ಬ್ರಹ್ಮರಾಕ್ಷಸನಾಗಲಿದ್ದಾರೆ ಡಾರ್ಲಿಂಗ್ ಪ್ರಭಾಸ್. ಯೆಸ್.. ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನ ಮೈಥಲಾಜಿಕಲ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿಲಿದೆ. ಹಾಗಾದ್ರೆ ಸಿನಿಮಾ ಯಾವಾಗ ಶುರುವಾಗುತ್ತೆ..? ಯಾರೆಲ್ಲಾ ಇರಲಿದ್ದಾರೆ ಅನ್ನೋದ್ರ ಎಕ್ಸ್‌ಕ್ಲೂಸಿವ್ ಖಬರ್ ಇಲ್ಲಿದೆ.
- ಬ್ರಹ್ಮರಾಕ್ಷಸನಾಗಲಿರೋ ಪ್ರಭಾಸ್.. ಹೊಂಬಾಳೆ ನ್ಯೂ ಚಾಪ್ಟರ್
- 2027ಕ್ಕೆ ಶೂಟಿಂಗ್ ಸ್ಟಾರ್ಟ್.. ಪ್ರೀ ಪ್ರೊಡಕ್ಷನ್ನಲ್ಲಿ ಪ್ರಶಾಂತ್
- ಚಿತ್ರಕ್ಕೆ ಡಾರ್ಲಿಂಗ್ ಪ್ರಭಾಸ್ ಇನ್.. ರಣ್‌ವೀರ್ ಸಿಂಗ್ ಔಟ್
- ಮೈಥಲಾಜಿಕಲ್ ಥ್ರಿಲ್ಲರ್ಗೆ ವಿಜಯ್ ಕಿರಗಂದೂರು ಬಂಡವಾಳ
ಪ್ಯಾನ್ ಇಂಡಿಯಾ ಸಿನಿಮಾಗಳ ಡಾರ್ಲಿಂಗ್ ಅನಿಸಿಕೊಂಡಿರೋ ಬಾಹುಬಲಿ ಪ್ರಭಾಸ್, ಸದ್ಯ ಸ್ಪಿರಿಟ್ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಅಗಿದ್ದಾರೆ. ಈ ವರ್ಷಾಂತ್ಯಕ್ಕೆ ಸಂದೀಪ್ ರೆಡ್ಡಿ ವಂಗಾರ ಸ್ಪಿರಿಟ್ ಮುಗಿಸಿ, ಅದೇ ಸ್ಪಿರಿಟ್‌ನಲ್ಲೇ 2026ರಲ್ಲಿ ಒಂದಲ್ಲ ಎರಡೆರಡು ಪ್ರಾಜೆಕ್ಟ್‌ಗಳಿಗೆ ಕೈ ಹಾಕ್ತಿದ್ದಾರೆ. ಒಂದು ಸಲಾರ್-2. ಮತ್ತೊಂದು ಕಲ್ಕಿ-2.
ಇಷ್ಟೆಲ್ಲಾ ಬ್ಯುಸಿ ಇರೋ ಪ್ರಭಾಸ್ ಮತ್ತೊಂದು ಮೆಗಾ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅದೇ ಬ್ರಹ್ಮರಾಕ್ಷಸ. ಯೆಸ್.. ಮೈಥಲಾಜಿಕಲ್ ಥ್ರಿಲ್ಲರ್ ಸಿನಿಮಾ ಬ್ರಹ್ಮರಾಕ್ಷಸಗೆ ಪ್ರಭಾಸ್ ಓಕೆ ಅಂದಿದ್ದು, ಈ ಮೊದಲು ಲೀಡ್ ಆ್ಯಕ್ಟರ್ ಆಗಬೇಕಿದ್ದ ರಣ್‌ವೀರ್ ಸಿಂಗ್ ಈ ಚಿತ್ರದಿಂದ ಹೊರಹೋಗಿದ್ದಾರಂತೆ. ಅದಕ್ಕೆ ಕಾರಣ ಕ್ರಿಯೇಟಿವ್ ಡಿಫರೆನ್ಸಸ್. ಆದ್ರೆ ಪ್ರಭಾಸ್ ಸ್ಟೈಲು, ಮ್ಯಾನರಿಸಂ, ಹೈಟು, ವೆಯ್ಟ್‌ಗೆ ಡಾರ್ಲಿಂಗ್ ಒಬ್ರೇ ಸೂಟಬಲ್ ಕ್ಯಾರೆಕ್ಟರ್ ಅಂತಿದ್ದಾರೆ ಫ್ಯಾನ್ಸ್.
