ರಾಜಮೌಳಿ ವಾರಣಾಸಿ ವರ್ಲ್ಡ್‌ನಲ್ಲಿ ಆಫ್ರಿಕಾ, ಅಂಟಾರ್ಟಿಕಾ..!

ಸ್ಯಾರಿಯಲ್ಲಿ ದೇಸಿ ಗರ್ಲ್‌ ಪ್ರಿಯಾಂಕಾ ಚೋಪ್ರಾ ಕಮಾಲ್

ರೋಹಿಣಿ ಆಚಾರ್ಯ (12)

ದಿ ವೆಯ್ಟ್ ಈಸ್ ಓವರ್.. ರಾಜಮೌಳಿಯ ನೆಕ್ಸ್ಟ್ ವೆಂಚರ್ ವಾರಣಾಸಿ ಟೀಸರ್ ರಿವೀಲ್ ಆಗಿದೆ. ರಾಮೋಜಿರಾವ್ ಫಿಲ್ಮ್‌ಸಿಟಿಯಲ್ಲಿ ನಡೆದ ಅದ್ಧೂರಿ ಇವೆಂಟ್‌‌‌ನಿಂದ ಮಹೇಶ್ ಬಾಬು, ದೇಸಿ ಗರ್ಲ್‌ ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಇಡೀ ವಿಶ್ವ ಸಿನಿದುನಿಯಾ ಹುಬ್ಬೇರುವಂತೆ ಮಾಡಿದ್ದಾರೆ. ಇಷ್ಟಕ್ಕೂ ವಾರಣಾಸಿ ಕಥೆ ಏನು..? ಆಫ್ರಿಕಾ, ಅಂಟಾರ್ಟಿಕಾ, ರಾಮ, ರುದ್ರನಿಗೆ ಏನು ಕನೆಕ್ಷನ್ ಅನ್ನೋದನ್ನ ಇವೆಂಟ್ ಹೈಲೈಟ್ಸ್ ಜೊತೆ ಹೇಳ್ತೀವಿ. ಈ ಸ್ಟೋರಿ ನೋಡಿ.

ಇದು ಬಾಹುಬಲಿ, RRR ಚಿತ್ರಗಳ ಮೂಲಕ ಇಡೀ ವಿಶ್ವವೇ ಭಾರತೀಯ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ರಾಜಮೌಳಿಯ ಮುಂದಿನ ಚಿತ್ರದ ಟೀಸರ್ ಝಲಕ್. ಸಿನಿಮಾಗೆ ವಾರಣಾಸಿ ಅನ್ನೋ ಟೈಟಲ್ ಇಟ್ಟಿರೋ ಮೌಳಿ, ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಲಕ್ಷಾಂತರ ಮಂದಿಯ ಸಮಕ್ಷಮದಲ್ಲಿ ಲಾಂಚ್ ಮಾಡಿದ ಟೀಸರ್ ಆಗಿದೆ.

ರಾಜಮೌಳಿ ವಾರಣಾಸಿ ವರ್ಲ್ಡ್‌ನಲ್ಲಿ ಆಫ್ರಿಕಾ, ಅಂಟಾರ್ಟಿಕಾ

ರಾಮ, ರುದ್ರ.. ಮಹೇಶ್ ಮಹಿಮೆ..

