ಕಮಲ್ ಹಾಸನ್ ಕ್ಯಾಂಪ್‌ಗೆ ರಾಜ್ ಶೆಟ್ಟಿ..ಸಿಯಾನ್ ಸೌಂಡ್

ಶಿವಕಾರ್ತಿಕೇಯನ್ ಎದುರು ಕನ್ನಡಿಗನ ಖಳನಾಯಕ ಖದರ್

Untitled design 2026 07 06T162341.685

ರಾಜ್ ಬಿ ಶೆಟ್ಟಿ.. ಸದ್ಯ ಪ್ಯಾನ್ ಇಂಡಿಯಾದಾದ್ಯಂತ ಸದ್ದು ಮಾಡ್ತಿರೋ ಅಪ್ಪಟ ಕನ್ನಡ ಸ್ಟಾರ್. ಇತ್ತೀಚೆಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ ರಾಜ್ ಶೆಟ್ರಿಗೆ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್‌‌ ಭರ್ಜರಿ ಗಿಫ್ಟ್ ನೀಡಿದ್ದಾರೆ. ಅದೇನು ಅನ್ನೋದ್ರ ಜೊತೆಗೆ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಕಮಾಲ್ ಮಾಡ್ತಿರೋ ಶೆಟ್ರ ಅಪ್‌ಕಮಿಂಗ್ ಪ್ರಾಜೆಕ್ಟ್ಸ್ ಕಹಾನಿ ಇಲ್ಲಿದೆ ನೋಡಿ…

ನಟನೆ, ನಿರ್ದೇಶನ, ನಿರ್ಮಾಣ, ಬರವಣಿಗೆ, ಚಿತ್ರ ವಿತರಣೆ.. ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಚಿತ್ರರಂಗದಲ್ಲಿ ರಾಜ್ ಬಿ ಶೆಟ್ಟಿ ಕೈಯಾಡಿಸದ ಡಿಪಾರ್ಟ್‌‌ಮೆಂಟ್ ಇಲ್ಲವಾಗಿದೆ. ಸದಾ ಕಲೆಗಾಗಿ ತನು ಮನ ಧನವನ್ನು ಅರ್ಪಿಸೋ ರಾಜ್ ಶೆಟ್ರು, ನಿದ್ದೆಯಲ್ಲೂ ಸಿನಿಮಾನೇ ಕನಸು ಕಾಣ್ತಾರೆ. ಅವರು ಉಸಿರಾಡೋದು ಕೂಡ ಸಿನಿಮಾನೇ ಅನ್ನೋದು ಗೊತ್ತಿರುವ ವಿಚಾರ. ಕನ್ನಡದ ಬಳಿಕ ಮಲಯಾಳಂ, ಹಿಂದಿ ಹಾಗೂ ಮರಾಠಿ ಚಿತ್ರರಂಗಗಳಲ್ಲಿ ತಮ್ಮ ನಟನಾ ಗಮ್ಮತ್ತು ತೋರಿದ್ದ ಶೆಟ್ರು, ಇದೀಗ ಪಕ್ಕದ ತಮಿಳು ಚಿತ್ರರಂಗದ ಬಹುಬೇಡಿಕೆಯ ನಟ.

ಯೆಸ್.. ಇತ್ತೀಚೆಗೆ ಜನುಮ ದಿನ ಆಚರಿಸಿಕೊಂಡ ರಾಜ್ ಶೆಟ್ರಿಗೆ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಭರ್ಜರಿ ಬರ್ತ್ ಡೇ ಗಿಫ್ಟ್ ನೀಡಿದ್ದಾರೆ. ತಮ್ಮ ರಾಜ್‌‌ಕಮಲ್ ಫಿಲಂಸ್ ಇಂಟರ್‌‌ನ್ಯಾಷನಲ್ ಬ್ಯಾನರ್‌‌ನಡಿ ತಯಾರಾಗ್ತಿರೋ ಬಹುನಿರೀಕ್ಷಿತ ಶಿವಕಾರ್ತಿಕೇಯನ್ ನಟನೆಯ ಸಿಯಾನ್ ಚಿತ್ರದ ಖಳನಾಯಕನ ಪಾತ್ರಕ್ಕೆ ರಾಜ್ ಶೆಟ್ರನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಅದನ್ನ ಅಫಿಶಿಯಲಿ ಅನೌನ್ಸ್ ಕೂಡ ಮಾಡಿದ್ದಾರೆ.

