ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ..? ಇಲ್ಲಿದೆ ಗ್ಯಾರಂಟಿ ಆನ್ಸರ್

ಆಗುಂಬೆಯಲ್ಲಿ ಮನೆ.. ಅಲ್ಲೇ ಸೆಟಲ್ ಆಗಿರೋದ್ಯಾಕೆ ರಕ್ಷಿತ್..?!

ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ..

ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ ಎಲ್ಲಿದ್ದಾರೆ..? ಏನು ಮಾಡ್ತಿದ್ದಾರೆ..? ರಿಚರ್ಡ್ ಆಂಟನಿ ಸಿನಿಮಾ ಸೆಟ್ಟೇರುತ್ತಾ ಇಲ್ವಾ ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಗ್ಯಾರಂಟಿ ಉತ್ತರ ಸಮೇತ ಬಂದಿದ್ದೀವಿ. ಹೌದು.. ಅವ್ರ ಆಪ್ತಮಿತ್ರ ಪ್ರಮೋದ್ ಶೆಟ್ಟಿ ಆಫ್ಟರ್ ಎ ಲಾಂಗ್ ಟೈಮ್ ಗೆಳೆಯ ರಕ್ಷಿತ್ ಬಗ್ಗೆ ಮಾತನಾಡಿದ್ದಾರೆ. ಅವರು ಏನು ಹೇಳಿದ್ರು ಅನ್ನೋ ಎಕ್ಸ್‌‌ಕ್ಲೂಸಿವ್ ಸ್ಟೋರಿ ಇಲ್ಲಿದೆ.

ತಮ್ಮ ಜೀವನದ ಅತಿ ಅಮೂಲ್ಯವಾದ ಸಮಯವನ್ನ ವ್ಯರ್ಥ ಮಾಡಿಕೊಳ್ಳೋದು ಹೇಗೆ ಅನ್ನೋದನ್ನ ಬಹುಶಃ ರಕ್ಷಿತ್ ಶೆಟ್ಟಿಯನ್ನ ನೋಡಿದ್ರೆ ಅರ್ಥವಾಗುತ್ತೆ. ಹೌದು.. ಒಳ್ಳೆಯ ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕ ಅನಿಸಿಕೊಂಡು, ಪರಭಾಷಿಗರಿಂದಲೂ ಭೇಷ್ ಅನಿಸಿಕೊಂಡಿದ್ದ ಸಿಂಪಲ್ ಸ್ಟಾರ್ ಲೈಫ್‌ ಅನ್ನು ಬಹಳ ಹಗುರವಾಗಿ ತೆಗೆದುಕೊಂಡಂತಿದೆ. ಅದೇ ಕಾರಣದಿಂದ 2022ರ 777 ಚಾರ್ಲಿ ಹಾಗೂ 2023ರ ಸಪ್ತಸಾಗರದಾಚೆ ಎಲ್ಲೋ ಸೈಡ್ ಎ, ಸೈಡ್ ಬಿ ಬಳಿಕ ಗಾಯಬ್ ಆಗಿಬಿಟ್ಟಿದ್ದಾರೆ.

ರಕ್ಷಿತ್ ಶೆಟ್ಟಿ ನಾಪತ್ತೆಯಾಗಿ 3 ವರ್ಷಗಳಾಗ್ತಿದೆ. ಎಲ್ಲಿದ್ದಾರೆ..? ಏನು ಮಾಡ್ತಿದ್ದಾರೆ..? ಅವ್ರ ಡ್ರೀಮ್ ಪ್ರಾಜೆಕ್ಟ್ ರಿಚರ್ಡ್ ಆಂಟನಿ ಸಿನಿಮಾದ ಕಾರ್ಯಗಳು ಎಲ್ಲಿಯ ತನಕ ಬಂದವು..? ಹೀಗೆ ಸಾಕಷ್ಟು ಪ್ರಶ್ನೆಗಳಿಗೆ ಉತ್ತರವೇ ಇಲ್ಲದಂತಾಗಿತ್ತು. ಆದ್ರೆ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ರಕ್ಷಿತ್ ಆಪ್ತಮಿತ್ರ ಪ್ರಮೋದ್ ಶೆಟ್ಟಿ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ರಿಚರ್ಡ್ ಆಂಟನಿ ಸಿನಿಮಾ ಹಾಗೂ ರಕ್ಷಿತ್ ಎರಡರ ಬಗ್ಗೆ ಇದೇ ಫಸ್ಟ್ ಟೈಂ ಓಪನ್ ಆಗಿ ಮಾತನಾಡಿದ್ದಾರೆ ಶೆಟ್ರು.

