ಸ್ಯಾಂಡಲ್‌ವುಡ್‌ನ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ರಾಜ್ ಬಿ ಶೆಟ್ಟಿ, ತಮ್ಮ ಕೋಟೆ ಕೊತ್ತಲುಗಳನ್ನ ಬಾಲಿವುಡ್‌ಗೂ ವಿಸ್ತರಿಸಿ ಬಿಟ್ಟಿದ್ದಾರೆ. ಬಿಟೌನ್ ಬಂದರ್ ಚಿತ್ರದ ಮೂಲಕ ಮುಂಬೈನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇಷ್ಟಕ್ಕೂ ಬಂದರ್ ಟ್ರೈಲರ್ ಹೇಗಿದೆ..? ಬಾಬಿ ಡಿಯೋಲ್ ಜೊತೆ ರಾಜ್ ಶೆಟ್ರ ರೋಲ್ ಏನು..? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ…
- ಬಾಲಿವುಡ್ ಅಂಗಳಕ್ಕೆ ರಾಜ್ ಬಿ ಶೆಟ್ಟಿ ಗ್ರ್ಯಾಂಡ್ ಎಂಟ್ರಿ..!
- ಬಾಬಿ ಡಿಯೋಲ್ ಬಂದರ್‌ನಲ್ಲಿ ಶೆಟ್ರು ಫುಲ್ ಕಮಾಲ್
- ಜೈಲು ಕೈದಿಯ ಪಾತ್ರದಲ್ಲಿ ನಗು ಬೀರಿದ ಮಲ್ಟಿ ಟ್ಯಾಲೆಂಟ್
- ಅಂದು ಅಕ್ಷಯ್, ದೇವಗನ್.. ಇಂದು ಅನುರಾಗ್ ಕಶ್ಯಪ್
ಸು ಫ್ರಮ್ ಸೋ, 45, ಲ್ಯಾಂಡ್‌ಲಾರ್ಡ್, ರಕ್ಕಸಪುರದೋಳ್.. ಇತ್ತೀಚೆಗೆ ತೆರೆಕಂಡ ಬಹುಮುಖ ಪ್ರತಿಭೆ ರಾಜ್ ಬಿ ಶೆಟ್ಟಿ ಸಿನಿಮಾಗಳು. ಒಂದರಲ್ಲಿ ಕರುಣಾಕರ ಗುರೂಜಿ, ಮತ್ತೊಂದರಲ್ಲಿ ಐಟಿ ಎಂಪ್ಲಾಯ್, ಮಗದೊಂದರಲ್ಲಿ ಲ್ಯಾಂಡ್‌ಲಾರ್ಡ್ ಬಳಿಕ ಪೊಲೀಸ್ ಕಾಪ್.. ಹೀಗೆ ಮಾಡಿದ ಪ್ರತಿ ಪಾತ್ರ ಕೂಡ ಒಂದಕ್ಕಿಂತ ಸಖತ್ ಡಿಫರೆಂಟ್. ಆದ್ರೀಗ ಅವೆಲ್ಲವನ್ನ ಮೀರಿಸುವಂತಹ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಅದೇ ಜೈಲಿನ ಕೈದಿ ರೋಲ್.
ಯೆಸ್.. ಇದು ಬಂದರ್ ಅನ್ನೋ ಬಾಲಿವುಡ್ ಸಿನಿಮಾದ ಟ್ರೈಲರ್ ಝಲಕ್. ಅನಿಮಲ್ ಸಿನಿಮಾ ಖ್ಯಾತಿಯ ಖ್ಯಾತ ಖಳನಾಯಕ ಬಾಬಿ ಡಿಯೋಲ್ ಲೀಡ್‌ನಲ್ಲಿ ನಟಿಸಿರೋ ಸಿನಿಮಾ. ಒಂದಷ್ಟು ನೈಜ ಘಟನೆಗಳನ್ನ ಆಧರಿಸಿ ಸಿದ್ಧಗೊಳಿಸಿರೋ ಈ ಸಿನಿಮಾ ಇದೇ ಜೂನ್ 5ಕ್ಕೆ ಬಿಗ್‌ಸ್ಕ್ರೀನ್‌ಗೆ ಎಂಟ್ಟಿ ಕೊಡ್ತಿದೆ. ಈ ಚಿತ್ರದಲ್ಲಿ ನಮ್ಮ ಕನ್ನಡದ ನಟ ರಾಜ್ ಬಿ ಶೆಟ್ರು ಗಮನ ಸೆಳೆಯುವ ಕೈದಿ ಪಾತ್ರದಲ್ಲಿ ಕಾಣ ಸಿಕ್ಕಿರೋದು ಅಚ್ಚರಿಯ ವಿಷಯ. ಟ್ರೈಲರ್‌ನಲ್ಲಿ ಒಂದೇ ಒಂದು ದೃಶ್ಯ ಇದ್ರೂ ನೆನಪಲ್ಲಿ ಉಳಿಯುವಂತಿದ್ದಾರೆ ಶೆಟ್ರು.
