21 ವರ್ಷದ ನಂತರ ಅಪ್ಪು ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ ರೀರಿಲೀಸ್‌..!

Untitled design 2026 01 03T214409.700

ಸ್ಯಾಂಡಲ್‌ವುಡ್‌ನ ಪ್ರೀತಿಯ ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನ ಅಗಲಿದ್ದಾರೆ ಆದರೆ ಅವರ ಪ್ರತಿಭೆ ಮತ್ತು ನೆನಪುಗಳು ಅಭಿಮಾನಿಗಳ ಹೃದಯದಲ್ಲಿ ಅಮರವಾಗಿವೆ. ಪ್ರತಿವರ್ಷ ಅಪ್ಪು ಜನ್ಮದಿನವನ್ನು (ಮಾರ್ಚ್ 17) ಅಭಿಮಾನಿಗಳು ಉತ್ಸಾಹದಿಂದ ಆಚರಿಸುತ್ತಾರೆ. ಈ ಸಲದ ಆಚರಣೆಗೆ ವಿಶೇಷವಾಗಿ ಅವರ  ಬ್ಲಾಕ್‌ಬಸ್ಟರ್ ಚಿತ್ರ ‘ಆಕಾಶ್’ ಮರು-ಬಿಡುಗಡೆಯಾಗಲಿದೆ. 2005ರಲ್ಲಿ ಬಿಡುಗಡೆಯಾದ ಈ ಚಿತ್ರವು 21 ವರ್ಷಗಳ ನಂತರ ಮತ್ತೆ ಬೆಳ್ಳಿತೆರೆ ಸೇರಲು ಸಿದ್ಧವಾಗಿದೆ.

ಅಂದಿನ ಚಿತ್ರ, ಈಗಿನ ಆಸೆ

ಪುನೀತ್ ರಾಜ್‌ಕುಮಾರ್ ಅವರ ವೃತ್ತಿಜೀವನದ 4ನೇ ಚಿತ್ರವಾಗಿದ್ದ ‘ಆಕಾಶ್’. ಮಹೇಶ್ ಬಾಬು ಅವರ ನಿರ್ದೇಶನ, , ಆರ್.ಪಿ. ಪಟ್ನಾಯಕ್ ಅವರ ಸಂಗೀತ ಮತ್ತು ಪುನೀತ್-ರಮ್ಯಾ ಜೋಡಿಯ ಮಿಂಚಿನ ಚಿತ್ರಕ್ಕೆ ವಿಶೇಷ ಮೆರುಗು ನೀಡಿತ್ತು.  ಈ ಚಿತ್ರ ಬರೋಬ್ಬರಿ 200 ದಿನಗಳ ಕಾಲ ರಾಜ್ಯದ ಚಿತ್ರಮಂದಿರಗಳಲ್ಲಿ ಅತಿದೊಡ್ಡ ಯಶಸ್ಸಿನಿಂದ ಓಡಿತು. ಈ ಸಿನಿಮಾ ಅವರ ವೃತ್ತಿ ಜೀವನದ ಅತೀ ದೊಡ್ಡ ಯಶಸ್ಸು ಎಂದರೆ ತಪ್ಪಾಗಲಾರದು.

ಯಾವಾಗ, ಎಲ್ಲಿ ಮರು-ಬಿಡುಗಡೆ?

ಪ್ರತೀ ವರ್ಷದಂತೆ ಈ ಬಾರಿಯೂ ಮಾರ್ಚ್ 17 ಅಪ್ಪು ಜನ್ಮದಿನದ ಸಂಭ್ರಮ ಕಾತುರದಿಂದ ಎದುರು ನೋಡಲಾಗುತ್ತಿದೆ. ಈ ವರ್ಷ ಈ ಆಚರಣೆಗೆ ಮತ್ತಷ್ಟು ಕಳೆ ತುಂಬಲು, ಚಿತ್ರದ ವಿತರಕರು ಮತ್ತು ತಂಡವು ವಿಶೇಷ ಯೋಜನೆ ಮಾಡಿಕೊಂಡಿದ್ದು, ಮಾರ್ಚ್ 17ಕ್ಕೆ ನಾಲ್ಕು ದಿನ ಮುಂಚೆ, ಅಂದರೆ 2026ರ ಮಾರ್ಚ್ 13ರಂದು, ‘ಆಕಾಶ್’ ಸಿನಿಮಾ ಕರ್ನಾಟಕದಾದ್ಯಂತದ ಆಯ್ದ ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಗಲಿದೆ.

