ಸ್ಯಾಂಡಲ್ವುಡ್ನ ವರ್ಸಟೈಲ್ ಆ್ಯಕ್ಟರ್ ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಚಿತ್ರ ಬಿಗ್ ಸಕ್ಸಸ್ ಕಂಡಿದ್ದು, ಬಾಕ್ಸ್ ಆಫೀಸ್ ಕೊಲ್ಲೆ ಹೊಡೆದಿದೆ. ಸುಮಾರು 115 ಕೋಟಿ ಬಾಚಿಕೊಳ್ಳುವ ಮೂಲಕ ರೆಕಾರ್ಡ್ ಬರೆದಿದೆ. ಸದ್ಯ ಸು ಫ್ರಂ ಸೋ ಟೀಂ ಗೆಲುವಿನ ಸಂಭ್ರಮದಲ್ಲಿದೆ.ಇತರೆ ಸಿನಿಮಾ ಮಂದಿಗೂ ಮಾದರಿಯಾಗಿದೆ. ಆದ್ರೆ ಈ ಮಧ್ಯೆ ರಾಜ್ ಬಿ ಶೆಟ್ರು ಸಡನ್ ಆಗಿ ಸೋಷಿಯಲ್ ಮೀಡಿಯಾದಿಂದ ಬ್ರೇಕ್ ಪಡೆದುಕೊಳ್ಳುತ್ತಿದ್ದಾರೆ. ಅಂತ ಅನೌನ್ಸ್ ಮಾಡಿದ್ದಾರೆ. ಅಷ್ಟಕ್ಕೂ ಶೆಟ್ರು ಹೇಗೆ ಯಾಕ್ ಹೇಳಿದ್ರು ಅಂತೀರಾ ಈ ಸ್ಟೋರಿ ಓದಲೇಬೇಕು.
- ಸು ಫ್ರಮ್ ಸೋ ಸಕ್ಸಸ್ ಬೆನ್ನಲ್ಲೇ ರಾಜ್. ಬಿ ಶೆಟ್ಟಿ ಹೊಸ ಅಪ್ಡೇಟ್
- ಸೋಷಿಯಲ್ ಮೀಡಿಯಾದಿಂದ ಬ್ರೇಕ್ ಪಡೆದ ಸೋಲ್ ಸ್ಟಾರ್..!
ರಾಜ್. ಬಿ ಶೆಟ್ರು ಸ್ಯಾಂಡಲ್ವುಡ್ನ ವರ್ಸಟೈಲ್ ಆ್ಯಕ್ಟರ್ ಅನ್ನೋದು ಪ್ರೂವ್ ಆಗಿದೆ. ಇತ್ತೀಚೆಗೆ ರಾಜ್ ಬಿ ಶೆಟ್ಟಿ ನಟಿಸಿ ನಿರ್ಮಿಸಿರುವ ಸು ಫ್ರಂ ಸೋ ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಯಾವ ಮಟ್ಟಕ್ಕೆ ಸದ್ದು ಮಾಡಿತ್ತು ಅನ್ನೋದು ಗೊತ್ತೆಯಿದೆ. ಕೇವಲ 4.5 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ ಸುಮಾರು ನೋರು ಕೋಟಿಯನ್ನ ಬಾಚಿಕೊಂಡು ಹೊಸ ಬಿಗ್ ಸಕ್ಸಸ್ ಕಂಡಿತ್ತು. ಕನ್ನಡದಲ್ಲಿ ರಿಲೀಸ್ ಆಗಿದ್ದ ಸಿನಿಮಾ ಅ ನಂತರ ಮಲಯಾಳಂ ಮತ್ತು ತೆಲುಗಿನಲ್ಲೂ ರಿಲೀಸ್ ಆಗಿ ಕಮಾಲ್ ಮಾಡಿತ್ತು. ಸದ್ಯ ಇದೇ ಖುಷಿಲಿದ್ದ ರಾಜ್ ಬಿ ಶೆಟ್ಟಿ ಒಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ಹೌದು, ರಾಜ್ ಬಿ ಶೆಟ್ರು ಸೋಷಿಯಲ್ ಮೀಡಿಯಾದಿಂದ ಬ್ರೇಕ್ ಪಡೆದುಕೊಂಡಿದ್ದಾರೆ.ಈ ಮೂಲಕ ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ರಾಜ್. ಬಿ ಶೆಟ್ಟಿ ಸದ್ಯ ತಮ್ಮ ಮುಂದಿನ ಚಿತ್ರದ ಮೇಲೆ ಹೆಚ್ಚು ಫೋಕಸ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ಸೋಷಿಯಲ್ ಮೀಡಿಯಾದಿಂದ ಬ್ರೇಕ್ ಪಡೆದುಕೊಂಡಿದ್ದಾರೆ.