ಅಂದಹಾಗೆ ತೇಜಾ ಸಜ್ಜಾ ಜೊತೆ ಹನುಮ್ಯಾನ್ ಸಿನಿಮಾ ಮಾಡಿದ್ದ ಪ್ರಶಾಂತ್ ವರ್ಮಾ ಅವರೇ ಈ ಬ್ರಹ್ಮರಾಕ್ಷಸ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇದು ಕೂಡ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನ ಭಾಗವಾಗಿರಲಿದ್ದು, ನೋಡುಗರಿಗೆ ಸಖತ್ ಥ್ರಿಲ್ ಕೊಡಲಿದೆಯಂತೆ. ಈಗಾಗ್ಲೇ ಪ್ರಭಾಸ್‌ಗೆ ಲುಕ್‌ಟೆಸ್ಟ್ ಕೂಡ ಆಗಿದ್ದು, ಕಥೆ ಕೇಳಿ ಫುಲ್ ಎಕ್ಸೈಟ್ ಆಗಿದ್ದಾರಂತೆ ಡಾರ್ಲಿಂಗ್.
ಅಂದಹಾಗೆ ಸದ್ಯ ಪ್ರಶಾಂತ್ ವರ್ಮಾ ಜೈ ಹನುಮಾನ್ ಸಿನಿಮಾ ಮಾಡೋ ಧಾವಂತದಲ್ಲಿದ್ದಾರೆ. ನಮ್ಮ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ರಾಮ ಭಂಟ ಹನುಮಂತನಾಗಿ ಕಾಣಸಿಗಲಿದ್ದು, ಇದೊಂದು ಮೆಗಾ ಪ್ಯಾನ್ ಇಂಡಿಯಾ ಮೂವಿ ಆಗಲಿದೆ. ಈ ಜೈ ಹನುಮಾನ್ 2026ರಲ್ಲಿ ಶೂಟಿಂಗ್ ನಡೆಯಲಿದ್ದು, ಕಾಂತಾರ-1ನಿಂದ ರಿಷಬ್ ಶೆಟ್ಟಿ ಹೊರಬರಲಿ ಅಂತ ಕಾಯ್ತಿದ್ದಾರೆ ಪ್ರಶಾಂತ್ ವರ್ಮಾ.
ಅಂದಹಾಗೆ 2026ರಲ್ಲಿ ಬ್ರಹ್ಮ ರಾಕ್ಷಸ ಚಿತ್ರದ ನಾಯಕನಟ ಪ್ರಭಾಸ್ ಹಾಗೂ ಡೈರೆಕ್ಟರ್ ಪ್ರಶಾಂತ್ ವರ್ಮಾ ಇಬ್ಬರೂ ಬ್ಯುಸಿ ಇದ್ದಾರೆ. ಹಾಗಾಗಿಯೇ ಈ ಚಿತ್ರ 2027ಕ್ಕೆ ಶೂಟಿಂಗ್ ಶುಭಾರಂಭ ಮಾಡಲಿದೆ. ಇದನ್ನ ನಮ್ಮ ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ನಿರ್ಮಿಸ್ತಿದೆ ಅನ್ನೋದು ಕನ್ನಡಿಗರಾಗಿ ನಾವೆಲ್ಲಾ ಹೆಮ್ಮೆ ಪಡುವ ವಿಷಯ.
ಕೆಜಿಎಫ್, ಕಾಂತಾರ, ಸಲಾರ್ ಸೇರಿದಂತೆ ವಿಶ್ವ ಸಿನಿದುನಿಯಾ ತಿರುಗಿ ನೋಡುವಂತಹ ಚಿತ್ರಗಳನ್ನ ನಿರ್ಮಾಣ ಮಾಡಿದ್ದಾರೆ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು. ಆ ಮೂಲಕ ನಮ್ಮ ಸಂಸ್ಕೃತಿಯ ಮೂಲ ಬೇರುಗಳಿಗೆ ಮತ್ತಷ್ಟು ನೀರೆರೆಯುವ ಕಾರ್ಯ ಮಾಡ್ತಿದ್ದಾರೆ. ಇದೀಗ ಬ್ರಹ್ಮರಾಕ್ಷಸ ಚಿತ್ರದಿಂದ ಮತ್ತೊಂದು ಮಹತ್ವದ ಹೆಜ್ಜೆ ಇಡ್ತಿರೋದು ನಿಜಕ್ಕೂ ಖುಷಿಯ ವಿಚಾರ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್