ಅಭಿಮಾನಿಗಳಿಗೆ ಭೇಟಿ: ಆಧುನಿಕ ತಂತ್ರಜ್ಞಾನದ ಸ್ಪರ್ಶ

21 ವರ್ಷಗಳ ನಂತರ ಚಿತ್ರವನ್ನು ಮತ್ತೆ ದೊಡ್ಡ ಪರದೆಯ ಮೇಲೆ ತಂದಿರುವುದು ಸುಲಭದ ಕೆಲಸವಲ್ಲ. ಚಿತ್ರದ ಮೂಲ ನೆಗೆಟಿವ್‌ಗಳನ್ನು ಆಧುನಿಕ 4K ರಿಮಾಸ್ಟರಿಂಗ್ ತಂತ್ರಜ್ಞಾನದ ಸಹಾಯದಿಂದ ಪುನರುಜ್ಜೀವನಗೊಳಿಸಲಾಗಿದೆ. ಚಿತ್ರದ ದೃಶ್ಯಗಳು ಹಾಗೂ ಧ್ವನಿಯ ಗುಣಮಟ್ಟವನ್ನು ಉತ್ತಮಪಡಿಸಿ, ಇಂದಿನ ಪ್ರೇಕ್ಷಕರ ಅನುಭವಕ್ಕೆ ಅನುಗುಣವಾಗಿ ಮಾಡಲಾಗಿದೆ. ಇದರಿಂದ ಹಳೆಯ ಮತ್ತು ಹೊಸ ಪೀಳಿಗೆಯ ಅಭಿಮಾನಿಗಳೆಲ್ಲರೂ ಚಿತ್ರವನ್ನು ಸಿನಿಮಾ ಹಾಲ್‌ನ ಸಂಪೂರ್ಣವಾಗಿ ವೀಕ್ರಿಸಲು ಸಹಾಯವಾಗುತ್ತದೆ.

ಇಂದಿಗೂ ಹೃದಯದಾಳದ ಹಾಡುಗಳು

ಚಿತ್ರದ ಯಶಸ್ಸಿನ ಹಿಂದೆ ಆರ್.ಪಿ. ಪಟ್ನಾಯಕ್ ಅವರ ಸಂಗೀತದ ಜಾದೂ ಪ್ರಮುಖ ಕಾರಣ. ಆಕಾಶವೇ ಬೀಳಲಿ ಮೇಲೆ…”, “ನಿನೇ ನಿನೇ ಸುಮನೇ…”, “ಲವ್ ಯು ಮೈ ಡಾರ್ಲಿಂಗ್” ಹೀಗೆ ಪ್ರತಿ ಹಾಡೂ ಸೂಪರ್‌ಹಿಟ್ ಆಗಿ, ಇಂದಿಗೂ ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದೆ. ಈ ಹಾಡುಗಳನ್ನು ಮತ್ತೆ ದೊಡ್ಡ ಪರದೆಯ ಮೇಲೆ ವೀಕ್ಷಿಸಲು ಅಭಿಮಾನಿಗಳು ಉತ್ಸುಕತೆಯಿಂದ ಕಾಯುತ್ತಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರ ಭೌತಿಕ ಅನುಪಸ್ಥಿತಿಯ ನೋವು ಅಭಿಮಾನಿಗಳ ಹೃದಯದಲ್ಲಿ ಇನ್ನೂ ಹಾಗೆ ಇದೆ. ಆದರೆ, ಅವರ ಚಿತ್ರಗಳ ಮೂಲಕ, ಅವರ ನೆನಪುಗಳ ಮೂಲಕ ಅವರು ನಮ್ಮೊಟ್ಟಿಗೆ ಇದ್ದಾರೆ. ಈ ಆಕಾಶ್‌ ಮಾರ್ಚ್‌ 13 ರಂದು ಮರು ಬಿಡುಗಡೆಗೊಳ್ಳಲಿದ್ದು ಅಭಿಮಾನಿಗಳು  ಚಿತ್ರಮಂದಿರಗಳಲ್ಲಿ ಹೋಗಿ ವೀಕ್ಷಿಸಬೇಕು ಎಂದು ಚಿತ್ರ ತಂಡ ಮನವಿ ಮಾಡಿದೆ.

Exit mobile version