ನಾನು ನನ್ನ ಕೆಲಸಗಳ ಮೇಲೆ ಗಮನ ಕೊಡುವ ಅಗತ್ಯವಿದೆ. ಈ ಕಾರಣದಿಂದಾಗಿ ನಾನು ಇನ್ಸ್ಟಾಗ್ರಾಮ್‌ನಿಂದ ದೂರ ಉಳಿಯಲಿದ್ದೇನೆ. ಈ ಕ್ಷಣದಿಂದ ನನ್ನ ಟೀಮ್ ನನ್ನ ಇನ್ಸ್ಟಾಗ್ರಾಮ್ ಪೇಜ್‌ಅನ್ನು ಹ್ಯಾಂಡಲ್ ಮಾಡಲಿದೆ. ಥ್ಯಾಂಕ್ ಯು ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ಗೆ ಅಭಿಮಾನಿಗಳು ನಾನಾ ಕಮೆಂಟ್ಸ್ ಹಾಕುತ್ತಿದ್ದಾರೆ. ಆದಷ್ಟು ಬೇಗ ನಿಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಅಪ್ಡೇಟ್ ಕೊಡಿ ಅಂತ ಕೇಳುತ್ತಿದ್ದಾರೆ.
- ಯಾರ ಸಂಪರ್ಕಕ್ಕೂ ಸಿಗೋದಿಲ್ಲ ಶೆಟ್ರು ಗ್ಯಾಂಗ್
- ಶೆಟ್ರು ಸಿನಿಮಾ ಸಕ್ಸಸ್‌ಗೆ ಈ ಮೈಂಡ್ ಸೆಟ್ ಕಾರಣಾನಾ..?
ರಾಜ್ ಬಿ ಶೆಟ್ಟಿ ಮಾತ್ರವಲ್ಲ ರಿಷಬ್, ರಕ್ಷಿತ್ ಶೆಟ್ಟಿ ಕೂಡ ಇದೆ ಮೈಂಡ್ ಸೆಟ್ ನವರು. ಸಿನಿಮಾಗೆ ಅಂತ ಸಮಯ ಕೊಡ್ತಾ ಫ್ಯಾನ್ಸ್. ಮಾಧ್ಯಮ ಸಂಪರ್ಕದಿಂದ ದೂರ ಉಳಿಯುತ್ತಾರೆ. ಕೆಲವು ಸಲ ಫೋನ್ ಸ್ವಿಚ್ ಆಫ್ ಮಾಡಿ ಯಾರ ಸಂಪರ್ಕಕ್ಕೂ ಸಿಗೋದಿಲ್ಲ ಶೆಟ್ರು ಗ್ಯಾಂಗ್.
ಒಟ್ಟಿನಲ್ಲಿ ʼಸು ಫ್ರಂ ಸೋʼ ಸಿನಿಮಾ ಹಿಟ್ ಆದ ಬಳಿಕ ರಾಜ್ ಬಿ ಶೆಟ್ಟಿ ಹೊಸ ಪ್ರಾಜೆಕ್ಟ್‌ಗೆ ಕೈ ಹಾಕೋದು ಖಚಿತವಾಗಿದೆ. ಆದರೆ ಈ ಬಗ್ಗೆ ಅವರು ಎಲ್ಲಿಯೂ ಮಾಹಿತಿ ನೀಡಿಲ್ಲ. ಇದರ ನಡುವೆ ಉಪೇಂದ್ರ ಹಾಗೂ ಶಿವಣ್ಣ ಕಾಂಬಿನೇಷನ್‌ನಲ್ಲಿ ರಾಜ್ ಬಿ ಶೆಟ್ಟಿ ನಟನೆಯ, ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾ ಬಿಡುಗಡೆಯ ಹಂತದಲ್ಲಿದೆ. ಅದರ ಪ್ರಮೋಷನ್‌ನ ನಡುವೆ ಹೊಸ ಸಿನಿಮಾ ನಿರ್ದೇಶನಕ್ಕೂ ರಾಜ್ ಬಿ ಶೆಟ್ಟಿ ಇಳಿಯುವ ಸೂಚನೆ ನೀಡಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್