ಅಂದಹಾಗೆ ಬಂದರ್ ಸಿನಿಮಾ ಈಗಿನ ಡಿಜಿಟಲ್ ಯುಗ, ಮೊಬೈಲ್, ಆ್ಯಪ್ಸ್, Gen Z ಜನರೇಷನ್, ಯೂತ್ ಇಂಟರೆಸ್ಟ್ಗಳ ಮೇಲೆ ಕೇಂದ್ರೀಕೃತವಾಗಿದೆ. ಆ್ಯಪ್ ಮೂಲಕ ಯುವತಿ ಜೊತೆ ಚಾಟ್ ಮಾಡಿದಂತಹ ಯುವಕನನ್ನ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಲಾಗುತ್ತೆ. ಆತನು ಮಾಡಿದ ತಪ್ಪಾದ್ರೂ ಏನು..? ಆತ ಹೊರಕ್ಕೆ ಬರ್ತಾನಾ ಇಲ್ವಾ..? ಜೈಲಲ್ಲಿ ಆತನಿಗೆ ಯಾರೆಲ್ಲಾ ಸಿಗ್ತಾರೆ..? ಕೋರ್ಟ್ ಡ್ರಾಮಾ ಹೇಗಿರಲಿದೆ ಅನ್ನೋದೇ ಬಂದರ್ ಚಿತ್ರದ ಅಸಲಿ ಕಥೆ.
ಬಾಲಿವುಡ್‌ನ ಸೆನ್ಸೇಷನಲ್ ಡೈರೆಕ್ಟರ್ ಅನುರಾಗ್ ಕಶ್ಯಪ್ ಆ್ಯಕ್ಷನ್ ಕಟ್ ಹೇಳಿರೋ ಈ ಚಿತ್ರ ಇಂದಿನ ಯುವ ಜನತೆಗೆ ಬಹುದೊಡ್ಡ ಸಂದೇಶ ಅಂತೂ ನೀಡಲಿದೆ. ಕಥೆ, ಪಾತ್ರಗಳು, ಬರವಣಿಗೆ, ಮೇಕಿಂಗ್ ಎಲ್ಲವೂ ವ್ಹಾವ್ ಫೀಲ್ ಕೊಡ್ತಿದ್ದು, ಬಾಬಿ ಡಿಯೋಲ್‌ನ ಅಮಾಯಕತೆ, ಅಸಹಾಯಕತೆಗೆ ಬಂದರ್ ಚಿತ್ರ ಸಾಕ್ಷಿ ಆಗಲಿದೆ.
ಸು ಫ್ರಮ್ ಸೋ ನೋಡಿ ಅಕ್ಷಯ್ ಕುಮಾರ್, ಅಜಯ್ ದೇವಗನ್ ಅಂತಹ ಸೂಪರ್ ಸ್ಟಾರ್ಸ್ ನಮ್ಮ ರಾಜ್ ಬಿ ಶೆಟ್ರಿಗೆ ಒಳ್ಳೆಯ ಕಥೆಗಳಿದ್ರೆ ಹೇಳಿ. ಕೊಲ್ಯಾಬೊರೇಷನ್‌ನಲ್ಲಿ ಸಿನಿಮಾಗಳನ್ನ ಮಾಡೋಣ ಅಂತ ಓಪನ್ ಆಫರ್ ನೀಡಿದ್ರಂತೆ. ಇದೀಗ ಅವರುಗಳ ಬಳಿಕ ಅನುರಾಗ್ ಕಶ್ಯಪ್ ನಮ್ಮ ಶೆಟ್ರಿಗೆ ಗಾಳ ಹಾಕಿದ್ದು, ಕಶ್ಯಪ್ ಮೂಲಕವೇ ಬಿಟೌನ್‌ಗೆ ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ ರಾಜ್ ಬಿ ಶೆಟ್ಟಿ. ಇದು ಜಸ್ಟ್ ಟ್ರೈಲರ್.. ಪಿಕ್ಚರ್ ಅಭಿ ಬಾಕಿ ಹೈ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
