ಮಾಸ್ ಕಾ ಬಾಪ್ ರಚ್ಚು..ಕೂಲಿ ನಂತ್ರ ಲ್ಯಾಂಡ್‌‌ಲಾರ್ಡ್‌

ಲ್ಯಾಂಡ್‌‌ಲಾರ್ಡ್‌ ನಿಂಗವ್ವ ಆದ ರಚಿತಾ ರಾಮ್..!

Web (88)

12 ವರ್ಷಗಳಿಂದ  ಬುಲ್ ಬುಲ್ ಆಗಿ ಸಿನಿರಸಿಕರನ್ನ ಎಂಟರ್ಟೈನ್ ಮಾಡ್ತಿರೋ ರಚಿತಾ ರಾಮ್ ಇದೀಗ ಮಾಸ್ ಮೋಡ್ ಗೆ ಸ್ವಿಚ್ ಆನ್ ಆಗಿದ್ದಾರೆ. ಕೂಲಿಯಲ್ಲಿ ಲೇಡಿ ವಿಲನ್ ಆಗೋ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರೊ ರಚ್ಚು ಕನ್ನಡ ಸಿನಿಮಾಗಳಲ್ಲಿ ಮಾಸ್ ಅವತಾರ ತಾಳೊಕೆ ಥಂಬ್ಸ್ ಅಪ್ ಎಂದಿದ್ದಾರೆ. ರಚಿತಾ ಕರಿಯರ್ ನಲ್ಲಿ ಏನಿದು ಮಾಸ್ ಚೇಂಜ್ಸ್ ಯಾವ ಯಾವ ಕನ್ನಡ ಸಿನಿಮಾಗೆ ರಗಡ್ ಲುಕ್ ನಲ್ಲಿ ಲೇಡಿ ಸೂಪರ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ನೋಡೋಣ ಬನ್ನಿ.

ಬುಲ್ ಬುಲ್ ಯಿಂದ ಕನ್ನಡ ಸಿನಿರಸಿಕರ ಪಾಲಿನ ಡಿಂಪಲ್ ಕ್ವೀನ್ ಆಗಿ ಕೂಲಿ ಸಿನಿಮಾ ಮೂಲಕ ಭಾರತೀಯ ಚಿತ್ರರಂಗದ ಲೇಡಿ ಸೂಪರ್ ಪಟ್ಟ ಮುಡಿಗೆ ಏರಿಸಿಕೊಂಡಿರೋ ರಚಿತಾ ರಾಮ್ ಮೇಲೆ ಸದ್ಯ ಎಲ್ಲರ ಕಣ್ಣಿದೆ. ಹೌದು, ಕನ್ನಡದಲ್ಲಿ ಅದೆಷ್ಟೋ ವಿಭಿನ್ನ ಪಾತ್ರ.. ಡೈಲಾಗ್ಸ್.. ಸಿನಿಮಾಗಳನ್ನ ರಚಿತಾ ಮಾಡಿದ್ದಾರೆ ಆದ್ರೆ ರಜನಿಕಾಂತ್ ಅವರ ತಮಿಳಿನ ಕೂಲಿ ಸಿನಿಮಾ ಈ ಎಲ್ಲ ದಾಖಲೆಯನ್ನು ಒಂದೇ ಸಮಾ ಉಡೀಸ್ ಮಾಡಿತ್ತು.

ಮಾಸ್ ಕಾ ಬಾಪ್ ರಚ್ಚು..ಕೂಲಿ ನಂತ್ರ ಲ್ಯಾಂಡ್‌‌ಲಾರ್ಡ್‌

ಲ್ಯಾಂಡ್‌‌ಲಾರ್ಡ್‌ ನಿಂಗವ್ವ ಆದ ರಚಿತಾ ರಾಮ್..!