ವಾರಣಾಸಿ ಇವೆಂಟ್ ಹೈಲೈಟ್ಸ್

ಸೂಪರ್ ಸ್ಟಾರ್ ಮಹೇಶ್ ಬಾಬು SSMB29 ಸಿನಿಮಾದ ಬಗ್ಗೆ ಇಲ್ಲಿಯವರೆಗೆ ಎಲ್ಲಿಲ್ಲದ ಕೌತುಕ ಇತ್ತು. ಇದೀಗ ಅದ್ರ ಟೈಟಲ್ ಹಾಗೂ ಕಾನ್ಸೆಪ್ಟ್ ಟೀಸರ್‌‌ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ. ಸಿನಿಮಾಗೆ ವಾರಣಾಸಿ ಅನ್ನೋ ಟೈಟಲ್ ಇಟ್ಟಿರೋ ಮೌಳಿ, ಹೊಸ ಪ್ರಪಂಚವನ್ನೇ ಇಂಟ್ರಡ್ಯೂಸ್ ಮಾಡಿದ್ದಾರೆ. ವಾರಣಾಸಿಯ ಮಣಿಕರ್ಣಿಕಾ ಘಾಟ್‌‌‌ನಿಂದ ಹಿಡಿದು, ಆಫ್ರಿಕಾ, ಅಂಟಾರ್ಟಿಕಾವರೆಗೂ ಅದನ್ನ ವಿಸ್ತರಿಸಿದ್ದಾರೆ. ರಾಮಾಯಣದಲ್ಲಿ ಶ್ರೀರಾಮ ಲಂಕೇಶ್ವರನಿಗೆ ಮುಕ್ತಿ ನೀಡುವವರೆಗೆ ಈ ಸಿನಿಮಾ ವಿಸ್ತರಿಸಿರೋದು ವಿಶೇಷ.

ಇಲ್ಲಿ ಶ್ರೀರಾಮ ಹಾಗೂ ರುದ್ರನಾಗಿ ಮಹೇಶ್ ಬಾಬು ಮಿಂಚುತ್ತಿದ್ದಾರೆ. ವಾರಣಾಸಿ ಚಿತ್ರದ ಸುಮಾರು 60 ದಿನಗಳ ಬಿಗ್ ಶೆಡ್ಯೂಲ್ ಮುಗಿಸಿರೋ ಮೌಳಿ, ಅದರಲ್ಲಿ ರಾಮನ ಎಪಿಸೋಡ್ ಸೆರೆಹಿಡಿದಿದ್ದಾರಂತೆ. ಇದು ಪ್ರಿನ್ಸ್ ಮಹೇಶ್ ಬಾಬು ಜೊತೆ ರಾಜಮೌಳಿ ಕರಿಯರ್‌‌ನ ಥ್ರಿಲ್ಲಿಂಗ್ ಎಪಿಸೋಡ್‌‌ಗಳಲ್ಲಿ ಒಂದಾಗಲಿದೆಯಂತೆ. ರಾಮಾಯಣ, ಮಹಾಭಾರತದ ಬಗ್ಗೆ ಮೊದಲಿನಿಂದಲೂ ಒಲವಿರೋ ಜಕ್ಕನ್ನನಿಗೇ ಗೊತ್ತಿಲ್ಲದಂತೆ ವಾರಣಾಸಿ ಚಿತ್ರಕ್ಕೆ ರಾಮಾಯಣ ಟಚ್ ನೀಡಲಾಗಿದೆಯಂತೆ.

