ಟಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಪ್ರಭಾಸ್‌ಗೆ ಕೊನೆಗೂ ಕಂಕಣಭಾಗ್ಯ ಕೂಡಿ ಬಂದಿದೆ. ಹೈದರಾಬಾದ್ ಮೂಲದ ದೊಡ್ಡ ಉದ್ಯಮಿಯೊಬ್ಬರ ಪುತ್ರಿಯನ್ನು ಕೈಹಿಡಿಯಲಿದ್ದಾರಂತೆ ಡಾರ್ಲಿಂಗ್ ಪ್ರಭಾಸ್. ಹೆಚ್ಚು ಆಡಂಬರವಿಲ್ಲದೇ ಸರಳವಾಗಿ, ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯಲಿದೆ ಎಂದು ವರದಿಯಾಗಿದೆ. ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್-ಅನುಷ್ಕಾ ಶೆಟ್ಟಿ ಮದುವೆಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಇದೆಲ್ಲ ಸತ್ಯಕ್ಕೆ ದೂರವಾಗಿದ್ದು ನಾವಿಬ್ಬರು ಫ್ರೆಂಡ್ಸ್ ಅಷ್ಟೇ ಎಂದು ಪ್ರಭಾಸ್ ಹೇಳಿದ್ರು. ಸದ್ಯ ಟಾಲಿವುಡ್‌ನಲ್ಲಿ ಎಲ್ಲೆಲ್ಲೂ ಪ್ರಭಾಸ್ ಮದುವೆ ಸುದ್ದಿಯೇ ಚಾಲ್ತಿಯಲ್ಲಿದೆ.
ಬಾಹುಬಲಿ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರೋ ತೆಲುಗು ನಟ ಪ್ರಭಾಸ್ ಅವರು ಹೈದರಾಬಾದ್ ಮೂಲದ ದೊಡ್ಡ ಉದ್ಯಮಿಯೊಬ್ಬರ ಪುತ್ರಿ ಜೊತೆಗೆ ಹಸೆ ಮಣೆ ಏರಲಿದ್ದಾರೆ ಅನ್ನೋ ಸುದ್ದಿ ಕೇಳಿಬರುತ್ತಿದೆ. ಪ್ರಭಾಸ್ ಮದುವೆ ಸೀಕ್ರೆಟ್ ಆಗಿ ನಡೆಯಲಿದ್ದು, ತೆಲುಗಿನ ರೆಬಲ್ ಸ್ಟಾರ್ ಕೃಷ್ಣಂ ರಾಜು ಅವರ ಪತ್ನಿ ಶ್ಯಾಮಲಾ ದೇವಿ ಅವರು ಮದುವೆಯ ಹೊಣೆ ಹೊತ್ತಿದ್ದಾರೆ ಎನ್ನಲಾಗಿದೆ.
ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್-ಅನುಷ್ಕಾ ಶೆಟ್ಟಿ ಮದುವೆಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಇದೆಲ್ಲ ಸತ್ಯಕ್ಕೆ ದೂರವಾಗಿದ್ದು ನಾವಿಬ್ಬರು ಫ್ರೆಂಡ್ಸ್ ಅಷ್ಟೇ ಎಂದು ಹೇಳಿರೋ ಪ್ರಭಾಸ್ ಕೊನೆಗೂ ಅನುಷ್ಕಾ ಶೆಟ್ಟಿಗೆ ಚೊಂಬು ಕೊಟ್ಟಿದ್ದಾರೆ. ಸದ್ಯ ಟಾಲಿವುಡ್‌ನಲ್ಲಿ ಎಲ್ಲೆಲ್ಲೂ 45 ವರ್ಷದ ಪ್ರಭಾಸ್ ಬೇಗ ಮದುವೆ ಆಗ್ತಾರೆ ಅಂತ ಸುದ್ದಿ ಹರಿದಾಡ್ತಿದೆ. ಸಾವಿರಾರು ಕೋಟಿ ಒಡೆತನದ ಬಿಗ್ ಉದ್ಯಮಿಯೊಬ್ಬರ ಪುತ್ರಿ ಜೊತೆ ಪ್ರಭಾಸ್ ನಿಶ್ಚಿತಾರ್ಥವಾಗಿರೋ ಸುದ್ದಿ ಕೇಳಿ ಅನುಷ್ಕಾ ಅಭಿಮಾನಿಗಳು ಬೇಸರದಲ್ಲಿದ್ದಾರಂತೆ
ನಟ ಕೃಷ್ಣಂ ರಾಜು ಅವರ ಉತ್ತರಾಧಿಕಾರಿಯಾಗಿ ಬೆಳ್ಳಿತೆರೆಗೆ ಬಂದು ತನಗೊಂದು ವಿಶೇಷ ಇಮೇಜ್ ಸೃಷ್ಟಿಸಿಕೊಂಡ ಪ್ರಭಾಸ್, ಕ್ರಮೇಣ ಪ್ಯಾನ್-ಇಂಡಿಯಾ ತಾರೆಯಾಗಿ ಮಿಂಚಿದರು. ಬಾಹುಬಲಿಯಂತಹ ಸಿನಿಮಾಗಳಿಂದ ಅವರು ವಿಶ್ವಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಸಿನಿಮಾ ತಾರೆಯರ ವೈಯಕ್ತಿಕ ಜೀವನ ಯಾವಾಗಲೂ ಬಿಸಿ ಬಿಸಿ ಚರ್ಚೆಯ ವಿಷಯವಾಗಿರುತ್ತದೆ. ಇನ್ನೂ ಮುಖ್ಯವಾಗಿ, ನಟರ ಪ್ರೀತಿ ಮತ್ತು ಮದುವೆಯ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಮದುವೆ ವಿಷಯದಲ್ಲಿ ಚರ್ಚೆಗೊಳಗಾಗೋ ಟಾಲಿವುಡ್ ನ ನಂಬರ್ ಒನ್ ಹೀರೋ ಪ್ರಭಾಸ್ ಆಗಿದ್ದಾರೆ.