ಕೂಲಿಯಿಂದ ತಮಿಳಲ್ಲಷ್ಟೇ ಅಲ್ಲ, ರಚ್ಚು ವರ್ಲ್ಡ್ ಫೇಮಸ್ ಆಗಿದ್ದಾರೆ.  ರಚಿತಾ ರಾಮ್ ಕಲ್ಯಾಣಿ ರೋಲ್ ಅಷ್ಟರಮಟ್ಟಿಗೆ ಜನರ ಮನಸಿನಲ್ಲಿ ಅಚ್ಚು ಉಳಿದಿದೆ. ಸ್ಯಾಂಡಲ್ವುಡ್ನ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ತಮಿಳಿನ ಪ್ರೇಕ್ಷಕರಿಗೆ ಲೇಡಿ ಡಾನ್ ಆಗಿ ಪರಿಚಯವಾಗಿದ್ದಾರೆ. ಪರ ಭಾಷೆಯಲ್ಲಿ ವಿಲನ್ ಪಾತ್ರದಲ್ಲಿ ಗುರುತಿಸಿಕೊಂಡಿರೋ ರಚ್ಚು ಈಗ ಕನ್ನಡದಲ್ಲಿ ಕ್ಲಾಸ್ ಯಿಂದ ಮಾಸ್ ಹಿರೋಯಿನ್ ಆಗಲು ತಯಾರಿ ನಡೆಸಿದ್ದಾರೆ.

ಕೈಯಲ್ಲಿ ಕುರ್ಚಿ.. ಹಸಿರು ಬಳೆ ರಚ್ಚು ರೌದ್ರಾವತಾರ

12 ವರ್ಷದಿಂದ ಒಂದು ಲೆಕ್ಕ ಈಗ ಹೊಸ ಲೆಕ್ಕ

ಎಸ್, ಲೇಡಿ ಸೂಪರ್ ಸ್ಟಾರ್ ಟೈಟಲ್ ಗೆ ತಕ್ಕ ಹಾಗೆ ಸಿನಿಮಾಗಳ ಆಯ್ಕೆ ಕೂಡ ಚೇಂಜ್ ಆಗಿದೆ. ರಚಿತಾ ಲಿಸ್ಟ್ ನಲ್ಲಿ ಮಾಸ್ ಜಾನರ್ ಸಿನಿಮಾಗಳ ನರ್ತನ ಕಾಣ್ತಿದೆ. ಇತೀಚೆಗಷ್ಟೇ ಧ್ರುವ ಸರ್ಜಾ ಜೊತೆ ಕ್ರಿಮಿನಲ್ ಸಿನಿಮಾ ಮಾಡೋಕೆ ಗ್ರೀನ್ ಸಿಗ್ನಲ್ ಕೊಟ್ಟು ಮುಹೂರ್ತದಲ್ಲಿ ಭಾಗಿ ಆಗಿದ್ದ ರಚಿತಾ ಆ ಪಾತ್ರದ ವಿಶೇಷತೆಯನ್ನು ಹೇಳಿಕೊಂಡಿದ್ರು.

ಪಾರ್ವತಿ ಕ್ಯಾರೆಕ್ಟರ್ ನಲ್ಲಿ ರಚಿತಾ ಪಕ್ಕಾ ಮಾಸ್ ಆಗಿ ಕಾಣಿಸಿಕೊಳ್ತಿದ್ದಾರೆ ಅನ್ನೋದು ಖಚಿತವಾಗಿದೆ. ಹೇಳಿ ಕೇಳಿ ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆ ಆಧಾರಿತ ಕಥೆ, ಹೀಗಾಗಿ ಪಕ್ಕಾ ಮಾಸ್ ಡೈಲಾಗ್ಸ್ ಇರೋದು ಗ್ಯಾರಂಟಿ. ಇನ್ನು ಕಲ್ಟ್ ಸೇರಿದಂತೆ ದುನಿಯಾ ವಿಜಯ್ ಅಭಿನಯಿಸುತ್ತಿರುವ ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ರಚಿತಾ ರಾಮ್ ನಿಂಗವ್ವ ಆಗಿ ಕಾಣಿಸಿಕೊಂಡಿದ್ದಾರೆ. ನಿನ್ನೆಯಷ್ಟೇ ಲ್ಯಾಂಡ್ ಲಾರ್ಡ್ ಚಿತ್ರದ ನಿಂಗವ್ವ ಪಾತ್ರದ ಫೋಟೋವೊಂದನ್ನ ರಚಿತಾ ಪೋಸ್ಟ್ ಮಾಡಿದ್ರು. ಕೈಯಲ್ಲಿ ಕುರ್ಚಿ.. ಹಣೆಗೆ ಕುಂಕುಮ.. ಕೈಯಲ್ಲಿ ಹಸಿರು ಬಳೆ.. ಸಿದಾ ಸಾದ  ಸೀರೆಯುಟ್ಟು.. ರೌದ್ರವತಾರ ತಾಳಿರೋ ಫೋಟೋ ಇದಾಗಿದೆ.