ಇದನ್ನ ಹೊರತು ಪಡಿಸಿ.. ನಮಗೆ ಬಂದ ಮಾಹಿತಿ ಪ್ರಕಾರ ರಕ್ಷಿತ್ ಶೆಟ್ಟಿ.. ಆಗುಂಬೆಯಲ್ಲಿ ಮನೆ ಮಾಡಿದ್ದಾರಂತೆ. ಯೆಸ್.. ಪ್ರಕೃತಿಯ ಮಡಿಲಲ್ಲಿ, ಜನ ಜಂಗುಳಿಯಿಂದ ದೂರವಾಗಿ ನೆಲೆಸಿರೋ ಅವರು.. ಅಲ್ಲೇ ಸಿನಿಮಾದ ಸ್ಕ್ರಿಪ್ಟ್ ಹಾಗೂ ಡೈಲಾಗ್ಸ್ ರೈಟಿಂಗ್‌‌ನಲ್ಲಿ ತೊಡಗಿಸಿಕೊಂಡಿದ್ದಾರಂತೆ. ವಿಶೇಷ ಅಂದ್ರೆ ರಕ್ಷಿತ್ ಶೆಟ್ಟಿ ಆ್ಯಂಡ್ರಾಯ್ಡ್ ಫೋನ್ ಕೂಡ ಬಳಸ್ತಿಲ್ಲವಂತೆ. ಬೇಸಿಕ್ ಮೊಬೈಲ್‌‌ನ ಕುಟುಂಬಸ್ಥರ ಜೊತೆ ಸಂಪರ್ಕಕ್ಕಾಗಿ ಬಳಸ್ತಿದ್ದು, ಎಲ್ಲಾ ಜಂಜಾಟಗಳಿಂದ ಪ್ರತ್ಯೇಕವಾಗಿ ಸರಳ ಜೀವನ ನಡೆಸ್ತಿದ್ದಾರೆ ಎನ್ನಲಾಗಿದೆ.

ಅದಕ್ಕಿಂತ ಮುಖ್ಯವಾಗಿ.. ಆರ್‌‌ಆರ್ ನಗರದಲ್ಲಿ ತಮ್ಮ ಕನಸಿನ ಮನೆ ನಿರ್ಮಾಣಕ್ಕೆ ಮುಂದಾಗಿದ್ದ ರಕ್ಷಿತ್ ಶೆಟ್ಟಿ.. ಅದು ಕಂಪ್ಲೀಟ್ ಆಗುವ ಮೊದಲೇ ಸಾಲಗಳ ಸುಳಿಗೆ ಸಿಲುಕಿಕೊಂಡರು. ಹಾಗಾಗಿಯೇ ತನ್ನ ಮನೆ, ಸ್ಟುಡಿಯೋ, ಕಚೇರಿಗಾಗಿ ಕಟ್ಟುತ್ತಿದ್ದ ಆ ಭವ್ಯ ಬಂಗಲೆ ಅರ್ಧಕ್ಕೇ ನಿಂತಿತ್ತು. ಗಿಡಗಳೆಲ್ಲಾ ಬೆಳೆದು ಪಾಳು ಬಿದ್ದಿತ್ತು. ಇನ್‌ಫ್ಯಾಕ್ಟ್ ಬ್ಯಾಂಕ್‌‌ವನರು ಅದನ್ನ ಹರಾಜಿಗೆ ಹಾಕಿದ್ರು. ಅಲ್ಲಿ 17 ಕೋಟಿಗೆ ಆಕ್ಷನ್‌‌‌‌ನಲ್ಲಿ ಬಿಡ್ಡಿಂಗ್ ಮಾಡಲಾಗಿದೆ. ಆದ್ರೆ ಅಷ್ಟರಲ್ಲಿ ರಕ್ಷಿತ್ ಕೈ ಸೇರಿದ್ದು ಮಾತ್ರ ಜಸ್ಟ್ ಒಂದೂವರೆ ಕೋಟಿ ರೂಪಾಯಿ ಅಷ್ಟೇ. ಉಳಿದ 15.5 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತ ಲೋನ್ ಕ್ಲಿಯರೆನ್ಸ್‌ಗೆ ಹೋಗಿದೆ ಎನ್ನಲಾಗ್ತಿದೆ.

ಅದೆಲ್ಲಾ ಏನೇ ಇರಲಿ.. ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್.. ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ಕೊಟ್ಟಂತಹ ರಕ್ಷಿತ್ ಶೆಟ್ಟಿ ಆದಷ್ಟು ಬೇಗ ಚಿತ್ರರಂಗಕ್ಕೆ ವಾಪಸ್ ಆಗಬೇಕಿದೆ. ಅದೆಷ್ಟೋ ಮಂದಿ ಸಿನಿಮೋತ್ಸಾಹಿಗಳಿಗೆ ರೋಲ್ ಮಾಡೆಲ್ ಆಗಿದ್ದ ಅವರು.. ಹೀಗೆ ನಾಪತ್ತೆ ಆಗಿಬಿಟ್ರೆ ಅದು ಅವರಿಗೂ ಲಾಸ್.. ಚಿತ್ರರಂಗಕ್ಕೆ ಅದಕ್ಕಿಂತ ದೊಡ್ಡ ಲಾಸ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version