ಅಪ್ಪು ಆಕಾಶ್ ಜೊತೆ ಡೆವಿಲ್ ರೀ- ರಿಲೀಸ್.. ಫ್ಯಾನ್ಸ್ ಖುಷ್

ಫ್ಯಾಮಿಲಿ ಆಡಿಯೆನ್ಸ್ ಜೊತೆ ದಚ್ಚು ಫ್ಯಾನ್ಸ್‌‌ಗೆ ಸಮ್ಮರ್ ಫೆಸ್ಟ್

Untitled design 2026 03 09T152745.229

ಅಪ್ಪು ಬರ್ತ್ ಡೇ ವಿಶೇಷ ಆಕಾಶ್ ರೀ-ರಿಲೀಸ್ ಆಗ್ತಿರೋದು ಎಲ್ರಿಗೂ ಗೊತ್ತೇಯಿದೆ. ಆದ್ರೀಗ ಡಿಬಾಸ್ ದರ್ಶನ್ ಫ್ಯಾನ್ಸ್‌‌ಗೂ ಸಿಹಿಸುದ್ದಿ ಸಿಕ್ಕಿದೆ. ಡೆವಿಲ್ ಮತ್ತೆ ಬಿಡುಗಡೆ ಆಗ್ತಿದ್ದು, ಸಖತ್ ಸೆಲೆಬ್ರೇಷನ್‌ಗೆ ಸೆಲೆಬ್ರಿಟೀಸ್ ಕಾತರರಾಗಿದ್ದಾರೆ.

ಮಾರ್ಚ್‌ 17ರಂದು ರಾಜರತ್ನ ಪುನೀತ್ ರಾಜ್‌ಕುಮಾರ್ ಬರ್ತ್ ಡೇ ವಿಶೇಷ ಈ ಬಾರಿ ಆಕಾಶ್ ಸಿನಿಮಾ, ಇದೇ ಮಾರ್ಚ್‌ 13ಕ್ಕೆ ರೀ-ರಿಲೀಸ್ ಆಗ್ತಿದೆ. 2005ರಲ್ಲಿ ತೆರೆಕಂಡ ಈ ಸಿನಿಮಾ ಬಿಗ್ಗೆಸ್ಟ್ ಫ್ಯಾಮಿಲಿ ಎಂಟರ್‌ಟೈನರ್ ಆಗಿ ಹೊರಹೊಮ್ಮಿತ್ತು. ಶತಕ ಅಲ್ಲ 200 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ದೊಡ್ಮನೆ ಪ್ರೊಡಕ್ಷನ್‌‌ನ ಬಹುದೊಡ್ಡ ಕಮರ್ಷಿಯಲ್ ಹಿಟ್ ಮೂವಿ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಅಪ್ಪು-ರಮ್ಯಾ ಜೋಡಿ ಅಕ್ಷರಶಃ ಮೋಡಿ ಮಾಡಿತ್ತು.

ಅಪ್ಪು ಆಕಾಶ್ ಜೊತೆ ಡೆವಿಲ್ ರೀ- ರಿಲೀಸ್.. ಫ್ಯಾನ್ಸ್ ಖುಷ್

ಮಾರ್ಚ್‌ 13ಕ್ಕೆ ಎರಡು ಬಿಗ್ ಸ್ಟಾರ್ ಬ್ಲಾಕ್‌ಬಸ್ಟರ್ಸ್ ತೆರೆಗೆ..!

ಮಹೇಶ್ ಬಾಬು ನಿರ್ದೇಶನದ, ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ ಈ ಚಿತ್ರ ಯೂತ್ ಜೊತೆ ಫ್ಯಾಮಿಲಿ ಆಡಿಯೆನ್ಸ್‌ಗೆ ಅಚ್ಚುಮೆಚ್ಚಾಗಿತ್ತು. ಕೌಟುಂಬಿಕ ಮೌಲ್ಯಗಳನ್ನ ಎತ್ತಿ ಹಿಡಿಯೋ ಈ ಸಿನಿಮಾ ಇಂದಿಗೂ ಎವರ್‌ಗ್ರೀನ್. ಎಂ ಎಸ್ ರಮೇಶ್ ಸಂಭಾಷಣೆ, ಆರ್ ಪಿ ಪಟ್ನಾಯಕ್ ಸಂಗೀತ, ಅವಿನಾಶ್, ಆಶೀಶ್ ವಿದ್ಯಾರ್ಥಿ, ಕಿಶೋರ್ ನೆಗೆಟೀವ್ ರೋಲ್ಸ್ ಸಿನಿಮಾದ ಗೆಲುವಿಗೆ ಕಾರಣವಾಗಿದ್ದವು. ಬರೋಬ್ಬರಿ 21 ವರ್ಷಗಳ ನಂತ್ರ ಈ ಚಿತ್ರವನ್ನ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಮತ್ತೆ ಮರು ಬಿಡುಗಡೆ ಮಾಡೋ ಮೂಲಕ ಬೆಳ್ಳಿತೆರೆಗೆ ರಾಜರತ್ನನನ್ನ ಆಹ್ವಾನಿಸ್ತಿದ್ದಾರೆ.

