ಪ್ರಕಾಶ್ ರಾಜ್ ವಿರುದ್ಧ ಬಿತ್ತು ಕ್ರಿಮಿನಲ್‌ ಕೇಸ್‌: ರಾಮಾಯಣ ವಿವಾದ ಇದಕ್ಕೆ ಕಾರಣನಾ..?

ಪ್ರಕಾಶ್‌ ರಾಜ್‌ ತೆಕ್ಕೆಯಲ್ಲೀಗ ಹೊಸ ವಿವಾದ

Gvpspmlz1mhmhprakash rai

ನಟ ಪ್ರಕಾಶ್ ರಾಜ್ ಅವರು ಕೇರಳ ಸಾಹಿತ್ಯೋತ್ಸವ (Kerala Literature Festival – 2026)ದಲ್ಲಿ ರಾಮಾಯಣದ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳು ದೊಡ್ಡ ವಿರೋಧವನ್ನು ಎದುರಿಸುತ್ತಿವೆ. ಈ ಹೇಳಿಕೆಗಳು ಹಿಂದೂ ಧಾರ್ಮಿಕ ಭಾವನೆಗಳನ್ನು ಗಾಯಗೊಳಿಸಿದೆ ಎಂದು ಆರೋಪಿಸಿ, ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ.

ಕೇರಳ ಸಾಹಿತ್ಯೋತ್ಸವದಲ್ಲಿ ಮಾತನಾಡುತ್ತಾ ಪ್ರಕಾಶ್ ರಾಜ್ ಅವರು ರಾಮ ಮತ್ತು ಲಕ್ಷ್ಮಣರನ್ನು “ಉತ್ತರ ಭಾರತದ ವಲಸಿಗ ಕಾರ್ಮಿಕರು” ಎಂದು ವರ್ಣಿಸಿದರು. ರಾವಣನನ್ನು “ದಕ್ಷಿಣ ಭಾರತದ ಆದಿವಾಸಿ ವ್ಯಕ್ತಿ” ಎಂದು ಹೇಳಿದರು. ರಾಮ-ರಾವಣರ ಸಂಘರ್ಷಕ್ಕೆ ಕಾರಣವನ್ನು “ರಾಮ ರಾವಣನ ಫಲಗಳನ್ನು ಕದ್ದಿದ್ದು ಎಂದು ಹಾಸ್ಯದ ರೀತಿಯಲ್ಲಿ ನಿರೂಪಿಸಿದರು. ಇದರ ಜೊತೆಗೆ ಸೀತೆಯ ಸೋದರಿ ಶೂರ್ಪನಕಿಯೊಂದಿಗೆ ಸಂಬಂಧಿಸಿದ “₹2000 GST ಬಿಲ್” ವಿಚಾರವನ್ನು ತಮಾಷೆಯಾಗಿ ತಂದು ಇಡೀ ರಾಮಾಯಣವನ್ನು ಹೊಸ ರೀತಿಯಲ್ಲಿ ವ್ಯಾಖ್ಯಾನಿಸಿದರು.

ಈ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಅನೇಕ ಹಿಂದೂ ಸಂಘಟನೆಗಳು ಇದನ್ನು ಹಿಂದೂಫೋಬಿಯಾ ಎಂದು ಖಂಡಿಸಿದ್ದಾರೆ. ಈಗ #BoycottPrakashRaj ಟ್ರೆಂಡ್ ಆಗುತ್ತಿದೆ. ಕೆಲವರು ಅವರ ಚಿತ್ರಗಳಾದ ವಾರಣಾಸಿ, ಸ್ಪಿರಿಟ್ ಮುಂತಾದವುಗಳ ಬಾಯ್‌ಕಾಟ್‌ಗೆ ಕರೆ ನೀಡಿದ್ದಾರೆ.

ಪರಿಣಾಮವಾಗಿ, ಲಕ್ನೋಯಲ್ಲಿ ಒಬ್ಬ ವಕೀಲರು ದೂರು ನೀಡಿದ್ದು, ಧಾರ್ಮಿಕ ಭಾವನೆಗಳನ್ನು ನೋಯಿಸಿದ ಆರೋಪದಡಿ (IPC ಸೆಕ್ಷನ್ 295(A) ಅಡಿಯಲ್ಲಿ) ಕ್ರಿಮಿನಲ್ ಕೇಸ್ ದಾಖಲಾಗಿದೆ.

ಪ್ರಕಾಶ್ ರಾಜ್ ಅವರ ಇದು ಮೊದಲ ವಿವಾದವಲ್ಲ. ಹಿಂದೆಯೂ ಅವರು ಧಾರ್ಮಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಹೇಳಿಕೆಗಳಿಂದ ವಿವಾದಕ್ಕೆ ಒಳಗಾಗಿದ್ದಾರೆ. ಈ ಘಟನೆ ಅವರ ವಿವಾದಗಳ ಸರಣಿಗೆ ಮತ್ತೊಂದು ಕೊಂಡಿಯಾಗಿದೆ.

ಪ್ರಕಾಶ್ ರಾಜ್ ಇನ್ನೂ ಈ ವಿಷಯದಲ್ಲಿ ಔಪಚಾರಿ ಪ್ರತಿಕ್ರಿಯೆ ನೀಡಿಲ್ಲ. ಈ ಕೇಸ್ ಮುಂದಿನ ದಿನಗಳಲ್ಲಿ ಹೆಚ್ಚು ವಿವರಗಳೊಂದಿಗೆ ಬೆಳಕಿಗೆ ಬರಲಿದೆ. ಭಾರತದಲ್ಲಿ ಧಾರ್ಮಿಕ ಭಾವನೆಗಳನ್ನು ನೋಯಿಸುವ ಹೇಳಿಕೆಗಳಿಗೆ ಕಾನೂನು ಕ್ರಮ ತೆಗೆದುಕೊಳ್ಳುವುದು ಸಾಧ್ಯತೆ ಇದೆ ಎಂಬುದು ಮಾಹಿತಿಗಳ ಪ್ರಕಾರ ತಿಳಿದುಬಂದಿದೆ.

ಈ ರೀತಿಯಾಗಿ ಪ್ರಕಾಶ್‌ ರಾಜ್‌ ಹೊಸ ಹೊಸ ವಿವಾದಗಳನ್ನು ತಾವೇ ತಂದುಕೊಳ್ಳುತ್ತಾರ ಅಥವಾ ವಿವಾದಗಳೆ ಅವರನ್ನು ಹುಡುಕಿಕೊಂಡು ಬರುತ್ತವಾ ಗೊತ್ತಿಲ್ಲ ಆದರೂ ಸಹ ಪ್ರಕಾಶ್‌ ರಾಜ್‌ಗೆ ಈ ವಿವಾದಗಳು ಹೊಸದಲ್ಲ ಹೊಸ ಹೊಸ ವಿವಾದಗಳನ್ನು ಹುಡುಕಿಕೊಂಡು ಬರುವುದರಲ್ಲಿ ಪ್ರಕಾಶ್‌ ರಾಜ್‌ ಮೊದಲಿಗರಾಗಿದ್ದಾರೆ.

 

Exit mobile version