ದಿವಂಗತ ಬಾಲಿವುಡ್ ನಟಿ ಶ್ರೀದೇವಿಯನ್ನ ಮದ್ವೆ ಆಗಬೇಕಿತ್ತಂತೆ ಸೂಪರ್ ಸ್ಟಾರ್ ರಜನಿಕಾಂತ್. ಮದುವೆ ಪ್ರಪೋಸಲ್‌ಗೆ ಅಂತ ಅವ್ರ ಮನೆಗೆ ತೆರಳಿದ್ದ ತಲೈವಾಗೆ ಅಂದು ಅಪಶಕುನ ಎದುರಾಗಿದೆ. ಅದೇ ಕಾರಣದಿಂದ ಅವ್ರು ಮತ್ತೆಂದೂ ಆ ಮದ್ವೆ ಪ್ರಸ್ತಾಪವನ್ನ ಎಲ್ಲೂ ಮಾಡಲೇ ಇಲ್ಲ ಅನ್ನೋದು ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಇಷ್ಟಕ್ಕೂ ಅಂದು ಅಂಥದ್ದೇನು ನಡೀತು ಅಂತೀರಾ..?
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅತಿಲೋಕ ಸುಂದರಿ ಶ್ರೀದೇವಿಗೆ 13 ವರ್ಷಗಳ ವಯಸ್ಸಿನ ಅಂತರವಿತ್ತು. ಇಬ್ಬರೂ ಒಟ್ಟೊಟ್ಟಿಗೆ 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಅಂದ್ರೆ ನೀವು ನಂಬಲೇಬೇಕು. ಮದ್ರಾಸ್‌ನ ಮೀನಂಪಟ್ಟಿ ಮೂಲದ ಶ್ರೀದೇವಿ, ಹೇಳಬೇಕು ಅಂದ್ರೆ ತಲೈವಾ ರಜನಿಕಾಂತ್‌ಗಿಂತ ವಯಸ್ಸಲ್ಲಿ ಕಿರಿಯರಾದ್ರೂ, ನಟನೆಯಲ್ಲಿ ಸೀನಿಯರ್. ಬಾಲನಟಿಯಾಗಿ 60ರ ದಶಕದಲ್ಲೇ ಬಣ್ಣ ಹಚ್ಚಿದ್ರು ಶ್ರೀದೇವಿ.
ಶ್ರೀದೇವಿ- ರಜನಿಕಾಂತ್ ಶುಭಕಾರ್ಯಕ್ಕೆ ಅಪಶಕುನ ಅಡ್ಡಿ..!
20ಕ್ಕೂ ಅಧಿಕ ಸಿನಿಮಾಗಳಲ್ಲಿ ಈ ಜೋಡಿ ಮಾಡಿತ್ತು ಮೋಡಿ
ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿ..ಹೀಗೆ ಭಾರತೀಯ ಚಿತ್ರರಂಗದ ಬಹುತೇಕ ಭಾಷೆಗಳಲ್ಲಿ ಶ್ರೀದೇವಿ-ರಜನಿಕಾಂತ್ ಜೋಡಿ ಎಲ್ಲರ ಹಾರ್ಟ್ ಫೇವರಿಟ್ ಅನಿಸಿಕೊಂಡಿತ್ತು. ಯಾಕಂದ್ರೆ ಇವ್ರ ಕೆಮಿಸ್ಟ್ರಿ ಆನ್ ಸ್ಕ್ರೀನ್ ಚೆನ್ನಾಗಿ ವರ್ಕ್ ಆಗ್ತಿತ್ತು. ಅದೇ ಕಾರಣದಿಂದ ನಿರ್ದೇಶಕ, ನಿರ್ಮಾಪಕರುಗಳು ಕೂಡ ಇವ್ರನ್ನ ಪದೇ ಪದೆ ಒಟ್ಟೊಟ್ಟಿಗೆ ಕಾಸ್ಟ್ ಮಾಡ್ತಿದ್ರು. ಹಾಗಾಗಿಯೇ 1976ರಿಂದ 1986ರ ವೇಳೆಗೆ ಇಬ್ಬರೂ 20 ಪ್ಲಸ್ ಮೂವೀಸ್‌ನಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ರು.
ಅಂದು ಕರೆಂಟ್ ಹೋಗಿಲ್ಲ ಅಂದಿದ್ರೆ ಆಗ್ತಿತ್ತು ಮದ್ವೆ ನಿಶ್ಚಯ..!
