ತಲೈವಾ ‘ಕೂಲಿ’ ಅಡ್ಡಾದಲ್ಲಿ ರೆಡ್ ಜಿಲೇಬಿ ಮೋನಿಕಾ..! 

ಅಂದು ಮಿಲ್ಕಿಬ್ಯೂಟಿ ತಮನ್ನಾ.. ಇಂದು ಪೂಜಾ ಹೆಗಡೆ

Your paragraph text (19)

ತಲೈವಾ ರಜನೀಕಾಂತ್ ಕೂಲಿ ಅಡ್ಡಾಗೆ ಚಾರ್ಟ್‌‌ಬಸ್ಟರ್ ಕ್ವೀನ್ ಪೂಜಾ ಹೆಗ್ಡೆ ಎಂಟ್ರಿ ಕೊಟ್ಟಿದ್ದಾರೆ. ಆಕೆಯ ಅಂದ, ಚೆಂದ, ವೈಯ್ಯಾರಕ್ಕೆ ಬೋಲ್ಡ್ ಆಗಿರೋ ಕೂಲಿಗಳು, ಆ ರೆಡ್ ಜಿಲೇಬಿ ಜೊತೆ ಸ್ಟೆಪ್ಸ್ ಕೂಡ ಹಾಕಿ ದಣಿವಾರಿಸಿಕೊಂಡಿದ್ದಾರೆ. ಅಂದು ತಮನ್ನಾ, ಇಂದು ಪೂಜಾ ಕಲರ್‌‌ಫುಲ್ ಸೆಟ್, ಬಿಂದಾಸ್ ಸ್ಟೆಪ್ಸ್ ಝಲಕ್ ನಿಮ್ಮ ಮುಂದೆ.

ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ಕೂಲಿ ಸಿನಿಮಾದ ತಾರಾಗಣ ದಿನದಿಂದ ದಿನಕ್ಕೆ ದೊಡ್ಡದಾಗ್ತಾ ಹೋಗ್ತಿದೆ. ಹೌದು, ಈಗಾಗ್ಲೇ ತಲೈವಾ ರಜನಿ ಜೊತೆಗೆ ಆಮೀರ್ ಖಾನ್, ಉಪೇಂದ್ರ, ನಾಗಾರ್ಜುನ್ ಅಂತಹ ಘಟಾನುಘಟಿಗಳು ನಟಿಸಿರೋದು ರಿವೀಲ್ ಆಗಿದೆ. ನಾಯಕನಟಿಯಾಗಿ ಶ್ರುತಿ ಹಾಸನ್ ಇದ್ದು, ಇದೀಗ ಮತ್ತೊಬ್ಬ ಹಾಟ್ ಗ್ಲಾಮರ್ ಡಾಲ್ ಎಂಟ್ರಿ ಕೊಟ್ಟಿದ್ದಾರೆ ಅವರೇ ಚಾರ್ಟ್‌ಬಸ್ಟರ್ ಕ್ವೀನ್ ಪೂಜಾ ಹೆಗಡೆ.

ADVERTISEMENT
ADVERTISEMENT

ಮೋನಿಕಾ ಪಾತ್ರದಲ್ಲಿ ಸ್ಪೆಷಲ್ ಸಾಂಗ್ ಒಂದಕ್ಕೆ ಸೊಂಟ ಬಳುಕಿಸಿರೋ ಪೂಜಾ, ಕೂಲಿ ಅಡ್ಡಾದಲ್ಲಿ ಕೂಲಿಗಳ ದಣಿವಾರಿಸೋ ರೇಂಜ್‌ಗೆ ಮೈ ಮಾಟ ತೋರಿದ್ದಾರೆ. ರೆಡ್ ಜಿಲೇಬಿಯಂತೆ ಕಂಗೊಳಿಸಿರೋ ಪೂಜಾ ಸಿಕ್ಕಾಪಟ್ಟೆ ಹಾಟ್ ಆ್ಯಂಡ್ ಬೋಲ್ಡ್ ಲುಕ್‌‌ನಲ್ಲಿ ಕಿಕ್ ಕೊಟ್ಟಿದ್ದಾರೆ. ಪೂಜಾ ಕುಣಿತ ಯಾವ ಐಟಂ ಸಾಂಗ್‌ಗೂ ಕಮ್ಮಿ ಇಲ್ಲ. ಐಟಂ ಡ್ಯಾನ್ಸರ್‌‌ಗಳೇ ಸೈಡ್‌‌ಗೆ ಹೋಗುವ ರೇಂಜ್‌ಗೆ ಗ್ಲ್ಯಾಮರ್‌‌ನ ತೋರ್ಪಡಿಸಿದ್ದಾರೆ.

ಈ ಹಿಂದೆ ಜೈಲರ್‌‌ನಲ್ಲಿ ಮಿಲ್ಕಿಬ್ಯೂಟಿ ತಮನ್ನಾ ಏಯ್ ನುವ್ ಕಾವಾಲಯ್ಯ ಅಂತ ಕುಣಿದಿದ್ರು. ಆ ಹಾಡಿನಿಂದ ಆ ಸಿನಿಮಾದ ಮೈಲೇಜ್ ಕೂಡ ಹೆಚ್ಚಿತ್ತು. ಗ್ರೀನ್ ಹಾಗೂ ಬ್ಲ್ಯಾಕ್ ಕಾಸ್ಟ್ಯೂಮ್‌‌‌ನಲ್ಲಿ ತಮನ್ನಾ ಮಿಂಚಿದ್ರೆ, ರೆಡ್ ಅಂಡ್ ರೆಡ್‌‌ನಲ್ಲಿ ಪೂಜಾ ಸೌಂದರ್ಯ ಪ್ರದರ್ಶಿಸಿದ್ದಾರೆ. ಇದು ಕೂಲಿ ಚಿತ್ರದ ಸ್ಟ್ರೆಂಥ್ ಹೆಚ್ಚಿಸಿದೆ. ಈ ಹಾಡು ನೋಡೋಕೆ ಅಂತಲೇ ಒಂದು ವರ್ಗದ ಮಂದಿ ಥಿಯೇಟರ್‌ಗೆ ಹೋಗಲಿದ್ದಾರೆ. ಲೋಕೇಶ್ ಕನಕರಾಜ್‌ರ ಕೂಲಿ ಇದೇ ಆಗಸ್ಟ್ 14ಕ್ಕೆ ವರ್ಲ್ಡ್‌ವೈಡ್ ಬಿಗ್‌‌ಸ್ಕ್ರೀನ್‌ಗೆ ಎಂಟ್ರಿ ಕೊಡ್ತಿದೆ.

Exit mobile version