ಧುವನ್ ಫಿಲಂಸ್ ಲಾಂಛನದಲ್ಲಿ ಅಖಿಲೇಶ್ ಎಂ ಅವರು ನಿರ್ಮಿಸಿರುವ , ವಿಜಯ್ ಪಾಳೇಗಾರ್ ನಿರ್ದೇಶಿಸಿರುವ ಹಾಗೂ ಸುಪ್ರೀಂ ಹೀರೋ ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸಿರುವ “ರಾಶಿ” ಚಿತ್ರದ ಪ್ರಮೋಷನ್ ಗೆ ಮಂಡ್ಯದ ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ಚಾಲನೆ ನೀಡಲಾಗಿದೆ. ನಾಯಕ ಆದಿತ್ಯ ಶಶಿಕುಮಾರ್, ನಾಯಕಿ ಸಮೀಕ್ಷ, ವಿನೋದ್ ಗೊಬ್ಬರಗಾಲ, ಉಗ್ರಂ ರವಿ, ಪ್ರವೀಣ್, ನಿರ್ದೇಶಕ ವಿಜಯ್ ಪಾಳೇಗಾರ್ ಹಾಗೂ ಮಂಡ್ಯದ ಚಿದಂಬರಂ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಚಿತ್ರದ ಟ್ಯಾಬ್ಲೊ ಮಂಡ್ಯ, ಮೈಸೂರು, ಹಾಸನ, ದಾವಣಗೆರೆ, ಹುಬ್ಬಳ್ಳಿ ಹಾಗೂ ಶಿವಮೊಗ್ಗ ಮುಂತಾದ ಕಡೆ ಸಂಚರಿಸಲಿದೆ. ಹುಬ್ಬಳ್ಳಿಯಲ್ಲಿ ಬೈಕ್ ರ‍್ಯಾಲಿ ಸಹ ನಡೆಯಲಿದೆ.
ಈಗಾಗಲೇ ಚಿತ್ರೀಕರಣ ಪೂರೈಸಿ ತೆರೆಗೆ ಬರಲು ಅಣಿಯಾಗಿರುವ ಈ ಚಿತ್ರವನ್ನು ಅಖಿಲೇಶ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಕಾಮಿಡಿ, ಲವ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ಮಾಪಕ ಅಖಿಲೇಶ್ ಕಥೆ ಬರೆದಿದ್ದಾರೆ. ಚಿತ್ರಕಥೆ ನಿರ್ದೇಶಕ ವಿಜಯ್ ಪಾಳೇಗಾರ್ ಅವರದು. ನವೀನ್ ಸೂರ್ಯ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಮಹೇಶ್ ಸಾತನೂರು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಆದಿತ್ಯ ಶಶಿಕುಮಾರ್ ಅವರಿಗೆ ನಾಯಕಿಯಾಗಿ ಸಮೀಕ್ಷ ನಟಿಸಿದ್ದಾರೆ. ರಮೇಶ್ ಇಂದಿರಾ, ತಬಲ ನಾಣಿ, ವೀಣಾ ಸುಂದರ್, ಮಂಜು ಪಾವಗಡ, ಕರಿ ಸುಬ್ಬು, ವಿನೋದ್ ಗೊಬ್ಬರಗಾಲ, ಹುಲಿ ಕಾರ್ತಿಕ್, ವರ್ಧನ್ ತೀರ್ಥಹಳ್ಳಿ, ಉಗ್ರಂ ರವಿ, ಭಜರಂಗಿ ಪ್ರಸನ್ನ ಮುಂತಾದವರು “ರಾಶಿ” ಚಿತ್ರದ ತಾರಾಬಳಗದಲ್ಲಿದ್ದಾರೆ.
ಬುಕ್‌ಮೈಶೋನಲ್ಲಿ ʻದೃಶ್ಯಂ 3ʼ ಸಿನಿಮಾವನ್ನು ಬೀಟ್ ಮಾಡಿದ ʻಪ್ರೇಮದ ಊರಲಿʼ
ಅಕ್ಟೋಬರ್ 12ರಂದು ಬುಕ್‌ಮೈಶೋನಲ್ಲಿ ಕನ್ನಡದ ‘ಪ್ರೇಮದ ಊರಲಿ’ ಸಿನಿಮಾ ಭಾರತದಲ್ಲೇ ಅತ್ಯಧಿಕ ಟಿಕೆಟ್ ಮಾರಾಟವಾದ ಚಿತ್ರವಾಗಿ ಹೊರಹೊಮ್ಮಿದೆ. ಅ. 12ರ ಒಂದೇ ದಿನ ‘ಪ್ರೇಮದ ಊರಲಿ’ ಚಿತ್ರದ ಬರೋಬ್ಬರಿ 1.49 ಲಕ್ಷ ಟಿಕೆಟ್‌ಗಳು ಬುಕ್ ಆಗಿವೆ.
ಹಿಂದಿಯ ‘ದೃಶ್ಯಂ 3’ (1.14 ಲಕ್ಷ ಟಿಕೆಟ್‌ಗಳು) ಮತ್ತು ‘ಜೈಲರ್ 2’ನಂತಹ ಬಹುನಿರೀಕ್ಷಿತ ಚಿತ್ರಗಳನ್ನು ಹಿಂದಿಕ್ಕಿ ಕನ್ನಡದ ಈ ಚಿತ್ರ ಮುನ್ನಡೆ ಸಾಧಿಸಿದೆ. ಅತಿ ಹೆಚ್ಚು ಟಿಕೆಟ್ ಮಾರಾಟದ ಮೂಲಕ ‘ಪ್ರೇಮದ ಊರಲಿ’ ಸಿನಿಮಾ ಇಡೀ ಭಾರತದಲ್ಲೇ ನಂಬರ್ 1 ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದೆ.
ವಾರಾಂತ್ಯ ಮಾತ್ರವಲ್ಲದೆ ವಾರದ ದಿನಗಳಲ್ಲೂ (ವೀಕ್‌ಡೇಸ್) ಸಿನಿಮಾದ ಹವಾ ಮುಂದುವರಿದಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. 2026ರಲ್ಲಿ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದು, ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದೆ.
