ಕ್ವಾಟ್ಲೆ ಕಿಚನ್ ಗ್ರಾಂಡ್ ಫಿನಾಲೆ..4 ಗಂಟೆಗಳ ಮಹಾ ಮನರಂಜನೆಯಲ್ಲಿ ‘SU from So’ ತಂಡ

Untitled design 2025 09 26t144343.818

ಕಲರ್ಸ್ ಕನ್ನಡ, ಪ್ರೇಕ್ಷಕರ ಮನರಂಜನೆಗಾಗಿ ಅತ್ಯಂತ ವಿನೂತನ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಪ್ರಿಯವಾಗಿದೆ. ಕಲರ್ಸ್ ಕನ್ನಡದ ಪಕ್ಕಾ ಕಾಮಿಡಿ ಕುಕ್ಕಿಂಗ್ ಶೋ ‘ಕ್ವಾಟ್ಲೆ ಕಿಚನ್’. ಈ ಶನಿವಾರ ‘ಕ್ವಾಟ್ಲೆ ಕಿಚನ್” ನ ಗ್ರಾಂಡ್ ಫಿನಾಲೆಯನ್ನು ಜನರಿಗೆ ತಲುಪಿಸುತ್ತಿದೆ. ಇದೇ ಶನಿವಾರ (27 ಸೆಪ್ಟೆಂಬರ್) ಸಂಜೆ 6 ರಿಂದ ರಾತ್ರಿ 10 ರವರೆಗೆ ಈ ಕುತೂಹಲಭರಿತ ಕುಕ್ಕಿಂಗ್ ಶೋ ನ ಗ್ರಾಂಡ್ ಫಿನಾಲೆ ಕಾರ್ಯಕ್ರಮ ಪ್ರಸಾರವಾಗಲಿದೆ.

ನೂರಕ್ಕೆ ನೂರು ಕಾಮಿಡಿ ಕುಕ್ಕಿಂಗ್ ಶೋ ‘ಕ್ವಾಟ್ಲೆ ಕಿಚನ್’ ನ ಈ ಸಂಚಿಕೆಯಲ್ಲಿ ‘SU from So ‘ ಚಿತ್ರ ತಂಡದ ರಾಜ್ ಬಿ ಶೆಟ್ಟಿ, ರವಿಯಣ್ಣ, ಜೆಪಿ ತುಮಿನಾಡ್ ಅತಿಥಿಗಳಾಗಿ ಭಾಗವಹಿಸಿರುವುದು ವಿಶೇಷ. ಆರು ಮಂದಿ ಫೈನಲಿಸ್ಟ್ ಕುಕ್‌ಗಳು, ಎರಡು ರೌಂಡ್‌ನಲ್ಲಿ ಪೈಪೋಟಿ ನಡೆಸಲಿವೆ. ಈ ಮೂಲಕ ಒಬ್ಬ ವಿನ್ನರ್ ತೀರ್ಮಾನವಾಗಲಿರುವುದು ಈ ಫಿನಾಲೆಯ ವಿಶೇಷ.

ಕುಕ್‌ಗಳಾಗಿ ಬೆಳ್ಳುಳ್ಳಿ ಕಬಾಬ್ ಚಂದ್ರು, ಆರ್ ಕೆ ಚಂದನ್, ದಿಲೀಪ್ ಶೆಟ್ಟಿ, ಕಾವ್ಯ ಗೌಡ, ಶರ್ಮಿತ ಗೌಡ, ರಾಘವೇಂದ್ರ ಕಾರ್ಯಕ್ರಮದಲ್ಲಿ ಆರು ಫೈನಲಿಸ್ಟ್‌‌ಗಳಾಗಿದ್ದಾರೆ. ಈ ಆರು ಮಂದಿಯಲ್ಲಿ ವಿನ್ನರ್ ಯಾರು, ಟ್ರೋಫಿ ಮತ್ತು ಐದು ಲಕ್ಷ ಗೆಲ್ಲೋ ಅದೃಷ್ಟ ಯಾರದ್ದು ಎಂಬ ಜನರ ಪ್ರಶ್ನೆಗಳಿಗೆ ಉತ್ತರ ಸಿಗಲಿದ್ದು, ಇದು ಅತ್ಯಂತ ಮನರಂಜಕ ಸಂಚಿಕೆ ಇದಾಗಲಿದೆ.

ಕಾರ್ಯಕ್ರಮದ ತೀರ್ಪುಗಾರರಾಗಿ ನಟಿ ಶ್ರುತಿ ಮತ್ತು ಕಳೆದ 25 ವರ್ಷಗಳಲ್ಲಿ ಪಾಕಶಾಸ್ತ್ರ ಮತ್ತು ಟೆಲಿವಿಶನ್‌ನ ಹಲವು ಪ್ರಸಿದ್ಧ ಶೋಗಳಲ್ಲಿ ಭಾಗವಹಿಸಿರುವ ಪ್ರಸಿದ್ಧ ಚೆಫ್ ಕೌಶಿಕ್ ಇರುವುದು ‘ಕ್ವಾಟ್ಲೆ ಕಿಚನ್’ ಗೆ ಹೊಸ ಕಳೆಯನ್ನು ತಂದಿದೆ. ಕಿಚನ್‌ ಸ್ಟಾರ್‌ಗಳು ಮತ್ತು ಕ್ಯಾಟ್ಲೆಗಳ ಮೋಜು ಮಸ್ತಿಯ ಈ ಜಗಳಬಂದಿ ಕಾರ್ಯಕ್ರಮವನ್ನು ಅನುಪಮಾ ಗೌಡ ಮತ್ತು ಕುರಿ ಪ್ರತಾಪ್‌ ನಡೆಸಿಕೊಡಲಿದ್ದಾರೆ.

ಅಡುಗೆಯ ಔತಣ ಮತ್ತು ನಗುವಿನ ರಸದೌತಣಗಳನ್ನು ಒಟ್ಟೊಟ್ಟಿಗೇ ಬಡಿಸುವ ‘ಕ್ವಾಟ್ಲೆ ಕಿಚನ್’, ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವ ಹಾಗೆ ನಗಿಸುವುದಂತೂ ಗ್ಯಾರಂಟಿ. ಈ ಶನಿವಾರ ಕಲರ್ಸ್ ಕನ್ನಡದಲ್ಲಿ ‘ಕ್ವಾಟ್ಲೆ ಕಿಚನ್ ಗ್ರಾಂಡ್ ಫಿನಾಲೆ’ ನೋಡುವುದನ್ನು ಮರೆಯಬೇಡಿ.

Exit mobile version