, ದೀಪಿಕಾ ದಾಸ್, ದಿಶಾ ಮದನ್, ನವೀನ್ ಶಂಕರ್, ಅಮೃತಾ ಅಯ್ಯಂಗಾರ್, ಮೇಘನಾ ರಾಜ್, ರಾಗಿಣಿ, ಕಾರ್ತಿಕ್ ಶರ್ಮಾ ಹೀಗೆ ಸಾಲು ಸಾಲು ಗಣ್ಯರು ಮಂದಿ ಬಂದು ಶುಭ ಕೋರಿದ್ರು.

ಮುನಿಸು ಮರೆತ ಸುದೀಪ್-ಉಮಾಪತಿ ಕುಶಲೋಪರಿ

ಹೆಬ್ಬುಲಿ-2 ಬರುವ ನಿರೀಕ್ಷೆ.. ಕಿಚ್ಚನ ಫ್ಯಾನ್ಸ್‌ ದಿಲ್‌‌ಖುಷ್

ಲೆವೆಲ್ಸ್ ಪಬ್ ಓಪನಿಂಗ್ ಫಂಕ್ಷನ್‌‌‌ನಲ್ಲಿ ಕೆಆರ್‌‌ಜಿ ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಸೇರಿದಂತೆ ಉಮಾಪತಿ ಶ್ರೀನಿವಾಸ್ ಗೌಡ ಕೂಡ ಗಮನ ಸೆಳೆದರು. ಎಲ್ಲಕ್ಕಿಂತ ಹೆಚ್ಚಾಗಿ ಹೆಬ್ಬುಲಿ ಚಿತ್ರದ ಪ್ರೊಡ್ಯೂಸರ್ ಉಮಾಪತಿ ಜೊತೆ ಸುದೀಪ್ ಕೈ ಕುಲುಕಿ, ಅಪ್ಪಿಕೊಂಡು ತುಂಬಾ ಆಪ್ಯಾಯತೆಯಿಂದ ಮಾತನಾಡಿಸಿದ್ರು. ಈ ಮೂಲಕ 8 ವರ್ಷಗಳಿಂದ ಇದೆ ಎನ್ನಲಾಗ್ತಿದ್ದ ಅವ್ರ ನಡುವಿನ ಸಣ್ಣ ಮುನಿಸು ಮಾಯವಾಯ್ತು.

ಇದೆಲ್ಲವನ್ನ ಕಂಡಂತಹ ಸುದೀಪಿಯೆನ್ಸ್ ಅರೇ ಹೆಬ್ಬುಲಿ-2 ಬರುತ್ತಾ..? ಬರೋದಾದ್ರೆ ಬೇಗ ಕಿಕ್‌ಸ್ಟಾರ್ಟ್‌ ಆಗಲಿ ಅಂತಿದ್ದಾರೆ. ಸದಾ ಹಸನ್ಮುಖಿಯಾಗಿ ಯಾರು ಎಲ್ಲಿಗೇ ಕರೆದ್ರೂ ಹೋಗಿ, ಅವ್ರ ಬೆನ್ನಿಗೆ ನಿಂತು, ನಿಮ್ಮೊಂದಿಗೆ ನಾನಿದ್ದೇನೆ ಅಂತ ಶಕ್ತಿ ತುಂಬುವ ಶಕ್ತಿಕೇಂದ್ರ ಕಿಚ್ಚ. ಹಾಗಾಗಿ ಬೇದಭಾವ ಇಲ್ಲದೆ ಸುದೀಪ್ ಹೀಗೆ ಎಲ್ಲರೊಟ್ಟಿಗೆ ಬೆರೆಯುವ ಅವ್ರ ಗುಣಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು.

 

 

 

 

Exit mobile version