ಜಡೇಶ್ ಹಂಪಿ ನಿರ್ದೇಶನ ಅಂದ್ರೆ ಅಲ್ಲೊಂದು ಗಟ್ಟಿ ಮಣ್ಣಿನ ಕಥೆ ಇರೋದು ಪಕ್ಕಾ. ಸದ್ಯ ಈ ಹಿಂದೆ ಬಿಡುಗಡೆ ಆಗಿದ್ದ ರಚಿತಾ ಇಂಟ್ರಡಕ್ಷನ್ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ ಎಷ್ಟು ಪವರ್ ಫುಲ್ ಪಾತ್ರ ಜಡೇಶ್ ಕಟ್ಟಿದ್ದಾರೆ ಅಂತ. ಇನ್ನು ರಚಿತಾ ರಾಮ್ ಸಿನಿಮಾ ಕಂಟೆಂಟ್ ಆಯ್ಕೆ ಕೂಡ ಚೇಂಜ್ ಆಗಿದೆ.  12 ವರ್ಷದಿಂದ ಇಲ್ಲಿಯವರೆಗೆ ಒಂದು ಲೆಕ್ಕ. ಈಗ ಹೊಸ ಲೆಕ್ಕ ಅಂತಿದ್ದಾರೆ ಲೇಡಿ ಸೂಪರ್ ಸ್ಟಾರ್. ಇಷ್ಟೇ ಅಲ್ಲ ಕೂಲಿ ಚಿತ್ರದ ಸಕ್ಸಸ್ ನಿಂದಾಗಿ ಪರಭಾಷಾ ಚಿತ್ರಗಳ ಆಫರ್ಸ್ ಜೊತೆ ಸಂಭಾವನೆ ಕೂಡ ಉತ್ತುಂಗಕ್ಕೇರಲಿದೆ.

ಒಂದು ಪಾತ್ರ..ಒಂದು ಸಿನಿಮಾ..ಕಲಾವಿದರ ಅಭಿನಯ ಎಷ್ಟು ಇಂಪಾರ್ಟೆಂಟ್ ಅಲ್ವಾ..? ಅವರ ಜೀವನದ ದಿಕ್ಕಾನ್ನೇ ಬದಲಿಸುತ್ತೆ ಅವಕಾಶಗಳು ಕೈ ಹಿಡಿಯುತ್ತೆ.. ಸ್ಟಾರ್ ಡಮ್ ಹೊತ್ತಿ ಮೆರೆಸುತ್ತೆ.. ಲಕ್ಷ್ಮಿಪುತ್ರರು ಆಗ್ತಾರೆ. ಲೈಫ್ ಸೆಟಲ್ ಆಗುತ್ತೆ ಇದಕ್ಕೆ ಸಾಕ್ಷಿ ನಮ್ಮ ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್..ಈ ಸಕ್ಸಸ್ ರಚ್ಚು ಕರಿಯರ್ ನಲ್ಲಿ ಇನ್ನಷ್ಟು ಪಾಸಿಟಿವ್ impact ಆಗ್ಲಿ.

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
Exit mobile version