ಅದೇ ದಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರೀಸೆಂಟ್ ರಿಲೀಸ್ ಮೂವಿ ಡೆವಿಲ್ ಕೂಡ ತೆರೆಗೆ ಬರ್ತಿದೆ. ಪ್ರಸನ್ನ ಥಿಯೇಟರ್‌‌ನಲ್ಲಿ ದರ್ಶನ್ ಡಬಲ್ ರೋಲ್ ಸಿನಿಮಾ ಬಿಗ್ ಸ್ಕ್ರೀನ್ ಬೆಳಗೋದು ಪಕ್ಕಾ ಆಗಿದೆ. ಇಂಟರೆಸ್ಟಿಂಗ್ ಅಂದ್ರೆ ಅಪ್ಪು ಆಕಾಶ್ ಚಿತ್ರದ ರಿಲೀಸ್ ದಿನವೇ ಡೆವಿಲ್ ಕೂಡ ರಿಲೀಸ್ ಆಗ್ತಿದೆ. ಬಹುಶಃ ಒಂದು ಸಿನಿಮಾ ತೆರೆಕಂಡ ಬಳಿಕ ಇಷ್ಟು ಬೇಗ ರೀ-ರಿಲೀಸ್ ಆಗ್ತಿರೋದು ಇತಿಹಾಸದಲ್ಲಿ ಇದೇ ಮೊದಲು ಅನಿಸ್ತಿದೆ.

ಫ್ಯಾಮಿಲಿ ಆಡಿಯೆನ್ಸ್ ಜೊತೆ ದಚ್ಚು ಫ್ಯಾನ್ಸ್‌‌ಗೆ ಸಮ್ಮರ್ ಫೆಸ್ಟ್

ಪವರ್ ಸ್ಟಾರ್ ಬರ್ತ್ ಡೇ ವಿಶೇಷ ಪುನೀತ್-ರಮ್ಯಾ ರಂಗು..!

ದರ್ಶನ್ ಅನುಪಸ್ಥಿತಿಯ ನಡುವೆಯೂ ಸಹ ನಿರ್ದೇಶಕ ಕಮ್ ನಿರ್ಮಾಪಕ ಮಿಲನ ಪ್ರಕಾಶ್ ಅವರು ಡೆವಿಲ್ ಚಿತ್ರವನ್ನ ಗ್ರ್ಯಾಂಡ್ ಆಗಿ ತೆರೆಗೆ ತಂದಿದ್ದರು. ದರ್ಶನ್ ಫ್ಯಾನ್ಸ್ ಈ ಸಿನಿಮಾದ ರಿಲೀಸ್‌‌ ಸೆಲೆಬ್ರೇಷನ್‌‌ನ ನೆವರ್ ಬಿಫೋರ್ ಎವರ್ ಆಫ್ಟರ್ ರೇಂಜ್‌ಗೆ ಸೆಲೆಬ್ರೇಟ್ ಮಾಡಿದ್ರು. ಇದೀಗ ಆ ಸಂಭ್ರಮಾಚರಣೆ ಮತ್ತೊಮ್ಮೆ ಮರುಕಳಿಸೋ ಸೂಚನೆ ಸಿಕ್ಕಿದೆ. ರಚನಾ ರೈ ಅನ್ನೋ ಹೊಚ್ಚ ಹೊಸ ಪ್ರತಿಭೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಡೆವಿಲ್, ಕಳೆದ ವರ್ಷಾಂತ್ಯದಲ್ಲಿ ತೆರೆಕಂಡ ಬಿಗ್ಗೆಸ್ಟ್ ಹಿಟ್ ಮೂವಿ ಅನಿಸಿಕೊಂಡಿತ್ತು.

 

 

 

 

Exit mobile version