ತೆಲುಗು ಚಿತ್ರರಂಗದ ಪಾಲಿಗೆ ಟೊನಾಲ್ಡ್ ಟ್ರಂಪ್ ಆಗ್ತಿದ್ದಾರಾ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ..? ಹೀಗೊಂದು ಸುದ್ದಿ ಇದೀಗ ಸಿನಿದುನಿಯಾದಲ್ಲಿ ಎಲ್ಲೆಡೆ ದಟ್ಟವಾಗಿ ಹರಡುತ್ತಿದೆ. ಅದಕ್ಕೆ ಕಾರಣವಾಗಿರೋದು ಅವ್ರ ಅಪ್‌ಕಮಿಂಗ್ ಮೂವಿ ವಾರಣಾಸಿ. ಯೆಸ್.. ರಾಜಮೌಳಿಗೇ ಬಜೆಟ್ ಟೆನ್ಷನ್ ಆಗಿದ್ದು, ಸಿನಿಮಾದ ಶೂಟಿಂಗ್‌ಗೆ ಬ್ರೇಕ್ ಬಿದ್ದಿದೆ ಎನ್ನಲಾಗ್ತಿದೆ. ಈ ಕುರಿತ ಶಾಕಿಂಗ್ ಸ್ಟೋರಿ ಇಲ್ಲಿದೆ.
- ವಾರಣಾಸಿಗೆ OTT ಗುನ್ನಾ.. ರಾಜಮೌಳಿಗೆ ಬಜೆಟ್ ಟೆನ್ಷನ್
- ಮೌಳಿ ನಿರೀಕ್ಷೆ 600 ಕೋಟಿ.. 120 ಕೋಟಿಗಷ್ಟೇ ಆಫರ್..!
- 1400 ಕೋಟಿ ಬಜೆಟ್.. ಟ್ರಂಪ್ನಂತೆ ಮೌಳಿ ಟ್ರೋಲ್
- ಶೂಟಿಂಗ್ ಸ್ಟಾಪ್.. ಮಹೇಶ್ ಬಾಬು ಫ್ಯಾನ್ಸ್ಗೆ ಆತಂಕ
ಸೋಲಿಲ್ಲದ ಸರದಾರ.. ಇಂಡಿಯನ್ ಸ್ಪೀಲ್‌ಬರ್ಗ್ ಅಂತೆಲ್ಲಾ ಸಂಚಲನ ಮೂಡಿಸಿದ್ದ ಭಾರತೀಯ ಚಿತ್ರರಂಗದ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ, ಸದ್ಯ ವಾರಣಾಸಿ ಚಿತ್ರದಲ್ಲಿ ತೊಡಗಿಸಿಕೊಂಡಿರೋದು ಗೊತ್ತೇಯಿದೆ. ಇತ್ತೀಚೆಗೆ ಚಿತ್ರದ ಫಸ್ಟ್‌ಲುಕ್ ಟೀಸರ್ ಹಾಗೂ ಪ್ರಮುಖ ಕ್ಯಾರೆಕ್ಟರ್‌ಗಳನ್ನ ರಿವೀಲ್ ಮಾಡಿದ್ದ ರಾಜಮೌಳಿ, ವಾರಣಾಸಿ ವರ್ಲ್ಡ್ ಎಷ್ಟು ವೈಭವೋಪೇತ ಹಾಗೂ ರೋಮಾಂಚಕವಾಗಿರಲಿದೆ ಅನ್ನೋದ್ರ ಹಿಂಟ್ ನೀಡಿದ್ರು.
ಪ್ರಿನ್ಸ್ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಅಂತಹ ಘಟಾನುಘಟಿ ಕಲಾವಿದರುಗಳಿಂದ ಕೂಡಿರೋ ಗ್ಲೋಬ್ ಟ್ರೋಟಿಂಗ್ ಆ್ಯಕ್ಷನ್ ಅಡ್ವೆಂಚರ್ ಮೂವಿ ಈ ವಾರಣಾಸಿ. ಮೌಳಿಯ ತಂದೆ ವಿಜಯೇಂದ್ರ ಪ್ರಸಾದ್ ಆವರೇ ಕಥೆ ಬರೆದಿರೋ ಈ ಸಿನಿಮಾದ ಶೂಟಿಂಗ್ ಅರ್ಧದಷ್ಟು ಮುಗಿದಿದೆ. ಹಾಲಿವುಡ್ ಅಂಗಳದಿಂದಲೇ ಭರ್ಜರಿ ಪ್ರಮೋಷನ್ಸ್ ಆರಂಭಿಸಿದ್ದ ಚಿತ್ರತಂಡ, ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಗ್ರ್ಯಾಂಡ್ ಟೀಸರ್ ಲಾಂಚ್ ಇವೆಂಟ್ ನಡೆಸಿತ್ತು.
