ಅನುಷ್ಕಾ ಕೈಬಿಡದ ಪ್ರಭಾಸ್..ಇದಲ್ಲವೇ ನಿಷ್ಕಲ್ಮಶ ಪ್ರೀತಿ..?!

ಎಷ್ಟೇ ಎತ್ತರಕ್ಕೆ ಬೆಳೆದರೂ ಆಪ್ತ ಗೆಳತಿಯ ಕೈ ಬಿಡದ ಪ್ರಭಾಸ್

Web (56)

ಡಾರ್ಲಿಂಗ್ ಪ್ರಭಾಸ್ ಇಂದು ಮೋಸ್ಟ್ ಡಿಮ್ಯಾಂಡಿಂಗ್ ಪ್ಯಾನ್ ಇಂಡಿಯಾ ಸ್ಟಾರ್. ಆತ ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ, ತನ್ನ ಜೊತೆ ನಟಿಸಿದ ಡಾರ್ಲಿಂಗ್ ಬ್ಯೂಟಿ ಅನುಷ್ಕಾನ ಮಾತ್ರ ಮರೆತಿಲ್ಲ. ಸದ್ಯ ಘಾಟಿ ಚಿತ್ರದ ಮೂಲಕ ಫೀನಿಕ್ಸ್‌‌ನಂತೆ ಎದ್ದು ಬರ್ತಿರೋ ಕನ್ನಡದ ಸ್ವೀಟಿ ಕೈ ಹಿಡಿದಿದ್ದಾರೆ ಬಾಹುಬಲಿ. ಅದ್ಹೇಗೆ ಅಂತ ನೀವೇ ನೋಡಿ.

ಅನುಷ್ಕಾ ಶೆಟ್ಟಿ ಸೌತ್ ಸಿನಿದುನಿಯಾದ ಮೋಸ್ಟ್ ಎಲಿಜಿಬಲ್ ಚೆಲುವೆ. ಇತ್ತ ಪ್ರಭಾಸ್ ಕೂಡ ವಯಸ್ಸಾಗ್ತಿದ್ರೂ ಮದ್ವೆ ಆಗದೆ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ ಆಗಿಯೇ ಉಳಿದಿದ್ದಾರೆ. ಆದ್ರೆ ಇವರುಗಳ ನಡುವಿನ ಸ್ನೇಹ, ಬಾಂಧವ್ಯ ಮಾತ್ರ ಕಮ್ಮಿ ಆಗಿಲ್ಲ.  ಬಿಲ್ಲ, ಮಿರ್ಚಿ, ಬಾಬಹುಬಲಿ ಹೀಗೆ ನಾಲ್ಕು ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ನಟಿಸಿರೋ ಇವರು ಒಬ್ಬರಿಗೊಬ್ಬರು ಡಾರ್ಲಿಂಗ್ಸ್.

ಅನುಷ್ಕಾ ಕೈಬಿಡದ ಪ್ರಭಾಸ್.. ಇದಲ್ಲವೇ ನಿಷ್ಕಲ್ಮಶ ಪ್ರೀತಿ..?!

ಎಷ್ಟೇ ಎತ್ತರಕ್ಕೆ ಬೆಳೆದರೂ ಆಪ್ತ ಗೆಳತಿಯ ಕೈ ಬಿಡದ ಪ್ರಭಾಸ್

ಈ ಜೋಡಿ ರಿಯಲ್ ಲೈಫ್‌‌ನಲ್ಲೂ ಒಂದಾದ್ರೆ ಚೆನ್ನಾಗಿರಲಿದೆ ಅಂತ ಆಶಿಸಿದ ಅಭಿಮಾನಿ ಬಳಗ ಬಹಳ ದೊಡ್ಡದಿದೆ. ಆದ್ರೆ ಮದ್ವೆ ಆಗೋದಕ್ಕೆ ಯಾಕೋ ಮೀನಾಮೇಷ ಎಣಿಸುತ್ತಿರೋ ಈ ಜೋಡಿ, ಇಂದಿಗೂ ಅದೇ ಸ್ನೇಹ ಸಂಬಂಧವನ್ನು ಮುಂದುವರೆಸಿರೋದು ಇಂಟರೆಸ್ಟಿಂಗ್. ಬಾಹುಬಲಿ ಬಳಿಕ ಅದ್ಯಾಕೋ ಅನುಷ್ಕಾಗೆ ಒಳ್ಳೆಯ ಸಿನಿಮಾಗಳಾಗಲಿ, ಅವಕಾಶಗಳಾಗಲಿ ಸಿಗಲಿಲ್ಲ. ಆದ್ರೆ ಪ್ರಭಾಸ್ ಮೋಸ್ಟ್ ಡಿಮ್ಯಾಂಡಿಂಗ್ ಪ್ಯಾನ್ ಇಂಡಿಯಾ ಸ್ಟಾರ್. ಸಾವಿರಾರು ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ನೀಡಿದ ನಿರ್ಮಾಪಕರ ಪಾಲಿನ ಚಿನ್ನದ ಗಣಿ ಆಗಿದ್ದಾರೆ.

ಬಾಹುಬಲಿ ಸ್ಟಾರ್‌‌ನಿಂದ ಘಾಟಿ ರಿಲೀಸ್ ಟ್ರೈಲರ್ ಲಾಂಚ್!

ಘಾಟಿ ಚಿತ್ರದ ಮೂಲಕ ಭರ್ಜರಿ ಕಂಬ್ಯಾಕ್ ಮಾಡ್ತಿರೋ ಕನ್ನಡತಿ ಅನುಷ್ಕಾ ಶೆಟ್ಟಿ, ಒಳ್ಳೆಯ ಕಂಟೆಂಟ್ ಬೇಸ್ಡ್ ಚಿತ್ರದ ಮೂಲಕ ಬರ್ತಿದ್ದಾರೆ. ಗಾಂಜಾ ಸ್ಮಗ್ಲಿಂಗ್ ಕುರಿತ ಸಿನಿಮಾ ಇದಾಗಿದೆ. ಸ್ವೀಟಿ ಅನುಷ್ಕಾಗೆ ಪ್ರಭಾಸ್ ಕೂಡ ಕೈ ಹಿಡಿದಿದ್ದು, ರಿಲೀಸ್ ಟ್ರೈಲರ್ ಲಾಂಚ್ ಮಾಡಿ, ಸಾಥ್ ನೀಡಿದ್ದಾರೆ. ತನ್ನ ಡಾರ್ಲಿಂಗ್ ಫ್ರೆಂಡ್ ಈ ಬಾರಿ ಗೆಲ್ಲಲೇಬೇಕು ಅಂತ ಹರಸಿ, ಆಶೀರ್ವದಿಸಿದ್ದಾರೆ. ಬಾಹುಬಲಿಯೇ ಆಶೀರ್ವದಿಸಿದ ಮೇಲೆ ಇನ್ನು ಸಿನಿಮಾ ಹಿಟ್ ಆಗದೆ ಇರುತ್ತದೆಯೇ ಅಂತಿದ್ದಾರೆ ಸ್ವೀಟಿ ಫ್ಯಾನ್ಸ್. ಕನ್ನಡದಲ್ಲಿ ಘಾಟಿ ವಿತರಣೆಯನ್ನ ಯಶ್ ತಾಯಿ ಪುಷ್ಪ ಮಾಡ್ತಿದ್ದು, ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ರುಚಿಸುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

Exit mobile version