ಆಂಧ್ರ ಡಿಸಿಎಂ ಈಗ ಗ್ಯಾಂಗ್‌ಸ್ಟರ್.. ಜನ ಒಪ್ತಾರಾ..?!

ಕತ್ತಿ ಹಿಡಿದು ರಕ್ತ ಹರಿಸಲಿರೋ OG- ಓಜಸ್ ಗಂಭೀರ..!

Untitled design 2025 06 09t154349.543

ಪವನ್ ಕಲ್ಯಾಣ್.. ಆಂಧ್ರ ಡಿಸಿಎಂ ಆಗೋಕೂ ಮುನ್ನ ಚಿತ್ರಪ್ರೇಮಿಗಳ ಅಚ್ಚುಮೆಚ್ಚಿನ ಪವರ್ ಸ್ಟಾರ್. ಇವರ ಹೀರೋಯಿಸಂ ಬರೀ ಸ್ಕ್ರೀನ್‌‌ ಮೇಲಷ್ಟೇ ಅಲ್ಲ. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲೂ ಪವನ್ ಗೇಮ್ ಚೇಂಜರ್ ಅನ್ನೋದು ಪ್ರೂವ್ ಆಗಿದೆ. ಆದ್ರೆ ಅದೇ ಡಿಸಿಎಂ ಗ್ಯಾಂಗ್‌‌ಸ್ಟರ್ ಆಗಿ ಬಂದು ರಕ್ತ ಹರಿಸಿದ್ರೆ ಜನ ಒಪ್ತಾರಾ ಅನ್ನೋದಕ್ಕೆ ಈ ಸ್ಟೋರಿ ಒಮ್ಮೆ ನೋಡಿ.

ಪವರ್ ಸ್ಟಾರ್ ಪವನ್ ಕಲ್ಯಾಣ್.. ಆಂಧ್ರ ಪಾಲಿನ ರಿಯಲ್ ಗೇಮ್ ಚೇಂಜರ್. ಇವರು ಚಿತ್ರರಂಗ ಹಾಗೂ ರಾಜಕಾರಣ ಎರಡರಲ್ಲೂ ಬಹುದೊಡ್ಡ ಛಾಪು ಮೂಡಿಸಿರೋ ಮಹಾನ್ ಮಾಂತ್ರಿಕ. ಹೌದು.. ಇತ್ತೀಚೆಗೆ ಟಿಡಿಪಿಗೆ ಸಾಥ್ ನೀಡಿದ ಜನಸೇನಾ, ಅಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲು ಇದೇ ವ್ಯಕ್ತಿ ಕಾರಣ ಆಗ್ತಾರೆ. ಅದ್ರಲ್ಲೂ ಮೋದಿ ಅಚ್ಚುಮೆಚ್ಚಿನ ವ್ಯಕ್ತಿತ್ವವಾಗಿರೋ ಪವನ್, ಮುಂದೊಂದು ದಿನ ಸಿಎಂ ಆದ್ರೂ ಅಚ್ಚರಿಯಿಲ್ಲ.

ಅಂದಹಾಗೆ ಚಿರಂಜೀವಿ ಸಹೋದರ ಪವನ್ ಕಲ್ಯಾಣ್, ಈಗ ಕಂಪ್ಲೀಟ್ ಆಗಿ ರಾಜಕಾರಣಿ ಆಗಿಬಿಟ್ಟಿದ್ದಾರೆ. ಹಾಗಂತ ಸಿನಿಮಾರಂಗಕ್ಕೆ ಗುಡ್ ಬೈ ಹೇಳಿಬಿಟ್ರಾ..? ಇನ್ಮೇಲೆ ಫ್ಯಾನ್ಸ್‌ಗೆ ಪವರ್ ಸ್ಟಾರ್ ಸಿನಿಮಾಗಳನ್ನ ದೊಡ್ಡ ಪರದೆ ಮೇಲೆ ಕಣ್ತುಂಬಿಕೊಳ್ಳುವ ಅವಕಾಶ ಇಲ್ವಾ ಅಂತ ನೀವು ಪ್ರಶ್ನಿಸಿದ್ರೆ. ಇದೆ ಅನ್ನೋ ಉತ್ತರ ಕೊಡಬಹುದು. ಯಾಕಂದ್ರೆ ಅವರು ಮಗ ಅಕಿರಾ ನಂದನ್‌‌ನನ್ನ ಹೀರೋ ಮಾಡಿ, ತಾವು ರಾಜಕಾರಣದಲ್ಲೇ ಸಕ್ರಿಯರಾಗೋ ಮನಸ್ಸು ಮಾಡಿದ್ದಾರೆ. ಆದ್ರೆ ಅದಕ್ಕೂ ಮುನ್ನ ಕಮಿಟ್ ಆಗಿರೋ ಸಿನಿಮಾಗಳನ್ನ ಮುಗಿಸಿಕೊಡ್ತಿದ್ದಾರೆ.