ಹಳ್ಳಿ ಸೊಗಡಿನ ಸಿಯಾನ್ ಚಿತ್ರದಲ್ಲಿ ಶಿವಕಾರ್ತಿಕೇಯನ್ ಹಾಗೂ ನಮ್ಮ ರಾಜ್ ಶೆಟ್ಟಿ ಕಾದಾಡಲಿದ್ದು, ಇದಕ್ಕೆ ರಾಧಿಕಾ ಶರತ್‌ಕುಮಾರ್ ನಟನೆಯ ಥಾಯ್ ಕಳವಿ ಚಿತ್ರದ ನಿರ್ದೇಶಕ ಶಿವಕುಮಾರ್ ಮುರುಗೇಶನ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಅಂದಹಾಗೆ ರಾಜ್ ಶೆಟ್ರಿಗೆ ಇದೇ ಮೊದಲ ತಮಿಳು ಚಿತ್ರವಲ್ಲ. ಈಗಾಗ್ಲೇ ವಿಜಯ್ ಸೇತುಪತಿ ಜೊತೆ ಪಾಕೆಟ್ ನಾವೆಲ್ ಚಿತ್ರವನ್ನ ಮಾಡಿ ಮುಗಿಸಿದ್ದಾರೆ. ಅದು ಪೋಸ್ಟ್ ಪ್ರೊಡಕ್ಷನ್‌‌‌‌ನಲ್ಲಿದ್ದು, ಸದ್ಯದಲ್ಲೇ ತೆರೆಗಪ್ಪಳಿಸಲಿದೆ.

ಕನ್ನಡದ ಬಳಿಕ ಮಲಯಾಳಂ, ಹಿಂದಿ, ಮರಾಠಿ ಚಿತ್ರರಂಗಗಳಲ್ಲಿ ತಮ್ಮ ನಟನಾ ಗಮ್ಮತ್ತು ತೋರಿದ ರಾಜ್ ಶೆಟ್ರು, ಸದ್ಯ ತಮಿಳಲ್ಲಿ ಬ್ಯುಸಿ ಆಗಿದ್ದಾರೆ. ಹಾಗಂತ ಕನ್ನಡ ಏನೂ ಮರೆತಿಲ್ಲ ಶೆಟ್ರು. ಕನ್ನಡದ ಚಿತ್ರರಂಗದ ಕೋಟೆ, ಕೊತ್ತಲುಗಳನ್ನ ವಿಸ್ತರಿಸೋಕೆ ರಾಜ್ ಮಾಡ್ತಿರೋ ಮಾಸ್ಟರ್‌‌ಪ್ಲ್ಯಾನ್ ಇದು. ಸದ್ಯ ಕನ್ನಡದಲ್ಲಿ ಪ್ರಜ್ವಲ್ ಜೊತೆಗಿನ ಕರಾವಳಿ ಚಿತ್ರ ರಿಲೀಸ್‌ಗೆ ಸಜ್ಜಾಗಿದೆ. ಜುಗಾರಿ ಕ್ರಾಸ್ ಕೂಡ ಶೂಟಿಂಗ್ ಕಿಕ್‌ಸ್ಟಾರ್ಟ್ ಆಗಲಿದೆ. ಕೆವಿಎನ್ ಪ್ರೊಡಕ್ಷನ್ಸ್‌‌‌ನಲ್ಲಿ ಪೃಥ್ವಿ ನಿರ್ದೇಶನದ ಹಾರರ್ ಚಿತ್ರದಲ್ಲಿ ಶೆಟ್ರು ನಟಿಸಿದ್ದು, ರಿಲೀಸ್‌ಗೆ ಸಜ್ಜಾಗ್ತಿದೆ. ಅಲ್ಲದೆ ಮತ್ತೊಂದು ತಾವೇ ನಟಿಸೋದಕ್ಕೆ ತಮ್ಮದೇ ಡೈರೆಕ್ಷನ್ ಸಿನಿಮಾಗೆ ಕಥೆ ಕೂಡ ಬರೆಯುತ್ತಿದ್ದಾರೆ. ಇಷ್ಟೆಲ್ಲಾ ಬ್ಯುಸಿ ಇರೋ ಇವರು ಒಂಟಿ ಲೈಫ್‌ಗೆ ಗುಡ್‌ಬೈ ಹೇಳಿ ಜಂಟಿ ಯಾವಾಗ ಆಗ್ತಾರೆ ಅನ್ನೋದೇ ಯಕ್ಷ ಪ್ರಶ್ನೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version