ಸನ್ಯಾಸಿ ಆಗ್ತಿದ್ದಾರಾ ಡಿಸಿಎಂ ಪವನ್ ಮಾಜಿ ಪತ್ನಿ ರೇಣು..?

ಮಲ್ಟಿ ಟ್ಯಾಲೆಂಟ್ ರೇಣು ದೇಸಾಯಿ ಹೀಗ್ಯಾಕೆ ಆದ್ರು ಗುರು

Web (27)

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಎರಡನೇ ಪತ್ನಿ ರೇಣು ದೇಸಾಯಿ ಅದ್ಯಾಕೋ ಸನ್ಯಾಸತ್ವ ಸೀಕರಿಸೋ ಮನಸ್ಸು ಮಾಡಿದ್ದಾರೆ. ಅದೀಗ ತೆಲುಗು ನಾಡಲ್ಲಿ ಬಹುದೊಡ್ಡ ಸಂಚಲನ ಸೃಷ್ಠಿಸಿದ್ದು, ಅದಕ್ಕೆ ಸ್ವತಃ ಅವರೇ ಸ್ಪಷ್ಟನೆ ಕೂಡ ನೀಡಿದ್ದಾರೆ. ಅರೇ.. ಮಗ ಅಕಿರಾ ನಂದನ್‌ನ ಹೀರೋ ಆಗಿ ಲಾಂಚ್ ಮಾಡೋ ಟೈಮಲ್ಲಿ ಈಕೆ ಯಾಕೆ ಇಂತಹ ನಿರ್ಧಾರ ಕೈಗೊಂಡ್ರು ಅಂತೀರಾ..?

ಪವನ್ ಕಲ್ಯಾಣ್ ಸದ್ಯ ಆಂಧ್ರ ಪಾಲಿಟಿಕ್ಸ್‌‌‌ನ ಗೇಮ್ ಚೇಂಜರ್. ಡಿಸಿಎಂ ಆಗಿ ಮಿಂಚು ಹರಿಸುತ್ತಿರೋ ಪವರ್ ಸ್ಟಾರ್, ಸಿಎಂ ಪವರ್‌‌ ಗದ್ದುಗೆಯಲ್ಲಿ ಕೂರೋಕೆ ಇನ್ನೊಂದೇ ಒಂದು ಸ್ಟೆಪ್ ಬಾಕಿಯಿದೆ. ಪ್ರಧಾನಿ ಮೋದಿಯ ಅಚ್ಚುಮೆಚ್ಚಿನ ವ್ಯಕ್ತಿ, ಪೊಲಿಟಿಷಿಯನ್, ಸ್ಟ್ರ್ಯಾಟಜಿಸ್ಟ್ ಆಗಿ ಚಿರಂಜೀವಿ ಸಹೋದರ ಪವನ್ ನ್ಯಾಷನಲ್, ಇಂಟರ್‌‌ನ್ಯಾಷನಲ್ ಲೆವೆಲ್‌‌ನಲ್ಲಿ ಸದ್ದು ಮಾಡ್ತಾ ಸುದ್ದಿಯಲ್ಲಿದ್ದಾರೆ.

ಸನ್ಯಾಸಿ ಆಗ್ತಿದ್ದಾರಾ ಡಿಸಿಎಂ ಪವನ್ ಮಾಜಿ ಪತ್ನಿ ರೇಣು..?