ಸದ್ಯ ವಾರಣಾಸಿ ಚಿತ್ರದ ಶೂಟಿಂಗ್ ಸ್ಥಗಿತಗೊಂಡಿದೆ ಎನ್ನಲಾಗ್ತಿದೆ. ಅದಕ್ಕೆ ಕಾರಣ ಚಿತ್ರದ ಬಜೆಟ್. ಹೌದು.. ಬರೋಬ್ಬರಿ 1400 ಕೋಟಿ ಬಿಗ್ ಬಜೆಟ್‌ನಲ್ಲಿ ಈ ಚಿತ್ರವನ್ನ ನಿರ್ಮಾಣ ಮಾಡೋಕೆ ಹೊರಟಿದ್ದರು ಮಾಸ್ಟರ್‌ಮೈಂಡ್ ಮೌಳಿ. ಅವ್ರ ಪ್ರಕಾರ ಸಿನಿಮಾದ ಓಟಿಟಿ ರೈಟ್ಸ್ ಸುಮಾರು 600 ಕೋಟಿಗೆ ಸೋಲ್ಡ್ ಔಟ್ ಆಗುವ ನಿರೀಕ್ಷೆ ಇತ್ತು. ಆದ್ರೀಗ ಎಲ್ಲಾ ಓಟಿಟಿ ಕಂಪೆನಿಗಳು 120ಕೋಟಿ ರೂಪಾಯಿಗಿಂತ ಹೆಚ್ಚಿನ ಬೆಲೆ ನೀಡದಿರಲು ಫಿಕ್ಸ್ ಆಗಿವೆಯಂತೆ. ಹೀಗಾಗಿ ನಿರ್ಮಾಪಕರು ಮೌಳಿಗೆ ನಿರೀಕ್ಷಿತ ಬಜೆಟ್ ರಿಲೀಸ್ ಮಾಡೋಕೆ ಹಿಂದೇಟು ಹಾಕ್ತಿದ್ದಾರೆ ಎನ್ನಲಾಗ್ತಿದೆ.
ಬಾಹುಬಲಿ, ತ್ರಿಬಲ್ ಆರ್ ಅಂತಹ ವರ್ಲ್ಡ್ ಕ್ಲಾಸ್ ಸಿನಿಮಾಗಳನ್ನ ನೀಡಿದ ರಾಜಮೌಳಿಗೇ ಹೀಗೆ ಬಜೆಟ್ ಸಮಸ್ಯೆ ಆಗ್ತಿರೋದು ಅಚ್ಚರಿ ತಂದಿದೆ. ಆದ್ರೆ ಇದೇ ಮೊದಲ ಬಾರಿಗೆ ವರ್ಲ್ಡ್ ಸಿನಿದುನಿಯಾಗೆ ನಮ್ಮ ಇಂಡಿಯಾದಿಂದ ಜಗಮೆಚ್ಚೋ ಸಿನಿಮಾ ಕೊಡೋಕೆ ಸಜ್ಜಾಗಿದ್ರು ಮೌಳಿ. ಆದ್ರೆ ಅವರ ಲೆಕ್ಕಾಚಾರಗಳು ಉಲ್ಟಾ ಪಲ್ಟಾ ಆಗ್ತಿವೆ. ಬಜೆಟ್ ಹಾಕಿ ಸಿನಿಮಾ ಮಾಡೋದು ಓಕೆ. ಆದ್ರೆ ಬ್ಯುಸಿನೆಸ್‌ನ ಹೀಗೆ ರಿಟರ್ನ್ ತರ್ತಾರೆ ಅನ್ನೋದೇ ಯಕ್ಷ ಪ್ರಶ್ನೆ. ಹಾಗಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮೌಳಿಯನ್ನ ಟಾಲಿವುಡ್ ಪಾಲಿನ ಡೊನಾಲ್ಡ್ ಟ್ರಂಪ್ ಅಂತೆಲ್ಲಾ ಟ್ರೋಲ್ ಮಾಡೋಕೆ ಆರಂಭಿಸಿದ್ದಾರೆ.
ಸಿನಿಮಾ ಫಾರ್ಮುಲಾಗಳು ಮೊದಲಿನ ರೀತಿ ವರ್ಕ್ ಆಗಲ್ಲ ಅನ್ನೋದು ರಾಜಮೌಳಿಗೂ ಅರ್ಥೈಸೋ ಕಾಲ ಬಂದೇ ಬಿಡ್ತು. ಈಗ ಕಂಟೆಂಟ್ ಈಸ್ ದಿ ಕಿಂಗ್. ಬಜೆಟ್ ಮ್ಯಾಟರ್ ಆಗಲ್ಲ. ಅವಶ್ಯಕತೆ ಹಾಗೂ ಮಾರ್ಕೆಟ್‌ಗೆ ತಕ್ಕನಾಗಿ ಬಜೆಟ್ ಹಾಕಿ ಸಿನಿಮಾ ಮಾಡಿದ್ರೆ ಮಾತ್ರ ಅಂದುಕೊಂಡಂತಹ ವ್ಯವಹಾರಗಳು ನಡೆಯಲಿವೆ. ಇಲ್ಲವಾದಲ್ಲಿ ರಾಜಮೌಳಿ ಅದ್ರೂ ಸಗ ಸಂಕಷ್ಟಕ್ಕೆ ಸಿಲುಕಲೇಬೇಕು ಅನ್ನೋದ್ರ ಇದ್ರ ನೀತಿ ಪಾಠ ಆಗಿದೆ. ಒಟ್ಟಾರೆ ಈ ನಡೆಯಿಂದ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಫ್ಯಾನ್ಸ್ ಪ್ಯಾನಿಕ್ ಆಗಿದ್ದು, ಈ ಸಂಕಷ್ಟವನ್ನ ಹೇಗೆ ನಿಭಾಯಿಸ್ತಾರೆ ಮೌಳಿ ಅನ್ನೋದನ್ನ ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
