ರಾಜಮೌಳಿ-ಮಹೇಶ್ ಬಾಬು‌ ನೆಕ್ಸ್ಟ್ ಮೂವಿ ಟೈಟಲ್ “ವಾರಣಾಸಿ”

Untitled design 2025 11 15T233842.149

ರಾಜಮೌಳಿ ಮತ್ತು ಮಹೇಶ್ ಬಾಬು ಅಭಿಮಾನಿಗಳಿಗೆ ಗುಡ್‌‌ನ್ಯೂಸ್‌‌ ಸಿಕ್ಕಿದ್ದು, ನವೆಂಬರ್ 15ರಂದು ರಾಮೋಜಿರಾವ್ ಫಿಲಂ ಸಿಟಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಂಬಿ29 ಎಂಬ ತಾತ್ಕಾಲಿಕ ಹೆಸರಿನೊಂದಿಗೆ ಪ್ರಾರಂಭವಾದ ಸಿನಿಮಾಕ್ಕೆ ಅಧಿಕೃತ ಟೈಟಲ್ ಬಿಡುಗಡೆಯಾಗಿದೆ. ಆ ಹೆಸರು’ ವಾರಣಾಸಿ’ ಈ ಟೈಟಲ್ ಅನಾವರಣದ ಜೊತೆಗೆ ಸಿನಿಮಾದ ಒಂದು ಸಣ್ಣ ಗ್ಲಿಂಪ್ಸ್ ವಿಡಿಯೋ ಕೂಡ ಹಂಚಿಕೊಳ್ಳಲಾಗಿದ್ದು, ಸಿನಿಮಾ ಪ್ರೇಮಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

ಈ ಸಿನಿಮಾ ಪ್ರಾರಂಭದಲ್ಲಿ ‘ಎಸ್‌ಎಸ್‌ಎಂಬಿ29’ ಎಂಬ ಕೋಡ್ ನೇಮ್‌ನೊಂದಿಗೆ ಸಾಗುತ್ತಿತ್ತು. ನಂತರ ‘ಗ್ಲೋಬ್ ಟ್ರೊಟ್ಟರ್’ ಎಂಬ ಮತ್ತೊಂದು ತಾತ್ಕಾಲಿಕ ಹೆಸರು ಬಂದಿತ್ತು. ಆದರೆ ಇಂದು ರಾಜಮೌಳಿ ಅವರು ಟೈಟಲ್ ಅನಾವರಣ ಮಾಡಿದ್ದಾರೆ. ವಾರಣಾಸಿ ಭಾರತದ ಅತ್ಯಂತ ಪುರಾತನ ನಗರ, ಸನಾತನ ಧರ್ಮದ ಪವಿತ್ರ ಕೇಂದ್ರ. ಭಾರತೀಯ ಪೌರಾಣಿಕ ಕಥೆಗಳನ್ನು ವಿಶ್ವ ಮಟ್ಟಕ್ಕೆ ತಲುಪಿಸುವುದು ತಮ್ಮ ಗುರಿ ಎಂದು ರಾಜಮೌಳಿ ಹಿಂದೆಯೇ ಹೇಳಿದ್ದರು. ಸಿನಿಮಾದ ಕಥೆ ಭಾರತೀಯ ಸಂಸ್ಕೃತಿ, ಪುರಾಣಗಳು ಮತ್ತು ವಾರಣಾಸಿಯ ಆಧ್ಯಾತ್ಮಿಕತೆಯನ್ನು ಆಧರಿಸಿದೆ ಎಂಬುದು ಸ್ಪಷ್ಟವಾಗಿದೆ.

ಕಾರ್ಯಕ್ರಮದಲ್ಲಿ ಗ್ಲಿಂಪ್ಸ್ ವಿಡಿಯೋ ಹಂಚಿಕೊಂಡಿದ್ದು, ಮಹೇಶ್ ಬಾಬು ಎತ್ತಿನ ಮೇಲೆ ಕುಳಿತು, ಕೈಯಲ್ಲಿ ತ್ರಿಶೂಲ ಹಿಡಿದು ಮುನ್ನುಗ್ಗುತ್ತಿರುವ ದೃಶ್ಯ ಅದ್ಭುತವಾಗಿದೆ. ಇದು ಕ್ಲೈಮ್ಯಾಕ್ಸ್ ಫೈಟ್ ಸೀನ್‌ನಂತೆ ಕಾಣುತ್ತದೆ. ಮಹೇಶ್‌ ಅವರ ಲುಕ್ ಆಕ್ರಮಣಕಾರಿ, ಪೌರಾಣಿಕ ಯೋಧನಂತೆ ಕಾಣುತ್ತಿದೆ. ರಾಜಮೌಳಿ ಅವರ ಸಿನಿಮಾ, ಬಾಹುಬಲಿ, ಆರ್‌ಆರ್‌ಆರ್ ನಂತರ ಇದು ಮತ್ತೊಂದು ಎಪಿಕ್ ಅಡ್ವೆಂಚರ್ ಆಗಲಿದೆ ಎಂಬ ನಿರೀಕ್ಷೆಯೂ ಇದೆ.

ಸಿನಿಮಾದಲ್ಲಿ ನಾಯಕಿಯಾಗಿ ಬಾಲಿವುಡ್ ಸ್ಟಾರ್ ದೀಪಿಕಾ ಪಡುಕೋಣೆ. ವಿಲನ್ ಪಾತ್ರದಲ್ಲಿ ಮಲಯಾಳಂ ಸೂಪರ್‌ಸ್ಟಾರ್ ಪೃಥ್ವಿರಾಜ್ ಸುಕುಮಾರನ್. ಇವರ ಜೊತೆ ತಮಿಳು ನಟ ಮಾಧವನ್ ಕೂಡ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Exit mobile version