ಮಲ್ಟಿ ಟ್ಯಾಲೆಂಟ್ ರೇಣು ದೇಸಾಯಿ ಹೀಗ್ಯಾಕೆ ಆದ್ರು ಗುರು

ಒಂದ್ಕಡೆ ಪವನ್ ಕಲ್ಯಾಣ್ ರಾಜಕೀಯವಾಗಿ ಉತ್ತುಂಗಕ್ಕೇರುತ್ತಿದ್ದಾರೆ. ಮತ್ತೊಂದ್ಕಡೆ ಚಿತ್ರರಂಗದಲ್ಲೂ ಆನ್ ಸ್ಕ್ರೀನ್ ಖದರ್ ಜೋರಿದೆ. ಇತ್ತೀಚೆಗೆ ರಿಲೀಸ್ ಆದ ಓಜಿ ಸಿನಿಮಾ ಮುನ್ನೂರು ಕೋಟಿ ರೂಪಾಯಿ ಗಳಿಸೋ ಮೂಲಕ ಎಲ್ಲರ ಹುಬ್ಬೇರಿಸಿದೆ. ಪವನ್ ಹೀಗೆ ಸಕ್ಸಸ್‌‌ನ ನಾಗಾಲೋಟದಲ್ಲಿರುವಾಗ ಅವ್ರ ಎರಡನೇ ಪತ್ನಿ ರೇಣು ದೇಸಾಯಿ ಸನ್ಯಾಸಿ ಆಗ್ತೀನಿ ಅಂದಿರೋ ಸ್ಟೇಟ್‌‌ಮೆಂಟ್ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸ್ತಿದೆ.

ಪವನ್ ಎರಡನೇ ಪತ್ನಿ ರೇಣು ದೇಸಾಯಿ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಂದರ್ಶಕರು ಕೇಳಿದ ಫ್ಯೂಚರ್ ಪ್ಲ್ಯಾನ್ಸ್ ಏನು ಅನ್ನೋ ಪ್ರಶ್ನೆಗೆ ತಮಾಷೆಯಾಗಿ ಸನ್ಯಾಸಿ ಆಗೋಣ ಅಂತ ಇದ್ದೀನಿ ಅಂತ ಉತ್ತರಿಸಿದ್ದರು. ಅದೀಗ ಸಿಕ್ಕಾಪಟ್ಟೆ ವೈರಲ್ ಆಗಿ, ರೇಣು ದೇಸಾಯಿಗೆ ಪವನ್ ಫ್ಯಾನ್ಸ್, ಬಂಧು, ಬಳಗ, ಆಪ್ತರು, ಕುಟುಂಬಸ್ಥರು ಎಲ್ಲರೂ ಈ ಬಗ್ಗೆ ಫೋನ್ ಕರೆ ಹಾಗೂ ಮೆಸೇಜ್‌ಗಳ ಮೂಲಕ ಹೀಗ್ಯಾಕೆ ಹೀಳಿದ್ರಿ ಅಂತ ಪ್ರಶ್ನಿಸೋಕೆ ಶುರು ಮಾಡಿದ್ದಾರೆ. ಆ ಬಗ್ಗೆ ಸಿಕ್ಕಾಪಟ್ಟೆ ಮಂಡೆ ಬಿಸಿ ಮಾಡಿಕೊಂಡಿರೋ ರೇಣು ದೇಸಾಯಿ, ವಿಡಿಯೋ ಮೂಲಕ ಸ್ಪಷ್ಟನೆ ಕೂಡ ನೀಡಿದ್ದಾರೆ.

ಸನ್ಯಾಸಿ ಆಗ್ತಿದ್ದಾರಾ ಡಿಸಿಎಂ ಪವನ್ ಮಾಜಿ ಪತ್ನಿ ರೇಣು..?