ಬಸವ ಏರಿ ಬಂದ ಪ್ರಿನ್ಸ್‌‌‌.. ಕಾಸ್ಟ್ಯೂಮ್, ಖದರ್ & ಪವರ್

ಸ್ಯಾರಿಯಲ್ಲಿ ದೇಸಿ ಗರ್ಲ್‌ ಪ್ರಿಯಾಂಕಾ ಚೋಪ್ರಾ ಕಮಾಲ್

ಬಸವ ಏರಿ ರುದ್ರನ ಖದರ್‌‌ನಲ್ಲೇ ಪವರ್‌‌ಫುಲ್ ಎಂಟ್ರಿ ಕೊಟ್ಟ ಪ್ರಿನ್ಸ್ ಮಹೇಶ್ ಬಾಬು, ತಮ್ಮ ಕಾಸ್ಟ್ಯೂಮ್ಸ್ ವಿಚಾರ ರಾಜಮೌಳಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಮುಕ್ತವಾಗಿ ಮಾತನಾಡಿದ್ರು. ದೇಸಿ ಗರ್ಲ್‌ ಪ್ರಿಯಾಂಕಾ ಚೋಪ್ರಾ ಟ್ರೆಡಿಷನಲ್ ಲುಕ್‌‌ನಲ್ಲಿ ಸ್ಯಾರಿ ಮೂಲಕ ಎಲ್ಲರ ಹಾರ್ಟ್‌ ಗೆದ್ದರು. ಇನ್ನು ಬ್ಲ್ಯಾಕ್ ಅಂಡ್ ಬ್ಲ್ಯಾಕ್‌‌ನಲ್ಲಿ ವಿಲನ್ ಕುಂಭ ಪಾತ್ರದಾರಿ ಪೃಥ್ವಿರಾಜ್ ಗಮನ ಸೆಳೆದರು.

2027ಕ್ಕೆ ಈ ಸಿನಿಮಾ ತೆರೆಗಪ್ಪಳಿಸಲಿದ್ದು, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಈ ಚಿತ್ರಕ್ಕೆ ಕಥೆಯನ್ನ ಬರೆದಿದ್ದಾರೆ. ಅವರು ಕೂಡ ಸಿನಿಮಾದ ಬಗ್ಗೆ ಹಾಗೂ ಮಹೇಶ್ ಬಾಬು ಆ್ಯಕ್ಷನ್ ಸೀಕ್ವೆನ್ಸ್‌‌ವೊಂದರ ಬಗ್ಗೆ ಮಾತನಾಡಿದ್ರು. ಅಲ್ಲದೆ, ಮಹೇಶ್ ಫ್ಯಾನ್ಸ್ ಹೃದಯಗಳಲ್ಲಿ ಫ್ಲ್ಯಾಟ್ ಖರೀದಿಸಿರೋ ಎಂ ಎಂ ಕೀರವಾಣಿ ಕೂಡ ಚಿತ್ರದ ಮೈಂಡ್ ಬ್ಲೋಯಿಂಗ್ ಅಂಶಗಳ ಬಗ್ಗೆ ಸಾಕಷ್ಟು ವಿಷಯಗಳನ್ನ ಪ್ರಸ್ತಾಪಿಸಿದರು.

ಒಟ್ಟಾರೆ ನಮ್ಮ ಹಿಂದೂ ಸಂಸ್ಕೃತಿಯ ತಾಯಿ ಬೇರುಗಳಲ್ಲಿ ಒಂದಾದ ರಾಮಾಯಣದ ಕಥೆಗೆ ಟಚ್ ಕೊಟ್ಟು, ವಾರಣಾಸಿ ಸಿನಿಮಾನ ಕಾಶಿಯಲ್ಲೇ ಚಿತ್ರಿಸಿ, ಪ್ರೇಕ್ಷಕರಿಗೆ ಉಣಬಡಿಸೋಕೆ ಸಜ್ಜಾಗಿರೋ ರಾಜಮೌಳಿಯ ಸಾಹಸ ಮೆಚ್ಚಲೇಬೇಕು. ಗ್ಲೋಬ್ ಟ್ರಾಟರ್ ಕಾನ್ಸೆಪ್ಟ್‌‌ನಡಿ ಸರ್ವಾಂತರ್ಯಾಮಿಯ ಟೈಮ್ ಟ್ರಾವೆಲ್ ಹಾಗೂ ಗ್ಲೋಬ್ ಟ್ರಾವೆಲ್‌‌‌ ಕಥೆ ಇದಾಗಿದ್ದು, ಇದು ಡಿವೈನ್ ಫೀಲ್ ಜೊತೆ ಮತ್ತೊಂದು ಮಹಾದೃಶ್ಯಕಾವ್ಯವಾಗಿ ಹೊರಹೊಮ್ಮಲಿದೆ.

 

Exit mobile version