ಪೈಲ್ವಾನನ್ನು ಎತ್ತಿ ಹಾಕಿದ ಶಿವಣ್ಣ..ಪೆದ್ದಿ ಮೇಕಿಂಗ್ ಝಲಕ್

ಕುಸ್ತಿ ಅಖಾಡದ ಕರುನಾಡ ಕಿಂಗ್..ಗೌರ್‌ನಾಯ್ಡು ಆದ್ರು ಶಿವಣ್ಣ

Untitled design 2026 05 15T174335.123

ಜೈಲರ್ ಸಿನಿಮಾ ಮೂಲಕ ಇಡೀ ಸೌತ್ ಇಂಡಿಯಾವನ್ನೇ ನಡುಗಿಸಿದ್ದ ಶಿವಣ್ಣ, ಈಗ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅವರ ಪೆದ್ದಿ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣನ ಲುಕ್ ಹೇಗಿದೆ? ಮೇಕಿಂಗ್ ವಿಡಿಯೋದಲ್ಲಿ ರಿವೀಲ್ ಆಗಿರೋ ಆ ಸೀಕ್ರೆಟ್ ಏನು? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

ಸಿನಿಮಾ ಪ್ರೇಮಿಗಳಲ್ಲಿ ‘ಪೆದ್ದಿ’ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಸೃಷ್ಟಿಯಾಗಿದೆ, ಅದಕ್ಕೆ ಮುಖ್ಯ ಕಾರಣ ಸ್ಯಾಂಡಲ್‌ವುಡ್‌ನ ಶಿವರಾಜ್‌ಕುಮಾರ್. ಕಳೆದ ವರ್ಷ ‘ಜೈಲರ್’ ನಲ್ಲಿ ಅಬ್ಬರಿಸಿದ್ದ ಶಿವಣ್ಣ ತಮ್ಮ ಮ್ಯಾನರಿಸಂ ಮತ್ತು ಸ್ವಾಗ್ ಮೂಲಕ ಇಡೀ ದಕ್ಷಿಣ ಭಾರತದ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು. ಈಗ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮತ್ತು ಸುಕುಮಾರ್ ಶಿಷ್ಯ ಬುಚ್ಚಿ ಬಾಬು ಸನಾ ಕಾಂಬಿನೇಷನ್‌ನ ‘ಪೆದ್ದಿ’ ಚಿತ್ರದಲ್ಲಿ ಶಿವಣ್ಣ ಮತ್ತೊಮ್ಮೆ ಪರಭಾಷೆಯ ಅಂಗಳದಲ್ಲಿ ತನ್ನ ಸಾಮ್ರಾಜ್ಯ ವಿಸ್ತರಿಸಲು ಸಜ್ಜಾಗಿದ್ದಾರೆ.

ಪೆದ್ದಿ ಸಿನಿಮಾ ತಂಡ ಇದುವರೆಗೆ ರಹಸ್ಯವಾಗಿಟ್ಟಿದ್ದ ಶಿವಣ್ಣನ ಲುಕ್ ಈಗ ಮೇಕಿಂಗ್ ವಿಡಿಯೋ ಮೂಲಕ ಬಹಿರಂಗವಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸುನಾಮಿ ಎಬ್ಬಿಸಿದ್ದು, ಶಿವಣ್ಣನ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ವಿಶೇಷವೆಂದರೆ, ಇಲ್ಲಿ ಶಿವಣ್ಣ ಕೇವಲ ಅತಿಥಿ ಪಾತ್ರಧಾರಿಯಲ್ಲ, ಬದಲಿಗೆ ಕಥೆಯ ತಿರುವು ನೀಡುವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕುಸ್ತಿ ಅಖಾಡದಲ್ಲಿ ಪೈಲ್ವಾನನನ್ನು ಎತ್ತಿ ಹಾಕುವ ಶಿವಣ್ಣನ ಆ ಒಂದು ಝಲಕ್, ಇದು ಪಕ್ಕಾ ‘ಮಾಸ್’ ಸಿನಿಮಾ ಅನ್ನೋದಕ್ಕೆ ಸಾಕ್ಷಿ ಒದಗಿಸಿದೆ.

ಪೆದ್ದಿ’ ಸಿನಿಮಾದಲ್ಲಿ ಶಿವಣ್ಣ ‘ಗೌರ್‌ನಾಯ್ಡು’ ಎಂಬ ಖಡಕ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಡಿಯೋದಲ್ಲಿ ಕಂಡುಬರುವಂತೆ ಅವರು ಒಂದು ಊರಿನ ಪ್ರಭಾವಿ ಮುಖ್ಯಸ್ಥನಾಗಿ ಅಬ್ಬರಿಸಿದ್ದಾರೆ. ಕುಸ್ತಿ ಅಖಾಡದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಪಾತ್ರ, ಶಿವಣ್ಣನ ನಟನಾ ವೈಖರಿಗೆ ಮತ್ತೊಂದು ಹೊಸ ಆಯಾಮ ನೀಡುವಂತಿದೆ. ರಾಮ್ ಚರಣ್ ಮತ್ತು ಶಿವಣ್ಣ ಮುಖಾಮುಖಿಯಾಗುವ ದೃಶ್ಯಗಳಂತೂ ಚಿತ್ರಮಂದಿರದಲ್ಲಿ ಸಿಳ್ಳೆ-ಚಪ್ಪಾಳೆಯ ಸುರಿಮಳೆಗೈಯೋದು ಗ್ಯಾರಂಟಿ ಎನ್ನುತ್ತಿದೆ ಚಿತ್ರತಂಡ.

ಬುಚ್ಚಿ ಬಾಬು ಸನಾ ನಿರ್ದೇಶನದ ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತದ ಬಲವಿದೆ. ಈಗಾಗಲೇ ಹಾಡುಗಳು ಸೂಪರ್ ಹಿಟ್ ಆಗಿದ್ದು, ಮೇ 18 ರಂದು ಟ್ರೈಲರ್ ರಿಲೀಸ್ ಆಗಲಿದೆ. ಕರ್ನಾಟಕದಲ್ಲಿ ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ವಿತರಣೆ ಮಾಡುತ್ತಿರುವುದು ಚಿತ್ರದ ಮೇಲಿರುವ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಜೂನ್ 4 ರಂದು ಬೆಳ್ಳಿತೆರೆಯ ಮೇಲೆ ರಾಮ್ ಚರಣ್ ಮತ್ತು ಶಿವಣ್ಣನ ಜುಗಲ್‌ಬಂದಿ ನೋಡಲು ಇಡೀ ದಕ್ಷಿಣ ಭಾರತವೇ ಕಾತುರದಿಂದ ಕಾಯುತ್ತಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.

Exit mobile version