ಮಲ್ಟಿ ಟ್ಯಾಲೆಂಟ್ ರೇಣು ದೇಸಾಯಿ ಹೀಗ್ಯಾಕೆ ಆದ್ರು ಗುರು

ಅಂದಹಾಗೆ ಪವನ್ ಕಲ್ಯಾಣ್-ರೇಣು ದೇಸಾಯಿ ಪುತ್ರ ಅಕಿರಾ ನಂದನ್, ಥೇಟ್ ಪವನ್ ರೀತಿ ಆರಡಗುಲ ಬುಲೆಟ್ ರೀತಿ ಬೆಳೆದು ನಿಂತಿದ್ದಾರೆ. ಹೀರೋ ಆಗಿ ಲಾಂಚ್ ಕೂಡ ಆಗ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಕಿರಾ ತಾಯಿ ಸನ್ಯಾಸತ್ವ ಪಡೆದು, ಸನ್ಯಾಸಿ ಆಗ್ತಾರೆ ಅಂದ್ರೆ ಹೇಗೆ ಅಲ್ಲವೇ..? ಅದೇ ಕಾರಣದಿಂದ ಆಕೆ ಕೂಡಲೇ ಅದು ತಮಾಷೆಗಾಗಿ ಹೇಳಿದ್ದು, ಸೀರಿಯಸ್ ಅಲ್ಲ ಅಂತ ಕ್ಲಾರಿಫಿಕೇಷನ್ ಕೊಟ್ಟುಬಿಟ್ಟಿದ್ದಾರೆ.

ಮಗ ಅಕಿರಾ ನಂದನ್ ಹೀರೋ ಆಗಿ ಲಾಂಚ್ ಆಗೋ ಟೈಂ

ಗಂಡ ಪವನ್ ಗೇಮ್ ಚೇಂಜರ್.. ಹೆಂಡ್ತಿ ರೇಣು ಎಡವಟ್

ಪವನ್ ಜೊತೆ ಖುಷಿ, ಜಾನಿ ಅನ್ನೋ ಎರಡೆರಡು ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ರೇಣು ದೇಸಾಯಿ, ಮೂಲತಃ ಕಾಸ್ಟ್ಯೂಮ್ ಡಿಸೈನರ್. ಗುಜರಾತಿ ತಂದೆ, ಮರಾಠಿ ಮದರ್‌ಗೆ ಜನಿಸಿದ ರೇಣು, ಮರಾಠಿ ಸಿನಿಮಾವೊಂದರ ಡೈರೆಕ್ಟರ್ ಕೂಡ ಹೌದು. ಸಿನಿಮಾ ಎಡಿಟರ್, ನಿರ್ಮಾಪಕಿ ಆಗಿಯೂ ಹೆಸರು ಮಾಡಿದ್ದಾರೆ. ಅಲ್ಲದೆ, ಕಿರುತೆರೆ ಸೀರಿಯಲ್‌‌ನಲ್ಲೂ ಛಾಪು ಮೂಡಿಸೋ ಮೂಲಕ ಬಹುಮುಖ ಪ್ರತಿಭೆ ಅನಿಸಿಕೊಂಡಿದ್ದಾರೆ ರೇಣು ದೇಸಾಯಿ.

2012ರಲ್ಲಿ ಪವನ್ ಕಲ್ಯಾಣ್‌ರಿಂದ ವಿಚ್ಚೇದನ ಪಡೆದ ರೇಣು ದೇಸಾಯಿ, ಅದಾದ ಬಳಿಕ 2018ರಲ್ಲಿ ಒಬ್ಬ ಬ್ಯುಸಿನೆಸ್‌‌ಮ್ಯಾನ್ ಜೊತೆ ಎಂಗೇಜ್ ಆಗಿದ್ರು. ಆಮೇಲೆ ಅದೇನಾಯ್ತೋ ಏನೋ ಗೊತ್ತಿಲ್ಲ. ನಾನು ಮದ್ವೆ ಆಗಲ್ಲ, ಒಂಟಿಯಾಗಿಯೇ ಇದ್ದು ಬಿಡ್ತೀನಿ ಅಂತ ಅಂದಿನಿಂದ ಸಿಂಗಲ್ ಆಗಿಯೇ ಉಳಿದುಬಿಟ್ಟಿದ್ದಾರೆ ಪವನ್ ಮಾಜಿ ಎರಡನೇ ಪತ್ನಿ ರೇಣು ದೇಸಾಯಿ.

Exit mobile version