ಇತ್ತೀಚೆಗೆ ಹರಿಹರ ವೀರಮಲ್ಲು ಸಿನಿಮಾದ ಕೊನೆಯ ಹಂತದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ರು. ಅದರ ರಿಲೀಸ್ ಡೇಟ್ ಕೂಡ ಇದೇ ಜೂನ್ 12ಕ್ಕೆ ಅನೌನ್ಸ್ ಆಗಿತ್ತು. ಆದ್ರೀಗ ಸಿನಿಮಾದ ವಿಎಫ್‌ಎಕ್ಸ್ ಕೆಲಸಗಳು ಮುಗಿದಿಲ್ಲ ಅಂತ ಹರಿಹರ ವೀರಮಲ್ಲು ರಿಲೀಸ್ ಡೇಟ್ ಪೋಸ್ಟ್‌ಪೋನ್ ಮಾಡಲಾಗಿದೆ. ಅದರೊಟ್ಟಿಗೆ ಓಜಿ ಅನ್ನೋ ಸಿನಿಮಾನ ಇತ್ತೀಚೆಗೆ ಕಂಪ್ಲೀಟ್ ಮಾಡಿದ್ದಾರೆ ಪವನ್ ಕಲ್ಯಾಣ್. ಹೌದು.. ಅದ್ರ ನ್ಯೂ ಪೋಸ್ಟರ್‌ನೊಂದಿಗೆ ಸಿನಿಮಾದ ಚಿತ್ರೀಕರಣ ಮುಗಿದಿರೋ ವಿಷ್ಯ ಕೂಡ ಹೊರಬಿದ್ದಿದೆ.

ಅಂದಹಾಗೆ ಪವನ್ ಕಲ್ಯಾಣ್ ಈ ಓಜಿ ಸಿನಿಮಾದಲ್ಲಿ ಓಜಸ್ ಗಂಭೀರ ಅನ್ನೋ ಗ್ಯಾಂಗ್‌ಸ್ಟರ್ ರೋಲ್ ಮಾಡ್ತಿದ್ದಾರೆ. ಡಿಸಿಎಂ ಆಗಿರೋ ಪವನ್ ಕಲ್ಯಾಣ್, ಈ ರೀತಿ ಗ್ಯಾಂಗ್‌ಸ್ಟರ್ ಆಗಿ ಕತ್ತಿ ಹಿಡಿದು, ರಕ್ತ ಹರಿಸಿದ್ರೆ ಜನ ಅದನ್ನ ಒಪ್ಪಿಕೊಳ್ತಾರಾ ಅನ್ನೋ ಮಾತುಗಳು ಕೇಳಿಬರ್ತಿವೆ. ನಿಜ ಜೀವನದಲ್ಲಿ ಹೀರೋ ಆಗಿ, ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಪವನ್, ಹೀಗೆ ಕ್ರೌರ್ಯದ ಮೂಲಕ ಥಿಯೇಟರ್‌ಗೆ ಬಂದ್ರೆ ಅಕ್ಸೆಪ್ಟ್ ಮಾಡ್ತಾರಾ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.

ಈ ಹಿಂದೆ ಡಾರ್ಲಿಂಗ್ ಪ್ರಭಾಸ್‌ಗೆ ಬಾಹುಬಲಿ ಬಳಿಕ ಸಾಹೋ ಅನ್ನೋ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದ ಸುಜೀತ್, ಈ ಓಜಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸುಮಾರು 250 ಕೋಟಿ ಬಿಗ್ ಬಜೆಟ್‌‌ನಲ್ಲಿ ಓಜಿ ಸಿನಿಮಾ ಮೂಡಿಬಂದಿದ್ದು, ಇದೇ ಸೆಪ್ಟೆಂಬರ್ 25ಕ್ಕೆ ವರ್ಲ್ಡ್‌ವೈಡ್ ತೆರೆಗೆ ಅಪ್ಪಳಿಸುತ್ತಿದೆ. ಹರಿಹರ ವೀರಮಲ್ಲು ಮೊಘಲ್ ಸಾಮ್ರಾಜ್ಯದ ಬ್ಯಾಕ್‌ಡ್ರಾಪ್‌‌ನಲ್ಲಿ ತಯಾರಾಗಿರೋ ಒಬ್ಬ ವೀರನ ಕಥೆ. ಅದು ಓಕೆ ಆದ್ರೆ ಈ ತಕ್ತಪಾತದ ಓಜಿ ಏಕೆ ಅನ್ನೋದು ಹಲವರ ಪ್ರಶ್ನೆಯಾಗಿದೆ. ರಿಲೀಸ್ ಬಳಿಕ ಜನ ಇದನ್ನ ಹೇಗೆ ಸ್ವೀಕರಿಸ್ತಾರೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version