ರಟ್ಟಾಯ್ತು ಇಲ್ಲಿಯವರೆಗೆ ಗುಟ್ಟಾಗಿದ್ದ ತಲೈವಾ ಲವ್ ಸ್ಟೋರಿ
ನೋಡೋಕೆ ಸೌಂದರ್ಯ ದೇವತೆಯಂತಿದ್ದ ಶ್ರೀದೇವಿ ಮೇಲೆ ರಜನಿಕಾಂತ್‌ಗೆ ಲವ್ ಆಗಿತ್ತಂತೆ. ಆಕೆಯನ್ನ ಮದ್ವೆ ಆಗುವ ಮೂಲಕ ತಮ್ಮ ಮನೆಯ ಮಹಾಲಕ್ಷ್ಮೀಯಾಗಿ ಮನೆ ತುಂಬಿಸಿಕೊಳ್ಳುವ ಕನಸು ಕಂಡಿದ್ದರಂತೆ. ಅದೇ ಕಾರಣದಿಂದ ಮದ್ರಾಸ್‌ನಲ್ಲಿ ಹೊಸದಾಗಿ ಮನೆ ಕಟ್ಟಿದ್ದ ಶ್ರೀದೇವಿ ಮನೆಗೆ ಮದುವೆ ಪ್ರಪೋಸಲ್‌ಗೆ ಅಂತ ತೆರಳಿದ್ದರಂತೆ ತಲೈವಾ ರಜನಿಕಾಂತ್. ಇನ್ನೇನು ನಟಿ ಶ್ರೀದೇವಿ ತಾಯಿ ಬಳಿ ರಜನಿ ಮದ್ವೆ ಪ್ರಸ್ತಾಪ ಮಾಡ್ಬೇಕು ಅನ್ನೋ ಅಷ್ಟರಲ್ಲಿ ಪವರ್ ಕಟ್ ಆಯ್ತಂತೆ. ಶುಭಕಾರ್ಯದ ಬಗ್ಗೆ ಮಾತಾಡೋಕೆ ಬಂದ್ರೆ ಕರೆಂಟ್ ಹೋಗ್ಬಿಡ್ತಲ್ವಾ..? ಇದು ನಿಜಕ್ಕೂ ಅಪಶಕುನ. ಹೀಗೆ ಆಗಬಾರದಿತ್ತು ಅಂತ ಮತ್ತೆಂದೂ ಶ್ರೀದೇವಿಯನ್ನ ಮದ್ವೆ ಆಗುವ ಹಾಗೂ ಮದ್ವೆ ಪ್ರಪೋಸಲ್ ಮಾಡುವ ಕೆಲಸ ಮಾಡಲೇ ಇಲ್ವಂತೆ ರಜನಿ.
ಈ ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದ್ದು, ಬಹುಭಾಷಾ ನಟಿ, ಪದ್ಮಶ್ರೀ ಪುರಸ್ಕೃತೆ ಶ್ರೀದೇವಿ ಈಗ ಇಲ್ಲ ಅನ್ನೋದೇ ಬೇಸರದ ಸಂಗತಿ. ಬಾಲಿವುಡ್‌ನ ಖ್ಯಾತ ನಿರ್ಮಾಪಕ ಬೋನಿ ಕಪೂರ್‌ನ ಕೈ ಹಿಡಿಯೋ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು ಶ್ರೀದೇವಿ. ಅದಾದ ಬಳಿಕ 2018ರಲ್ಲಿ ದುಬೈನ ಬಾತ್ ಟಬ್‌ನಲ್ಲಿ ಮುಳುಗಿ ಅಸಾಧಾರಣ ಸಾವನ್ನಪ್ಪಿದ್ದು ಗೊತ್ತೇಯಿದೆ. ಇತ್ತ ರಜನಿಕಾಂತ್ ಆಕೆ ಬೋನಿ ಕಪೂರ್‌ನ ಮದ್ವೆ ಆಗೋಕೆ ಮೊದಲೇ ಲತಾ ಅವರನ್ನ ಕೈ ಹಿಡಿಯೋ ಮೂಲಕ ಹೊಸ ಬಾಳಿಗೆ ಕಾಲಿಟ್ಟಿದ್ದರು. ಒಟ್ಟಾರೆ ಅಂದು ಐದು ನಿಮಿಷಗಳ ಕಾಲ ಪವರ್ ಕಟ್ ಆಗಿರಲಿಲ್ಲ ಅಂದಿದ್ರೆ, ಶ್ರೀದೇವಿ-ರಜನಿಕಾಂತ್ ಸತಿ-ಪತಿಗಳಾಗಿ ಇರ್ತಿದ್ರು ಅನ್ನೋದು ಮಾತ್ರ ಕೇಳೋಕೆ ಇಂಟರೆಸ್ಟಿಂಗ್ ಆಗಿದೆ.
